Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದಲ್ಲಿ ಶಿಶುಗಳ ಆರೋಗ್ಯದ ಮೇಲೆ ಇರಲಿ ಕಾಳಜಿ..! ವೈದ್ಯರ ಸಲಹೆಗಳು ಇಲ್ಲಿವೆ!
ಚಳಿಗಾಲ ಆರಂಭಾಗಿದೆ. ಹೀಗಾಗಿ ಮನೆಯಲ್ಲಿ ಹಿರಿಯರು, ಮಕ್ಕಳ ಮೇಲೆ ಹೆಚ್ಚು ಗಮನವಿಡಬೇಕಾಗುತ್ತದೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಚಳಿಗಾಲ ಹಲವು ರೀತಿಯ ಸಮಸ್ಯೆಗಳ ತಂದೊಡ್ಡಲಿದೆ. ಮುಖ್ಯವಾಗಿ ಚರ್ಮ ಒಣಗುವುದು, ಅಲರ್ಜಿ, ಶೀತ, ಕೆಮ್ಮು, ಗಂಟಲು ಅಲರ್ಜಿ ಹೀಗೆ ಹತ್ತಾರು ರೀತಿಯಲ್ಲಿ ಮಕ್ಕಳಿಗೆ ಚಳಿಗಾಲ ಕಾಡಲಿದೆ.
ಹೀಗಾಗಿ ಪುಟ್ಟ ಮಕ್ಕಳಿರುವ ಮನೆಯಲ್ಲಿ ಅವರ ಆರೋಗ್ಯದ ಮೇಲೆ ಹೆಚ್ಚು ಗಮನ ಇಟ್ಟಿರುತ್ತಾರೆ, ಇಷ್ಟಾದರು ಕೂಡ ಮಕ್ಕಳು ಕಾಯಿಲೆ ಬೀಳುವುದು ತಪ್ಪಿಸಲಾಗದು. ಆದ್ರೆ ಮಕ್ಕಳು ಚಳಿಗಾಲದಲ್ಲಿ ಕಾಯಿಲೆ ಬೀಳದಂತೆ ಯಾವ ರೀತಿ ಎಚ್ಚರಿಕೆ ಇಡಬೇಕು ಎಂಬುದನ್ನು ಖುದ್ದು ವೈದ್ಯರೇ ಹೇಳಿರುವ ಕೆಲವು ಅಂಶಗಳು ಕೆಳಗಿನಂತೆ ಇವೆ.

ಮಕ್ಕಳಿಗೆ ಚಳಿಗಾಲದಲ್ಲಿ ಬಹುಬೇಗ ಕಾಯಿಲೆಗೆ ಒಳಗಾಗುತ್ತಾರೆ. ಇದಕ್ಕೆ ಹವಾಮಾನ ಒಂದು ಕಾರಣವಾದರೆ ಪೋಷಕರಲ್ಲಿ ಜಾಗೃತೆ ಇಲ್ಲದಿರುವುದು ಕೂಡ ಮತ್ತೊಂದು ಕಾರಣ ಎಂದು ವೈದ್ಯರಾದ ಕಿರಣ್ ಕುಮಾರ್ ಹೇಳುತ್ತಾರೆ. ಹಾಗೆ ಪೋಷಕರು ಚಳಿಗಾಲದಲ್ಲಿ ಈ ರೀತಿ ಕೆಲವೊಂದು ಎಚ್ಚರಿಕೆ ವಹಿಸಿದರೆ ಮಕ್ಕಳು ಚಳಿಗಾಲದಲ್ಲಿ ಸಮಸ್ಯೆಗೆ ಒಳಗಾಗುವುದನ್ನು ತಡೆಯಬಹುದು.
ಮಕ್ಕಳನ್ನು ಆದಷ್ಟು ಬೆಚ್ಚಗಿಡಬೇಕು
ಚಳಿಗಾಲದಲ್ಲಿ ಮಕ್ಕಳನ್ನು ಎಷ್ಟು ಸಾಧ್ಯವೋ ಅಷ್ಟು ಬೆಚ್ಚಗಿಡಲು ಪ್ರಯತ್ನಿಸಬೇಕು. ಅವರಿಗೆ ನೀವು ಬಟ್ಟೆ ಹಾಕುವಾಗಲು ಸ್ವಲ್ಪ ಬೆಚ್ಚಗಿದ್ದರೆ ಉತ್ತಮ. ಆದ್ರೆ ಮಗು ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದೆ ಎಂಬ ಕಾರಣಕ್ಕೆ ಬಟ್ಟೆ ಒದ್ದೆಯಾದರು ಹಾಗೆಯೇ ಬಿಡುವುದು ಸಮಸ್ಯೆಗಳಿಗೆ ಕಾರಣವಾಗಬಹುದು. ಪುಟ್ಟ ಮಕ್ಕಳು ಆದಷ್ಟು ಬೆಜ್ಜಗಿರುವಂತೆ ನೋಡಿಕೊಂಡರೆ ಸಾಕಾಗುತ್ತದೆ.
ಬೆಳಗ್ಗೆ ಅಥವಾ ಸಂಜೆ ಸ್ನಾನ ಮಾಡಿಸುವುದು
ಪುಟ್ಟ ಮಕ್ಕಳಿಗೆ ಚಳಿಗಾಲದ ಸಮಯದಲ್ಲಿ ಬೆಳಗ್ಗೆ 10 ಗಂಟೆಯ ಒಳಗೆ ಅಥವಾ 5 ಗಂಟೆಯ ನಂತರ ಸ್ನಾನ ಮಾಡಿಸುವುದು ಉತ್ತಮ ಅಭ್ಯಾಸವಲ್ಲ. ಬಿಸಿ ನೀರಿನಿಂದಲೇ ಸ್ನಾನ ಮಾಡಿಸಿದರೂ ಕೂಡ ಇದು ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಲು ಕಾರಣವಾಗಲಿದೆ. ಹೀಗಾಗಿ ಮಧ್ಯಾಹ್ನ ಬಿಸಿಲಿನ ಸಮಯದಲ್ಲಿ ಸ್ನಾನ ಮಾಡಿಸುವುದು ಉತ್ತಮ.
ಮಂಜು ಬೀಳುವ ಸಮಯ ಅಥವಾ ಬೆಳಗ್ಗೆ ಹೊರ ಹೋಗುವುದನ್ನು ತಪ್ಪಿಸಿ
ಮಕ್ಕಳನ್ನು ವಿನಾಕಾರಣ ಚಳಿಯಲ್ಲಿ ಹೊರಗೆ ಕರೆದುಕೊಂಡು ಹೋಗುವುದು ಅಥವಾ ಮಂಜು ಬೀಳುತ್ತಿರುವಾಗ ಹೊರಗೆ ಹೋಗುವುದು ತಪ್ಪಿಸುವುದು ಉತ್ತಮ. ಹಾಗೆ ಮಗುವಿಗೆ ಚಳಿಯ ಅನುಭವವಾಗುಂತಹ ಯಾವುದೇ ಆಹಾರ, ಪಾನಿಯ ನೀಡದಿರುವುದು ಉತ್ತಮ.
ನೆಲದ ಮೇಲೆ ಇಲ್ಲವೆ ಸಾಕ್ಸ್ ಹಾಕದೆ ಇರುವುದು
ಚಳಿಗಾಲದಲ್ಲಿ ಚಿಕ್ಕ ಮಕ್ಕಳನ್ನು ನೆಲದ ಮೇಲೆ ಹಾಗೆಯೇ ಬಿಡಬಾರದು. ಮಧ್ಯಾಹ್ನ ಬಿಸಿಲಿದ್ದರೂ ಕೂಡ ನೆಲ ಮಾತ್ರ ತಣ್ಣಗಿರುತ್ತದೆ. ಹಾಗೆ ಕಾಲುಗಳಿಗೆ ಸಾಕ್ಸ್ ಹಾಕುವುದು, ಮಂಕಿ ಕ್ಯಾಪ್, ಕಾಟನ್ ಬಟ್ಟೆ ಹಾಕುವುದು ಬಹಳ ಉಪಯೋಗಕಾರಿಯಾಗಲಿದೆ. ಹಾಗೆ ಒಂದು ಬಟ್ಟೆ ಅಥವಾ ಕೆಳಗೆ ಬರಿ ನೆಲದಲ್ಲಿ ಬಿಡದೆ ಏನಾದರು ಪ್ರೊಟೆಕ್ಷನ್ ಇದ್ದರೆ ಸೂಕ್ತ.
ಸರಿಯಾದ ಔಷಧಿ ಮತ್ತು ಚಿಕಿತ್ಸೆ
ಚಳಿಗಾಲದಲ್ಲಿ ಚಿಕ್ಕ ಮಕ್ಕಳ ಮೇಲೆ ಎಂದಿಗಿಂತ ಸ್ವಲ್ಪ ಹೆಚ್ಚು ಮುತುವರ್ಜಿ ವಹಿಸಬೇಕು. ಅವರ ಆರೋಗ್ಯದಲ್ಲಿ ಸ್ವಲ್ಪ ಏರು ಪೇರು ಕಂಡುಬಂದರು ವೈದ್ಯರ ಬಳಿ ಬರಬೇಕು. ಅದನ್ನು ಬಿಟ್ಟು ಚಳಿಗಾಲದಲ್ಲಿ ಇದು ಕಾಮನ್ ಎಂದು ಮನೆಮದ್ದು ಮಾಡಿ ನೀಡುವುದು ಸರಿಯಲ್ಲ. ಹಾಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡಿಸುವುದು ಕೂಡ ಬಹಳ ಮುಖ್ಯ.
ಚರ್ಮಕ್ಕೆ ಬೇಬಿ ಕ್ರೀಮ್ ಬಳಸಿ
ಚಳಿಗಾಲದಲ್ಲಿ ಚಿಕ್ಕ ಮಕ್ಕಳ ಚರ್ಮ ಬಹುಬೇಗ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಮಕ್ಕಳ ಚರ್ಮದ ಮೇಲೆ ಬೇಬಿ ಕ್ರೀಮ್ ಹಚ್ಚುವುದು ಸೂಕ್ತ. ಆದ್ರೆ ದೊಡ್ಡವರಿಗೆಂದು ಖರೀದಿಸಿ ತಂದಿರುವ ಕ್ರೀಮ್ ಹಚ್ಚಬೇಡಿ. ಮಕ್ಕಳಲ್ಲಿ ಚರ್ಮ ಬಹಳ ಮೃದುತ್ವದಿಂದ ಕೂಡಿರುತ್ತದೆ. ಹಾಗೆ ಪಿಹೆಚ್ ಕೂಡ ಕಡಿಮೆಯಾಗಿರುತ್ತದೆ. ಇದರಿದ ಹಾನಿಯಾಗಬಹುದು. ಮಕ್ಕಳಿಗೆಂದೇ ಇರುವ ಹಲವು ಕ್ರೀಮ್ ಬಳಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications