Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಭಾರತದಲ್ಲಿ ಶ್ವಾಸಕೋಶ ಸಮಸ್ಯೆಗೆ ಪಾರಿವಾಳಗಳು ಕಾರಣ..! 11 ವರ್ಷದ ಬಾಲಕನಿಗೂ ನ್ಯುಮೋನಿಟಿಸ್
ನಗರ ಪ್ರದೇಶದಲ್ಲಿ ಪಾರಿವಾಳಗಳು ಕಾಣಸಿಗುವುದು ಸಾಮಾನ್ಯ. ಪಾರಿವಾಳಗಳು ಹೆಚ್ಚಾಗಿ ಜನರ ನಡುವೆ ಜೀವಿಸುತ್ತವೆ. ಇದು ಕಾಡುಗಳಲ್ಲಿ ಅಥವಾ ಜನರಿಂದ ದೂರ ಬದುಕು ಕಟ್ಟಿಕೊಳ್ಳುವುದಿಲ್ಲ. ದೊಡ್ಡ ದೊಡ್ಡ ಕಟ್ಟಡಗಳು, ಉದ್ಯಾನವನಗಳು ರೈಲ್ವೆ ನಿಲ್ದಾಣ, ಮೆಟ್ರೋ, ದೇವಾಲಯ, ಸರ್ಕಾರಿ ಕಚೇರಿ, ಮಸೀದಿ, ಚರ್ಚ್ ಹೀಗೆ ಜನನಿಬಿಡ ಪ್ರದೇಶವೇ ಇವುಗಳಿಗೆ ವಾಸಸ್ಥಳವಾಗಿರುತ್ತದೆ.
ಪಾರಿವಾಳಗಳು ಯಾರಿಗೂ ಕಿರಿ ಕಿರಿ ಮಾಡದೆ ಯಾರಿಗೂ ಸಮಸ್ಯೆ ತರದ ಕಾರಣ ಎಲ್ಲರಿಗೂ ಇವು ಇಷ್ಟವಾಗುತ್ತದೆ. ಕೆಲವು ತಮ್ಮ ಮನೆಯ ಪಕ್ಕದಲ್ಲಿ ಟೆರೇಸ್ ಮೇಲೆ ಇವುಗಳಿಗೆ ಆಹಾರ, ನೀರು ಹಾಕಿ ಬೆಳೆಸುತ್ತಾರೆ. ಅವುಗಳು ಸಹ ಒಮ್ಮೆ ನೀವು ನೀರು ಆಹಾರ ನೀಡಿದರೆ ಹುಡುಕಿಕೊಂಡು ಬರುತ್ತವೆ.

ಆದ್ರೆ ಇತ್ತೀಚಿಗೆ ನಗರ ಪ್ರದೇಶದಲ್ಲಿ ಈ ಪಾರಿವಾಳಗಳೇ ಸಮಸ್ಯೆಯ ಸುಳಿಗಳಾಗಿ ಬದಲಾಗಿವೆ. ನಗರ ಪ್ರದೇಶದಲ್ಲಿ ಜನರ ಅನಾರೋಗ್ಯ ಸಮಸ್ಯೆಗಳಿಗೆ ಈ ಪಾರಿವಾಳಗಳು ಕಾರಣವಾಗುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಪಾರಿವಾಳ ಅಲ್ಲಲ್ಲಿ ಹಿಕ್ಕೆ (ಮಲ ವಿಸರ್ಜನೆ)ಯಿಂದ ಅಸ್ತಮಾ ರೋಗಿಗಳ ಸಮಸ್ಯೆ ಮತ್ತಷ್ಟು ಅಧಿಕವಾಗುವುದು. ಕೆಲವರಲ್ಲಿ Hypersensitive Pneumonitis (HP) ಕೂಡ ಉಂಟಾಗುವುದು. ಆದ್ದರಿಂದ ಪಾರಿವಾಳ ಅಸ್ತಮಾ ರೋಗಿಗಳಿಗೆ ಅಪಾಯಕಾರಿಯಾಗಿದೆ.
ಭಾರತದಲ್ಲಿ, ಅನೇಕ ಜನರು ತಮ್ಮ ದಿನವನ್ನು ಪಾರಿವಾಳಗಳ ಆರೈಕೆಯೊಂದಿಗೆ ಪ್ರಾರಂಭಿಸುತ್ತಾರೆ. ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಈಗ ಪಾರಿವಾಳದ ಗರಿಗಳು ಮತ್ತು ಹಿಕ್ಕೆಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳ ನಡುವಿನ ಸಂಬಂಧವನ್ನು ಗುರುತಿಸಿದ್ದಾರೆ. ಪಾರಿವಾಳಗಳಿಗೆ ಆಹಾರ ನೀಡುವುದು ಮತ್ತು ಅವುಗಳಿಗೆ ಹತ್ತಿರದಲ್ಲಿ ಇರುವುದು ಮನುಷ್ಯರಿಗೆ ಗಮನಾರ್ಹವಾದ ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ವೈದ್ಯರ ಇತ್ತೀಚಿನ ಪ್ರಕರಣದ ಅಧ್ಯಯನವು ಸೂಚಿಸುತ್ತದೆ.
ಈ ಮೊದಲು 11 ವರ್ಷದ ಬಾಲಕನೊಬ್ಬ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಬಳಿಕ ಆತ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಆತನಿಗೆ ಚಿಕಿತ್ಸೆ ನೀಡಲು ಆರಂಭಿಸಿದ ಬಳಿಕ ಈ ಸಮಸ್ಯೆಗೆ ಪಾರಿವಾಳಗಳು ಕಾರಣ ಎಂಬುದು ತಿಳಿದುಬಂದಿದೆ. ವೈದ್ಯರು ಆ ಹುಡುಗನಿಗೆ ಶ್ವಾಸಕೋಶದ ಉರಿಯೂತ ಮತ್ತು ಹೈಪರ್ಸೆನ್ಸಿಟಿವಿಟಿ ನ್ಯುಮೋನಿಟಿಸ್ (HP) ಎಂಬ ಸಮಸ್ಯೆ ಇರುವುದನ್ನು ಪತ್ತೆ ಮಾಡಿದರು.
ಅಮೇರಿಕನ್ ಲಂಗ್ ಅಸೋಸಿಯೇಷನ್ ಪ್ರಕಾರ, ನಿಮ್ಮ ದೇಹದಲ್ಲಿ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವ ನಿರ್ದಿಷ್ಟ ಪದಾರ್ಥಗಳು ಅಥವಾ ಅಲರ್ಜಿನ್ಗಳನ್ನು ನೀವು ಉಸಿರಾಡಿದಾಗ ಅತಿಸೂಕ್ಷ್ಮ ನ್ಯುಮೋನಿಟಿಸ್ ಸಂಭವಿಸುತ್ತದೆ. ಇದನ್ನು ಅಲ್ವಿಯೋಲಿ ಎಂದೂ ಕರೆಯುತ್ತಾರೆ. ಹೇ ಜ್ವರ ಮತ್ತು ಆಸ್ತಮಾವನ್ನು ಉಂಟುಮಾಡುವ ಸಾಮಾನ್ಯ ಅಲರ್ಜಿಗಳಿಗಿಂತ ಭಿನ್ನವಾಗಿ ಇದು ಪರಿಣಾಮ ಉಂಟು ಮಾಡಲಿದೆ. ನ್ಯೂಮೋನಿಯ ಸಮಸ್ಯೆ ಉಂಟಾಗಲು 300ಕ್ಕೂ ಹೆಚ್ಚಿನ ಕಾರಣಗಳನ್ನು ಪಟ್ಟಿಮಾಡಲಾಗುತ್ತದೆ. ಅದರಲ್ಲಿ ಪಾರಿವಾಳದ ಹತ್ತಿರ ಇರುವುದು, ಅವುಗಳ ಸಂಪರ್ಕಕ್ಕೆ ಬರುವುದು ಸಹ ಒಂದು ಕಾರಣವಾಗಿದೆ.
ಹೈಪರ್ಸೆನ್ಸಿಟಿವಿಟಿ ನ್ಯುಮೋನಿಟಿಸ್ ಉಂಟಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ?
ಹೈಪರ್ಸೆನ್ಸಿಟಿವಿಟಿ ನ್ಯುಮೋನಿಟಿಸ್ ನಿಮ್ಮಲ್ಲಿ ಕಾಣಿಸಿಕೊಳ್ಳಬೇಕಾದರೆ ಪಾರಿವಾಳಗಳ ಸಂಪರ್ಕಕ್ಕೆ ನೀವು ಹೋಗಿಬೇಕು. ಅದರಲ್ಲೂ ನಿಮಗೆ ಅಸ್ತಮಾ ಇದ್ದರೆ ಈ ಸಮಸ್ಯೆಯ ಅಪಾಯ ದುಪ್ಪಟ್ಟಾಗುತ್ತದೆ.
- ಉಸಿರಾಟದ ತೊಂದರೆ
- ಒಣ ಕೆಮ್ಮು
- ಎದೆ ಉರಿ
- ಚಳಿ
- ಆಯಾಸ
- ಜ್ವರ
- ಸ್ನಾಯು ನೋವು
- ತೂಕ ಕಡಿಮೆಯಾಗುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications