Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ಹೊಟ್ಟೆಯ ಕೊಬ್ಬು ಇಳಿಸಲು ಆಲಿವ್ ಆಯಿಲ್ ಅಥವಾ ತುಪ್ಪ ಯಾವುದು ಬೆಸ್ಟ್! ಇಲ್ಲಿದೆ ಉತ್ತರ!
ಭಾರತೀಯರಲ್ಲಿ ಅಧಿಕ ತೂಕ ಅಥವಾ ಸ್ಥೂಲ ಕಾಯತೆ ಹೆಚ್ಚಾಗುತ್ತಿರುವುದು ಹೊಸ ರೀತಿಯ ಆತಂಕ ಹೆಚ್ಚಿಸಿದೆ. ಅದ್ರಲ್ಲೂ ಪುರುಷರು ಹಾಗೂ ಸ್ತ್ರೀಯರಲ್ಲಿ ಹೊಟ್ಟೆ ಮುಂದೆ ಬರುವುದು ನೋಡಬಹುದು. ಇದರಿಂದ ಹಲವು ಅನಾರೋಗ್ಯ ನಮ್ಮನ್ನು ಕಾಡುವುದು ನೋಡಬಹುದು. ಅದ್ರಲ್ಲೂ ದೇಹದ ಸಮತೋಲನ ಏರುಪೇರಾಗುವ ಕಾರಣ ಹಲವು ರೀತಿ ಸಮಸ್ಯೆಗಳ ಎದುರಿಸಬೇಕಾಗುತ್ತದೆ.
ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಅಧಿಕ ಕೊಬ್ಬರು ಶೇಖರಣೆಯಾಗುವ ಕಾರಣದಿಂದಾಗಿ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಭಾರತೀಯರಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಜೀವನ ಶೈಲಿ ಆರೋಗ್ಯ ಕ್ರಮದಂತಹ ಹಲವು ವಿಚಾರಗಳು ಕಾರಣವಾಗುತ್ತಿದೆ. ಅದ್ರಲ್ಲೂ ನಾವು ಅಡುಗೆಯೊಂದಿಗೆ ಸೇವಿಸುವ ಎಣ್ಣೆ ಬಹುತೇಕರಿಗೆ ಹಾನಿ ಉಂಟು ಮಾಡುತ್ತಿದೆ.

ಆದ್ರೆ ಅಡುಗೆಗೆ ಯಾವ ಎಣ್ಣೆ ಬಳಸಬೇಕು ಎಂಬುದು ಕೂಡ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಅದ್ರಲ್ಲು ಅಡುಗೆಯೊಂದಿಗೆ ಆಲಿವ್ ಆಯಿಲ್ ಅಥವಾ ದೇಸಿ ತುಪ್ಪ ಯಾವುದು ಉತ್ತಮ ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ. ಯಾವ ಪದಾರ್ಥ ಹೆಚ್ಚಿನ ಕೊಬ್ಬು ಹೊಂದಿರಲಿದೆ. ಯಾವುದು ಆರೋಗ್ಯಕರ ಎಂಬುದು ಮೊದಲಿನಿಂದ ನಡೆದು ಬಂದ ಚರ್ಚಾ ವಿಷಯ.
ನಾವಿಂದು ಅಡುಗೆಗೆ ಆಲಿವ್ ಆಯಿಲ್ ಆಥವಾ ತುಪ್ಪ ಯಾವುದು ಬೆಸ್ಟ್ ಅನ್ನೋದನ್ನು ತಿಳಿದುಕೊಳ್ಳೋಣ. ಯಾವುದರಲ್ಲಿ ಉತ್ತಮ ಕೊಬ್ಬಿದೆ. ಯಾವುದು ನಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಲಿದೆ ಅನ್ನೋದನ್ನು ತಿಳಿಯೋಣ.
ತುಪ್ಪವು ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ. ಆಲಿವ್ ಎಣ್ಣೆಯು ಏಕಾಪರ್ಯಾಪ್ತ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ. ಇನ್ನು ತುಪ್ಪದಲ್ಲಿ ವಿಟಮಿನ್ ಎ, ಡಿ, ಇ, ಕೆ ನೋಡಬಹುದು. ಆಲಿವ್ ಎಣ್ಣೆಯು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಅನ್ನು ನೀಡುತ್ತದೆ. ಆದರೆ ನಮ್ಮ ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾಗಲು ಸ್ಯಾಚುರೇಟೆಡ್ ಕೊಬ್ಬು ಪ್ರಮುಖ ಕಾರಣ ಎಂದು ತಿಳಿದುಬರುತ್ತದೆ.
ಇನ್ನು ತುಪ್ಪದಲ್ಲಿರುವ ಬ್ಯುಟರಿಕ್ ಆಮ್ಲವು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ, ಇದು ತೂಕ ನಿರ್ವಹಣೆಯಲ್ಲಿ ಪಾತ್ರ ವಹಿಸುತ್ತದೆ. ಇದರ ಅನಾನುಕೂಲವೆಂದರೆ ತುಪ್ಪವು ಅಧಿಕ ಕ್ಯಾಲೋರಿಗಳ ಹೊಂದಿದೆ. ಆದ್ರೆ 2ಕ್ಕಿಂತ ಹೆಚ್ಚು ಸ್ಪೂನ್ ತುಪ್ಪ ಬಳಕೆಯು ಕೂಡ ಕೊಬ್ಬಿನಾಂಶ ಹೆಚ್ಚಾಗಲು ಕಾರಣವಾಗಲಿದೆ ಎಂದು ತಿಳಿದುಬಂದಿದೆ.
ಆಲಿವ್ ಆಯಿಲ್ ಅನ್ನು ಆಲಿವ್ ಬೀಜಗಳ ಸಂಸ್ಕರಣೆಯ ಮೂಲಕ ಪಡೆಯುತ್ತಾರೆ. ಇದರಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳಿಂದ ತುಂಬಿರಲಿದೆ. ಹಾಗೆ ಇದು ಕೂಡ ದೇಹದಲ್ಲಿನ ಕೊಬ್ಬನ್ನು ಹೆಚ್ಚು ಪರಿಣಾಮಕಾರಿಯಾಗಿ ಕರಗಿಸಲು ಸಹಕಾರಿಯಾಗಿದೆ. ಆದ್ರೆ ಅಧಿಕ ಪ್ರಮಾಣದ ಆಲಿವ್ ಆಯಿಲ್ ಕೂಡ ಕೊಬ್ಬು ಹೆಚ್ಚಳಕ್ಕೆ ಕಾರಣವಾಗುವುದು ನೋಡಬಹುದು.
ಆಲಿವ್ ಆಯಿಲ್ ಪ್ರಯೋಜನಗಳು
ಆಲಿವ್ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ, ಇದು ಕೊಬ್ಬಿನ ಶೇಖರಣೆಗೆ ಸಂಬಂಧಿಸಿದ್ದು, ಮಿತವಾದ ಬಳಕೆಯಿಂದ ಆರೋಗ್ಯಕರ ಲಾಭವಿದೆ ಎಂದು ತಿಳಿದುಬಂದಿದೆ. ಆದ್ರೆ ತರಕಾರಿಗಳು, ಹಾಗೆ ಒಗ್ಗರಣೆಗಳಿಗೆ ಬಳಸಿ ಅತೀಯಾಗಿ ಹುರಿಯುವುದು ಸೂಕ್ತವಾದ ವಿಧಾನವಲ್ಲ ಎಂದು ತಿಳಿದುಬಂದಿದೆ.
2018 ರ ಸಂಶೋಧನಾ ಪ್ರಬಂಧವು ಆಲಿವ್ ಎಣ್ಣೆಯನ್ನು ಹೊಟ್ಟೆಯ ಕೊಬ್ಬಿನ ಶೇಖರಣೆಗೆ ಸಂಬಂಧಿಸಿದೆ ಎಂದು ತಿಳಿಸಿದೆ. ಆದ್ರೆ ಅದರ ನಿಯಮಿತ ಬಳಕೆಯು ಹೃದಯದ ಆರೋಗ್ಯ ಮತ್ತು ತೂಕ ನಿಯಂತ್ರಣ ಎರಡನ್ನೂ ಬೆಂಬಲಿಸುತ್ತದೆ ಎಂದು ಕೂಡ ವಿವರಿಸಲಾಗಿದೆ.
ಹಾಗಾದ್ರೆ ತುಪ್ಪ ಮತ್ತು ಆಲಿವ್ ಆಯಿಲ್‌ನಲ್ಲಿ ಯಾವುದು ಉತ್ತಮ
ಸುವಾಸನೆ ಮತ್ತು ಸಾಂಪ್ರದಾಯಿಕ ಅಡುಗೆಗೆ ತುಪ್ಪ ಉತ್ತಮ, ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ, ಆದರೆ ಸ್ಯಾಚುರೇಟೆಡ್ ಕೊಬ್ಬಿನಿಂದಾಗಿ ಸೀಮಿತ ಬಳಕೆ ಮಾಡುವುದನ್ನು ಶಿಫಾರಸು ಮಾಡಲಾಗುತ್ತದೆ.
ಆದ್ರೆ ಆಲಿವ್ ಆಯಿಲ್‌ನಲ್ಲಿ ಮೊನೋಸಾಚುರೇಟೆಡ್ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ. ಅಂದರೆ ಹೊಟ್ಟೆಯ ಕೊಬ್ಬು ಇಳಿಸುವಲ್ಲಿ ತುಪ್ಪಕ್ಕಿಂತ ಆಲಿವ್ ಆಯಿಲ್ ಉತ್ತಮವಾಗುತ್ತದೆ. ಆದ್ರೆ ನಿಯಮಿತ ಬಳಕೆ ಬಹಳ ಮುಖ್ಯವಾಗುತ್ತದೆ.



Click it and Unblock the Notifications











