Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Ozempic: ಓಝೆಂಪಿಕ್ ಮೇಲೆ $2 ಬಿಲಿಯನ್ ಕೇಸ್! ಈ ಔಷಧಿ ಎಷ್ಟು ಅಪಾಯಕಾರಿ ಗೊತ್ತಾ?
ಪ್ರಸ್ತುತ ಎಲ್ಲರೂ ತೆಳ್ಳಗೆ ಮತ್ತು ಸ್ಲಿಮ್ ಆಗಿ ಕಾಣಲು ಬಯಸುತ್ತಾರೆ. ಈ ಆಸೆಯನ್ನು ಪೂರೈಸಲು, ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳು ಮತ್ತು ಪೂರಕಗಳು ಲಭ್ಯವಿವೆ. ಇವುಗಳಲ್ಲಿ ಓಜೆಂಪಿಕ್ (Ozempic) ಸಹ ಒಂದು. ಇದನ್ನು ಮೂಲತಃ ಟೈಪ್-2 ಮಧುಮೇಹ ಚಿಕಿತ್ಸೆಗಾಗಿ ಅನುಮೋದಿಸಲಾಗಿತ್ತು. ಆದರೆ, ಕಾಲಾನಂತರದಲ್ಲಿ, ತೂಕ ಇಳಿಸಿಕೊಳ್ಳಲು ಈ ಔಷಧಿಯು ಎಷ್ಟು ಜನಪ್ರಿಯವಾಯಿತು ಎಂದರೆ ಅದನ್ನು 'ಪವಾಡದ ಔಷಧ' ಅಂತ ಕರೆಯಲು ಪ್ರಾರಂಭಿಸಿದರು. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಸಹ ಇದನ್ನು ಬಳಸಲು ಆರಂಭಿಸಿದರು. ಆದರೆ, ಈಗ ಇದೇ ಔಷಧ ರೋಗಿಗಳ ಜೀವಕ್ಕೆ ಅಪಾಯಕಾರಿಯಾಗುತ್ತಿದೆ.
ಹೌದು, ಅಮೆರಿಕಾದಲ್ಲಿ ಓಜೆಂಪಿಕ್ ತಯಾರಕ ಕಂಪನಿ ನೊವೊ ನಾರ್ಡಿಸ್ಕ್ (Novo Nordisk) ವಿರುದ್ಧ ಸುಮಾರು 1,800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆ 2 ಬಿಲಿಯನ್ ಡಾಲರ್‌ಗಳವರೆಗೆ ಹೆಚ್ಚಾಗಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ. ಓಜೆಂಪಿಕ್ ವಿರುದ್ಧ ಪ್ರಕರಣ ಏಕೆ? ಓಜೆಂಪಿಕ್‌ನ ಅಪಾಯಗಳೇನು ಮತ್ತು ಯಾರೆಲ್ಲಾ ಕೇಸ್ ಹಾಕಬಹುದು? ಎನ್ನೋದನ್ನು ತಿಳಿಯೋಣ ಬನ್ನಿ.

ಓಜೆಂಪಿಕ್ ವಿರುದ್ಧ ಕೇಸ್ ಏಕೆ?
ಓಜೆಂಪಿಕ್ ಮತ್ತು ಇದರಂತಹ ಇತರೆ ಔಷಧಿಗಳು (ಉದಾಹರಣೆಗೆ, ವೆಗೋವಿ, ರೈಬೆಲ್ಸಸ್) GLP-1 ರಿಸೆಪ್ಟರ್ ಅಗೋನಿಸ್ಟ್ ಎಂಬ ವರ್ಗಕ್ಕೆ ಸೇರಿವೆ. ಈ ಔಷಧಿಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮತ್ತು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದೇ ಕಾರಣಕ್ಕೆ ಮಧುಮೇಹದ ಜೊತೆಗೆ ತೂಕ ಇಳಿಕೆಗೆ ಸಹ ಇದನ್ನು ಬಳಸಲಾಯಿತು. ಆದರೆ, ಈ ಔಷಧಿಯಿಂದ ತೀವ್ರ ಮತ್ತು ಶಾಶ್ವತ ಆರೋಗ್ಯ ಸಮಸ್ಯೆಗಳು ಉಂಟಾಗಿವೆ ಎಂದು ರೋಗಿಗಳು ಆರೋಪಿಸಿದ್ದಾರೆ.
ಓಜೆಂಪಿಕ್ ಔಷಧಿ ಎಷ್ಟು ಅಪಾಯಕಾರಿ?
ನ್ಯಾಯಾಲಯದಲ್ಲಿ ದಾಖಲಾದ ಕೇಸ್‌ಗಳಲ್ಲಿ ಹಲವು ಗಂಭೀರ ಕಾಯಿಲೆಗಳು ಮತ್ತು ತೊಡಕುಗಳನ್ನು ಉಲ್ಲೇಖಿಸಲಾಗಿದೆ.
ಗ್ಯಾಸ್ಟ್ರೋಪರೆಸಿಸ್
ಹೊಟ್ಟೆಯ ಚಲನೆ (ಹೊಟ್ಟೆಯ ಪ್ಯಾರಾಲಿಸಿಸ್) ಬಹಳ ನಿಧಾನವಾಗುತ್ತದೆ. ನಿರಂತರ ವಾಂತಿ, ವಾಕರಿಕೆ ಮತ್ತು ನಿರ್ಜಲೀಕರಣ ಉಂಟಾಗುತ್ತದೆ. ಅನೇಕ ರೋಗಿಗಳಿಗೆ ಫೀಡಿಂಗ್ ಟ್ಯೂಬ್ ಹಾಕಬೇಕಾಯಿತು ಮತ್ತು ಅವರು ಸಂಪೂರ್ಣವಾಗಿ ಗುಣಮುಖರಾಗಲಿಲ್ಲ.
ಕರುಳಿನ ಸಮಸ್ಯೆ
ಕರುಳುಗಳು (Ileus) ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದರಿಂದಾಗಿ ತಡೆಯಾಗಬಹುದು. ಕೆಲವೊಮ್ಮೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. 2023 ರಲ್ಲಿ FDA ಈ ಅಪಾಯವನ್ನು ಔಷಧದ ಲೇಬಲ್‌ನಲ್ಲಿ ಸೇರಿಸಿತು.
ದೃಷ್ಟಿ ನಷ್ಟ
ಹಠಾತ್ ಮತ್ತು ಶಾಶ್ವತ ದೃಷ್ಟಿ ನಷ್ಟದ (NAION) ಅಪಾಯ. ಕೆಲವು ಸಂಶೋಧನೆಗಳು ಓಜೆಂಪಿಕ್‌ನ ಸಕ್ರಿಯ ಘಟಕ ಸೆಮಾಗ್ಲುಟೈಡ್ ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಿವೆ.
ಇತರ ಆರೋಗ್ಯ ಸಮಸ್ಯೆಗಳು
ಪಿತ್ತಕೋಶದ ಕಾಯಿಲೆ, ಕಿಡ್ನಿ ಹಾನಿ, ಮೇದೋಜ್ಜೀರಕ ಗ್ರಂಥಿಯ ಉರಿಯೂತ (Pancreatitis) ಸೇರಿದಂತೆ ಇತರೆ ಕಾಯಿಲೆ ಬರುವ ಸಾಧ್ಯತೆ ಇದೆ.
ಮೊದಲ ಕೇಸ್ ಮತ್ತು ಕಾನೂನು ಹೋರಾಟ
ಓಜೆಂಪಿಕ್ ವಿರುದ್ಧ ಮೊದಲ ಮೊಕದ್ದಮೆ ಆಗಸ್ಟ್ 2023 ರಲ್ಲಿ ದಾಖಲಾಯಿತು. ಔಷಧವನ್ನು ತೆಗೆದುಕೊಂಡ ನಂತರ ಹೊಟ್ಟೆಯ ಪ್ಯಾರಾಲಿಸಿಸ್ ಮತ್ತು ದೃಷ್ಟಿ ನಷ್ಟ ಉಂಟಾಯಿತು ಎಂದು ರೋಗಿಯು ಆರೋಪಿಸಿದರು. ಕೆಲವೇ ತಿಂಗಳುಗಳಲ್ಲಿ ನೂರಾರು ಇಂತಹ ಪ್ರಕರಣಗಳು ಹೊರಬಂದವು ಮತ್ತು 2024 ರ ವೇಳೆಗೆ ಇವುಗಳನ್ನು ಪೆನ್ಸಿಲ್ವೇನಿಯಾ (ಅಮೆರಿಕಾ) ನ್ಯಾಯಾಲಯದಲ್ಲಿ ಮಲ್ಟಿಡಿಸ್ಟ್ರಿಕ್ಟ್ ಲಿಟಿಗೇಷನ್ (MDL) ಅಡಿಯಲ್ಲಿ ಸೇರಿಸಲಾಯಿತು. ಎಲ್ಲಾ ಪ್ರಕರಣಗಳನ್ನು ಒಟ್ಟಾಗಿ ಆಲಿಸಲು ಮತ್ತು ಸಾಕ್ಷ್ಯಗಳು ಹಾಗೂ ಸಾಕ್ಷಿಗಳ ವಿಶ್ಲೇಷಣೆಯನ್ನು ಉತ್ತಮವಾಗಿ ಮಾಡಲು ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಆಗಸ್ಟ್ 2025 ರವರೆಗೆ 1,800 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ ಮತ್ತು ಮುಂಬರುವ ತಿಂಗಳುಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಯಾರೆಲ್ಲ ಕೇಸ್ ಹಾಕಬಹುದು?
ಕಾನೂನು ತಜ್ಞರ ಪ್ರಕಾರ, ಓಜೆಂಪಿಕ್, ವೆಗೋವಿ, ರೈಬೆಲ್ಸಸ್ ಅಥವಾ ಎಲಿ ಲಿಲ್ಲಿಯ ಮೌಂಜಾರೋ (Mounjaro) ಔಷಧಿಗಳನ್ನು ತೆಗೆದುಕೊಂಡು ನಂತರ ಹೊಟ್ಟೆಯ ಪ್ಯಾರಾಲಿಸಿಸ್, ಕರುಳಿನ ಸಮಸ್ಯೆ, ಪಿತ್ತಕೋಶದ ಕಾಯಿಲೆ, ದೃಷ್ಟಿ ನಷ್ಟ, ಮೇದೋಜ್ಜೀರಕ ಗ್ರಂಥಿಯ ಉರಿಯೂತದಂತಹ ಸಮಸ್ಯೆಗಳನ್ನು ಎದುರಿಸಿದವರು ಮೊಕದ್ದಮೆ ಹೂಡಬಹುದು. ಇದಕ್ಕೆ ವೈದ್ಯಕೀಯ ದಾಖಲೆಗಳು ಅಗತ್ಯ ಮತ್ತು ಕಾನೂನು ಸಮಯದ ಮಿತಿಯೊಳಗೆ (1-3 ವರ್ಷಗಳು) ಹಕ್ಕು ಸಲ್ಲಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
