Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ ನೋರಾ ವೈರಸ್: ಈ ಸ್ಟಮಕ್ ಫ್ಲೂ ಲಕ್ಷಣಗಳೇನು?
ಈ ಕೊರೊನಾ ಎಂಬ ಮಹಾಮಾರಿ ಬಂದು ಹೋದ ಮೇಲೆ ಪ್ರತಿವರ್ಷ ಹೊಸ ವರ್ಷ ಪ್ರಾರಂಭವಾದಾಗ ಈ ವರ್ಷ ಯಾವುದೇ ಮಹಾಮಾರಿ ಬರದಿರಲಿ, ಈ ವರ್ಷ ನಮಗೆ ಚೆನ್ನಗಿರಲಿ ಎಂದು ನಾವೆಲ್ಲಾ ಅಂದುಕೊಳ್ಳುತ್ತೇವೆ. ಇದೀಗ ಹೊಸ ವರ್ಷ ಶುರುವಾಗಿದೆಯಷ್ಟೇ ಆಗಲೇ ನೋರಾವೈರಸ್ ಭೀತಿ ಅಮೆರಿಕದಲ್ಲಿ ಉಂಟಾಗಿದೆ. ಇದನ್ನು ವಿಂಟರ್ ವಾಮಿಟಿಂಗ್ ಬಗ್ ಎಂದು ಕರೆಯಲಾಗುವುದು.
ಸಾಮಾನನ್ಯವಾಗಿ ನೋರಾವೈರಸ್ ನವೆಂಬರ್‌ನಿಂದ ಏಪ್ರಿಲ್ ತಿಂಗಳಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಈ ಸಮಯವನ್ನು ನೋರಾವೈಸರ್ ಸೀಸನ್ ಎಂದೇ ಕರೆಯಲಾಗುವುದು. ಪ್ರತಿವರ್ಷ ಚಳಿಗಾಲದ ಸಮಯದಲ್ಲಿ ನೋರಾವೈರಸ್ ಕಂಡು ಬರುವುದು. ಇದು ಕೆಲವು ವರ್ಷಗಳಿಂದ ಕಂಡು ಬರುತ್ತಿದೆ.

ಈ ನೋರಾವೈರಸ್ ಎಂದರೇನು?
ನೀರಾವೈಸರ್ ತಗುಲಿದರೆ ವಾಂತಿ-ಬೇಧಿ ಸಮಸ್ಯೆ ಕಂಡು ಬರುವುದು. ಕಲುಷಿತ ಆಹಾರ ಸೇವನೆಯಿಂದಾಗಿ ಈ ರೀತಿ ಉಂಟಾಗುವುದು. ಸಿಡಿಸಿ ಪ್ರಕಾರ ಈ ನೋರಾವೈರಸ್ ಎಲ್ಲಾ ವಯಸ್ಸಿನವರನ್ನೂ ಬಾಧಿಸಬಹುದು. ಇದನ್ನು ಸ್ಟಮಕ್ ಫ್ಲೂ ಅಥವಾ ಸ್ಟಮಕ್ ಬಗ್ ಎಂದು ಕೂಡ ಕರೆಯಲಾಗುವುದು. ಈ ನೋರಾ ವೈರಸ್ ತಗುಲಿದರೆ 1-3 ದಿನಗಳಲ್ಲಿ ರೋಗಿಗಳು ಚೇತರಿಸಿಕೊಳ್ಳುತ್ತಾರೆ, ಆದರೂ ಅವರು ರೋಗವನ್ನು ಹರಡಬಲ್ಲರು.
ನೋರಾ ವೈರಸ್ ಲಕ್ಷಣಗಳೇನು?
ನೋರಾ ವೈರಸ್ ತಗುಲಿದ 12-48 ಗಂಟೆಯೊಳಗಡೆ ರೋಗ ಲಕ್ಷಣಗಳು ಕಂಡು ಬರುವುದು.
ನೋರಾ ವೈರಸ್ ಲಕ್ಷಣಗಳು
ವಾಂತಿ, ಬೇಧಿ, ಹೊಟ್ಟೆ ನೋವು
ತಲೆನೋವು
ಮೈಕೈ ನೋವು
ಜ್ವರ
ಈ ನೋರಾ ವೈರಸ್ ಹೇಗೆ ಹರಡುತ್ತದೆ?
ನೋರಾವೈರಸ್ ತಗುಲಿರುವ ವ್ಯಕ್ತಿಗಳ ಸಂಪರ್ಕದಿಂದ ಹರಡುವುದ
ಅವರು ಕುಡಿದ ಪಾನೀಯ ಕುಡಿಯುವುದು, ಆಹಾರ ಸೇವಿಸುವುದು (ಅವರು ಬಳಸಿದ ತಟ್ಟೆ,ಲೋಟ) ಮಾಡಿದರೆ ರೋಗ ಹರಡುವುದು
ನೋರಾವೈರಸ್ ತಗುಲಿರುವ ಆಹಾರಗಳನ್ನು ಮುಟ್ಟಿದಾಗ ಕೂಡ ಹರಡುವುದು
ನೋರಾ ವೈರಸ್ ಹೇಗೆ ತಡೆಗಟ್ಟಬಹುದು
ಕೈಗಳನ್ನು ಆಗಾಗ ತೊಳೆಯಬೇಕು
ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಿ
ತರಕಾರಿಗಳನ್ನು ಚೆನ್ನಾಗಿ ತೊಳೆದು ಬೇಯಿಸಿ ತಿನ್ನಬೇಕು
ಸಮುದ್ರಾಹಾರ, ಮಾಂಸಾಹಾರ ಚೆನ್ನಾಗಿ ಬೇಯಿಸಬೇಕು
ಇನ್ನು ರೋಗ ಲಕ್ಷಣಗಳು ಕಂಡು ಬಂದಾಗ ಹೊರಗಡೆ ತಿರುಗಾಡದೆ ಮನೆಯಲ್ಲಿಯೇ ಇದ್ದು ಹುಷಾರಾಗುವವರೆಗೆ ವಿಶ್ರಾಂತಿ ಪಡೆದರೆ ಬೇಗನೆ ಚೇತರಿಸಿಕೊಳ್ಳಬಹುದು ಹಾಗೂ ರೋಗ ಇತರರಿಗೆ ಹರಡುವುದನ್ನು ತಡೆಗಟ್ಟಬಹುದು.
ಇತರ ಸಲಹೆ
ಕುದಿಸಿ ಆರಿಸಿದ ಆಹಾರ ಸೇವಿಸಬೇಕು
ORS ಕುಡಿಯಬೇಕು
ಮನೆಯ ಸಾಕು ಪ್ರಾಣಿಗಳಲ್ಲಿ ವಾಂತಿ ಬೇಧಿ ಕಂಡು ಬಂದರೆ ರೋಗ ಹರಡದಂತೆ ಗ್ಲೌಸ್ ಮಾಸ್ಕ್ ಧರಿಸಿ ಚಿಕಿತ್ಸೆ ನೀಡಬೇಕು.
ನೋರಾವೈರಸ್ ಹೆಚ್ಚಿರುವಾಗ ಹೊರಗಡೆಯ ಆಹಾರ ಸೇವಿಸದಿದ್ದರೆ ಒಳ್ಳೆಯದು.ಈ ನೋರಾ ವೈರಸ್ 2021ರಲ್ಲಿ ಕೇರಳದಲ್ಲಿ ಕಂಡು ಬಂದಿತ್ತು.
ಈ ನೋರಾವೈರಸ್ ಕಲುಷಿತಾಹಾರದ ಮೂಲಕ ಬೇಗನೆ ಹರಡುವುದು. ಆದ್ದರಿಂದ ಹೊಟ್ಟೆನೀವು, ವಾಂತಿ ಈ ಬಗೆಯ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದು ವಿಶ್ರಾಂತಿ ಕಡೆಗೆ ಗಮನಹರಿಸಿ. ಇದು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಾಕಷ್ಟು ನೀರು ಕುಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










