Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನಮ್ಮವರನ್ನು ಪ್ರೀತಿಯಿಂದ ಅಪ್ಪಿಕೊಳ್ಳುವುದರಿಂದ ಈ ಆರೋಗ್ಯ ಸಮಸ್ಯೆಯನ್ನು ದೂರವಿಡಬಹುದು
ತಾಯಿಗೆ ಮಗುವಿನ ಅಪ್ಪುಗೆ, ತಂಗಿಗೆ ಅಣ್ಣನ ಅಪ್ಪುಗೆ, ತಂದೆಗೆ ಮಗನ ಅಪ್ಪುಗೆ, ಗಂಡನಿಗೆ ಹೆಂಡತಿಯ ಅಪ್ಪುಗೆ, ಸ್ನೇಹಿರ ಅಪ್ಪುಗೆ. ಹೀಗೆ ಅಪ್ಪುಗೆಯಲ್ಲಿ ಅನೇಕ ರೀತಿಗಳಿದೆ. ಪ್ರತಿಯೊಂದು ಅಪ್ಪುಗೆಯೂ ಕೂಡ ನಮಗೆ ಒಂದು ರೀತಿಯ ಸಮಾಧಾನವನ್ನು ನೀಡುತ್ತದೆ. ನಾವು ತುಂಬಾನೇ ಕುಗ್ಗಿ ಹೋದ ಸಮಯದಲ್ಲಿ, ನಮ್ಮ ದುಃಖವನ್ನು ಯಾರೊಂದಿಗೂ ಹೇಳಲಾಗದ ಸಮಯದಲ್ಲಿ, ನಮ್ಮವರನ್ನು ಕಳೆದುಕೊಂಡಾಗ, ಮತ್ತು ನಮಗೆ ತುಂಬಾನೇ ಖುಷಿಯಾದಾಗ ನಮಗೆ ನಮ್ಮವರ ಅಪ್ಪುಗೆ ಖಂಡಿತ ಬೇಕು.
ಈ ಅಪ್ಪುಗೆ ನಾವು ಎಷ್ಟು ದುಃಖದಲ್ಲಿದ್ದರೂ ಕೂಡ ಒಂದು ಸಾರಿಗೆ ನಮಗೆ ಹಾಯಾದ ಅನುಭವ ನೀಡುತ್ತದೆ. ನಮ್ಮೆಲ್ಲಾ ದು:ಖ, ಬೇಜಾರು, ಮನಸ್ಥಾಪಗಳನ್ನು ದೂರ ಮಾಡುವ ಶಕ್ತಿ ಈ ಅಪ್ಪುಗೆಗೆ ಇದೆ. ನಮ್ಮವರ ಅಪ್ಪುಗೆಯಿಂದ ನಮ್ಮ ಮನಸ್ಸಿಗೆ ಖುಷಿಯನ್ನು ನೀಡುವುದು ಮಾತ್ರವಲ್ಲದೇ ಇದರಿಂದ ಆರೋಗ್ಯಕಾರಿ ಪ್ರಯೋಜನಗಳು ಇದೆ. ಹಾಗಾದ್ರೆ ಹಗ್ ಮಾಡೋದ್ರಿಂದ ಏನೆಲ್ಲಾ ಆರೋಗ್ಯಕಾರಿ ಪ್ರಯೋಜನಗಳಿದೆ ಅನ್ನೋದನ್ನು ತಿಳಿಯೋಣ.

1. ಒತ್ತಡವನ್ನು ನಿವಾರಿಸುತ್ತದೆ
ಯಾವಾಗ ನಾವು ನಮ್ಮವರನ್ನು ಅಥವಾ ನಂಬಿಕೆಗೆ ಅರ್ಹ ವ್ಯಕ್ತಿಯನ್ನು ಅಪ್ಪಿಕೊಳ್ಳುತ್ತೇವೆಯೋ ಆ ಸಂದರ್ಭದಲ್ಲಿ ನಮಗೆ ಒಬ್ಬರು ಬೆಂಬಲವಾಗಿ ನಮ್ಮ ಬೆನ್ನ ಹಿಂದೆ ಇದ್ದಾರೆ ಅನ್ನೋ ನಂಬಿಕೆ ಬರುತ್ತದೆ. ಇನ್ನೂ ಅಧ್ಯಯನಗಳ ಪ್ರಕಾರ ನಮ್ಮ ಆಪ್ತರನ್ನು ಅಪ್ಪಿಕೊಳ್ಳುವುದರಿಂದ ನಮ್ಮ ಒತ್ತಡ ಕಡಿಮೆಯಾಗುತ್ತಂತೆ. ನಮ್ಮ ಪ್ರೀತಿ ಪಾತ್ರರ ಒಂದು ಬೆಚ್ಚನೆಯ ಅಪ್ಪುಗೆಗೆ ನಮ್ಮ ಸಂಪೂರ್ಣ ಒತ್ತಡವನ್ನು ಕಡಿಮೆ ಮಾಡುವ ಶಕ್ತಿಯಿದ್ಯಂತೆ.
2. ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ನಾವು ಯಾರನ್ನಾದರೂ ಅಪ್ಪಿಕೊಂಡಾಗ ನಮ್ಮ ಸ್ತನ ಮೂಳೆಯ ಮೇಲೆ ಒತ್ತಡ ಉಂಟಾಗುತ್ತದೆ. ಇದು ನಮ್ಮ ಭಾವನಾತ್ಮಕವಾಗಿ ಸಂಪರ್ಕಿಸುವಂತೆ ಮಾಡುತ್ತದೆ.
ಇದು ನಮ್ಮ ದೇಹದಲ್ಲಿರುವ ಪ್ಲೆಕ್ಸಸ್ ಚಕ್ರಗಳನ್ನು ಸಕ್ರಿಯಗೊಳಿಸುತ್ತದೆ. ಮತ್ತು ಥೈಮಸ್ ಗ್ರಂಥಿಗಳಿಗೆ ಸಹಾಯ ಮಾಡುತ್ತದೆ. ಈ ಗ್ರಂಥಿಯು ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿದೆ. ಹಾಗೂ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.
3. ಕ್ಯಾಲೊರಿಯನ್ನು ಕರಗಿಸುತ್ತದೆ
ನಮ್ಮ ಪ್ರೀತಿ ಪಾತ್ರರನ್ನು ಅಪ್ಪಿಕೊಳ್ಳೋದ್ರಿಂದ ನಮ್ಮ ದೇಹದಲ್ಲಿರುವ 12 ಕ್ಯಾಲೊರಿಗಳನ್ನು ಕರಗಿಸಬಹುದಂತೆ. ನಂಬಲು ಅಸಾಧ್ಯವಾದ್ರು ಕೂಡ ಇದು ಸತ್ಯ. ನೀವು ಪ್ರತಿ ಸಾರಿ ನಿಮ್ಮ ಪ್ರೀತಿ ಪಾತ್ರರನ್ನು ಅಪ್ಪಿಕೊಂಡಾಗಲೆಲ್ಲ ಕ್ಯಾಲೊರಿಯನ್ನು ಕರಗಿಸಬಹುದು. ಅಪ್ಪ, ಅಮ್ಮಾ, ಅಣ್ಣ, ತಂಗಿ, ಪತಿ, ಪತ್ನಿ, ಸ್ನೇಹಿತ ಯಾರನ್ನೂ ಬೇಕಾದರೂ ಹಗ್ ಮಾಡಬಹುದು.
4. ಸ್ನಾಯುವಿನ ಒತ್ತಡವನ್ನು ನಿವಾರಿಸುತ್ತದೆ
ಉದ್ವೇಗ ಹೆಚ್ಚಾದಾಗ ನಮ್ಮ ಪ್ರೀತಿ ಪಾತ್ರರನ್ನು ಹಗ್ ಮಾಡಿದ್ರೆ ಉದ್ವೇಗ ಕಡಿಮೆಯಾಗುತ್ತೆ. ಜೊತೆಗೆ ಅಪ್ಪುಗೆಯಿಂದ ರಕ್ತ ಪರಿಚಲನೆಯನ್ನು ಹೆಚ್ಚು ಮಾಡಬಹುದು. ಇನ್ನೂ ಅಪ್ಪುಗೆಯಿಂದ ಮೃದು ಅಂಗಾಂಶಗಳಲ್ಲಿ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಇನ್ನೂ ಸ್ನಾಯುಗಳನ್ನು ವಿಶ್ರಾಂತಿಸಲು ಸಹಾಯ ಮಾಡುತ್ತದೆ.
5. ಮೆದುಳಿನ ಆರೋಗ್ಯ ಮತ್ತು ಸ್ಮರಣೆ ಶಕ್ತಿಯನ್ನು ಹೆಚ್ಚಿಸುತ್ತದೆ
ನೀವು ಪ್ರೀತಿಪಾತ್ರರನ್ನು ತಬ್ಬಿಕೊಂಡಾಗ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತಂತೆ. ಇದು ಜ್ಞಾಪಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇಷ್ಟು ಮಾತ್ರವಲ್ಲ, ನಮ್ಮ ಪ್ರೀತಿ ಪಾತ್ರರನ್ನು ಅಪ್ಪಿಕೊಳ್ಳೋದ್ರಿಂದ ನರಮಂಡಲವನ್ನು ಉತ್ತೇಜಿಸಲು ಸಹಾಯ ಮಾಡುತ್ತಂತೆ.
6. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ರಕ್ತದೊತ್ತಡದ ಸಮಸ್ಯೆ ಸಾಮಾನ್ಯವಾಗಿ ಹೆಚ್ಚಿನವರಿಗೆ ಇದ್ದೇ ಇರುತ್ತದೆ. ನಿಮ್ಮ ಮನಸ್ಸಿಗೆ ಹತ್ತಿರ ಇರೋರನ್ನು ತಪ್ಪಿಕೊಂಡ್ರೆ ಆಕ್ಸಿಟೋಸಿನ್ ಮಟ್ಟವು ಹೆಚ್ಚಾಗುತ್ತಂತೆ. ದೇಹದಲ್ಲಿನ ಕಾರ್ಟಿಸೋಲ್ ಅನ್ನು ಕಡಿಮೆ ಮಾಡಲು ಈ ಹಾರ್ಮೋನ್ ಬಹಳ ಮುಖ್ಯವಾಗಿದೆ. ಇದರಿಂದಾಗಿ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ನಮ್ಮವರ ಅಪ್ಪುಗೆ ನಮಗೆ ಸಮಾಧಾನವನ್ನು ನೀಡುವುದು ಮಾತ್ರವಲ್ಲದೇ ಇದರಿಂದ ನಮ್ಮ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಕೂಡ ಇದೆ. ಹೀಗಾಗಿ ನಿಮಗೆ ತುಂಬಾ ಹತ್ತಿರವಾದವರನ್ನು ಅಪ್ಪಿಕೊಳ್ಳೋದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
