Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾಗಿದೆ ಎಂದು ಸೂಚಿಸುವ ಲಕ್ಷಣಗಳಿವು
ನಮ್ಮ ದೇಹದ ಪ್ರತಿಯೊಂದು ಅಂಗಾಂಗ ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದರೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯಬೇಕು, ರಕ್ತ ಸಂಚಾರ ಸರಿಯಾಗಿರದಿದ್ದರೆ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದು. ಅದರಲ್ಲೂ 40 ವರ್ಷ ಮೇಲ್ಪಟ್ಟವರಲ್ಲಿ, ಅಧಿಕ ಮೈ ತೂಕ ಹೊಂದಿರುವವರಲ್ಲಿ, ಮಧುಮೇಹಿಗಳಲ್ಲಿ, ವ್ಯಾಯಾಮ ಮಾಡದೇ ಇರುವವರಲ್ಲಿ ಈ ಬಗೆಯ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು.

ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾದರೆ ಏನಾಗುತ್ತದೆ?
ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾದಾಗ ನೋವು, ಮರಗಟ್ಟಿದಂಥ ಅನುಭವ ಈ ರೀತಿಯೆಲ್ಲಾ ಉಂಟಾಗುವುದು. ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾದರೆ ಅದರ ಲಕ್ಷಣಗಳು ಕಾಲುಗಳಲ್ಲಿ, ಕೈಗಳಲ್ಲಿ, ಪಾದಗಳಲ್ಲಿ, ಹೆಬ್ಬರಳಿನಲ್ಲಿ ಕಂಡು ಬರುತ್ತದೆ.
ರಕ್ತ ಸಂಚಾರ ಕಡಿಮೆಯಾದರೆ ಶರೀರದಲ್ಲಿ ಕಂಡು ಬರುವ ಲಕ್ಷಣಗಳು
* ನಡೆಯುವಾಗ ಸ್ನಾಯುಗಳಲ್ಲಿ ನೋವು ಕಂಡು ಬರುವುದು
* ಸೂಜಿಯಲ್ಲಿ ಚುಚ್ಚಿದಂಥ ಅನುಭವವಾಗುವುಉದ
* ತ್ವಚೆ ಬಿಳುಚಿಕೊಳ್ಳುವುದು
* ಬೆರಳುಗಳು ತಣ್ಣಗಾಗುವುದು
* ಮರಗಟ್ಟಿದ ಅನುಭವ ಉಂಟಾಗುವುದು
* ಎದೆಯಲ್ಲಿ ನೋವು
* ಕೈ-ಕಾಲುಗಳಲ್ಲಿ ಊತ
* ನರಗಳು ಊದಿಕೊಳ್ಳುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
ರಕ್ತ ಸಂಚಾರ ಕಡಿಮೆಯಾಗಲು ಕಾರಣವೇನು?
ಧೂಮಪಾನ: ಅತ್ಯಧಿಕ ಧೂಮಪಾನ ಮಾಡುವವರಲ್ಲಿ ಈ ರೀತಿ ಕಂಡು ಬರುವುದು
* ಅತ್ಯಧಿಕ ರಕ್ತದೊತ್ತಡ: ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿದ್ದರೆ ಇದರಿಂದ ಕೂಡ ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾಗುವುದು.
* ಕೊಲೆಸ್ಟ್ರಾಲ್: ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾದರೆ ಕೂಡ ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾಗುವುದು.
* ಮಧುಮೇಹ: ಮಧುಮೇಹಿಗಳಲ್ಲಿ ಕೂಡ ರಕ್ತ ಸಂಚಾರ ಕಡಿಮೆಯಾಗುವುದು
* ವೇರಿಕೋಸ್ ವೇಯಿನ್: ಈ ಸಮಸ್ಯೆ ಇರುವವರಲ್ಲಿ ನರಗಳಿಗೆ ಹಾನಿಯುಂಟಾಗುವುದರಿಂದ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ.
* ಸಂಧಿವಾತದ ಸಮಸ್ಯೆ: ಸಂಧಿವಾತದ ಸಮಸ್ಯೆ ಇರುವವರಲ್ಲಿ ರಕ್ತ ಸಂಚಾರ ಕಡಿಮೆಯಾಗಿ ಕೈ-ಕಾಲುಗಳ ನೀವು ಹೆಚ್ಚಾಗುವುದು.
* ಒಬೆಸಿಟಿ: ಅತ್ಯಧಿಕ ಮೈ ತೂಕ ಹೊಂದಿರುವರಲ್ಲಿ ಕೂಡ ರಕ್ತ ಸಂಚಾರಕ್ಕೆ ತೊಂದರೆಯಾಗುವುದು.
ರಕ್ತ ಸಂಚಾರ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ?
* ದೈಹಿಕ ಪರೀಕ್ಷೆ
* ರಕ್ತ ಪರೀಕ್ಷೆ
ಡೋಪ್ಲರ್ ಅಲ್ಟ್ರಾಸೌಂಡ್ (Doppler ultrasound)
Ankle-brachial index (ABI) test
ಸ್ಟ್ರೆಸ್ ಟೆಸ್ಟ್
ಆಂಜಿಯೋಗ್ರಫಿ (Angiography)
ಸೆಗ್‌ಮೆಂಟಲ್ ಡೋಪ್ಲರ್ ಪ್ರೆಷರ್ ಟೆಸ್ಟಿಂಗ್ (Segmental Doppler pressure testing)
ಈ ಬಗೆಯ ಪರೀಕ್ಷೆ ಮಾಡಿದಾಗ ತಿಳಿದು ಬರುತ್ತದೆ.
ರಕ್ತ ಸಂಚಾರ ಕಡಿಮೆಯಾದಾಗ ಏನು ಮಾಡಬೇಕು?
* ಬೈಪಾಸ್ ಮಾಡುವ ಮೂಲಕ ನರಗಳಲ್ಲಿರುವ ಬ್ಲಾಕ್ ತೆಗಿಯಲಾಗುವುದು
* ಹೆಪ್ಪುಗಟ್ಟಿದ ರಕ್ತವನ್ನು ತೆಗಿಯಬೇಕು (catheter-assisted thrombus removal).
* ವೆನಾ ಕಾವಾ ಫಿಲ್ಟರ್ ಹಾಕಿದರೆ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಬಹುದು
* ವೇರಿಕೋಸ್ ನರವನ್ನು ತೆಗಿಯಬೇಕು
ರಕ್ತ ಸಂಚಾರ ಕಡಿಮೆಯಾಗುವುದನ್ನು ತಡೆಗಟ್ಟುವುದು ಹೇಗೆ?
* ವ್ಯಾಯಾಮ ಮಾಡಿ
* ಆರೋಗ್ಯಕರ ಆಹಾರಕ್ರಮ ಸೇವಿಸಿ
* ಧೂಮಪಾನ ಬಿಡಿ
* ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ
* ಮಾನಸಿಕ ಒತ್ತಡವನ್ನು ಕಡಿಮೆಮಾಡಿಕೊಳ್ಳಿ
* ಗ್ಲೌಸ್, ಸಾಕ್ಸ್ ಬಳಸಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









