Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಿಶ್ವ ಪ್ಯಾಂಕ್ರಿಯಾಸ್ ಕ್ಯಾನ್ಸರ್: ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ನ ಲಕ್ಷಣಗಳಿವು
ನವೆಂಬರ್ 16ರಂದು ವಿಶ್ವ ಪ್ಯಾಂಕ್ರಿಯಾಸ್ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುವುದು. ಈ ಕ್ಯಾನ್ಸರ್ ಕುರಿತು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಮೇದೋಜ್ಜೀರಕ ಗ್ರಂಥಿ ಉಂಟಾಗುವ ಕ್ಯಾನ್ಸರ್ ಕಣಗಳಾಗಿವೆ. ಈ ಪಿತ್ತ ಜನಕಾಂಗ ಆಹಾರವನ್ನು ಜೀರ್ಣವಾಗಿಸಲು ಹಾಗೂ ಹಾರ್ಮೋನ್‌ಗಳನ್ನು ಹಾಗೂ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸಲು ತುಂಬಾನೇ ಸಹಕಾರಿ.
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಪ್ರಾರಂಭದಲ್ಲಿ ಹಂತದಲ್ಲಿ ಕಂಡು ಗೊತ್ತಾಗುವುದು ತುಂಬಾನೇ ಅಪರೂಪ, ಬೇಗನೆ ಗೊತ್ತಾದರೆ ಜೀರ್ಣಪಡಿಸಲು ಸುಲಭವಾಗುವುದು, ಆದರೆ ಈ ಕ್ಯಾನ್ಸರ್ ಸಾಮಾನ್ಯವಾಗಿ ಕೊನೆಯ ಹಂತದಲ್ಲಿ ಕಂಡು ಬರುವ ಸಾಧ್ಯತೆ ಹೆಚ್ಚು. ಹೊಟ್ಟೆನೋವು ಕಾಣಿಸುತ್ತಿದ್ದಾಗ ಗ್ಯಾಸ್ಟ್ರಿಕ್ ಇರಬಹುದು ನಿರ್ಲಕ್ಷ್ಯ ಮಾಡುವವರೇ ಅಧಿಕ.

ಪ್ಯಾಂಕ್ರಿಯಾಸ್ ಲಕ್ಷಣಗಳೇನು?
* ಹೊಟ್ಟೆನೋವು, ಆ ನೋವು ಸೊಂಟದ ಭಾಗದಲ್ಲೂ ಕಂಡು ಬರುವುದು.
* ಹೊಟ್ಟೆ ಹಸಿವು ಇಲ್ಲದಿರುವುದು
* ತೂಕ ಇಳಿಕೆ
* ತ್ವಚೆ ಬಿಳುಚಿಕೊಳ್ಳುವುದು, ಕಣ್ಣುಗಳು ಹಳದಿಯಾಗುವುದು
* ಬೇಧಿ ರೀತಿಯಲ್ಲಿ ಮಲವಿಸರ್ಜನೆ
* ಮೈಯಲ್ಲಿ ತುರಿಕೆ
* ದೇಹದ ರಕ್ತದಲ್ಲಿ ಸಕ್ಕರೆಯಂಶ ತುಂಬಾನೇ ಹೆಚ್ಚಾಗುವುದು
* ಕೈ-ಕಾಲುಗಳಲ್ಲಿ ಊತ ನೋವು
* ಸುಸ್ತು
ಯಾರಲ್ಲಿ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಕಂಡು ಬರುವ ಸಾಧ್ಯತೆ ಹೆಚ್ಚು
* ಧೂಮಪಾನ'
* ಟೈಪ್ 2 ಮಧುಮೇಹ
* ಉರಿಯೂತ
* ವಂಶವಾಹಿಯಾಗಿ ಬರುವುದು
* ಮೈಬೊಜ್ಜು
* 65 ವರ್ಷ ಮೇಲ್ಪಟ್ಟವರಲ್ಲಿ
* ಮದ್ಯಪಾನಿಗಳಲ್ಲಿ
ಪ್ಯಾಂಕ್ರಿಯಾಸ್ ಕ್ಯಾನ್ಸರ್‌ಗೆ ಕಾರಣವೇನು?
ಪ್ಯಾಂಕ್ರಿಯಾಸ್ ಕ್ಯಾನ್ಸರ್‌ಗೆ ನಿಖರಕಾರಣವೇನು ಎಂಬುವುದು ಹೇಳಲು ಇದುವರೆಗೆ ಯಾವ ವೈದ್ಯರಿಗೂ ಸಾಧ್ಯವಾಗಿಲ್ಲ, ಮೇಲೆ ಹೇಳಿದ ಕೆಲವೊಂದು ಕಾರಣಗಳು ಈ ಪ್ಯಾಂಕ್ರಿಯಾಸ್ ಕ್ಯಾನ್ಸರ್ ತರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಪ್ಯಾಂಕ್ರಿಯಾಸ್ ಕ್ಯಾನ್ಸರ್ ವಂಶವಾಹಿಯಾಗಿ ಕೂಡ ಬರುತ್ತದೆ.
ಪ್ಯಾಂಕ್ರಿಯಾಸ್ ಕಾರ್ಯಗಳು
ಪ್ಯಾಂಕ್ರಿಯಾಸ್ ಅಥವಾ ಮೇಧೋಜೀರಕ ಗ್ರಂಥ 15 ಸೆ.ಮೀ ಉದ್ದದಲ್ಲಿ ನಮ್ಮ ಹೊಟ್ಟೆಯಲ್ಲಿರುವ ಅಂಗವಾಗಿದೆ. ಇದು ಹಾರ್ಮೋನ್‌ಗಳನ್ನು ಹಾಗೂ ಇನ್ಸುಲಿನ್‌ಯನ್ನು ಉತ್ಪತ್ತಿ ಮಾಡುತ್ತದೆ. ಮೇಧೋಜೀರಕ ಗ್ರಂಥಿ ಉತ್ಪತ್ತಿ ಮಾಡುವ ಹಾರ್ಮೋನ್‌ಗಳು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸಲು ಸಹಕಾರಿಯಾಗುವುದು. ಇದು ಉತ್ಪತ್ತಿ ಮಾಡುವ ಪಿತ್ತ ರಸ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಯಾವಾಗ ಉಂಟಾಗುತ್ತದೆ?
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಡಿಎನ್‌ಎದಲ್ಲಿ ಬದಲಾವಣೆಯಾದಾಗ ಉಂಟಾಗುವುದು. ಡಿಎನ್‌ಎ ಕಣಗಳು ಏನು ಮಾಡಬೇಕು ಎಂಬ ಸೂಚನೆ ನೀಡುತ್ತದೆ. ಈ ಕಣಗಳ ಉತ್ಪತ್ತಿಯಲ್ಲಿ ವ್ಯತ್ಯಾಸವಾದರೆ ಅದು ಕ್ಯಾನ್ಸರ್ ಕಣಗಳಾಗುವುದು. ಆರೋಗ್ಯಕರ ಕಣಗಳು ಸತ್ತಾಗ, ಕ್ಯಾನ್ಸರ್ ಕಣಗಳು ಬೆಳೆಯಲಾರಂಭಿಸುತ್ತದೆ. ಈ ಕ್ಯಾನ್ಸರ್‌ಗಳು ಗಡ್ಡೆಗಳು ಉತ್ಪತ್ತಿಯಾಗುವುದು. ನಿಧಾನಕ್ಕೆ ಈ ಕ್ಯಾನ್ಸರ್ ಕಣಗಳು ದೇಹದ ಇತರ ಭಾಗಕ್ಕೆ ಹರಡಲಾರಂಭಿಸುತ್ತದೆ.
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಹೆಚ್ಚಾದಾಗ ಈ ಸಮಸ್ಯೆಗಳು ಕಂಡು ಬರುವುದು
ತೂಕ ಇಳಿಕೆ: ಪ್ಯಾಂಕ್ರಿಯಾಸ್ ಕ್ಯಾನ್ಸರ್ ಇರುವವರಿಗೆ ಮೈ ತೂಕ ತುಂಬಾನೇ ಕಡಿಮೆಯಾಗುವುದು.,ಐಯಲ್ಲಿ ತುಂಬಾನೇ ನಿಶ್ಯಕ್ತಿ ಉಂಟಾಗುವುದು. ತಲೆಸುತ್ತು, ವಾಂತಿ, ತಿಂದ ತಕ್ಷಣ ವಾಂತಿ ಬರುವುದು ಈ ಬಗೆಯ ಸಮಸ್ಯೆಗಳು ಕಂಡು ಬರುವುದು.
ಅರಿಶಿಣ ಕಾಮಲೆ: ಪಿತ್ತರಸ ಉತ್ಪತ್ತಿ ಸರಿಯಾದ ರೀತಿಯಲ್ಲಿ ಆಗದಿದ್ದರೆ ಅರಿಶಿಣ ಕಾಮಲೆ ಉಂಟಾಗುವುದು, ಮೂತ್ರ ಹಳದಿ ಬಣ್ಣದಲ್ಲಿರುತ್ತದೆ, ಹೊಟ್ಟೆನೋವು ಲಕ್ಷಣ ಕಂಡು ಬರದೆಯೇ ಅರಿಶಿಣ ಕಾಮಲೆ ಉಂಟಾಗುವುದು.
ನೋವು: ಪ್ಯಾಂಕ್ರಿಯಾಸ್ ಕ್ಯಾನ್ಸರ್ ಉಂಟಾದಾಗ ತುಂಬಾನೇ ನೋವುಂಟಾಗುವುದು. ಕೀಮೋದಂಥ ಕ್ಯಾನ್ಸರ್ ಚಿಕಿತ್ಸೆ ಈ ಕ್ಯಾನ್ಸರ್ ಕಣಗಳು ಹೆಚ್ಚಾಗುವುದನ್ನು ತಡೆಗಟ್ಟಲು ಸಹಕಾರಿ.
ಈ ಬಗೆಯ ಕ್ಯಾನ್ಸರ್ ಹೇಗೆ ತಡೆಗಟ್ಟಬಹುದು?
* ಧೂಮಪಾನ ಮಾಡಬೇಡಿ
* ಮದ್ಯಪಾನ ಮಿತಿಯಲ್ಲಿ ಮಾಡಿ
* ಆರೋಗ್ಯಕರ ಮೈ ತೂಕವನ್ನು ಹೊಂದಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications