Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ಯಾರಸಿಟಮೋಲ್ ಸೇರಿ 53 ಔಷಧಿಗಳು ಗುಣಪಟ್ಟ ಪರೀಕ್ಷೆಯಲ್ಲಿ ವಿಫಲ..!!
ಇತ್ತೀಚಿಗೆ ಹಲವು ಪ್ಯಾಕ್ ಮಾಡಲಾದ ಫುಡ್ ಐಟಂಗಳು, ಮಸಾಲೆ ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದ್ದಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಹಿಂಪಡೆದಿರುವುದನ್ನು ನಾವು ನೋಡಿದ್ದೇವೆ. ಆದ್ರೆ ಮಾರುಕಟ್ಟೆಯಲ್ಲಿರುವ ಹಲವು ಮಾತ್ರೆಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಪೂರಕಗಳು, ಮಧುಮೇಹ ವಿರೋಧಿ ಮಾತ್ರೆಗಳು ಮತ್ತು ಅಧಿಕ ರಕ್ತದೊತ್ತಡದ ಔಷಧಿಗಳು ಸೇರಿದಂತೆ 50 ಕ್ಕೂ ಹೆಚ್ಚು ಔಷಧಗಳು ಭಾರತದ ಔಷಧ ನಿಯಂತ್ರಕದಿಂದ ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿವೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (CDSCO) 53 ಔಷಧಗಳನ್ನು "ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ (NSQ) ಎಚ್ಚರಿಕೆ" ಎಂದು ಘೋಷಿಸಿದೆ.

ವಿಟಮಿನ್ ಸಿ ಮತ್ತು ಡಿ 3 ಮಾತ್ರೆಗಳು ಶೆಲ್ಕಾಲ್, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಸಾಫ್ಟ್‌ಜೆಲ್‌ಗಳು, ಆಂಟಿಆಸಿಡ್ ಪ್ಯಾನ್-ಡಿ, ಪ್ಯಾರೆಸಿಟಮಾಲ್ ಮಾತ್ರೆಗಳು ಐಪಿ 500 ಮಿಗ್ರಾಂ, ಗ್ಲಿಮೆಪಿರೈಡ್, ಅಧಿಕ ರಕ್ತದೊತ್ತಡ ಔಷಧ ಟೆಲ್ಮಿಸಾರ್ಟನ್ ಸೇರಿ ಒಟ್ಟು 53 ಹೆಚ್ಚು ಔಷಧಿಗಳು ಈ ಪಟ್ಟಿಯಲ್ಲಿವೆ.
ಈ ಔಷಧಿಗಳನ್ನು ಹೆಟೆರೊ ಡ್ರಗ್ಸ್, ಅಲ್ಕೆಮ್ ಲ್ಯಾಬೊರೇಟರೀಸ್, ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಕರ್ನಾಟಕ ಆಂಟಿಬಯೋಟಿಕ್ಸ್ & ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್, ಮೆಗ್ ಲೈಫ್ ಸೈನ್ಸಸ್, ಪ್ಯೂರ್ & ಕ್ಯೂರ್ ಹೆಲ್ತ್‌ಕೇರ್ ಸೇರಿ ಹಲವು ಸಂಸ್ಥೆಗಳು ಮಾರುಕಟ್ಟೆಗೆ ತರುತ್ತಿವೆ. ಆದ್ರೆ ಈ ಮೊದಲು ಈ ಮಾತ್ರೆಗಳು ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರಣವಾಗಿದ್ದವು.
ಹೊಟ್ಟೆಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ವ್ಯಾಪಕವಾಗಿ ಬಳಸಲಾಗುವ ಔಷಧವಾದ ಮೆಟ್ರೋನಿಡಜೋಲ್ ಅನ್ನು ಪಿಎಸ್‌ಯು ಹಿಂದೂಸ್ತಾನ್ ಆಂಟಿಬಯೋಟಿಕ್ ಲಿಮಿಟೆಡ್ (ಎಚ್‌ಎಎಲ್) ಉತ್ಪಾದಿಸುತ್ತದೆ. ಇದರ ಬಳಕೆ ಸಹ ಹೆಚ್ಚಾಗಿಯೇ ಇದೆ ಆದರೆ ಈಗ ಈ ಔಷಧಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ. ಹಾಗೆ ಕೋಲ್ಕತ್ತಾದ ಡ್ರಗ್-ಟೆಸ್ಟಿಂಗ್ ಲ್ಯಾಬ್ ಅಲ್ಕೆಮ್ ಹೆಲ್ತ್ ಸೈನ್ಸ್‌ನ ಪ್ರತಿಜೀವಕಗಳಾದ ಕ್ಲಾವಮ್ 625 ಮತ್ತು ಪ್ಯಾನ್ ಡಿಗಳನ್ನು ನಕಲಿ ಎಂದು ಪರಿಗಣಿಸಲಾಗಿದೆ. ಆದರೆ ಸಂಸ್ಥೆಗಳು ಇದನ್ನು ತಿರಸ್ಕರಿಸುತ್ತವೆ.
ಹಾಗೆ ಕೆಲವೊಂದು ಔಷಧಿಗಳು ಹೆಸರಾಂತ ಸಂಸ್ಥೆಗಳ ಹೆಸರು, ಲೇಬಲ್ ಬಳಸಿ ಮಾರುಕಟ್ಟೆಗೆ ನಕಲಿ ಔಷಧಿಗಳ ತರಲಾಗಿದೆ. ಇವು ಗುಣಮಟ್ಟ ಪರೀಕ್ಷೆಯಲ್ಲಿ ಅನುಮತಿಯಲು ಸಾಧ್ಯವಿಲ್ಲದೆ ಮಾರುಕಟ್ಟೆಯಿಂದ ಹೊರಗುಳಿಯುತ್ತಿವೆ. ಇವು ಅಸಲಿ ಕಂಪನಿಗೆ ಸೇರಿದ ಔಷಧಿಗಳಲ್ಲ ಎಂಬ ವಾದವೂ ಇದೆ.
ಈ ಮಾತ್ರೆಗಳಲ್ಲಿ ಅಸಲಿ ಯಾವುದು, ನಕಲಿ ಯಾವುದು ಎಂಬುದನ್ನು ಗ್ರಾಹಕರು ಗುರುತಿಸುವುದು ಕಷ್ಟ. ಇದಕ್ಕೆ ಪ್ರಯೋಗಾಲಯದ ಮೂಲಕ ಮಾತ್ರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಮೆಡಿಕಲ್‌ಗಳಲ್ಲೂ ಸಹ ಇದನ್ನು ಪತ್ತೆ ಮಾಡುವುದು ಅಸಾಧ್ಯವಾಗಿರುತ್ತದೆ.
ಆದರೆ ಈಗ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ಬಹುತೇಕ ಔಷಧಿಗಳು ಸಂಸ್ಥೆಯ ಅಧಿಕೃತ ಔಷಧಿಗಳೇ ಅಥವಾ ಕಳ್ಳ ಮಾರುಕಟ್ಟೆಯ ಮೂಲಕ ತಲುಪಿರುವ ನಕಲಿ ಔಷಧಿಗಳೇ ಎಂಬುದು ಇನ್ನು ತಿಳಿದುಬರಬೇಕಿದೆ.
ಈ ಮಾತ್ರೆಗಳ ಪಟ್ಟಿಯಲ್ಲಿರುವ ಪ್ಯಾರೆಸಿಟಮಾಲ್ ಮಾತ್ರೆಯನ್ನು ಬಹುತೇಕರು ಬಳಸಿರುತ್ತೇವೆ, ಸಣ್ಣ ಜ್ವರ, ಶೀತದಂತಹ ಪ್ರಕರಣದಲ್ಲಿ ಈ ಮಾತ್ರೆಯನ್ನೇ ಬಳಸಲಾಗುತ್ತದೆ. ಸದ್ಯ ಈ ಮಾತ್ರ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications