Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಅನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುವುದು, ಏಕೆ? ಇದರ ಆರಂಭಿಕ ಲಕ್ಷಣಗಳೇನು?
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಅನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುವುದು. ಏಕೆಂದರೆ ಇದರ ಪ್ರಾರಂಭದ ಲಕ್ಷಣಗಳು ಗೊತ್ತಾಗುವುದೇ ಇಲ್ಲ, ಹೀಗಾಗಿ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಬಂದರೆ ಬದುಕಿಳಿಯುವುದು ಕಷ್ಟವಾಗುವುದು. ಪ್ಯಾಂಕ್ರಿಯಾಸ್ ಕ್ಯಾನ್ಸರ್ ಅನ್ನು ಅತೋ ಹೆಚ್ಚು ಕಂಡು ಬರುವ 11ನೇ ಕ್ಯಾನ್ಸರ್ ಎಂದು ಹೇಳಲಾಗುವುದು.

ಧೂಮಪಾನಿಗಳಲ್ಲಿ, ಪಬೆಸಿಟಿ ಸಮಸ್ಯೆ ಇರುವವರಲ್ಲಿ, ಅತ್ಯಧಿಕ ಕೆಂಪು ಮಾಂಸ , ಅತೀ ಹೆಚ್ಚು ಸಂಸ್ಕರಿಸಿದ ಮಾಂಸಾಹಾರ ಏವನೆ, ವಂಶವಾಹಿ ಹೀಗೆ ಅನೇಕ ಕಾರಣಗಳಿಂದ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಕಂಡು ಬರುವುದು.
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಅನ್ನು ಸೈಲೆಂಟ್ ಕಿಲ್ಲರ್ ಎಂದು ಏಕೆ ಕರೆಯಲಾಗುವುದು?
ಅದು ಬೇಗನೆ ಪತ್ತೆಯಾಗುವುದಿಲ್ಲ: ಪ್ಯಾಂಕ್ರಿಯಾಸ್ ಆರಂಭದ ಹಂತದಲ್ಲಿ ಇದು ಪತ್ತೆಯಾಗುವುದು ತುಂಬಾ ಕಡಿಮೆ. ಸರಿಯಾಗಿ ಪರಿಶೀಲನೆ ಮಾಡದೆ ಹೋದರೆ ಗ್ಯಾಸ್ಟ್ರಿಕ್ ಮತ್ತಿತರ ಸಮಸ್ಯೆವಿರಬಹುದು ಎಂದು ಭಾವಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಇದು ಪತ್ತೆಯಾಗುವುದು ನಿಧಾನವಾಗುವುದು.
ಅಲ್ಲದೆ ಪ್ರಾರಂಭದ ಹಂತದಲ್ಲಿ ಇದರ ಲಕ್ಷಣಗಳು ಕಂಡು ಬರುವುದೇ ಇಲ್ಲ, ಅಲ್ಲದೆ ಪ್ಯಾಂಕ್ರಿಯಾಸ್ ಲಕ್ಷಣ ಹೀಗೇ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ, ಆದ್ದರಿಂದ ಪ್ಯಾಂಕ್ರಿಯಾಸ್ ಆರಂಭದಲ್ಲಿ ಗೊತ್ತಾಗುವುದಿಲ್ಲ.
ರೋಗ ಸ್ಥಿತಿ ಬೇಗನೆ ಗಂಭೀರವಾಗುವುದು
ಪ್ರಾರಂಭದಲ್ಲಿ ಇದರ ಲಕ್ಷಣಗಳು ಕಂಡು ಬರುವುದಿಲ್ಲ, ಆದರೆ ರೋಗ ಉಲ್ಪಣವಾಗುವುದು. ಹೀಗಾಗಿ ಈ ಕ್ಯಾನ್ಸರ್ ತುಂಬಾನೇ ಅಪಾಯಕಾರಿಯಾಗಿದೆ.
ಕಿಬ್ಬೊಟ್ಟೆ ನೋವು
ಕಿಬ್ಬೊಟ್ಟೆಯಲ್ಲಿ ನೋವು, ಬೆನ್ನಿನಲ್ಲಿ ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು. ಕೆಲವರಲ್ಲಿ ಕಿಬ್ಬೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ನೋವು ಕಂಡು ಬಂದರೆ ಇನ್ನು ಕೆಲವರಿಗೆ ಯಾವುದಾದರೂ ಒಂದು ನೋವು ಮಾತ್ರ ಕಂಡು ಬರುವುದು.
ಅರಿಶಿಣ ಕಾಮಲೆ: ಪ್ಯಾಂಕ್ರಿಯಾಸ್‌ನಲ್ಲಿ ಸಮಸ್ಯೆ ಉಂಟಾದರೆ ಪಿತ್ತ ರಸ ಉತ್ಪತ್ತಿಯಲ್ಲಿ ತೊಂದರೆ ಉಂಟಾಗಿ ಅರಿಶಿಣ ಕಾಮಲೆ ಉಂಟಾಗುವುದು. ಕಣ್ಣುಗಳು ಹಳದಿಯಾಗುವುದು, ಮೂತ್ರ ಹಳದಿ ಬಣ್ಣದಲ್ಲಿರುತ್ತದೆ, ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದು.
ಇದ್ದಕ್ಕಿದ್ದಂತೆ ತೂಕ ಇಳಿಕೆ: ಕಿಬ್ಬೊಟ್ಟೆ ನೋವಿನ ಜೊತೆಗೆ ಮೈ ತೂಕ ತುಂಬಾ ಬೇಗನೆ ಕಡಿಮೆಯಾಗುವುದು, ವಾರದಿಂದ ವಾರಕ್ಕೆ ಮೈ ತೂಕದಲ್ಲಿ ವ್ಯತ್ಯಾಸ ಉಂಟಾಗುವುದು.
ಹಸಿವು ಇಲ್ಲದಿರುವುದು: ಆಹಾರ ತಿನ್ನಬೇಕೆಂದು ಅನಿಸುವುದಿಲ್ಲ, ಹಸಿವು ಉಂಟಾಗುವುದಿಲ್ಲ,
ಮಲ ವಿಸರ್ಜನೆಯಲ್ಲಿ ವ್ಯತ್ಯಾಸ: ಮಲದ ಬಣ್ಣದಲ್ಲಿ ವ್ಯತ್ಯಾಸ, ಮೂತ್ರದ ಬಣ್ಣದಲ್ಲಿ ವ್ಯತ್ಯಾಸ, ಅಂಟು ಅಂಟಾದ ಮಲವಿಸರ್ಜನೆ ಈ ಬಗೆಯ ಲಕ್ಷಣಗಳು ಕಂಡು ಬರುವುದು. ಮಲ ಜೇಡಿಮಣ್ಣಿನ ಬಣ್ಣದಂತೆ ಇರುತ್ತದೆ, ಏಕೆಂದರೆ ಮೇಧೋಜ್ಜೀರಕ ಗ್ರಂಥಿಗೆ ತೊಂದರೆಯಾಗುವುದರಿಂದ ಈ ರೀತಿ ಉಂಟಾಗುವುದು.
ಮಧುಮೇಹ: ಪ್ಯಾಂಕ್ರಿಯಾಸ್ ಸಮಸ್ಯೆ ಇರುವವರಿಗೆ ಮಧುಮೇಹದ ಲಕ್ಷಣಗಳೂ ಕಂಡು ಬರುವುದು. ಏಕೆಂದರೆ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಉಂಟಾದಾಗ ಇನ್ಸುಲಿನ್ ಉತ್ಪತ್ತಿ ಮಾಡುವ ಕಣಗಳನ್ನು ಹಾಳು ಮಾಡುವುದು, ಹೀಗಾಗಿ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು.
ಪ್ಯಾಂಕ್ರಿಯಾಸ್ ಕ್ಯಾನ್ಸರ್‌ಗೆ ಚಿಕಿತ್ಸೆ: ಈ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಬಂದವರಲ್ಲಿ ಹೆಚ್ಚಿನವರಲ್ಲಿ ಕೊನೆಯ ಹಂತದಲ್ಲಿ ಗೊತ್ತಾಗುವುದರಿಂದ ಹೆಚ್ಚಿನವರಿಗೆ ಚಿಕಿತ್ಸೆ ಫಲಕಾರಿಯಾಗುವುದಿಲ್ಲ.
ಕಾಲಿನಲ್ಲಿ ಊತ
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಬಂದಾಗ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಕಾಲಿನಲ್ಲಿ ನೋವು ಕಂಡು ಬರುವುದು. ಹಾಗಂತ ಎಲ್ಲಾ ಕಾಲುನೋವು ಪ್ಯಾಂಕ್ರಿಯಾಸ್ ಇರಬಹುದು ಎಂದು ಭಯಪಡಬೇಕಾಗಿಲ್ಲ. ನೀವು ಇದರಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬಂದರೆ ಭಯಪಡಬೇಡಿ, ವೈದ್ಯರನ್ನು ಬೇಟಿಯಾಗಿ ಪರೀಕ್ಷೆ ಮಾಡಿಸಿ.
ಆದರೆ ಪ್ರಾರಂಭದಲ್ಲಿಯೇ ಈ ಮೇಲಿನ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ಪರೀಕ್ಷೆಗೆ ಒಳಪಟ್ಟರೆ ರೋಗ ಬೇಗನೆ ಪತ್ತೆಯಾದರೆ ಚಿಕಿತ್ಸೆ ಫಲಕಾರಿಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
