Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಪ್ಯಾರಿಸ್ ಒಲಿಂಪಿಕ್‌ಗೆ ಕೋವಿಡ್ ಕಂಟಕ.! ಅಮೆರಿಕ ಕ್ರೀಡಾಪಟುವಿಗೆ ಪಾಸಿಟಿವ್..!!
ಪ್ಯಾರಿಸ್ ಒಲಿಂಪಿಕ್ ಆರಂಭಗೊಂಡಾಗಿನಿಂದಲೂ ವಿವಾದಗಳಿಂದ ಸುದ್ದಿಯಾಗುತ್ತಿದೆ. ಮೊದಲು ಕಲುಶಿತಗೊಂಡ ನದಿ ನೀರಿನ ಕಾರಣ ಸುದ್ದಿಯಾಗಿತ್ತು. ಬಳಿಕ ಕ್ರೀಡಾ ಗ್ರಾಮದಲ್ಲಿರುವ ಅವ್ಯವಸ್ಥೆ ಕುರಿತಂತೆಯೂ ಸುದ್ದಿಯಾಗಿತ್ತು. ಇದಾದ ಬಳಿಕ ಕೆಲವು ವಿಭಾಗದ ಕ್ರೀಡೆಯಲ್ಲಿ ನಿಯಮ ಮೀರಿರುವುದು, ಸೌಲಭ್ಯಗಳ ಕೊರತೆ ಸೇರಿ ಇನ್ನಿತರೆ ವಿಚಾರಗಳಿಂದ ಸುದ್ದಿಯಾಗಿತ್ತು.
ಆದ್ರೆ ಈಗ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಕೋವಿಡ್ ವೈರಸ್ ಕಂಡುಬಂದಿದ್ದು, ಆತಂಕ ಹೆಚ್ಚಾಗಿದೆ. ಅಮೆರಿಕದ ಸ್ಪ್ರಿಂಟರ್ ನೋಹ್ ಲೈಲ್ಸ್ ಅವರು ಮಂಗಳವಾರ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ಅವರಲ್ಲಿ ವೈರಸ್ ಇರುವುದು ದೃಢಪಟ್ಟಿದೆ. ಲೈಲ್ಸ್ ಗುರುವಾರ ನಡೆದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದು ಬೀಗಿದ್ದರು. ಆದ್ರೆ ಮಾಧ್ಯಮದ ಎದುರು ಬಂದ ಅವರು ಮಾಸ್ಕ್ ಧರಿಸಿದ್ದರು. ಬಳಿಕ ಅವರೆ ನನಗೆ ಕೋವಿಡ್ ಬಂದಿದೆ ಎಂದು ಒಪ್ಪಿಕೊಂಡಿದ್ದರು.

ಅವರು ತೀವ್ರ ಜ್ವರ, ಚಳಿ, ಗಂಟಲು ನೋವಿನಿಂದ ಬಳಲಿದ ನಂತರ ಮಂಗಳವಾರ ಬೆಳಗ್ಗೆ ಕೋವಿಡ್‌ಗೆ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಕೋವಿಡ್ ದೃಢಪಟ್ಟಿದೆ. ಹೀಗೆ ಧನಾತ್ಮಕ ಪರೀಕ್ಷೆ ನಡೆಸಿದ ಬಳಿಕ ಅವರು ಉಳಿದುಕೊಂಡಿದ್ದ ಹೋಟೆಲ್‌ನಲ್ಲೇ ಕ್ಷಾರಂಟೈನ್ ಆಗಿದ್ದರು. ಔಷಧಿ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವವರು ಕೋವಿಡ್‌ಗೆ ಒಳಗಾದಾಗಲು ಅವರು ಕ್ರೀಡೆಯಿಂದ ಹೊರಗುಳಿಯಬೇಕು ಎಂಬ ನಿಯಮವಿಲ್ಲ. ಅವರು ಕ್ರೀಡೆಯಲ್ಲಿ ಭಾಗಿಯಾಗಬಹುದು. ಲೈಲ್ಸ್ ಈ ಮೊದಲು ಅಸ್ತಮಾದಿಂದ ಬಳಲುತ್ತಿದ್ದ ಕಾರಣ ಆರಂಭದಲ್ಲೇ ಅವರಿಗೆ ಕೋವಿಡ್ ಲಕ್ಷಣ ಗುರುತಿಸಲು ಸಾಧ್ಯವಾಗಲಿಲ್ಲ.
ಆಸ್ತಮಾ ಸೇರಿದಂತೆ ಆಧಾರವಾಗಿರುವ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ಜನರು ಕೋವಿಡ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿದುಬಂದಿದೆ. ಆದರೆ ಕ್ರೀಡಾಪಟುವಿಗೆ ಕೋವಿಡ್ ದೃಢವಾದ ಬೆನ್ನಲ್ಲೆ ಪ್ಯಾರಿಸ್‌ನ ಕ್ರೀಡಾ ಗ್ರಾಮದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ಯಾರಾದರು ಕ್ರೀಡಾಪಟುಗಳು ಜ್ವರ, ಗಂಟಲು ನೋವು ಸೇರಿ ಯಾವುದೇ ರೀತಿಯ ಅನಾರೋಗ್ಯಕ್ಕೆ ತುತ್ತಾದರು ತಕ್ಷಣವೇ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ. ಜೊತೆಗೆ ಮೆಂಟರ್, ಕೋಚ್, ಸಿಬ್ಬಂದಿಗೂ ಈ ಸೂಚನೆ ನೀಡಲಾಗಿದ್ದು, ತೀವ್ರ ನಿಗ ಇಡಲು ಹೇಳಲಾಗಿದೆ. ಕ್ರೀಡಾ ಗ್ರಾಮದಲ್ಲಿ ಆಸ್ಪತ್ರೆಯ ನಿರ್ಮಿಸಲಾಗಿದೆ. ಅಲ್ಲಿಯೇ ಚಿಕಿತ್ಸೆಗೂ ಸೂಚಿಸಲಾಗುತ್ತದೆ.
ವಿಶ್ವದಾದ್ಯಂತ ಕೋವಿಡ್ ಸೋಂಕುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ, ಹೊಸ ಪ್ರಕರಣಗಳು ಇನ್ನೂ ವರದಿಯಾಗುತ್ತಿವೆ. ಅದರೊಂದಿಗೆ ಹೊಸ ಕೋವಿಡ್ ತಳಿಗಳು ಸಹ ಕಂಡುಬಂದಿದೆ. ಈ ವರ್ಷದ ಆರಂಭದಲ್ಲಿ, KP.2 ಮತ್ತು KP.1.1 ಎಂಬ ಹೊಸ ರೂಪಾಂತರಗಳು ಸಹ ಹೊರಬಂದಿವೆ. ಇದು ವಿಶ್ವದಲ್ಲಿ ಮತ್ತೆ ಕೋವಿಡ್ ಪ್ರಕರಣ ಏರಿಕೆಯಾಗಲು ಕಾರಣವಾಗಿದ್ದವು. ಈಗ ಕ್ರೀಡಾಪಟು ಈ ಯಾವ ರೂಪಾಂತರಕ್ಕೆ ಒಳಗಾಗಿದ್ದಾರೆ ಎಂಬುದು ದೃಢಪಟ್ಟಿಲ್ಲ.
KP.2 FLiRT ಎಂದು ಕರೆಯಲ್ಪಡುವ ರೂಪಾಂತರಿತ ಗುಂಪಿನ ಒಂದು ಭಾಗವಾಗಿದೆ. KP.2 ಮತ್ತು KP.1.1 ಎರಡು ರೂಪಾಂತರಗಳಾಗಿವೆ ಮತ್ತು ಇದು ಅಮೆರಿಕದಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಹೊಸ ಕೊರೊನಾ ಪ್ರಕರಣಗಳಿಗೆ ಕಾರಣವಾಗಿವೆ. KP.2 ರೂಪಾಂತರವು US ನಲ್ಲಿ ವೇಗವಾಗಿ ಹರಡುವ ರೂಪಾಂತರವೆಂದು ಪರಿಗಣಿಸಲ್ಪಟ್ಟಿದೆ .
ಇದಕ್ಕು ಮುನ್ನ ಒಮಿಕ್ರಾನ್ ರೂಪಾಂತರವು ಬಹಳಷ್ಟು ಕೆಡುಕು ಉಂಟು ಮಾಡಿತ್ತು. 2ನೇ ಅಲೆಯಲ್ಲಿ ವಿಶ್ವದಾದ್ಯಂತ ಕಂಡುಬಂದಿದ್ದ ಈ ಕೊರೊನಾ ರೂಪಾಂತರವು ಲಕ್ಷ ಲಕ್ಷ ಮಂದಿಯ ಬಲಿ ಪಡೆದಿತ್ತು. ಇತ್ತೀಚಿನ ದಿನದಲ್ಲಿ ಮತ್ತೆ ಏರಿಕೆಯಾಗಿದ್ದ ಕೊರೊನಾ ಬಳಿಕ ಹಲವು ಬಾರಿಯ ರೂಪಾಂತರದ ಬಳಿಕ ಹರಡುವಿಕೆ ಕಡಿಮೆಯಾಗಿತ್ತು. ಇತ್ತೀಚಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಕೋವಿಡ್ ಒಳಗಾಗಿದ್ದನ್ನು ನಾವು ನೆನಪಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications