Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ದುಃಖ-ನೋವಿನ ಸ್ಟೇಟಸ್-ಸ್ಟೋರಿಸ್ ಹಾಕುತ್ತಾರಾ..? ಇದೊಂದು ಸ್ಯಾಡ್‌ಫಿಶಿಂಗ್..! ಏನಿದು ಗೊತ್ತಾ?
ಇದು ತಂತ್ರಜ್ಞಾನದ ಯುಗ, ಎಲ್ಲರ ಕೈಲು ಮೊಬೈಲ್, ನಿಮಿಷದಲ್ಲಿ ಮಾತು, ನಿಷಮಿದಲ್ಲಿ ಪ್ರೀತಿ, ನಿಮಿಷದೊಳಗೆ ಬ್ರೇಕ್‌ಅಪ್ ಹೀಗೆ ಎಲ್ಲವೂ ಕ್ಷಣ ಮಾತ್ರದಲ್ಲು ಮುಗಿದು ಹೋಗುವ ಕಾಲವಿದೆ. ಅದರಲ್ಲೂ ಎಲ್ಲರ ಕೈಗೆ ಮೊಬೈಲ್ ಸಿಕ್ಕ ಬಳಿಕವಂತು ಆ ಪ್ರಪಂಚವೇ ಬೇರೆ. ಅಲ್ಲಿ ನೋವು, ನಲಿವು, ಪ್ರೀತಿ, ಪ್ರೇಮ, ಮೋಸ ಎಲ್ಲವೂ ಇದೆ. ಒಮ್ಮೊಮ್ಮೆ ಇದೆಲ್ಲದರ ನಡುವೆ ನಾವೇ ಕಳೆದುಹೋಗಿರುವ ದುಗುಡ ಸಹ ಕಾಣಬಹುದು.
ಏಕೆಂದರೆ ನಾವಿಂದು ಒಂದುಷ್ಟು ಸಮಯ ಸಹ ಮೊಬೈಲ್ ಇಲ್ಲದೆ ಜೀವಿಸಲು ಸಾಧ್ಯವಿಲ್ಲ. ಅದರಲ್ಲೂ ಮೊಬೈಲ್ ಹಿಡಿದು ಕುಳಿತು ಬೇರೆ ಅವರ ಕುರಿತು ತಿಳಿದುಕೊಳ್ಳುವುದು ಅಂದರೆ ಎಲ್ಲರಿಗೂ ಪ್ರೀತಿ. ಅದರಲ್ಲೂ ಅವರ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವ ಕುತೂಹಲ. ಇನ್ನೊಂದೆಡೆ ನಾವೇ ಬೇರೆಯವರಿಗೆ ನಾವು ಏನು ಮಾಡುತ್ತಿದ್ದೇವೆ ಅನ್ನೋದನ್ನು ತಿಳಿಸೋ ಕಾತುರ. ಇದಕ್ಕಾಗಿಯೇ ಈ ಸಾಮಾಜಿಕ ಜಾಲತಾಣಗಳು ಸೃಷ್ಟಿಸಿರುವ ರೀಲ್ಸ್, ಸ್ಟೇಟಸ್ ಹಾಕುತ್ತೇವೆ.

ಸ್ಮಾರ್ಟ್‌ಫೋನ್ ಬಳಸುವ ಬಹಳಷ್ಟು ಮಂದಿ ಈ ರೀಲ್ಸ್, ಸ್ಟೋರಿಸ್ ಹಾಗೂ ಸ್ಟೇಟಸ್ ಅನ್ನೋದನ್ನ ಹಾಕುತ್ತಲೇ ಇರುತ್ತಾರೆ. ಇದರಲ್ಲೊಂದು ನೆಮ್ಮದು ಅವರು ಕಂಡುಕೊಳ್ಳುತ್ತಾರೆ. ಮತ್ತೆ ಕೆಲವರು ಏನನ್ನು ಹಾಕದಿದ್ದರೂ ಎಲ್ಲವನ್ನೂ ಗಮನಿಸುತ್ತಾರೆ. ಎಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಿರುತ್ತಾರೆ. ಆದ್ರೆ ಈ ಸ್ಟೋರಿಸ್, ಸ್ಟೇಟಸ್‌ನಲ್ಲಿ ಎಲ್ಲಾ ವಿಚಾರ ಹಾಕುವ ಮಂದಿ ಅದರ ಹಿಂದೆ ಒಂದು ಉದ್ದೇಶವನ್ನೂ ಹೊಂದಿರುತ್ತಾರಂತೆ.
ನಿಮ್ಮ ಸ್ನೇಹಿತರು, ಅಕ್ಕ ಪಕ್ಕದವರು, ಪರಿಚಯಸ್ಥರಲ್ಲಿ ಯಾರಾದರು ನೋವಿನ, ದುಖಃದ ಹಾಡು, ವಿಡಿಯೋವನ್ನು ತಮ್ಮ ರೀಲ್ಸ್, ಸ್ಟೇಟಸ್, ಸ್ಟೋರಿಸ್‌ಗೆ ಹಾಕಿಕೊಳ್ಳುವುದನ್ನು ನೀವು ಗಮನಿಸಿರುತ್ತೀರಿ. ಅಥವಾ ನೀವೇ ಈ ರೀತಿ ಮಾಡಿರಬಹುದು. ಆದ್ರೆ ಈ ರೀತಿ ಮಾಡುವ ಹಿಂದೆ ಒಂದು ಉದ್ದೇಶವಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಈ ರೀತಿ ಸ್ಟೇಟಸ್ ಹಾಕುವ ಮಂದಿ 'ಸ್ಯಾಡ್ ಫಿಶಿಂಗ್' ಎಂಬ ಬಲೆಯೊಳಗೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಅಂದರೆ ಈ ರೀತಿ ಸ್ಟೇಟಸ್, ಸ್ಟೋರಿಸ್ ಹಾಕುವವರು ಬೇರೆಯವರ ಗಮನ ಸೆಳೆಯುವ ದೃಷ್ಟಿ ಹೊಂದಿರುತ್ತಾರೆ. ಇನ್ನು ಸರಳೀಕರಿಸುವುದಾದರೆ ಅವರು ಬೇರೆ ಅವರು ತಮ್ಮ ಕುರಿತು ಸಹಾನುಭೂತಿ ಹೊಂದಲಿ ಎಂಬುದಾಗಿರುತ್ತಂತೆ.
'ಸ್ಯಾಡ್‌ಫಿಶಿಂಗ್' ಎಂಬ ಪದವು ಹೇಗೆ ಹುಟ್ಟಿಕೊಂಡಿತು?
'ಸ್ಯಾಡ್‌ಫಿಶಿಂಗ್' ಎಂಬ ಪದವನ್ನು ಪತ್ರಕರ್ತೆ ರೆಬೆಕಾ ರೀಡ್ ಅವರು 2019 ರಲ್ಲಿ ಮೊದಲು ಬಳಸಿದರಂತೆ. ಕೆಂಡಾಲ್ ಜೆನ್ನರ್ ಅವರ ಮೊಡವೆ ಹೋರಾಟದ ಬಗ್ಗೆ ಅವರ ಭಾವನಾತ್ಮಕ ಕಥೆಯು ಅವರ ಪ್ರೊಆಕ್ಟಿವ್ ಪಾಲುದಾರಿಕೆಗಾಗಿ ಮಾರ್ಕೆಟಿಂಗ್ ಅಭಿಯಾನದ ಭಾಗವಾಗಿ ಹೇಗೆ ಹೊರಹೊಮ್ಮಿತು ಎಂಬುದನ್ನು ವಿವರಿಸಲು ಬಳಸಲಾಯಿತ್ತಂತೆ.
ವರ್ತನೆಯ ತಜ್ಞ ಮತ್ತು ಸಂಶೋಧಕಿ ಕಾರಾ ಪೆಟ್ರೋಫೆಸ್ ಈ ಸ್ಯಾಡ್ ಫಿಶಿಂಗ್ ಕುರಿತು ಹೇಗೆ ಹೇಳಿದ್ದಾರೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಸಹಾನುಭೂತಿಯನ್ನು ಉಂಟುಮಾಡಲು ತಮ್ಮ ಭಾವನಾತ್ಮಕ ಸ್ಥಿತಿಗಳ ಉತ್ಪ್ರೇಕ್ಷೆಗಳನ್ನು ಪ್ರಕಟಿಸುವ ಪ್ರವೃತ್ತಿ ಹೊಂದಿರುತ್ತಾರೆ. ಅವರು ಬೇರೆಯವರ ಗಮನ ತಮ್ಮತ್ತ ಸೆಳೆಯುವ ದೃಷ್ಟಿಯಿಂದ ಈ ರೀತಿ ಮಾಡುತ್ತಾರೆ. ಯಾರಾದರು ನಮ್ಮ ಬಗ್ಗೆ ಸಹಾನುಭೂತಿ ತೋರಿಸಲಿ ಎಂಬುದಷ್ಟೇ ಇದರ ಉದ್ದೇವಾಗಿರಲಿದೆ ಎಂದಿದ್ದಾರೆ.
ನಿರಂತರವಾಗಿ ದುಖಃ ಭರಿತ ಸ್ಟೇಟಸ್ ನೋಡುತ್ತಿದ್ದರೆ ಅವರಲ್ಲಿ ಖಂಡಿತ ಮನೋವೈಜ್ಞಾನಿಕ ಸಮಸ್ಯೆಗೆ ಒಳಗಾಗಿದ್ದಾರೆ ಎಂದರ್ಥವಾಗುತ್ತದೆ. ಇದು ಅವರ ಕುರಿತು ಬೇರೆಯವರು ಸಹಾನುಭೂತಿ ಹೊಂದಲಿ ಎಂಬುದನ್ನು ವಿವರಿಸಲಿದೆ. ಜೊತೆಗೆ ಅವರ ಅಸ್ಥಿತ್ವವನ್ನು ಬೇರೆಯವರಿಗೆ ಸಾಬೀತು ಪಡಿಸಲು ಹಾಗೂ ತಮ್ಮ ನಿಲುವು ಈಗ ಏನಾಗಿದೆ ಎಂಬುದನ್ನು ಹಾಗು ಆ ಸ್ಟೇಟಸ್ ಮೂಲಕ ಯಾರಿಗಾದರು ಅವರು ಸಂದೇಶ ಮುಟ್ಟಿಸಲು ಮುಂದಾಗಿರುತ್ತಾರೆ ಎಂದು ತಿಳಿದುಬಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
