Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೂಗಿಗೆ ಬೆರಳು ಹಾಕುತ್ತೀರಾ..!? ಬೆಚ್ಚಿ ಬೀಳಿಸುತ್ತೆ ಹೊಸ ಅಧ್ಯಯನ..!
ನಿತ್ಯವು ನಾವು ಮಾಡುವ ಕೆಲ ಅಭ್ಯಾಸಗಳೇ ನಮ್ಮ ಅನಾರೋಗ್ಯ ಸಮಸ್ಯೆಗೆ ಕಾರಣವಾಗಿರುತ್ತವೆ. ಅದೆಷ್ಟೋ ಅಭ್ಯಾಸಗಳು ನಮಗೆ ಅನಾರೋಗ್ಯ ತರಲು ಪ್ರಮುಖ ಕಾರಣವಾಗಿರುತ್ತದೆ. ಅದರಲ್ಲಿ ಮುಖ್ಯವಾಗಿ ಮೂಗಿನೊಳಗೆ ಬರಳು ಹಾಕುವುದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಇದೊಂದು ಕೆಟ್ಟ ಅಭ್ಯಾಸ ಬೆಳೆದಿರುತ್ತದೆ. ಕೆಲವರಂತು ಮೂಗಿನಿಂದ ಬೆರಳು ತೆಗೆಯುವುದೇ ಇಲ್ಲ ಅಷ್ಟರ ಮಟ್ಟಿಗೆ ಈ ಅಭ್ಯಾಸಕ್ಕೆ ದಾಸರಾಗಿರುತ್ತಾರೆ.
ಆದರೆ ನಿಮಗೆ ಗೊತ್ತಾ ಮೂಗಿಗೆ ಬೆರಳು ಹಾಕುವುದರಿಂದ ನೀವು ಎಂತಹ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೀರಾ ಅಂತ? ನಿತ್ಯ ಒಮ್ಮೆಯಾದರೂ ಮೂಗಿಗೆ ಬೆರಳು ಹಾಕುವುದರಿಂದ ಹಲವು ರೀತಿಯ ಗಂಭೀರ ಸಮಸ್ಯೆಗೆ ನೀವು ಮುಂದೆ ಒಳಗಾಗಲಿದ್ದೀರಿ. ಹಾಗಾದರೆ ಇದರಿಂದ ಆಗುವ ಅನಾರೋಗ್ಯವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ನಾವಿಂದು ಹೇಳ ಹೊರಟಿರುವ ವಿಚಾರ ತಿಳಿದರೆ ನಿಮಗೂ ಅಚ್ಚರಿಯಾಗಬಹುದು. ಪದೇ ಪದೇ ಮೂಗಿಗೆ ಬೆರಳಿಡುವವರಲ್ಲಿ ಆಲ್ಜೈಮರ್ ಡಿಸೀಸ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯದ ಸಂಶೋಧಕರು ಸಂಗ್ರಹಿಸಿದ ಮತ್ತು ಬರೆದ ಹೊಸ ವರದಿಯನ್ನು ಕಳೆದ ವರ್ಷದ ಕೊನೆಯಲ್ಲಿ ಬಯೋಮಾಲಿಕ್ಯೂಲ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಯಿತು.
"ಆಲ್ಝೈಮರ್‌ನ ಕಾಯಿಲೆಯಲ್ಲಿನ ನ್ಯೂರೋಇನ್ಫ್ಲಾಮೇಶನ್ ವೈರಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ರೋಗಕಾರಕಗಳು ಮೂಗು ಮತ್ತು ಘ್ರಾಣ ವ್ಯವಸ್ಥೆಯ ಮೂಲಕ ಮೆದುಳಿಗೆ ಪ್ರವೇಶಿಸುವುದರಿಂದ ಭಾಗಶಃ ಉಂಟಾಗಬಹುದು" ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ. ಮೂಗಿನಿಂದ ಈ ಬ್ಯಾಕ್ಟೀರಿಯಾ, ಇಲ್ಲವೆ ಶಿಲೀಂಧ್ರ ಪ್ರಯಾಣಿಸಬೇಕಾದರೆ ಅದು ನಮ್ಮ ಕೈ ಮೂಲಕವೇ ತಗುಲಿರಬೇಕು ಎಂದು ಅಂದಾಜಿಸಲಾಗಿದೆ. ನಮ್ಮ ಕೈಯನ್ನು ಮೂಗಿನೊಳಗೆ ಹಾಕುವುದರಿಂದ ಈ ಬ್ಯಾಕ್ಟೀರಿಯಾಕ್ಕೆ ಮೆದುಳು ತಲುಪಲು ಸಹಾಯವಾಗುತ್ತಿದೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ.
6 ಮಿಲಿಯನ್‌ಗಿಂತಲೂ ಹೆಚ್ಚು ಜನರು ನ್ಯೂರೋ ಡಿಜೆನೆರೇಟಿವ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಪ್ರಧಾನವಾಗಿ 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತದೆ. ಆಲ್ಝೈಮರ್‌ನ ಕಾಯಿಲೆಗೆ ಕಾರಣವೇನು ಎಂದು ವಿಜ್ಞಾನಿಗಳು ಇನ್ನೂ ನಿಖರವಾಗಿ ಖಚಿತವಾಗಿಲ್ಲ, ಆದರೆ ರೋಗಿಗಳ ಮೆದುಳಿನಲ್ಲಿ ಅವರು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯೊಂದಿಗೆ ಸಂಬಂಧಿಸಿರುವ ಟೌ ಎಂಬ ಪ್ರೋಟೀನ್‌ನ ಸಂಗ್ರಹವನ್ನು ಗಮನಿಸಿದ್ದಾರೆ.
ಪ್ರತಿರಕ್ಷಣಾ ಕೋಶಗಳು ಆಗಾಗ್ಗೆ ಆಕ್ರಮಣಗಳಿಂದ ಪ್ರಚೋದಿಸಲ್ಪಟ್ಟಾಗ, ಉರಿಯೂತದ ರೂಪದಲ್ಲಿ ದೇಹದ ಮೇಲೆ ಒತ್ತಡವು ವಿವಿಧ ರೋಗಗಳಿಗೆ ಕಾರಣವಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಆಲ್ಜೈಮರ್ ಜೊತೆಗೆ ಜನರ ಮೆದುಳಿನಲ್ಲಿ ನ್ಯುಮೋನಿಯಾ, ಹರ್ಪಿಸ್ ವೈರಸ್, ಕೊರೊನಾ ವೈರಸ್ ಮತ್ತು ಬೆಕ್ಕಿನಿಂದ ಪಡೆದ ಪರಾವಲಂಬಿ ಟೊಕ್ಸೊಪ್ಲಾಸ್ಮಾ ಗೊಂಡಿ ಮುಂತಾದ ಬ್ಯಾಕ್ಟೀರಿಯಾಗಳಂತಹ ವಿವಿಧ ಸಾಮಾನ್ಯ ರೋಗಕಾರಕಗಳು ಕಂಡುಬಂದಿವೆ.
ಮಕ್ಕಳ ಮೇಲಿರಲಿ ವಿಶೇಷ ಗಮನ
ಇನ್ನು ದೊಡ್ಡವರಾದರೆ ಈ ಅಭ್ಯಾಸದಿಂದ ಬರುವ ಸಮಸ್ಯೆ ಕುರಿತು ತಿಳಿದಿರುತ್ತಾರೆ. ಆದರೆ ಮಕ್ಕಳಲ್ಲಿ ಈ ಅಭ್ಯಾಸವಿದ್ದರೆ ಹೆಚ್ಚು ಗಮನ ಹರಿಸಿ. ಏಕೆಂದರೆ ಮಕ್ಕಳು ಪದೇ ಪದೇ ಮೂಗಿಗೆ ಬೆರಳು ಹಾಕಿಕೊಳ್ಳುತ್ತಿದ್ದರೆ ಮುಂದೆ ಸಮಸ್ಯೆಗೆ ಎದುರಾಗುತ್ತಾರೆ. ಹೀಗಾಗಿ ಅವರು ಹೆಚ್ಚು ಈ ರೀತಿ ಅಭ್ಯಾಸ ಮಾಡಿಕೊಳ್ಳದಂತೆ ಎಚ್ಚರ ವಹಿಸಿ.
ಇದರಿಂದ ಪಾರಾಗುವುದು ಹೇಗೆ?
ಮೂಗಿನೊಳಗೆ ಬೆರಳು ಹಾಕದೆ ಬೇರೆ ವಿಧಿಯಿಲ್ಲ. ಹಾಗಾದರೆ ಈ ಸಮಸ್ಯೆಯಿಂದ ಪಾರಾಗುವುದು ಹೇಗೆ? ಕೈ ಬೆರಳು ಹಾಕುವುದನ್ನು ತಡೆಯುವುದು ಕಷ್ಟಕರವಾದರೂ ಕೆಲವು ಮುನ್ನೆಚ್ಚರಿಕೆ ವಹಿಸಬಹುದು. ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು. ಹೌದು ಮೂಗಿಗೆ ಬೆರಳು ಹಾಕುವ ಮುನ್ನ ನಿಮ್ಮ ಕೈಗಳು ಸ್ವಚ್ಛವಾಗಿದೆಯೇ ಎಂಬುದನ್ನು ಖಚಿತ ಮಾಡಿಕೊಳ್ಳಿ. ಇದರ ಜೊತೆ ಸ್ನಾನದ ಜೊತೆಗೆ ಮೂಗನ್ನು ಸಹ ಸ್ವಚ್ಛ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಹೀಗಾದಾಗ ಪದೇಪದೇ ಮೂಗಿಗೆ ಬೆರಳು ಹಾಕಿಕೊಳ್ಳುವ ಸಂಭವ ಎದುರಾಗುವುದಿಲ್ಲ. ಇದಿಷ್ಟೇ ಅಲ್ಲ ಮೂಗನ್ನು ನ್ಯಾಪ್ಕಿನ್ ಬಳಸಿ ಸ್ವಚ್ಛಗೊಳಿಸಬಹುದು. ಈ ವೇಳೆ ಬೆರಳು ನೇರವಾಗಿ ಮೂಗಿನ ಸಂಪರ್ಕಕ್ಕೆ ಬರುವುದಿಲ್ಲ. ಇದರಿಂದಲೂ ವೈರಸ್ ಸೂಕ್ಷ್ಮಾಣುಗಳು ಹರಡುವುದನ್ನು ತಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
