ಮಳೆಗಾಲ + ನಾನ್ ವೆಜ್ = ಅಪಾಯ? ಮಳೆಗಾಲದಲ್ಲಿ ಮಾಂಸಾಹಾರ ತಿನ್ನಲೇಬೇಡಿ.. ಯಾಕೆ?

ಈ ಸಮಸ್ಯೆ ಇರುವವರು ಮಳೆಗಾಲದಲ್ಲಿ ಹೆಚ್ಚು ನಾನ್ ವೆಜ್ ಸೇವಿಸಲೇಬಾರದು. ಅಪ್ಪಿ ತಪ್ಪಿ ನಾನ್ ವೆಜ್ ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೌದು, ಸದ್ಯ ಮುಂಗಾರು ಮಳೆಯ ಪ್ರಭಾವದಿಂದ ಭಾರೀ ಮಳೆಯಾಗುತ್ತಿದೆ. ಮಳೆಗಾಲದಲ್ಲಿ (Monsoon) ದೇಹವನ್ನು ಬೆಚ್ಚಗಿಡಲು ಬಹುತೇಕರು ಬಿಸಿ ಸೂಪ್, ಜೋಳ, ಪಕೋಡ ಮತ್ತು ಬಜ್ಜಿಗಳಂತಹ ಆಹಾರಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಅದರಲ್ಲೂ ಈ ಸಮಯದಲ್ಲಿ ನಾನ್ ವೆಜ್ ಪ್ರಿಯರು ಚಿಕನ್, ಮಟನ್ ಮತ್ತು ಮೀನನ್ನು ಹೆಚ್ಚಾಗಿ ಸೇವಿಸಲು ಬಯಸುತ್ತಾರೆ. ಆದರೆ, ಮಳೆಗಾಲದಲ್ಲಿ ಮಾಂಸಾಹಾರಿ ಆಹಾರವನ್ನು (Non vegetarian food) ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಯಾಕಂದ್ರೆ, ಕೆಲವು ನಿರ್ದಿಷ್ಟ ಕಾರಣಗಳಿಂದಾಗಿ ಮಳೆಗಾಲದಲ್ಲಿ ಮಾಂಸಾಹಾರ ಸೇವನೆಯು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.

ಮಳೆಗಾಲದಲ್ಲಿ (Rainy Season) ತೇವಾಂಶ ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮಾಣು ಜೀವಿಗಳು ಬಹಳ ಬೇಗನೆ ವೃದ್ಧಿಯಾಗುತ್ತವೆ. ನಾನ್ ವೆಜ್ ಬೇಗನೆ ಹಾಳಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಮಾಂಸವನ್ನು ಸೇವಿಸುವುದರಿಂದ ಆಹಾರ ವಿಷವಾಗುವ ಅಪಾಯವಿದೆ. ಅದರಲ್ಲೂ ಸಮುದ್ರಾಹಾರವು ಈ ಸಮಯದಲ್ಲಿ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಕಡಲತೀರದ ಹತ್ತಿರವಿರುವ ಕೊಳಚೆ ನೀರು ಸಮುದ್ರಕ್ಕೆ ಸೇರಿಕೊಳ್ಳುತ್ತದೆ. ಇದರಿಂದ, ಸಮುದ್ರದ ನೀರು ಕಲುಷಿತಗೊಳ್ಳುತ್ತದೆ. ಹೀಗಾಗಿ, ಮೀನು ಮತ್ತು ಇತರೆ ಜಲಚರಗಳು ಕಲುಷಿತಗೊಳ್ಳುತ್ತವೆ. ನೀವು ಅವುಗಳನ್ನು ಸೇವಿಸುವುದರಿಂದ ವಾಂತಿ, ಭೇದಿ ಮತ್ತು ಹೊಟ್ಟೆನೋವು ಇನ್ನಿತರೆ ಸಮಸ್ಯೆಗಳು ಉಂಟಾಗುತ್ತವೆ.

non veg food in Monsoon

ಮಳೆಗಾಲದಲ್ಲಿ ನಾನ್ ವೆಜ್ ಏಕೆ ತಪ್ಪಿಸಬೇಕು?

• ಮಳೆಗಾಲದಲ್ಲಿ ನಾನ್ ವೆಜ್ ಹೆಚ್ಚಾಗಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.

• ಮಳೆಗಾಲದ ಸಮಯದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗಿ ಕೆಲಸ ನಿರ್ವಹಿಸುತ್ತದೆ. ಅಂತಹ ಸಮಯದಲ್ಲಿ ಮಾಂಸವನ್ನು ತಿನ್ನುವುದು ಅಸಿಡಿಟಿ ಮತ್ತು ಮಲಬದ್ಧತೆಗೆ ಕಾರಣವಾಗಬಹುದು. ಕೆಲವೊಮ್ಮೆ ಮಾಂಸವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ.

• ಮಳೆಗಾಲದಲ್ಲಿ ಕಲುಷಿತ ನೀರಿನಿಂದಾಗಿ ನಾನ್ ವೆಜ್ (ಮಾಂಸಾಹಾರ) ಬೇಗನೆ ಹಾಳಾಗುತ್ತದೆ. ಅನೇಕ ಬಾರಿ ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಸಂಗ್ರಹಿಸಿದ ಮಾಂಸವು ಲಭ್ಯವಿರುತ್ತದೆ. ಇಂತಹ ಮಾಂಸವನ್ನು ತಂದು ಅಡುಗೆ ಮಾಡಿದರೆ ಮತ್ತು ಅದು ಸರಿಯಾಗಿ ಬೇಯದಿದ್ದರೆ, ಅದು ಫುಡ್ ಪಾಯಿಸನಿಂಗ್‌ಗೆ ಕಾರಣವಾಗಬಹುದು.

Take a Poll

• ಈಗಾಗಲೇ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವವರು ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಮಳೆಗಾಲದಲ್ಲಿ ಮಾಂಸಾಹಾರವನ್ನು ಸೇವಿಸಬಾರದು. ಅದರ ಬದಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ.

• ಕೆಲವೊಮ್ಮೆ ಮೀನುಗಳನ್ನು ಕಲುಷಿತ ನೀರಿನಲ್ಲಿ ಸಂಗ್ರಹಿಸಲಾಗುತ್ತದೆ. ಹೀಗೆ ಮಾಡುವುದರಿಂದ ಮೀನುಗಳಿಗೆ ಸೋಂಕು ತಗುಲುವ ಅಪಾಯ ಹೆಚ್ಚಾಗುತ್ತದೆ. ಅವುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ.

• ಇತ್ತೀಚಿನ ದಿನಗಳಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರದ ಅಪಾಯವೂ ಹೆಚ್ಚಾಗಿದೆ. ಆದ್ದರಿಂದ ಮೊಟ್ಟೆ ಮತ್ತು ಚಿಕನ್ ಸೇವಿಸಬಾರದು. ಮಳೆಗಾಲದಲ್ಲಿ ಪ್ರಾಣಿಗಳಲ್ಲಿ ಸೋಂಕುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಸೋಂಕುಗಳು ಮಾಂಸದ ಮೂಲಕ ಮನುಷ್ಯರಿಗೂ ಹರಡುವ ಸಾಧ್ಯತೆಗಳಿವೆ.

ಮಾಂಸಾಹಾರ ತಿನ್ನುವುದರ ಪ್ರಯೋಜನಗಳು

ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾನ್ ವೆಜ್ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ಮಾಂಸದ ಗುಣಮಟ್ಟ, ಸ್ವಚ್ಛತೆ ಮತ್ತು ಜೀರ್ಣಕ್ರಿಯೆಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ಆಯ್ಕೆ ಮಾಡುವುದು ಸೂಕ್ತ. ಮಾಂಸಾಹಾರ ತಿನ್ನುವುದರಿಂದ ಕೆಲವು ಪ್ರಯೋಜನಗಳಿವೆ. ಅವುಗಳು ಇಲ್ಲಿವೆ ನೋಡಿ.

• ಅಧಿಕ ಪ್ರೋಟೀನ್‌ನ ಮೂಲ.
• ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
• ಪೋಷಕಾಂಶಗಳನ್ನು ಹೊಂದಿರುತ್ತದೆ.
• ಸರಿಯಾದ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ.

ಒಟ್ಟಾರೆ, ಮಾಂಸಾಹಾರವು ತಾಜಾವಾಗಿರಬೇಕು. ಚೆನ್ನಾಗಿ ಸ್ವಚ್ಛಗೊಳಿಸಿದ ನಂತರ ತಿನ್ನಬೇಕು. ಮನೆಯಲ್ಲಿ ಅಡುಗೆ ಮಾಡಲು ಸೋಮಾರಿತನದಿಂದ ಹೊರಗಿನಿಂದ ನಾನ್ ವೆಜ್ ಫುಡ್ ಆರ್ಡರ್ ಮಾಡಿದರೂ ಅಥವಾ ತಿಂದರೂ, ಮೊದಲು ಆ ಆಹಾರದ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ, ಅಪಾಯ ಕಟ್ಟಿಟ್ಟ ಬುತ್ತಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Rainy Season Diet: Eating non vegetarian food in Monsoon season is bad for health

Rainy Season Diet: Eating non vegetarian food in Monsoon season is bad for health
Story first published: Thursday, June 26, 2025, 19:35 [IST]
X
Desktop Bottom Promotion