Latest Updates
-
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್‌ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ!
ಒಂದು ಲೋಟ ಹಸಿ ಹಾಲು ನಿಮ್ಮ ಉಸಿರು ನಿಲ್ಲಿಸಬಹುದು..! ವೈದ್ಯರು ಹೀಗೆ ಹೇಳೋದೇಕೆ..?
ನಾವು ಚಿಕ್ಕವರಾಗಿರುವಾಗಿನಿಂದ ಹಾಲು ನಮ್ಮ ದೇಹಕ್ಕೆ ಬೇಕೆ ಬೇಕು, ಅತ್ಯುತ್ತಮ ಕ್ಯಾಲ್ಸಿಯಂ ತುಂಬಿರುವ ಅಂಶ ಎಂದೆಲ್ಲಾ ತಿಳಿದುಕೊಂಡಿದ್ದೆವು. ಹಾಗೆ ನಮಗೆ ಹಾಲು ಬಹುಮುಖ್ಯವಾಗಿ ಬೇಕೆ ಬೇಕು. ಶಾಲೆಯಲ್ಲೂ ಹಾಲು ನೀಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಎಂದು ತಿಳಿದುಕೊಂಡಿದ್ದೇವೆ. ಹಾಗೆ ಹಾಲು ಕುಡಿಯುವುದು ದೇಹಕ್ಕೆ ಶಕ್ತಿ ನೀಡಲಿದೆ. ಮೂಳೆಗಳ ಬೆಳವಣಿಗೆಗೆ ಸಹಾಯಕವಾಗಲಿದೆ ಎಂಬಂತಹ ವಿಚಾರಗಳನ್ನು ಹಿಂದಿನಿಂದಲೂ ನಾವು ತಿಳಿದಿದ್ದೇವೆ.
ಆದ್ರೆ ಇತ್ತೀಚಿನ ದಿನಗಳಲ್ಲಿ ಹಾಲು ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬ ಆಘಾತಕಾರಿ ವಿಚಾರಗಳು ಈಗ ತಿಳಿದುಬರುತ್ತಿದೆ. ಈ ವಿಚಾರವನ್ನು ಖುದ್ದು ವೈದ್ಯರೇ ತಿಳಿಸುತ್ತಾರೆ. ಆದ್ರೆ ಹಿಂದಿನಿಂದ ನಾವು ಹಾಲಿನ ಅಗತ್ಯ ಹಾಗೂ ಅದರ ಪ್ರಯೋಜನಗಳ ಕುರಿತು ತಿಳಿದಿದ್ದರಿಂದ ಈ ವಿಚಾರಗಳು ನಮಗೆ ಆಘಾತಕಾರಿಯಾಗಿ ಪರಿಣಮಿಸುತ್ತಿದೆ.

ಇತ್ತೀಚಿಗೆ ಕೇರಳ ಮೂಲದ ಹೆಪಟಾಲಜಿಸ್ಟ್ (ಯಕೃತ್ತು, ಪಿತ್ತಕೋಶ, ಪಿತ್ತರಸ ನಾಳಗಳು ಮತ್ತು ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಹೆಪಟಾಲಜಿಸ್ಟ್ ಎಂಬ ಹೆಸರಿದೆ) ಅವರು ಹಾಲಿನಲ್ಲಿ ಇ.ಕೋಲಿ, ಕ್ಯಾಂಪಿಲೋಬ್ಯಾಕ್ಟರ್, ಯೆರ್ಸಿನಿಯಾ, ಬ್ರೂಸೆಲ್ಲಾ, ಕಾಕ್ಸಿಯೆಲ್ಲಾ ಮತ್ತು ಲಿಸ್ಟೇರಿಯಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರಬಹುದು ಎಂಬ ಮಾಹಿತಿ ಹಂಚಿಕೊಂಡಿದ್ದು, ಹಸಿ ಹಾಲು ದೇಹಕ್ಕೆ ಅಪಾಯಕಾರಿ ಎಂದು ವಾದಿಸಿದ್ದಾರೆ.
ಇದೇ ಕಾರಣದಿಂದಾಗಿ ಪಾಶ್ಚರೀಕರಿಸಿದ ಹಾಲು ಸೇವಿಸಲು ಹೇಳಲಾಗಿದೆ. ಹಾಗೆ ಈ ಬ್ಯಾಕ್ಟಿರಿಯಾಗಳು ನೇರವಾಗಿ ಮೆದುಳು, ನರಕೋಶ, ಹೃದಯದ ಮೇಲೆ ದಾಳಿ ಮಾಡುವ ಹಾಗೂ ಸಾವಿಗೂ ಕಾರಣವಾಗುವಷ್ಟು ಅಪಾಯಕಾರಿಯಾಗಿವೆ ಎಂದು ಅವರು ಹೇಳಿದ್ದಾರೆ. ಪಂಜಾಬ್‌ನ ಮಹಿಳೆಯೊಬ್ಬರು ತಮ್ಮ ಮಗುವಿಗೆ ಬಕೆಟ್‌ನಲ್ಲಿರುವ ಹಸಿ ಹಾಲನ್ನು ನೇರವಾಗಿ ಕುಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋ ಹಂಚಿಕೊಂಡಿರುವ ವೈದ್ಯರು ಈ ಹಸಿ ಹಾಲಿನಿಂದಾಗುವ ಅಪಾಯಗಳ ಕುರಿತು ಒತ್ತಿ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಹಸಿ ಹಾಲನ್ನು ಮಕ್ಕಳಿಗೆ ಅಥವಾ ನೀವು ನೇರವಾಗಿ ಸೇವಿಸಬೇಡಿ. ಹಲವು ರೀತಿಯ ಮಾರಾಣಾಂತಿಕ ಕಾಯಿಲೆಗಳಿಗೆ ಇದು ದಾರಿಯಾಗುತ್ತದೆ. ಇದರಿಂದ ನಿಮಗೆ ಹಾನಿಯೇ ಹೆಚ್ಚಾಗುತ್ತದೆ. ಹಾಗೆ ಇದೇ ವಿಡಿಯೋಗೆ ಪ್ರತಿಕ್ರಿಯಿಸಿರುವ ಅವರು ನ್ಯೂಯಾರ್ಕ್ ಸ್ಟೇಟ್ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಮತ್ತು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಬಿಡುಗಡೆ ಮಾಡಿರುವ ಕೆಲವು ಆರೋಗ್ಯ ಸಲಹೆಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಹಸಿ ಹಾಲಿನಲ್ಲಿರುವ ಸೂಕ್ಷ್ಮಜೀವಿಗಳು ವಿಶೇಷವಾಗಿ ಕಸಿ ರೋಗಿಗಳು, ಎಚ್‌ಐವಿ/ಏಡ್ಸ್, ಕ್ಯಾನ್ಸರ್ ಮತ್ತು ಮಧುಮೇಹ ಹೊಂದಿರುವ ವ್ಯಕ್ತಿಗಳು, ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರಂತಹ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರ ಮೇಲೆ ಪರಿಣಾಮ ಬೀರಬಹುದು ಎಂದು ಎಫ್‌ಡಿಎ ವಿವರಿಸಿದೆ. ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದರೆ ಅಚ್ಚರಿಯ ಜೊತೆಗೆ ಅಪಾಯದ ಕುರಿತಂತೆ ಜನರಿಗೆ ಬೇಕಾಗಿದ್ದ ತಿಳುವಳಿಕೆ ಹಿನ್ನೆಲೆ ಪ್ರಶಂಸೆಯೂ ಕೇಳಿಬಂದಿದೆ. ಆದ್ರೆ ಕೆಲವರು ಇದನ್ನು ಅಲ್ಲಗೆಳೆದಿದ್ದಾರೆ.
ಏಕೆಂದರೆ ವರ್ಷಾನು ವರ್ಷಗಳಿದಲೂ ಈ ಹಸಿ ಹಾಲನ್ನು ಕುಡಿದು ಜೀವಿಸುತ್ತಿರುವ ಮಂದಿ ಇದ್ದಾರೆ. ಅಷ್ಟೇ ಏಕೆ ಹಸುವಿನ ಕರು ಕೂಡ ಹಸಿ ಹಾಲನ್ನು ಕುಡಿದು ಬದುಕುತ್ತದೆ. ಆದರೆ ಅದಕ್ಕೆ ಯಾವುದೇ ಹಾನಿಯಾಗುತ್ತಿಲ್ಲ ಎಂದರೆ ನಮಗೆ ಹೇಗೆ ಹಾನಿಯಾಗುತ್ತದೆ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
ಮಾನವರ ದೇಹದಲ್ಲಿರುವ ವಿಶೇಷ ಕಿಣ್ವಗಳು ಹಾಲನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. ಆದ್ರೆ ವಯಸ್ಸಾದಂತೆ ಈ ಕಿಣ್ವಗಳು ಕ್ಷೀಣಿಸಲು ಆರಂಭಿಸುತ್ತವೆ. ಹೀಗಾಗಿ ಹೆಚ್ಚು ಹಾಲು ಸೇವನೆ ಜೀರ್ಣವಾಗದೆ ಉಳಿಯಬಹುದು ಎಂಬ ವಾದವೂ ಇದೆ. ಇನ್ನು ಹಾವುಗಳಲ್ಲಿ ಈ ಕಿಣ್ವಗಳೇ ಇರುವುದಿಲ್ಲ ಹೀಗಾಗಿ ಅವು ಹಾಲು ಕುಡಿದರೆ ಅದು ಜೀರ್ಣವಾಗುವುದಿಲ್ಲ. ಆದ್ರೆ ಕೆಲವರು ಹಾವುಗಳಿಗೆ ಹಾಲು ಎರೆಯುತ್ತಾರೆ, ಇದೊಂದು ನಂಬಿಕೆಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
