Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಬ್ಬಬ್ಬಾ! ಸ್ವೀಟ್ ಪಾನ್ ತಿಂದ್ರೆ ಇಷ್ಟೆಲ್ಲಾ ಪ್ರಯೋಜನಗಳಿದ್ಯಾ?
ಎಲೆ-ಅಡಿಕೆಗೆ ಹಿಂದೂ ಧರ್ಮದಲ್ಲಿ ಪ್ರಾಶಸ್ತ್ಯ ಸ್ಥಾನವನ್ನು ನೀಡಲಾಗಿದೆ. ಹಿಂದಿನ ಕಾಲದಿಂದಲೂ ಊಟದ ನಂತರ ಎಲೆ ಹಾಕುವ ಪದ್ಧತಿಯಿದೆ. ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಲಿ ಎಂದು ನಮ್ಮ ಹಿರಿಯರು ಎಲೆ ಅಡಿಕೆ ತಿನ್ನುತ್ತಿದ್ದರು. ಇದು ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾನೇ ಒಳ್ಳೆಯದು ಅಂತ ಹೇಳಲಾಗುತ್ತದೆ.

ಪಾನ್ ನಲ್ಲಿಯೂ ಅನೇಕ ವಿಧಗಳಿದ್ದು ಅದ್ರಲ್ಲಿ ಸ್ವೀಟ್ ಪಾನ್, ಖಾರ ಪಾನ್, ಕೆಲವೊಂದು ಕಡೆ ಆಯಾ ಊರಿನ ಹೆಸರಿನ ಪಾನ್ ಗಳು ಕೂಡ ತುಂಬಾನೇ ಫೇಮಸ್ ಆಗಿದೆ. ಎಲೆ, ಅಡಿಕೆ ಜೊತೆಗೆ ಸುಣ್ಣ, ತಂಬಾಕು ತಿನ್ನುವ ಅಭ್ಯಾಸ ಅನೇಕರಿಗಿದೆ. ಆದ್ರೆ ತಂಬಾಕು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತವರು ಸುಣ್ಣ ಹಾಗೂ ತಂಬಾಕು ಹಾಕದಿರುವ ಸ್ವೀಟ್ ಪಾನ್ ಅನ್ನು ಸೇವನೆ ಮಾಡ್ಬಹುದು. ಅಷ್ಟಕ್ಕೂ ಈ ಪಾನ್ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳು ಇದೆ ಅನ್ನೋದನ್ನು ತಿಳಿಯೋಣ.
ಊಟದ ನಂತರ ಪಾನ್ ಸೇವಿಸೋದಕ್ಕೆ ಹಲವಾರು ಕಾರಣಗಳಿದೆ. ಮೊದಲನೇಯದ್ದಾಗಿ ಇದು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಉಬ್ಬಿರುವವರು ಹೊಟ್ಟೆ ಮತ್ತು ತೀವ್ರವಾದ ಮಲಬದ್ಧತೆಯ ಸಮಸ್ಯೆಗಳನ್ನು ಹೊಂದಿರುವವರೂ ಕೂಡ ಈ ಪಾನ್ ಅನ್ನು ಸೇವನೆ ಮಾಡಬಹುದು. ಮೌತ್ ಫ್ರೆಶ್ನರ್ ಆಗಿ ಕೂಡ ಇದು ಕಾರ್ಯ ನಿರ್ವಹಿಸುತ್ತದೆ.
ವೀಳ್ಯದೆಲೆಗಳು ರೈಬೋಫ್ಲಾವಿನ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಕ್ಯಾರೋಟಿನ್‌ಗಳಿಂದ ತುಂಬಿದ ಪೋಷಕಾಂಶಗಳಾಗಿವೆ. ಇನ್ನೂ ಪಾನ್ ನಲ್ಲಿ ಸೇರಿಸುವ ಗುಲಾಬಿ ದಳಗಳು, ಲವಂಗ, ಅಡಿಕೆಯಲ್ಲಿಯೂ ಕೂಡ ವಿವಿಧ ಪೌಷ್ಠಿಕಾಂಶಗಳು ಇರುತ್ತದೆ. ಇದರಿಂದ ನಾವು ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿರುತ್ತೇವೆ. ಇನ್ನೂ ಮುಖ್ಯವಾಗಿ ಊಟದ ನಂತರ ಪಾನ್ ಸೇವನೆ ಮಾಡುವಾಗ ಕನಿಷ್ಠ 30 ನಿಮಿಷಗಳ ಅಂತರವನ್ನು ಕಾಯ್ದುಕೊಳ್ಳಿ.
1. ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ
ಎಲೆ-ಅಡಿಕೆಯಲ್ಲಿರುವ ಅನೇಕ ಜೀರ್ಣಕಾರಿ ಅಂಶಗಳಿಂದಾಗಿ ಅದು ಜೀರ್ಣಕ್ರಿಯೆಗೆ ಅತ್ಯತ್ತಮ ಔಷಧದಂತೆ ಕೆಲಸ ಮಾಡುತ್ತದೆ. ನಿಮಗೆ ಹೊಟ್ಟೆನೋವು ಈ ರೀತಿ ಅನೇಕ ಸಮಸ್ಯೆಗಳಿದ್ದರೆ ಆಗಾಗೇ ಊಟ ಆದ ಮೇಲೆ ಪಾನ್ ತಿನ್ನೋದನ್ನು ಅಭ್ಯಾಸ ಮಾಡಿಕೊಳ್ಳಿ. ಈ ರೀತಿ ಪಾನ್ ಜಗಿಯೋದ್ರಿಂದ ಅಗತ್ಯವಾದ ಲಾಲಾರಸದ ರಸವನ್ನು ರೂಪಿಸಲು ಕಾರಣವಾಗುತ್ತದೆ.
2. ತಲೆನೋವಿಗೆ ಒಳ್ಳೆಯದು
ತಲೆನೋವು ಇದ್ದಾಗ ವೀಳ್ಯದೆಲೆಯನ್ನು ನಿಮ್ಮ ಹಣೆಗೆ ಲೇಪಿಸಿದರೆ ತಲೆನೋವನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ಇನ್ನೂ ಪಾನ್ ತಿನ್ನುವಾಗ ಅದ್ರಲ್ಲಿ ಇರುವ ಗುಲಾಬಿ ದಳಗಳು ಮತ್ತು ತೆಂಗಿನಕಾಯಿಯ ತುರಿಯೂ ಕೂಡ ಕೂಲಿಂಗ್ ಏಜೆಂಟ್ ಆಗಿ ಕೆಲಸ ಮಾಡಿ ನಿಮ್ಮ ತಲೆನೋವು ಕಡಿಮೆ ಮಾಡೋದಕ್ಕೆ ಸಹಾಯ ಮಾಡುತ್ತದೆ.
3. ಡಯಾಬಿಟಿಕ್ ಫ್ರೆಂಡ್ಲಿ!
ಸ್ವೀಟ್ ಪಾನ್ ನಲ್ಲಿ ಗುಲ್ಕನ್ ಅಂಶ ಇರುತ್ತದೆ. ಸಕ್ಕರೆ ಕಾಯಿಲೆ ಇರುವವರು ಕಡಿಮೆ ಗುಲ್ಕನ್ ಹಾಕಿಸಿ ಪಾನ್ ಸೇವಿಸಿದ್ರೆ ಜತ್ತಮ. ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಸಿಹಿ ತಿನ್ನಬೇಕು ಅನ್ನೋ ಆಸೆ ಇರುತ್ತದೆ. ಅದರ ಬದಲಾಗಿ ಪಾನ್ ತಿಂದು ನಿಮ್ಮ ಸಿಹಿ ತಿನ್ನುವ ಕಡುಬಯಕೆಗಳನ್ನು ಈಡೇರಿಸಿಕೊಳ್ಳಬಹುದು. ಯಾವಾಗಲಾದರೂ ಒಮ್ಮೆ ಪಾನ್ ತಿಂದರೆ ಏನಾಗೋದಿಲ್ಲ.
4. ಕೊಬ್ಬು ಇಳಿಸೋದಕ್ಕೆ ಸಹಾಯಕಾರಿ
ಅನೇಕ ಜನರಿಗೆ ಮೈಯಲ್ಲಿರುವ ಕೊಬ್ಬು ಇಳಿಸೋದೇ ಒಂದು ರೀತಿಯ ಸವಾಲಿದಂತೆ. ಅಂತವರು ಪಾನ್ ತಿಂದ್ರೆ ಒಳ್ಳೆಯದು. ವೀಳ್ಯದೆಲೆಗಳು ಪಾನ್‌ನ ಮುಖ್ಯ ಅಂಶವಾಗಿರುವುದರಿಂದ ಅವುಗಳ ರಾಸಾಯನಿಕ ಸಂಯೋಜನೆಯು ಕೊಬ್ಬು ನಷ್ಟಕ್ಕೆ ಸಹಕಾರಿಯಾಗಿದೆ. ಏಕೆಂದರೆ ಪಾನ್ ತಿನ್ನುವುದರಿಂದ ನಮ್ಮ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ. ಹಾಗೂ ಕೊಬ್ಬು ಕರಗೋದ್ರಿಂದ ತೂಕ ನಷ್ಟ ಮಾಡಲು ಸಹಾಯಕಾರಿಯಾಗಿದೆ.
5. ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ
ಪಾನ್ ತಿನ್ನೋದ್ರಿಂದ ನಮ್ಮ ಬಾಯಿಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ವೀಳ್ಯದೆಲೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಬಾಯಿಯ ನೈರ್ಮಲ್ಯ ಕಾಪಾಡಲು ಸಹಾಯ ಮಾಡುತ್ತದೆ. ನೀವು ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದರೆ ಪಾನ್ ನಲ್ಲಿ ಗುಲ್ಕನ್ ಮತ್ತು ತೆಂಗಿನ ಪುಡಿಯ ಪ್ರಮಾಣವನ್ನು ಕಡಿಮೆ ಮಾಡಿ.
ಆರೋಗ್ಯದ ದೃಷ್ಟಿಯಿಂದ ಪಾನ್ ತುಂಬಾನೇ ಒಳ್ಳೆಯದು. ಹೀಗಾಗಿ ಯಾವಾಗಲಾದರೂ ಒಮ್ಮೆ ಪಾನ್ ತಿನ್ನೋದ್ರಿಂದ ಯಾವುದೇ ರೀತಿ ತೊಂದರೆ ಆಗೋದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

