Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಮೊತ್ತ ಮೊದಲ ಬಾರಿಗೆ ಡೆಂಗ್ಯೂಗೆ ಮಾತ್ರೆ ಬಂದಿದೆ, ಇದು ಪರಿಣಾಮಕಾರಿಯೇ?
ಡೆಂಗ್ಯೂ ಕಾಯಿಲೆಗೆ ಇದುವರೆಗೆ ನಿರ್ಧಿಷ್ಟ ಚಿಕಿತ್ಸೆ ಅಂತ ಇರಲಿಲ್ಲ, ಕಾಯಿಲೆಯ ಲಕ್ಷಣದ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಈ ಕಾರಣದಿಂದಲೇ ಚಿಕಿತ್ಸೆ ಫಲಕಾರಿಯಾಗದೆ ಡೆಂಗ್ಯೂ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ ಕೂಡ ಅಧಿಕವಿದೆ. ಈ ವರ್ಷ ಡೆಂಗ್ಯೂ ತುಂಬಾ ಜನರನ್ನು ಬಾಧಿಸಿದೆ. ಇದೀಗ ಡೆಂಗ್ಯೂವಿಗೆ ಇದೇ ಮೊದಲ ಬಾರಿಗೆ ಔಷಧಿ ಕಂಡು ಹಿಡಿಯಲಾಗಿದೆ. ಇದರಿಂದಾಗಿ ಡೆಂಗ್ಯೂವಿನಿಂದ ಬೇಗನೆ ಚೇತರಿಸಿಕೊಳ್ಳಬಹುದಾಗಿದೆ.
ಕಂಪನಿ ಈಗಾಗಲೇ ರೋಗಿಗಳ ಮೇಲೆ ಟ್ರಯಲ್ ಮಾಡಿದೆ. ಈ ಔಷಧಗಳು ಡೆಂಗ್ಯೂ ರೋಗಿಗಳು ಚೇತರಿಸಿಕೊಳ್ಳುವಲ್ಲಿ ಪರಿಣಾಮಕಾರಿಯಾಗಿದೆ. ಹಾಗಾಗಿ ಡೆಂಗ್ಯೂ ಕಾಯಿಲೆಯಿಂದ ರೋಗಿಗಳು ಸಾವನ್ನಪ್ಪುವ ಸಂಖ್ಯೆ ತಗ್ಗಲಿದೆ ಎಂಬ ಭರವಸೆಯನ್ನು ಈ ಔಷಧಿ ಮೂಡಿಸಿದೆ.

ಆ ಔಷಧಿ ಯಾವುದು, ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಈ ಔಷಧಿಯನ್ನು ಈಗಾಗಲೇ ಸ್ವ ಇಚ್ಛೆಯಿಂದ ಮುಂದೆ ಬಂದ 10 ರೋಗಿಗಳಿಗೆ ನೀಡಲಾಗಿದ್ದು ಅವರಲ್ಲಿ ಒಳ್ಳೆಯ ಫಲಿತಾಂಶ ಕಂಡು ಬಂದಿದೆ. ಈ ಮಾತ್ರೆಯನ್ನು 21 ದಿನಗಳವರೆಗೆ ತೆಗೆದುಕೊಳ್ಳಬೇಕಾಗಿದೆ. ಈ ಔಷಧಿಯನ್ನು ತೆಗೆದುಕೊಂಡ 85 ದಿನಗಳ ಬಳಿಕ ಅವರನ್ನು ಪರೀಕ್ಷೆ ಮಾಡಲಾಯ್ತು, ಆವಾಗ ಈ ಔಷಧ ಶರೀರದ ಮೇಲೆ ಹಾಗೂ ರೋಗ ನಿರೋಧಕ ವ್ಯವಸ್ಥೆ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಿಲ್ಲ ಎಂದು ತಿಳಿದು ಬಂತು.
ಈ ಮಾತ್ರೆ ಶರೀರದಲ್ಲಿರುವ ಎರಡು ವೈರಲ್ ಪ್ರೊಟೀನ್ಸ್ ಅನ್ನ ಬ್ಲಾಕ್ ಮಾಡುತ್ತದೆ, ಇದರಿಂದ ಪ್ರೊಟೀನ್ಸ್ ಹೆಚ್ಚಾಗುವುದನ್ನು ತಡೆಗಟ್ಟಿ ರೋಗ ಲಕ್ಣಗಳು ಗಂಭೀರವಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಈ ಔಷಧ ಇನ್ನೇನು ಕೆಲವೇ ದಿನಗಳಲ್ಲಿ ಔಷಧಾಲಯಗಳಿಗೆ ಲಭ್ಯವಾಗಲಿದೆ.
ಡೆಂಗ್ಯೂ ಲಕ್ಷಣಗಳು
* ತಲೆನೋವು
* ಸ್ನಾಯುಗಳಲ್ಲಿ ನೋವು
* ವಾಂತಿ
* ತಲೆಸುತ್ತು
* ಕಣ್ಣುಗಳಲ್ಲಿ ನೋವು
* ಗಂಟಲಿನ ಗ್ರಂಥಿಗಳಲ್ಲಿ ನೋವು
* ಮೈಯಲ್ಲಿ ಗುಳ್ಳೆ
ಡೆಂಗ್ಯೂ ಗಂಭೀರ ಲಕ್ಷಣಗಳು
* ತುಂಬಾನೇ ಹೊಟ್ಟೆನೋವು
* ತುಂಬಾನೇ ವಾಂತಿ
* ದವಡೆಗಳಲ್ಲಿ ರಕ್ತಸ್ರಾವ, ಮೂಗಿನಲ್ಲಿ ರಕ್ತ ಬರುವುದು
* ತ್ವಚೆಗಳಲ್ಲಿ ಗುಳ್ಳೆಗಳು ಒಡೆದು ರಕ್ತಬರುವುದು
* ತಲೆಸುತ್ತು
* ತುಂಬಾನೇ ಸುಸ್ತು
* ಮೆದುಳಿನಲ್ಲಿ ಊತ
* ರಕ್ತಸ್ರಾವ
ಇವು ಡೆಂಗ್ಯೂ ಕಾಯಿಲೆಯ ಗಂಭೀರ ಲಕ್ಷಣವಾಗಿದೆ. ಇದುವರೆಗೆ ರೋಗಿಯ ರೋಗ ಲಕ್ಷಣ ನೋಡಿ ಅದಕ್ಕೆ ತಕ್ಕ ಚಿಕಿತ್ಸೆ ನೀಡಲಾಗಿತ್ತು, ಈಗ ಡೆಂಗ್ಯೂ ಸಮಸ್ಯೆಗೆ ಔಷಧಿ ಕಂಡು ಹಿಡಿದಿರುವುದರಿಂದ ಡೆಂಗ್ಯೂವಿನಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ಡೆಂಗ್ಯೂ ಕಾಯಿಲೆ ಸೊಳ್ಳೆ ಕಚ್ಚುವುದರಿಂದ ಹರಡುವುದು, ಆದ್ದರಿಂದ ಡೆಂಗ್ಯೂ ತಡೆಗಟ್ಟಬೇಕೆಂದರೆ ಸೊಳ್ಳೆ ಕಚ್ಚುವುದನ್ನು ತಡೆಗಟ್ಟಬೇಕು, ಸೊಳ್ಳೆ ತಟ್ಟಲು ಇರುವ ಮಾರ್ಗಗಳು
* ಸೊಳ್ಳೆ ಕಚ್ಚದಂತೆ ಕ್ರೀಮ್ ಸಿಗುತ್ತೆ ಅದನ್ನು ಬಳಸಿ
* ಮಕ್ಕಳಿಗೆ ಉದ್ದ ತೋಳಿನ ಉಡುಪು ಧರಿಸಿ, ಸಡಿಲವಾದ ಬಟ್ಟೆ ಧರಿಸಿ, ಇದರಿಂದ ಸೊಳ್ಳೆ ಕಚ್ಚುವುದನ್ನು ತಡೆಗಟ್ಟಬಹುದು.
* ಸೊಳ್ಳೆ ಅಧಿಕವಾಗಿ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಕಚ್ಚುತ್ತದೆ, ಅಂಥ ಸಮಯದಲ್ಲಿ ಮನೆ ಬಾಗಿಲು ತೆರೆದಿಡಬೇಡಿ.
* ಸೊಳ್ಳೆ ಬರುವುದನ್ನು ತಡೆಗಟ್ಟಲು ಸೊಳ್ಳೆ ಕಾಯಿಲ್ ಅಥವಾ repellents ಬಳಸಿ.
* ಗರ್ಭಿಣಿಯರು, ಮಕ್ಕಳು ತುಂಬಾನೇ ಎಚ್ಚರಿಕೆವಹಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
