Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡೆಂಗ್ಯೂಗೆ ಪಪ್ಪಾಯದಲ್ಲಿದೆ ಪರಿಹಾರ..! ಪಪ್ಪಾಯ ಎಲೆಗಳನ್ನು ಹೀಗೆ ಮಾಡಿ ಸಾಕು..!
ಡೆಂಗ್ಯೂ ಜ್ವರ ಸದ್ಯ ಭಾರತದಲ್ಲಿ ಆತಂಕ ಹುಟ್ಟಿಸಿರುವ ಹೊಸ ವೈರಸ್ ಪ್ರಕರಣವಾಗಿದೆ. ಸೊಳ್ಳೆಗಳಿಂದ ಹರಡುವ ಈ ವೈರಸ್ ಈಗ ಹಠಾತ್ ಹರಡುವಿಕೆಗೆ ಕಾರಣವಾಗಿದ್ದು, ಬೆಂಗಳೂರಿನಲ್ಲಿ ಇದರಿಂದ ನೂರಾರು ಮಂದಿ ಆಸ್ಪತ್ರೆ ಸೇರುವಂತಾಗಿದೆ. ರಾಜ್ಯದಲ್ಲಿ ಈ ವರ್ಷ ಇದುವರೆಗೆ 25, 408 ಜನರು ಡೆಂಗ್ಯೂಗೆ ಒಳಗಾಗಿದ್ದು, 12 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಅಂಕಿಅಂಶ ಬಹಿರಂಗಪಡಿಸಿದೆ.
ಡೆಂಗ್ಯೂ ಜ್ವರವು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಕೆಟ್ಟ ಪರಿಸ್ಥಿತಿಗಳಲ್ಲಿ ಒಂದಾಗಿದೆ. ಈಡಿಸ್ ಸೊಳ್ಳೆಯಿಂದ ಹರಡುವ ಈ ಕಾಯಿಲೆ ಪ್ಲೆಟ್‌ಲೆಟ್‌ಗಳ ಸಂಖ್ಯೆ ದಿಢೀರ್ ಕುಸಿತಕ್ಕೆ ಕಾರಣವಾಗಿ ವಿಪರೀತ ಜ್ವರದಿಂದ ಬಳಲುವ ವ್ಯಕ್ತಿ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಾನೆ. ಥ್ರಂಬೋಸೈಟ್ಸ್ ಎಂದೂ ಕರೆಯಲ್ಪಡುವ ಪ್ಲೇಟ್‌ಲೆಟ್‌ಗಳು ನಮ್ಮ ರಕ್ತದಲ್ಲಿನ ಸಣ್ಣ ಜೀವಕೋಶದ ತುಣುಕುಗಳಾಗಿವೆ, ಅವು ನಮ್ಮ ಮೂಳೆ ಮಜ್ಜೆಯಲ್ಲಿ ಉತ್ಪತ್ತಿಯಾಗುತ್ತವೆ.

ಇವು ದೇಹದ ಸೈನಿಕರಂತೆ ಕೆಲಸ ಮಾಡುತ್ತವೆ. ಸಾಮಾನ್ಯ ಪ್ಲೇಟ್‌ಲೆಟ್ ಎಣಿಕೆಯು ಪ್ರತಿ ಮೈಕ್ರೋಲೀಟರ್ ರಕ್ತಕ್ಕೆ 150,000-4,50,000 ಪ್ಲೇಟ್‌ಲೆಟ್‌ಗಳ ವ್ಯಾಪ್ತಿಯಲ್ಲಿರುತ್ತದೆ. 150,000 ಕ್ಕಿಂತ ಕಡಿಮೆ ಪ್ಲೇಟ್‌ಲೆಟ್‌ಗಳನ್ನು ಹೊಂದಿರುವುದನ್ನು ಥ್ರಂಬೋಸೈಟೋಪೆನಿಯಾ ಎಂದು ಕರೆಯಲಾಗುತ್ತದೆ. ಡೆಂಗ್ಯೂ ಸಂದರ್ಭದಲ್ಲಿ, ಸಾಮಾನ್ಯ ಪ್ಲೇಟ್‌ಲೆಟ್ ಎಣಿಕೆಗಳು 20,000-40,000 ಪ್ಲೇಟ್‌ಲೆಟ್‌ಗಳಿಗೆ ತೀವ್ರವಾಗಿ ಇಳಿಕೆಯಾಗಬಹುದು. ತಕ್ಷಣವೇ ಇದ್ದಕೆ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಹಾನಿಯಾಗುವುದು ಖಚಿತ.
ಡೆಂಗ್ಯೂ ಬಂದ ಬಳಿಕ ಚಿಕಿತ್ಸೆಗೆ ಒಳಗಾಗುವುದಕ್ಕಿಂತ ಬಾರದಂತೆ ತಡೆಯುವುದೇ ಮೊದಲ ಚಿಕಿತ್ಸೆ. ಹೀಗಾಗಿ ಇಂತಹ ರೋಗ ಬರುವ ಮೊದಲೇ ದೇಹವನ್ನು ಹುರಿಗೊಳಿಸಬೇಕಾಗುತ್ತದೆ. ಅದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇರಿದಂತೆ ಪ್ಲೇಟ್‌ಲೆಟ್‌ಗಳ ಸಂಖ್ಯೆ ಹಚ್ಚಾಗುವಂತಹ ಆಹಾರಗಳನ್ನು ನಾವು ಸೇವಿಸುವುದು ಬಹಳ ಅಗತ್ಯ.
ಹಾಗಾದ್ರೆ ಪ್ಲೇಟ್‌ಲೆಟ್ ಹೆಚ್ಚಿಸುವಂತಹ ಆರೋಗ್ಯಕರ ಆಹಾರವಾದರೂ ಯಾವುದು ಎಂಬುದಕ್ಕೆ ಉತ್ತರ ಪಪ್ಪಾಯ ಹಣ್ಣು ಹಾಗೂ ಪಪ್ಪಾಯದ ಎಲೆಗಳಾಗಿವೆ. ಪಪ್ಪಾಯದ ಎಲೆಗಳು, ಕಾಂಡಗಳು ಹಣ್ಣುಗಳು ನಮ್ಮ ದೇಹದಲ್ಲಿ ಪ್ಲೇಟ್‌ಲೆಟ್ ಹೆಚ್ಚು ಮಾಡಲು ಸುಲಭದ ಆಹಾರವಾಗಿದೆ.
ಪಪ್ಪಾಯ ಎಲೆಗಳನ್ನು ಆಹಾರವಾಗಿ ಬಳಸುವುದು ಹೇಗೆ?
ಈ ಪಪ್ಪಾಯ ಎಲೆಗಳು ಬಹಳ ಕಹಿಯಾದ ಅಂಶದಿಂದ ಕೂಡಿರುತ್ತದೆ. ಅಲ್ಲದೆ ಅದರಿಂದ ಬರುವ ಸೊನೆ ವಿಪರೀತ ಕಹಿಗೆ ಕಾರಣವಾಗುತ್ತದೆ. ಹೀಗಾಗಿ ನೇರವಾಗ ಅದನ್ನು ಸೇವಿಸಲು ಸಾಧ್ಯವೇ ಇಲ್ಲ. ಎಲೆಯನ್ನು ಎನ್ನಾಗಿ ತೊಳೆದು ಅದನ್ನು ಜಜ್ಜಿ ಅಥವಾ ಮಿಕ್ಸಿಯಲ್ಲಿ ರುಬ್ಬಿ ಅದರ ರಸ ತೆಗೆಯಬೇಕು. ಬಳಿಕ ಇದಕ್ಕೆ ರುಚಿಗಾಗಿ ಜೇಣು ತುಪ್ಪ ಬೆರೆಸಿ ಸವಿಯಬಹುದಾಗಿದೆ.
ಪಪ್ಪಾಯ ಎಲೆಯಿಂದ ಮಾಡಲಾಗುವ ಚಹಾ
ಪಪ್ಪಾಯ ಎಲೆಯನ್ನು ಕತ್ತರಿಸಿ ಸುಮಾರು 10ರಿಂದ 15 ನಿಮಿಷಗಳ ಕಾಲ ನೀರಿನಲ್ಲಿ ಹಾಕಿ ಕುದಿಸಬೇಕು. ನಂತರ ಎಲೆಗಳನ್ನು ಜರಡಿ ಹಿಡಿದು ಸೋಸಿಕೊಂಡು ಅದರ ನೀರಿಗೆ ಸಕ್ಕರೆ, ಜೇನುತುಪ್ಪ ಅಥವಾ ನಿಂಬೆ ರಸ ಹಿಂಡಿಕೊಂಡು ಕುಡಿಯಬಹುದು.
ಪಪ್ಪಾಯ ಎಲೆಗಳಿಂದ ಸಲಾಡ್ ಸಹ ಮಾಡಲಾಗುತ್ತದೆ. ಎಲೆಗಳನ್ನು ಕುದಿಯುವ ನೀರಿಗೆ ಹಾಕಿ ಅದಕ್ಕೆ ಬೀನ್ಸ್ ಕಾಳುಗಳು, ಶುಂಠಿ, ಬಳ್ಳುಳ್ಳಿ, ನಿಂಬೆ ಬೆರೆಸಿ ಚೆನ್ನಾಗಿ ಕುದಿಬರೆಸಿ ಕುಡಿಯಬಹುದು. ಇದರಿಂದ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು.
ತರಕಾರಿಗಳು, ಕಬ್ಬಿಣದ ಭರಿತ ಆಹಾರಗಳು, ಕುಂಬಳಕಾಯಿ ಬೀಜಗಳು, ಡೈರಿ ಉತ್ಪನ್ನಗಳಂತಹ ಪೌಷ್ಟಿಕ ಆಹಾರ, ಒಮೆಗಾ 3 ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿದರೆ ಈ ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆರೋಗ್ಯವು ಚೇತರಿಕೆ ಕಂಡುಬರಲಿದೆ. ಕೀವಿ ಹಣ್ಣುಗಳು, ಕಿತ್ತಳೆ, ಪಪ್ಪಾಯ ಸೇವನೆ ದೇಹದಲ್ಲಿ ಪ್ಲೇಟ್‌ಲೆಟ್ ಹೆಚ್ಚಾಗಲು ಸಹಕಾರಿಯಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications