Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮಲವನ್ನೇ ತುಂಬಿಸಿರುವ ಮಾತ್ರೆಗಳು ಬರಲಿದೆ..! ಅಚ್ಚರಿಯಲ್ಲ ಇದು ಜೀವ ಉಳಿಸುತ್ತೆ..!
ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟು ಹೊಸ ಹೊಸ ಆವಿಷ್ಕಾರಗಳು ಈಗ ಬರುತ್ತಿದೆ ಅಂದ್ರೆ ಹೊಸ ಕಾಯಿಲೆಗಳು, ವೈರಸ್‌ಗಳಿಗೆ ತಕ್ಷಣವೇ ಔಷಧಿ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಇನ್ನು ಕ್ಯಾನ್ಸರ್‌ನಂತಹ ಘಟಾನುಘಟಿ ಕಾಯಿಲಗೆಳಿಗೂ ಚಿಕಿತ್ಸೆ ಈಗ ಆರಂಭಗೊಂಡಿದೆ. ಯಾವುದೇ ಹಂತದ ಕ್ಯಾನ್ಸರ್‌ಗೂ ಚಿಕಿತ್ಸೆ ಕಂಡುಕೊಳ್ಳುವ ಮಾರ್ಗವನ್ನ ಸಂಶೋದಕರ ತಂಡ ನಿರಂತರವಾಗಿ ಅಧ್ಯಯನ ಮಾಡುತ್ತಲೇ ಇದೆ.
ಆದ್ರೆ ಈಗ ಯುಕೆಯಲ್ಲಿ ವಿಚಿತ್ರವಾದ ಮಾತ್ರೆಗಳು ಹೊರಬಂದಿದ್ದು, ಈ ಮಾತ್ರೆಗಳು ಜನರ ಜೀವ ಉಳಿಸುವ ಸಂಜೀವಿನಿಯಂತೆ ಕಲಸ ಮಾಡುತ್ತಿದೆ. ಹೌದು ಮಲ ತುಂಬಿರುವ ಸಣ್ಣ ಮಾತ್ರೆಗಳು ಈಗ ವೈದ್ಯಕೀಯ ಲೋಕದ ಅಚ್ಚರಿಗೆ ಕಾರಣವಾಗಿದೆ. ಮಲ ತುಂಬಿಸಿರುವ ಮಾತ್ರೆಗಳು ಹಲವು ರೋಗಗಳಿಗೆ ಚಿಕಿತ್ಸಕಗಳೆಂದು ಪ್ರಯೋಗಾಲಯದಲ್ಲಿ ವ್ಯಾಪಕವಾಗಿ ಅಧ್ಯಯನಕ್ಕೊಳಗಾಗುತ್ತಿವೆ.

ವಿನೂತನ ಫೆಕಲ್ ಮೈಕ್ರೋಬಯೋಟಾ ಕಸಿ ತಂತ್ರ ಅಥವಾ ಎಫ್‌ಎಂಟಿ ಎಂದು ಕರೆಯಲ್ಪಡುವ ಈ ವಿಧಾನವು ಆರೋಗ್ಯವಂತ ವ್ಯಕ್ಯಿಯ ಮಲವನ್ನು ಮಾರಣಾಂತಿಕ ಕಾಯಿಲೆ ಹೊಂದಿರುವ ವ್ಯಕ್ತಿಯ ಕರುಳಿನ ಸಮಸ್ಯೆ ಬಗೆಹರಿಸಲು ಬಳಸಲಾಗುತ್ತದೆ. ಇದು ಭವಿಷ್ಯದಲ್ಲಿ ದೊಡ್ಡ ಸಾಧನೆಯಾಗಲಿದೆ ಎಂದು ಸಂಶೋದಕರು ಹೇಳಿಕೊಂಡಿದ್ದಾರೆ.
ನಿದ್ರಾಹೀನತೆ, ಪಾರ್ಕಿನ್ಸನ್, ಅಲರ್ಜಿಗಳು, ಕರುಳಿನ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಚಿಕಿತ್ಸಕಗಳೆಂದು ಪ್ರಯೋಗಾಲಯದಲ್ಲಿ ಈ ಮಲ ತುಂಬಿದ ಮಾತ್ರೆಗಳ ಬಳಸಿ ಪ್ರಯೋಗ ನಡೆಸಲಾಗುತ್ತಿದೆ.
ಜುಲೈನಲ್ಲಿ ಅಪರೂಪದ ಪಿತ್ತಜನಕಾಂಗದ ಕಾಯಿಲೆಯನ್ನು ನಿವಾರಿಸಲು FMT (ಫೀಕಲ್ ಮೈಕ್ರೋಬಯೋಟಾ ಟ್ರಾನ್ಸ್‌ಪ್ಲಾಂಟೇಶನ್) ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅಧ್ಯಯನ ಮಾಡಲು ಲಂಡನ್ ಮೂಲದ ರಿಕ್ ಡಲ್ಲಾವೇ ಚಿಕಿತ್ಸೆಯನ್ನು ಪೂರ್ಣಗೊಳಿಸಲಾಗಿತ್ತು. (FMT ಅಂದರೆ ಇದು ಆರೋಗ್ಯಕರ ದಾನಿಯಿಂದ ರೋಗಿಯ ಜಠರಗರುಳಿನ ಪ್ರದೇಶಕ್ಕೆ ಮಲವನ್ನು ಇಡುವುದನ್ನು ಒಳಗೊಂಡಿರುತ್ತದೆ. ರೋಗಿಯ ಕೊಲೊನ್‌ನಲ್ಲಿರುವ ಕೆಲವು "ಕೆಟ್ಟ" ಬ್ಯಾಕ್ಟೀರಿಯಾಗಳನ್ನು ದಾನಿಯಿಂದ "ಉತ್ತಮ" ಬ್ಯಾಕ್ಟೀರಿಯಾದೊಂದಿಗೆ ಬದಲಾಯಿಸುವುದು ಗುರಿಯಾಗಿದೆ. ಇದು ಕಡಿಮೆ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಮತ್ತು ರೋಗಿಯ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.)
ಇನ್ನು ಸರಳವಾಗಿ ಹೇಳುವುದಾದರೆ ಕರುಳಿನಲ್ಲಿ ಬ್ಯಾಕ್ಟೀರಿಯಲ್ ಸಮಸ್ಯೆ ಆಗಿದೆ ಅಂದುಕೊಳ್ಳಿ. ಆಗ ಆರೋಗ್ಯವಂತ ವ್ಯಕ್ತಿಯ ಮಲವನ್ನು ಹಾಗು ಅದರ ಜೊತೆ ಬ್ಯಾಕ್ಟೀರಿಯಾವನ್ನು ಅನಾರೋಗ್ಯ ಪೀಡಿತ ವ್ಯಕ್ತಿಗೆ ನೀಡುವುದು. ಇದು ಮಾತ್ರೆಯ ರೂಪದಲ್ಲಿ ತೆಗೆದುಕೊಳ್ಳುವುದಾಗಿದೆ. ಇದರಿಂದ ಕರುಳಿನ ಸಮಸ್ಯೆ ನಿವಾರಣೆ ಆಗುವಂತೆ ನೋಡಿಕೊಳ್ಳುವುದು ಎನ್ನಬಹುದು.
FMT ಹೇಗೆ ಕೆಲಸ ಮಾಡುತ್ತದೆ?
ಪ್ರತಿ ವ್ಯಕ್ತಿಯ ಕರುಳಿನಲ್ಲಿ ಟ್ರಿಲಿಯನ್ಗಟ್ಟಲೆ ಸೂಕ್ಷ್ಮಾಣುಜೀವಿಗಳು ಇರುತ್ತವೆ. ಇವು ಆರೋಗ್ಯವಾಗಿದ್ದಾಗ ನಮ್ಮ ಜೀರ್ಣಕ್ರಿಯೆಯಿಂದ ಹಿಡಿದು ಎಲ್ಲಾ ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿರುತ್ತದೆ. ಆದರೆ ನಮ್ಮ ಜೀವನ ಶೈಲಿಯು ಈ ಬ್ಯಾಕ್ಟೀರಿಯಾಗಳ ಸಾವಿಗೆ ಅಥವಾ ಹಾನಿಗೆ ಒಳಗಾದಾಗ ಈ ಸೂಕ್ಷ್ಮಾಣು ಜೀವಿಗಳು ಕಡಿಮೆಯಾಗುತ್ತವೆ. ಇದು ದೇಹದ ಅಸಮತೋಲಕ್ಕೆ ಕಾರಣವಾಗಬಹುದು. ಇವುಗಳ ಮರುಸ್ಥಾಪನೆಯೇ ಎಫ್‌ಎಮ್‌ಟಿ ಆಗಿದೆ.
ಪ್ರಯೋಗದ ಭಾಗವಾಗಿ ಲಂಡನ್‌ನ ಕಿಂಗ್ಸ್ ಕಾಲೇಜ್‌ನ ವಿಜ್ಞಾನಿಗಳು ತಯಾರಿಸಿದ Crapsules - FMT ಯಕೃತ್ತಿನ ಕಾಯಿಲೆಯ ರೋಗಿಗಳಲ್ಲಿ ಸೋಂಕನ್ನು ಕಡಿಮೆ ಮಾಡಬಹುದೇ ಎಂದು ನಿರೀಕ್ಷಿಸಲಾಗಿದೆ. ಒಂದು ವೇಳೆ ಇದು ಫಲ ನೀಡಿದರೆ ಮುಂದೆ ಮಾರುಕಟ್ಟೆಯಲ್ಲಿಯೂ ಈ ಮಾತ್ರೆಗಳನ್ನು ನಾವು ನೋಡಬಹುದು.
ಕಳೆದ ವರ್ಷ ಚೀನಾದ ವಿಜ್ಞಾನಿಗಳು ಎಫ್‌ಎಂಟಿಯು ಜೀರ್ಣಾಂಗ ವ್ಯವಸ್ಥೆ, ಮೆದುಳು ಮತ್ತು ದೃಷ್ಟಿಯ ಮೇಲೆ ವಯಸ್ಸಾದ ಪರಿಣಾಮಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದರು. ಈ ಮಲ ಕಸಿ ಯೋಜನೆಯಿಂದಾಗಿ ಹಲವು ಸಮಸ್ಯೆ ಬಗೆಹರಿಸಬಹುದಂತೆ ಅದರಲ್ಲಿ ಕೆಲವೊಂದು ಈ ಕೆಳಗೆ ಹೇಳಲಾಗಿದೆ.
ಉರಿಯೂತದ ಕರುಳಿನ ರೋಗಗಳು
ಬೊಜ್ಜು
ಯಕೃತ್ತಿನ ಸಮಸ್ಯೆ
ಮಧುಮೇಹ
ಫುಡ್ ಅಲರ್ಜಿ
ಆಟಿಸಂ
ಆತಂಕದ ಸಮಸ್ಯೆ ಸೇರಿ ಹಲವು ಕಾಯಿಲೆಗಳಿಗೆ FMT ಪರಿಹಾರ ನೀಡಲಿದೆ ಎಂದಿದ್ದರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
