Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Expert Tips: ಮಹಿಳೆಯರೇ ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷ್ಯ ಬೇಡ, ಇರಲಿ ಅಂಡಾಶಯ ಕ್ಯಾನ್ಸರ್ ಬಗ್ಗೆ ಜಾಗ್ರತೆ
ಅಂಡಾಶಯದ ಕ್ಯಾನ್ಸರ್ ಬಹುಶಃ ರೋಗನಿರ್ಣಯ ಮಾಡಲು ಅತ್ಯಂತ ಕಷ್ಟಕರವಾದ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಕ್ಯಾನ್ಸರ್‌ಗಳಲ್ಲಿ ಇದನ್ನು 'ಸೈಲೆಂಟ್ ಕಿಲ್ಲರ್' ಎಂದು ಕರೆಯಬಹುದು, ಏಕೆಂದರೆ ಇದು ಆರಂಭಿಕ ಹಂತದಲ್ಲಿಯೇ ಭಾದಿತರಿಗೆ ವ್ಯದ್ಯಕೀಯ ಸಲಹೆಯನ್ನು ಪಡೆಯಲು ಪ್ರಚೋದಿಸುವಂತಹ ಯಾವುದೇ ರೀತಿಯ ನಿರ್ದಿಷ್ಟ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ.

ಅಂಡಾಶಯ ಕ್ಯಾನ್ಸರ್ ಲಕ್ಷಣಗಳೇನು?
ಅದರ ಆರಂಭಿಕ ಹಂತಗಳಲ್ಲಿ ಅಂಡಾಶಯದ ಕ್ಯಾನ್ಸರ್ ಹೆಚ್ಚಾಗಿ, ಹೊಟ್ಟೆ ಉಬ್ಬುವುದು, ಹೊಟ್ಟೆಯಲ್ಲಿ ಉರಿತ, ಜಠರದುರಿ ಮುಂತಾದ ನಿರ್ದಿಷ್ಟವಲ್ಲದ ರೋಗಲಕ್ಷಣ ಅಥವಾ ಅಸ್ಪಷ್ಟ ಲಕ್ಷಣಗಳನ್ನು ಹೊಂದಿರುತ್ತದೆ. ನಂತರದ ಹಂತಗಳಲ್ಲಿ, ತೂಕದ ನಷ್ಟ ಅಥವಾ ಮಲ ವಿಸರ್ಜನೆಯಲ್ಲಿ ತೊಂದರೆಗಳಂತಹ ರೋಗಲಕ್ಷಣಗಳು ಬೆಳೆಯಬಹುದು.
ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷ್ಯ ಬೇಡ್ವೆ ಬೇಡ
ಋತುಬಂಧದಕ್ಕೆ ಸಮೀಪವಿರುವ ವಯೋಮಾನದ ಮಹಿಳೆಯರಲ್ಲಿ ಅಥವಾ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಈ ತರಹದ ಜಠರ ಸಂಭಂದಿ ತೊಂದರೆಗಳು (ಗ್ಯಾಸ್ಟ್ರೀಟೈಸ್) ಸಾಮಾನ್ಯವಾಗಿರುವುದರಿಂದ, ಅಂಡಾಶಯದ ಕ್ಯಾನ್ಸರ್ಸ ನ ರೋಗಲಕ್ಷಣಗಳನ್ನು ಗ್ಯಾಸ್ಟ್ರೀಟೈಸ್ ಎಂಫು ಭಾವಿಸಿ ನಿಯಮಿತ ಗ್ಯಾಸ್ಟ್ರೀಟೈಸ್ ಔಷಧಿಗಳು ಮತ್ತು ಚಿಕಿತ್ಸಾ ಕ್ರಮಗಳಿಗೆ ಮೊರೆಹೋಗುವುದು ತುಂಬಾ ಸಾಮಾನ್ಯ. ಈ ರೋಗಲಕ್ಷಣಗಳು ಗುಣವಾಗದೆ ನಿರಂತರ ಭಾದಿಸುತ್ತಿರುವಾಗ, ಹೆಚ್ಚಿನ ತಪಾಸಣೆಗಾಗಿ ಹೊಟ್ಟೆ ಮತ್ತು ಕಿಬ್ಬೊಟ್ಟೆಯ ಸ್ಕ್ಯಾನಿಂಗ್ ಮಾಡಿಸಿದಾಗ, ಅಕಸ್ಮಾತಾಗಿ ಅಂಡಾಶಯ್ದ ಕ್ಯಾನ್ಸರ್ ಗೆಡ್ಡೆಗಳನ್ನು ಕಂಡುಹಿಡಿಯುವುದು ಸಹಜ ಪ್ರಕ್ರಿಯವಾಗಿದೆ.
ಪತ್ತೆ ಹಚ್ಚುವುದು ಹೇಗೆ?
ಹೊಟ್ಟೆ ಮತ್ತು ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಅಂಡಾಶಯದ ಕ್ಯಾನ್ಸರ್‌ಗೆ ಆರಂಭಿಕ ಅಥವಾ ಪ್ರಾಥಮಿಕ ತನಿಖಾ ವಿಧಾನವಾಗಿದೆ. ಸ್ಕ್ಯಾನಿಂಗ್‌ನ ಸಂಶೋಧನೆಗಳ ಆಧಾರದ ಮೇಲೆ, MRI ಸ್ಕ್ಯಾನ್‌ಗಳು ಮತ್ತು ಹೊಟ್ಟೆ ಮತ್ತು ಕಿಬ್ಬಬ್ಬೊಟ್ಟೆಯ ಆಂಕೊ-CT ಯಂತಹ ಹೆಚ್ಚಿನ ರೋಗನಿರ್ಣಯ ಪರೀಕ್ಷೆಗಳು ಅಗತ್ಯವಾಗಬಹುದು. ಈ ಹೆಚ್ಚಿನ ಪರೀಕ್ಷೆಗಳು ಅಂಡಾಶಯದ ಕ್ಯಾನ್ಸರ್‌ನ ಹಂತವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ ಮತ್ತು ಅಂಡಾಶಯದ ಗೆಡ್ಡೆಗಳು ಅಂಡಾಶಯಕ್ಕೆ ಪ್ರಾಥಮಿಕವಾಗಿದೆಯೇ (ಅಂಡಾಶಯದಲ್ಲಿ ಕಾಣಿಸಿಕೊಂಡವು ಅಂಡಾಶಯಕ್ಕೆ ಮಾತ್ರವೇ ಸೀಮಿತವಾದ ಗೆಡ್ಡೆಗಳು) ಅಥವಾ ಬೇರೆಕಡೆ ಕಾಣಿಸಿಕೊಂಡ ಗೆಡ್ಡೆಗಳು ಅಂಡಾಶಯವನ್ನು ಒಳಗೊಂಡಿವೆಯೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತವೆ.
ಅಂಡಾಶಯ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
ಅಂಡಾಶಯದ ಕ್ಯಾನ್ಸರ್ ಚಿಕಿತ್ಸೆಯು ಕ್ಯಾನ್ಸರ್ ಹಂತವನ್ನು ಆಧರಿಸಿದೆ. ಆರಂಭಿಕ ಹಂತದ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆ ಉತ್ತಮ ಫಲಿತಾಂಶಗಳನ್ನು ಹೊಂದಿರುತ್ತದೆ. ಆರಂಭಿಕ ಹಂತದ ಅಂಡಾಶಯದ ಕ್ಯಾನ್ಸರ್ ಅಥವಾ ಪ್ರಾಥಮಿಕ ಗೆಡ್ಡೆಗಳನ್ನು ಲ್ಯಾಪೊರೊಸ್ಕೋಪಿಕ್ ಕಾರ್ಯವಿಧಾನಗಳನ್ನು ಸ್ಟೇಜಿಂಗ್ ಲ್ಯಾಪ್ರೊಟಮಿ ಅಥವಾ ಸ್ಟೇಜಿಂಗ್ ಲ್ಯಾಪ್ರೊಸ್ಕೋಪಿ ಎಂದು ಕರೆಯಲಾಗುತ್ತದೆ. ಇಲ್ಲಿ, ಎರಡೂ ಫಾಲೋಪಿಯನ್ ಟ್ಯೂಬ್ಗಳು, ಅಂಡಾಶಯಗಳು, ಪೆಲ್ವಿಕ್ ದುಗ್ಧರಸ ಗ್ರಂಥಿಗಳು ಮತ್ತು ಓಮೆಂಟಮ್ ಜೊತೆಗೆ ಗರ್ಭಾಶಯವನ್ನು ತೆಗೆದುಹಾಕಲಾಗುತ್ತದೆ. ಸುಧಾರಿತ ಹಂತಗಳನ್ನು 3 ಚಕ್ರಗಳ ನವ-ಸಹಾಯಕ ಕೀಮೋಥೆರಪಿ (ಗೆಡ್ಡೆಯ ಗಾತ್ರವನ್ನು ಕಡಿಮೆ ಮಾಡಲು) ನಂತರ ಶಸ್ತ್ರಚಿಕಿತ್ಸೆಯಿಂದ ಗೆಡ್ಡೆಯನ್ನು ತೆಗೆದುಹಾಕಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರದ ಕೀಮೋಥೆರಪಿ ಕೂಡ ಅಗತ್ಯವಾಗಬಹುದು.
(ಈ ಲೇಖನವನ್ನು ಡಾ. ಶಫಲಿಕಾ ಎಸ್ ಬಿ, ಸಮಾಲೋಚಕರು - ಮಿನಿಮಲ್ಲಿ ಇನ್ವೆಸಿವ್, ಸ್ತ್ರೀರೋಗ ತಜ್ಞರು, ಮಣಿಪಾಲ ಆಸ್ಪತ್ರೆ, ಯಶವಂತಪುರ)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications