Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇರಳದಲ್ಲಿ ನಿಫಾಗೆ ಬಾಲಕ ಬಲಿ: ಈ ರೀತಿ ಇರುವ ಹಣ್ಣುಗಳನ್ನು ತಿನ್ನಲೇಬೇಡಿ
ಕೇರಳದಲ್ಲಿ ಮತ್ತೆ ನಿಫಾ ವೈರಸ್ ಆತಂಕ ಉಂಟಾಗಿದೆ. 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ದೃಢಪಟ್ಟಿದ್ದು ಕೇರಳದಲ್ಲಿ ಈ ಬಗ್ಗೆ ಕಟ್ಟೆಚ್ಚರವಹಿಸಲಾಗಿದೆ. ನಮ್ಮ ಕರ್ನಾಟಕದ ಕೇರಳದ ನೆರೆಯ ರಾಜ್ಯವಾಗಿರುವುದರಿಂದ ಕರ್ನಾಟಕದಲ್ಲಿಯೂ ಈ ಬಗ್ಗೆ ಎಚ್ಚರವಹಿಸಬೇಕಾಗಿದೆ.
ಕೇರಳದ ಮಲ್ಪುರಂನ ಬಾಲಕನಲ್ಲಿ ನಿಫಾ ವೈರಸ್ ಕಂಡು ಬಂದಿದ್ದು ಹುಡುಗನನ್ನು ಕೋಝಿಕೋಡ್ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಹುಡುಗನ ಸಂಪರ್ಕಕ್ಕೆ ಬಂದ ಎಲ್ಲರ ಬಗ್ಗೆ ಟ್ರ್ಯಾಕ್ ಮಾಡಿ ಅವರ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಕೇರಳ ಆರೋಗ್ಯ ಮಂತ್ರಿ ವೀಣಾ ಸೂಚನೆ ನೀಡಿದ್ದಾರೆ.

ನಿಫಾ ವೈರಸ್ ಕೇರಳದಲ್ಲಿ ಕಳೆದ ವರ್ಷ ಎರಡು ಜೀವವನ್ನು ಬಲಿ ತಗೆದುಕೊಂಡಿತ್ತು, 2018ರಲ್ಲಿ 21 ಜನರನ್ನು ಬಲಿ ತೆಗೆದುಕೊಂಡಿತ್ತು. ಹಾಗಾಗಿ ಈ ನಿಫಾ ವೈರಸ್ ಎಂದರೆ ಜನ ಬೆಚ್ಚಿ ಬೀಳುತ್ತಾರೆ.
ಈ ನಿಫಾ ವೈರಸ್ ಮನುಷ್ಯನಿಗೆ ಹೇಗೆ ಹರಡುತ್ತದೆ?
ಈ ನಿಫಾ ವೈರಸ್, ನಿಫಾ ವೈರಸ್ ಇರುವ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ತಿಂದರೆ ಬರುತ್ತದೆ. ಹೀಗಾಗಿ ಈ ಸಮಯದಲ್ಲಿ ಪಕ್ಷಿಗಳಾಗಲಿ ಅಥವಾ ಬಾವಲಿಗಳಾಗಲಿ ಕಚ್ಚಿದ ಹಣ್ಣುಗಳನ್ನು ತಿನ್ನಲೇಬೇಡಿ.
ನಿಫಾ ವೈರಸ್ ಲಕ್ಷಣಗಳೇನು?
ಈ ವೈರಸ್ ತಗುಲಿದಾಗ ಮೆದುಳಿನಲ್ಲಿ ಉರಿಯೂತದ ಸಮಸ್ಯೆ ಉಂಟಾಗುವುದು
ಈ ವೈರಸ್ ಮನುಷ್ಯನ ದೇಹ ಸೇರಿದ 4-14 ದಿನಗಳಲ್ಲಿ ಕಂಡು ಬರುವುದು. ಈ ಸೋಂಕು ಲಕ್ಷಣಗಳು ಕಂಡು ಬಂದರೆ ಆ ರೋಗ ಲಕ್ಷನಗಳು 14 ದಿನಗಳವರೆಗೆ ಕಂಡು ಬರಬಹುದು.
ಈ ಸೋಂಕು ತಗುಲಿದಾಗ ಆ ರೋಗಿಯಲ್ಲಿ ತೀವ್ರ ಜ್ವರ, ತುಂಬಾನೇ ಸುಸ್ತು, ತಲೆ ಸುತ್ತು, ಗೊಂದಲದ ವರ್ತನೆ ಕಂಡು ಬರುವುದು. ಈ ಬಗೆಯ ಲಕ್ಷಣಗಳು ಕಂಡು ಬಂದರೆ ಆ ವ್ಯಕ್ತಿ ಕೋಮಾಗೆ ಜಾರಬಹುದು.
ನಿಫಾ ವೈರಸ್ ಸೋಂಕು ತಗುಲಿದಾಗ ತೀವ್ರ ಉಸಿರಾಟದ ಸಮಸ್ಯೆ ಕಂಡು ಬರುವುದು.
ಈ ಸೋಂಕು ತಗುಲಿದ ವ್ಯಕ್ತಿಯಿಂದ ಬೇರೆಯವರಿಗೆ ಹರಡುವುದು ಹೇಗೆ"
ಆ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಹರಡಬಹುದು. ಅವರ ಎಂಜಲು ಅಥವಾ ದೇಹದ ದ್ರವಾಂಶ ತಾಗಿದರೆ ಹರಡುವುದು.
ಈ ಸೋಂಕು ಹಂದಿ, ನಾಯಿ, ಕುದುರೆಗಳಿಂದ ಕೂಡ ಮನುಷ್ಯರಿಗೆ ಹರಡುವುದು. ಈ ಅವಧಿಯಲ್ಲಿ ಹಣ್ಣುಗಳನ್ನು ತಿನ್ನುವಾಗ ಬಾವಲಿಗೆ ಕಚ್ಚಿದ ಹಣ್ಣುಗಳನ್ನು ತಿನ್ನಬೇಡಿ.
ಈ ನಿಫಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟುವುದು ಹೇಗೆ?
ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ
ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ
ಮನೆಯ ಸದಸ್ಯರಿಗೆ ಜ್ವರ ಬಂದರೆ ಅವರನ್ನು ಆರೈಕೆ ಮಾಡುವಾಗ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸಿ.
ಹಣ್ಣುಗಳನ್ನು ಚೆನ್ನಾಗಿ ತೊಳೆದು ಬಳಸಿ
ಪ್ರಾಣಿಗಳಿಗೆ ಅನಾರೋಗ್ಯವಾದರೆ ಅವುಗಳನ್ನು ಆರೈಕೆ ಮಾಡುವಾಗ ತುಂಬಾನೇ ಜಾಗ್ರತೆವಹಿಸಿ.
ರೋಗಿಗೆ ನಿಫಾ ವೈರಸ್ ಬಂದಿದೆ ಎಂದು ಹೇಗೆ ಕಂಡು ಹಿಡಿಯುವುದು?
ಈ ನಿಫಾ ವೈರಸ್ ಅನ್ನು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿದಾಗ ತಿಳಿದು ಬರುವುದು.
ಏಕೆ ಈ ಕಾಯಿಲೆ ಭಯಾನಕ?
ಈ ವೈರಸ್ ತಡೆಗಟ್ಟಲು ನಿರ್ದಿಷ್ಟ ಔಷಧವಿಲ್ಲ, ರೋಗ ಲಕ್ಷನ ನೋಡಿ ಚಿಕಿತ್ಸೆ ನೀಡಲಾಗುವುದು.
ಐಸೋಲೇಷನ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


