Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಅಪಾಯಕಾರಿ ಡೆಂಗ್ಯೂವಿನಿಂದ ಮಕ್ಕಳ ರಕ್ಷಣೆ ಹೇಗೆ: ಮಕ್ಕಳ ತಜ್ಞೆ ಡಾ. ಅರ್ಚನಾ ನೀಡಿದ ಸಲಹೆಗಳು
ಕರ್ನಾಟಕದಲ್ಲಿ ಡೆಂಗ್ಯೂ ಹೆಚ್ಚಾಗಿದ್ದು ಇದು ಹಲವು ಮಕ್ಕಳ ಪ್ರಾಣಕ್ಕೆ ಅಪಾಯ ತಂದಿದೆ, ಈ ಅಪಾಯಕಾರಿ ಡೆಂಗ್ಯೂವಿನಿಂದ ಮಕ್ಕಳ ರಕ್ಷಣೆಗೆ ಹೇಗೆ ಎಂಬುವುದರ ಬಗ್ಗೆ ನಾವು ತಜ್ಞರನ್ನು ಸಂಪರ್ಕಿಸಿದಾಗ ಮಕ್ಕಳ ತಜ್ಞೆ ಡಾ. ಅರ್ಚನಾ ಎಂ, ಕನ್ಸಲ್ಟೆಂಟ್ - ಪೀಡಿಯಾಟ್ರಿಕ್ ಸಾಂಕ್ರಾಮಿಕ ರೋಗಗಳು, ಮಣಿಪಾಲ್ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ ರಸ್ತೆ ಸಲಹೆಗಳಿವು
ಕಳೆದ 2-3 ವಾರಗಳಿಂದ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಆತಂಕಕಾರಿಯಾಗಿ ಏರಿಕೆ ಕಂಡಿವೆ. ಹೆಚ್ಚಿನ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಡೆಂಗ್ಯೂ ಒಂದು ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆಯಾಗಿದ್ದು, DENV ವೈರಸ್ ಅನ್ನು ಹೊತ್ತೊಯ್ಯುವ ಈಡಿಸ್ ಸೊಳ್ಳೆಯ ಕಡಿತದಿಂದ ಉಂಟಾಗುತ್ತದೆ.

ಯಾವ ರೋಗಲಕ್ಷಣವನ್ನು ನಿರ್ಲಕ್ಷಿಸಬಾರದು?
ಡೆಂಗ್ಯೂ ಜ್ವರವು ಅಧಿಕ (104 ರಿಂದ 105 ಡಿಗ್ರಿ) ಜ್ವರ, ವಾಂತಿ, ತಲೆತಿರುಗುವಿಕೆ ಮತ್ತು ಹೊಟ್ಟೆಯಲ್ಲಿ ನೋವಿನ ರೋಗಲಕ್ಷಣಗಳನ್ನು ಹೊಂದಿದೆ. ಜ್ವರವು 4-5 ದಿನಗಳವರೆಗೆ ಇರುತ್ತದೆ. ಡೆಂಗ್ಯೂ ರೋಗಲಕ್ಷನಗಳ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ರೋಗಲಕ್ಷಣಗಳು ಉಲ್ಬಣಗೊಂಡರೆ ವೈದ್ಯರನ್ನು ಸಂಪರ್ಕಿಸವುದು ಅನಿವಾರ್ಯ.
ಯಾವ ರೋಗಲಕ್ಷಣಗಳು ಮಕ್ಕಳಿಗೆ ಅಪಾಯಕಾರಿ?
ಹೆಚ್ಚಿದ ಆಯಾಸ, ಹೆಚ್ಚಿದ ತಲೆತಿರುಗುವಿಕೆ ಮತ್ತು ವಾಂತಿಯ ರೋಗ ಲಕ್ಷಣಗಳನ್ನು ಹೊಂದಿರುವ ಪೀಡಿತ ಮಕ್ಕಳಲ್ಲಿ, ರಕ್ತದ ಒತ್ತಡ ಮತ್ತು ಹೃದಯದ ಬಡಿತದ ನಿಗಾ ತುಂಬಾ ಮುಖ್ಯವಾಗಿರುತ್ತದೆ, ಆದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸುವುದು ಅಗತ್ಯವಾಗಬಹುದು.
ಡೆಂಗ್ಯೂಗೆ ಯಾವ ಆಹಾರವು ಒಳ್ಳೆಯದು?
ಡೆಂಗ್ಯೂ ಹೆಚ್ಚಾಗಿ ದೇಹದ ದ್ರವಗಳ ನಷ್ಟಕ್ಕೆ ಕಾರಣವಾಗುತ್ತದೆ, ಇದು ಮೂತ್ರದ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗಬಹುದು ಮತ್ತು ರಕ್ತದೊತ್ತಡ ಮತ್ತು ಹೃದಯ ಬಡಿತದ ಮೇಲೆಯೂ ಪರಿಣಾಮ ಬೀರಬಹುದು. ಸಾಕಷ್ಟು ಜಲಸಂಚಯನವನ್ನು ಖಚಿತಪಡಿಸಿಕೊಳ್ಳುವುದು ಮತ್ತು ನೀರಿನಂಶವಿರುವ ಆಹಾರವನ್ನು ಸೇವಿಸುವುದು ಡೆಂಗ್ಯೂವನ್ನು ನಿರ್ವಹಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಸೂಪ್ಗಳು, ಕಡಿಮೆ ಮಸಾಲೆಯುಕ್ತ ಮತ್ತು ಕಡಿಮೆ ಎಣ್ಣೆಯುಕ್ತ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದು ಡೆಂಗ್ಯೂ ನಿರ್ವಹಣೆಗೆ ಸಹಕಾರಿಯಾಗಿದೆ. ಹೆಚ್ಚು ಹೆಚ್ಚು ತಾಜಾ ಹಣ್ಣು ತರಕಾರಿಗಳ ಸೇವನೆಯನ್ನು ಕೂಡ ವೈದ್ಯರು ಶಿಫಾರಸು ಮಾಡುತ್ತಾರೆ. ಪಪ್ಪಾಯಿ ಎಲೆಗಳ ರಸ ಅಥವಾ ಸಾರದ ಸೇವನೆಯು, ವಾಂತಿಯನ್ನು ಪ್ರಚೋದಿಸಿ ದೇಹದ ದ್ರವಗಳು ಮತ್ತು ನೀರಿನ ಅಂಶವನ್ನು ಮತ್ತಷ್ಟು ತಗ್ಗಿಸುವ ಸಾಧ್ಯತೆ ಇರುವುದರಿಂದ, ಇವುಗಳ ಸೇವನೆಯನ್ನು ತ್ಯಜಿಸುವುದು ಉತ್ತಮ.
ಪೋಷಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು?
ಡೆಂಗ್ಯೂ ತಡೆಗಟ್ಟಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. ಸೊಳ್ಳೆ ಕಚ್ಚುವಿಕೆಯನ್ನು ತಡೆಯಲು, ಸೊಳ್ಳೆ ನಿವಾರಕವನ್ನು ಬಳಸಿ. ನಿಮ್ಮ ಮಕ್ಕಳಿಗೆ ಉದ್ದ ತೋಳಿನ ಬಟ್ಟೆ ಮತ್ತು ಉದ್ದನೆಯ ಪ್ಯಾಂಟ್‌ಗಳನ್ನು ತೊಡಿಸಿ. ಇದು ಡೆಂಗ್ಯೂ ಜ್ವರ ಮತ್ತು ಅದರ ನಂತರದ ಪರಿಣಾಮಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸೊಳ್ಳೆ-ಪೀಡಿತ ಪ್ರದೇಶಗಳಲ್ಲಿ, ಡೆಂಗ್ಯೂ ಹರಡುವ ಸೊಳ್ಳೆಗಳ ವಿರುದ್ಧ ರಕ್ಷಣೆಗಾಗಿ ಸೊಳ್ಳೆ ಪರದೆಯು ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಸೊಳ್ಳೆಗಳನ್ನು ನಿಮ್ಮ ಮನೆಯಿಂದ ಹೊರಗಿಡಲು ಸಹಾಯ ಮಾಡಲು ನಿಮ್ಮ ಮನೆಯ ಕಿಟಕಿಗಳು ಮತ್ತು ಬಾಗಿಲುಗಳಿಗೆ ಪರದೆಗಳನ್ನು ಬಳಸಿ. ಸೊಳ್ಳೆಗಳ ಸಂತಾನೋತ್ಪತ್ತಿಯ ಅಪಾಯವನ್ನು ಕಡಿಮೆ ಮಾಡಲು: ಹೂದಾನಿಗಳು ಮತ್ತು ಕುಂಡಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸಿ, ನಿಮ್ಮ ಮನೆಯ ಸುತ್ತಲೂ ಕೊಚ್ಚೆ ಗುಂಡಿಗಳನ್ನು ನಿವಾರಿಸಿ, ನೀರಿನ ಶೇಖರಣೆಗೆ ಕಾರಣವಾಗಬಹುದಾದ ಅಡತಡೆಗಳನ್ನು ನಿವಾರಿಸಿ.
ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಜ್ವರವು ಕಡಿಮೆಯಾದ ನಂತರ, ನಿಮ್ಮ ಮಗು ಇನ್ನೂ ಇತರ ಡೆಂಗ್ಯೂ ರೋಗಲಕ್ಷಣಗಳೊಂದಿಗೆ ಬಳಲುವ ಸಾಧ್ಯತೆ ಇರುತ್ತದೆ ಅಥವಾ ಕೆಲವು ರೋಗಲಕ್ಷಣಗಳು ಇನ್ನಷ್ಟು ಹದಗೆಡಬಹುದು, ಹೀಗಾದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕಾದ ಅಗತ್ಯವಿರುತ್ತದೆ. ಪ್ಲೇಟ್ಲೆಟ್ ಎಣಿಕೆಗಳನ್ನು ತಿಳಿಯಲು ವೈದ್ಯರು ದಿನಕ್ಕೆ ಒಂದು ಅಥವಾ ಎರಡು ಬಾರಿ (ಅಥವಾ ಅಗತ್ಯವಿರುವಂತೆ) ರಕ್ತ ಪರೀಕ್ಷೆಗಳನ್ನು ಸಲಹೆ ಮಾಡಬಹುದು.
ಡೆಂಗ್ಯೂ ಇಂದ ಗುಣಮುಖವಾದ ತಕ್ಷಣ ನಾವು ಮಕ್ಕಳನ್ನು ಶಾಲೆಗೆ ಕಳುಹಿಸಬಹುದೇ?
ಸಂಪೂರ್ಣವಾಗಿ ಜ್ವರ ಕಡಿಮೆ ಆಗಿ, ನಿಮ್ಮ ಮಗು ಚೇತರಿಸಿಕೊಳ್ಲಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ, ಅವರು ಸುಸ್ತು ಮತ್ತು ಬಲಹೀನತೆಯಿಂದ ಬಳಲಬಹುದು. ಆಹಾರ ಸೇವನೆ ಅರೋಗ್ಯ ಸ್ಥಿತಿಯಲ್ಲಿರುವಂತೆ ಮಾಮೂಲಿಗೆ ಮರಳುವ ವರೆಗೆ ಮತ್ತು ನಿಮ್ಮ ಮಗು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ವರೆಗೆ ಮಗಿವನ್ನು ಶಾಲೆಗೆ ಕಳುಹಿಸದೆ ಇರುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










