Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಹಿಳೆಯರೇ, ಮುಟ್ಟಿನ ರಕ್ತಸ್ರಾವದ ಬಣ್ಣ ಹಾಗೂ ರೀತಿ ನೋಡಿ ತಿಳಿಯಬಹುದು ನಿಮ್ಮ ಆರೋಗ್ಯ
ಹೆಣ್ಣು ಋತುಮತಿಯಾದಾಗಿನಿಂದ ಮೆನೋಪಾಸ್ ಹಂತದವರೆಗೆ ಅವಳಿಗೆ ಋತುಚಕ್ರವಿರುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಹಾಗೂ ಮಗುವಾಗಿ ಕೆಲ ತಿಂಗಳವರೆಗೆ ಮುಟ್ಟಾಗುವುದಿಲ್ಲ, ಉಳಿದ ಎಲ್ಲಾ ತಿಂಗಳಿನಲ್ಲಿ ಮುಟ್ಟಾಗುತ್ತಾಳೆ. ಅವಳು ಪ್ರತಿ ತಿಂಗಳು ಮುಟ್ಟಾಗುತ್ತಿದ್ದರೆ ಅದು ಅವಳ ಆರೋಗ್ಯದ ಬಗ್ಗೆ ತಿಳಿಸುತ್ತದೆ. ಅನಿಯಮಿತ ಮುಟ್ಟು ದೇಹದಲ್ಲಿ ಆರೋಗ್ಯ ಸಮಸ್ಯೆಯಿದೆ, ಹಾರ್ಮೋನ್ ಸಮಸ್ಯೆಯಿದೆ ಎಂದು ಎಂಬುವುದನ್ನು ಸೂಚಿಸುತ್ತದೆ.
ಇನ್ನು ಮುಟ್ಟಾದಾಗ ಕೆಲವರಿಗೆ 7 ದಿನ ರಕ್ತಸ್ರಾವವಾಗುವುದು, ಕೆಲವರಿಗೆ ಒಂದು ದಿನ ರಕ್ತಸ್ರಾವವಾಗುವುದು, ಕೆಲವರಿಗೆ ಮೂರು ದಿನ,4 ದಿನ ರಕ್ತಸ್ರಾವವಿರುತ್ತದೆ. ರಕ್ತಸ್ರಾವ ಕೂಡ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ, ಕೆಲವರಿಗೆ ಕಪ್ಪಗೆ ಹೋಗುತ್ತದೆ, ಇನ್ನುಕೆಲವರಿಗೆ ಗಟ್ಟಿಯಾಗಿ ಹೋಗುತ್ತದೆ ರಕ್ತಸ್ರಾವ ಹೇಗಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ಏನನ್ನು ಸೂಚಿಸುತ್ತದೆ ಎಂದು ನ್ಯೂಟ್ರಿಷಿಯನಿಸ್ಟ್ ರಾಶಿ ಚೌಧರಿ ತಿಳಿಸಿದ್ದಾರೆ...

ರಕ್ತಸ್ರಾವ ತೆಳು ಪಿಂಕ್ ಬಣ್ಣದಲ್ಲಿದ್ದರೆ: ಅದುಕಡಿಮೆ ಈಸ್ಟ್ರೋಜನ್ ಎಂಬುವುದನ್ನು ಸೂಚಿಸುತ್ತದೆ, ದೇಹದಲ್ಲಿ ಕಬ್ಬಿಣದಂಶ ಕಡಿಮೆಯಾದಾಗ ಈಸ್ಟ್ರೋಜನ್ ಕೂಡ ತುಂಬಾ ಕಡಿಮೆಯಾಗುವುದು, ಹಾಗಾಗಿ ನಿಮ್ಮ ಮುಟ್ಟಿನ ರಕ್ತ ತೆಳುವಾಗಿದ್ದರೆ ಈ ಬಗ್ಗೆ ಗಮನಹರಿಸಿ.
ಮೊಟ್ಟೆಯ ಬಿಳಿ ರೀತಿ ಲೋಳೆ-ಲೋಳೆಯಿದ್ದರೆ: ಇದು ಅತ್ಯಧಿಕ ಈಸ್ಟ್ರೋಜನ್ ಸೂಚಿಸುತ್ತದೆ,ತುಂಬಾನೇ ಈಸ್ಟ್ರೋಜನ್ ಇದ್ದಾಗ ರಕ್ತಸ್ರಾವ ಲೋಳೆ ಲೋಳೆ ಇರುತ್ತದೆ, ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಈ ರೀತಿ ಕಂಡು ಬರುವುದು. ಹಾರ್ಮೋನ್‌ಗಳ ಅಸಮತೋಲದಿಂದ ಈ ರೀತಿ ಉಂಟಾಗುವುದು.
ಪೀಸ್ ಪೀಸ್ ಆಗಿ ಬಂದರೆ
ರಕ್ತಸ್ರಾವವಾದಾಗ ರಕ್ತ ಹೆಪ್ಪುಗಟ್ಟಿದಂತೆ ಬಂದರೆ ಪ್ರೊಗೆಸ್ಟಿರೋನೆ ಪ್ರಮಾಣ ಕಡಿಮೆ ಇದೆ ಎಂದರ್ಥ, ಇದರಿಂದ ರಕ್ತ ಪೀಸ್ ಪೀಸ್ ರೀತಿ ಬರುತ್ತೆ
ರಕ್ತ ಕಪ್ಪಗಿದ್ದರೆ
ರಕ್ತದ ಬಣ್ಣ ಕಪ್ಪಾಗಿದ್ದು ಹೆಪ್ಪುಗಟ್ಟಿದಂತೆ ಬಂದರೆ ಈಸ್ಟರೋಜನ್ ಅಧಿಕವಿದ್ದು ಪ್ರೊಜೆಸ್ಟಿರೋನೆ ಪ್ರಮಾಣ ಕಡಿಮೆ ಇದೆ ಎಂದರ್ಥ
ಮೇಪಲ್ ಸಿರಪ್ ರೀತಿ ಇದ್ದರೆ: ಆರೋಗ್ಯವಂತ ಮಹಿಳೆಯರಲ್ಲಿ ರಕ್ತಸ್ರಾವ ರೀತಿ ಇರುತ್ತದೆ. ಇದು ಈಸ್ಟ್ರೋಜಿನ್ ಹಾಗೂ progesterone ಪ್ರಮಾಣ ಸಮತೋಲನದಲ್ಲಿದೆ ಎಂಬುವುದನ್ನು ಸೂಚಿಸುತ್ತದೆ.
ಹಾಗಾಗಿ ಮಹಿಳೆಯರೇ ಮುಟ್ಟಾದಾಗ ಪ್ಯಾಡ್‌ನಲ್ಲಿ ನಿಮ್ಮ ಮುಟ್ಟಿನ ಬಣ್ಣದ ಬಗ್ಗೆ ಗಮನ ಕೊಡುವುದು ಒಳ್ಳೆಯದು., ಮೆನ್‌ಸ್ಟ್ರಿರೋಲ್ ಕಪ್ ಬಳಸುವವರು ರಕ್ತಸ್ರಾವದ ಬಣ್ಣ, ಅದು ಲೋಳೆ ಲೋಳೆ ಇದೆಯೇ ಅಥವಾ ತೆಳುವಾಗಿದೆಯೇ ಎಂಬುವುದನ್ನು ತಿಳಿಸುತ್ತದೆ. ಹಾಗಾಗಿ ಮಹಿಳೆಯರೇ ನಿಮ್ಮ ಮುಟ್ಟಿನ ಚಕ್ರದ ಕಡೆಗೆ ಗಮನಹರಿಸಿ.
ಈಸ್ಟ್ರೋಜನ್ ಕಡಿಮೆ ಇದ್ದರೆ ಕಂಡು ಬರುವ ಸಮಸ್ಯೆಗಳು
ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು: ಈಸ್ಟ್ರೋಜನ್ ಕಡಿಮೆಯಾದಾಗ ಮುಟ್ಟು ಸರಿಯಾಗಿ ಆಗಲ್ಲ, ಮುಟ್ಟಿನ ಸಮಯದಲ್ಲಿ ತಲೆನೋವಿನ ಸಮಸ್ಯೆ ಇರುತ್ತದೆ.
ಜನನೇಂದ್ರೀಯ ಡ್ರೈಯಾಗುವುದು: ಪತಿ ಜೊತೆ ಸೇರುವಾಗ ನೋವಾಗುವುದು
ಮೂಡ್‌ಸ್ವಿಂಗ್: ಖಿನ್ನತೆ, ಒಂದು ರೀತಿಯ ಕಿರಿಕಿರಿ, ಒತ್ತಡ ಈ ಬಗೆಯ ಸಮಸ್ಯೆ ಉಂಟಾಗುವುದು
ಮೂಳೆಗಳು ಬಲ ಹೀನವಾಗುವುದು
ತಲೆಸುತ್ತು, ಸುಸ್ತು, ಅತಿಯಾದ ನಿದ್ದೆ ಈ ಬಗೆಯ ಸಮಸ್ಯೆ ಉಂಟಾಗುವುದು
ತೂಕ ಹೆಚ್ಚಾಗುವುದು
ಏಕಾಗ್ರತೆ ಇರಲ್ಲ
ಲೈಂಗಿಕ ಆಸಕ್ತಿ ಕಡಿಮೆಯಾಗುವುದು.
ಈಸ್ಟ್ರೋಜನ್ ತುಂಬಾ ಹೆಚ್ಚಾದರೂ ಕಷ್ಟ: ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು
ಸ್ತನದಲ್ಲಿ ಗಡ್ಡೆ ಮುಂತಾದ ಸಮಸ್ಯೆ ಕಂಡು ಬರುವುದು
ಮೂಡ್ ಸ್ವಿಂಗ್ ಸಮಸ್ಯೆ ಇರುತ್ತದೆ
ಮೈ ತೂಕ ಹೆಚ್ಚಾಗುವುದು
ತಲೆನೋವು, ನಿದ್ರಾಹೀನತೆ, ತಲೆಸುತ್ತು, ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
ಪ್ರೊಜೆಸ್ಟಿರೋನೆ ಪ್ರಮಾಣ: ವಯಸ್ಸಾಗುತ್ತಿದ್ದಂತಗೆ ಇದರ ಪ್ರಮಾಣ ಕಡಿಮೆಯಾಗುವುದು, ಇನ್ನು ಗರ್ಭಕೋಶದ ಕ್ಯಾನ್ಸರ್ ಮುಂತಾದ ಆರೋಗ್ಯ ಸಮಸ್ಯೆ ಇದ್ದಾಗಲೂ ಈ ಹಾರ್ಮೋನ್‌ನಲ್ಲಿ ವ್ಯತ್ಯಾಸ ಉಂಟಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
