Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕೇರಳದಲ್ಲಿ ನಿಫಾ ವೈರಸ್‌ಗೆ 2 ಬಲಿ: ಈ ಅಪಾಯಕಾರಿ ರೋಗ ತಡೆಗಟ್ಟಲು ಈ ಮುನ್ನೆಚ್ಚರಿಕೆವಹಿಸಿ
ಕೇರಳದಲ್ಲಿ ಮತ್ತೆ ನಿಫಾ ವೈರಸ್ ಕಾಣಿಸಿಕೊಂಡಿದ್ದು ಈಗಾಗಲೇ ಇಬ್ಬರು ಈ ವೈರಸ್‌ಗೆ ಬಲಿಯಾಗಿದೆ, ಇನ್ನಿಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕೇರಳದ ಕೋಝಿಕೋಡ್(ಕೊಯಿಕ್ಕೋಡು)ನಲ್ಲಿ ಈ ನಿಫಾ ವೈರಸ್ ಪತ್ತೆಯಾಗಿರುವುದರಿಂದ ಅಕ್ಕ-ಪಕ್ಕದ ಜಿಲ್ಲೆಗಳ ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದೆ. ಇನ್ನು ಕೇರಳ ನಮ್ಮ ಸಮೀಪದ ರಾಜ್ಯವಾಗಿರುವ ಕಾರಣ ಕರ್ನಾಟಕ ಕೂಡ ಈ ಕುರಿತು ಎಚ್ಚರವಹಿಸಬೇಕಾಗಿದೆ. ಕೇರಳದ ಗಡಿಯ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕುರಿತು ಎಚ್ಚರವಹಿಸಲಾಗಿದೆ.
ಈ ನಿಫಾ ವೈರಸ್ ಲಕ್ಷಣಗಳೇನು, ಇದು ಹೇಗೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ, ಇದನ್ನು ತಡೆಗಟ್ಟಲು ಯಾವೆಲ್ಲಾ ಮುನ್ನೆಚ್ಚರಿಕೆವಹಿಸಬೇಕು ಎಂದು ನೋಡೋಣ:

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನಿಫಾ ವೈರಸ್ ಎಂಬುವುದು ಜೂನೋಟಿಕ್ ಕಾಯಿಲೆಯಾಗಿದೆ. ಅಂದರೆ ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ವೈರಲ್ ಸೋಂಕು ಬಾವಲಿ, ಹಂದಿ, ನಾಯಿ, ಕುದುರೆಗಳಿಂದ ಮನುಷ್ಯರಿಗೆ ಹರಡುತ್ತದೆ. ವಿಶ್ವದಲ್ಲಿ ಈ ವೈರಸ್ ಮೊಟ್ಟ ಮೊದಲಿಗೆ ಪತ್ತೆಯಾಗಿದ್ದು ಮಲೇಷ್ಯಾದಲ್ಲಿ.
ನಿಫಾ ವೈರಸ್ ಲಕ್ಷಣಗಳೇನು?
ನಿಫಾ ವೈರಸ್ ಮೊದಲಿಗೆ ಜ್ವರದ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ, ನಂತರ ನಿಧಾನಕ್ಕೆ ಪರಿಸ್ಥಿತಿ ಗಂಭೀರವಾಗುವುದು. ಈ ವೈರಸ್ ತಗುಲಿದಾಗ ಕಂಡು ಬರುವ ಲಕ್ಷಣಗಳೆಂದರೆ
* ಜ್ವರ
* ತಲೆನೋವು
* ಉಸಿರಾಟದಲ್ಲಿ ತೊಂದರೆ
* ಕೆಮ್ಮು
ಗಂಟಲು ಕೆರೆತ
* ವಾಂತಿ, ಮೈಕೈ ನೋವು
* ನಿಶ್ಯಕ್ತಿ
* ಮೂರ್ಛೆರೋಗ ಕಂಡು ಬರುವುದು
ನಿಫಾ ವೈರಸ್ ಹೇಗೆ ಹರಡುತ್ತದೆ
* ನಿಫಾ ವೈರಸ್ ತಗುಲಿದ ಪ್ರಾಣಿಗಳು ಕಚ್ಚಿದ ಆಹಾರ ಸೇವಿಸಿದಾಗ
* ನಿಫಾ ವೈರಸ್ ತಗುಲಿದ ಪ್ರಾಣಿಗಳ ಆರೈಕೆ ಮಾಡಿದಾಗ
ಇದು ಮನುಷ್ಯರಿಗೆ ಹರಡುತ್ತದೆ.
ಆದ್ದರಿಂದ ಬಾವಲಿಗಳು ಕಚ್ಚಿದ ಹಣ್ಣುಗಳನ್ನು, ತರಕಾರಿಗಳನ್ನು ಬಳಸಬೇಡಿ.
* ಮನೆಯ ಸಾಕುಪ್ರಾಣಿಗಳಿಗೆ ಅನಾರೋಗ್ಯವಿದ್ದರೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಅದರ ಆರೈಕೆ ಮಾಡಿ.
ನಿಫಾ ವೈರಸ್ ತಡೆಗಟ್ಟುವುದು ಹೇಗೆ?
* ಕೈಗಳನ್ನು ಆಗಾಗ ಸೋಪು ಹಾಕಿ ತೊಳೆಯಿರಿ
*ಹುಷಾರಿಲ್ಲದಿರುವ ಪ್ರಾಣಿಯನ್ನು ಕೈಯಿಂದ ಮುಟ್ಟಬೇಡಿ.
* ಬಾವಲಿ ಮನೆಯ ಸುತ್ತ-ಮುತ್ತ ಇರದಂತೆ ಜಾಗ್ರತೆವಹಿಸಿ
* ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನಬೇಡಿ
* ಸೋಂಕು ತಗುಲಿದ ವ್ಯಕ್ತಿಯ ಎಂಜಲು, ರಕ್ತ ಅಥವಾ ದೇಹದ ಯಾವುದೇ ದ್ರವಾಂಶ ತಾಗದಂತೆ ಎಚ್ಚರವಹಿಸಿ.
2018 ಹಾಗೂ 2021ರಲ್ಲಿ ಕೇರಳದಲ್ಲಿ ನಿಫಾ ವೈರಸ್ ಕಂಡು ಬಂದಿತ್ತು. ಮೊದಲು ನಿಫಾವೈರಸ್ ಪತ್ತೆಯಾದಾಗ 23 ಕೇಸ್‌ನಲ್ಲಿ 17 ಜನರು ಸಾವನ್ನಪ್ಪಿದರು.
ನಿಫಾ ವೈರಸ್ ಪತ್ತೆಯಾಗಿರುವುದರಿಂದ ಕೇರಳದಲ್ಲಿ ಈ ಮುನ್ನೆಚ್ಚರಿಕೆವಹಿಸಲಾಗಿದೆ ನೋಡಿ:
* ಕೊಯಿಕ್ಕೋಡ್‌ನಲ್ಲಿ ನಿಫಾ ವೈರಸ್ ಪತ್ತೆಯಾಗಿರುವುದರಿಂದ ಕಣ್ಣೂರ್, ವಯನಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ.
* ಶಾಲಾ-ಕಾಲೇಜು ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಪ್ರಾರಂಭ ಮಾಡಿದ್ದಾರೆ
* 43 ಗ್ರಾಮ ಪಂಚಾಯಿತಿ ವಾರ್ಡ್‌ಗಳಲ್ಲಿ ಎಕ್ಸಿಟ್, ಎಂಟ್ರಿ ನಿರ್ಬಂಧಿಸಲಾಗಿದೆ.
* ಅಂಗಡಿಗಳಿಗೆ ಕೆಲಸ ಮಾಡುವ ಅವಧಿಯನ್ನು ಬೆಳಗ್ಗೆ 7ರಿಂದ 5ರವರೆಗೆ ಮಾತ್ರ ಕೆಲಸದ ಅವಧಿ ನೀಡಲಾಗಿದೆ. ಮೆಡಿಕಲ್ ಮಾತ್ರ ದಿನವಿಡೀ ಓಪನ್ ಇರುತ್ತದೆ.
* ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೈಸರ್ ಬಳಸಿ, ಮುಖಕ್ಕೆ ಮಾಸ್ಕ್ ಧರಿಸಿ.
* ವೈರಸ್ ಪತ್ತೆಯಾಗಿರುವ ಕಡೆ ನ್ಯಾಷನಲ್ ಹೈವೇ ಚಲಾಯಿಸುತ್ತಿರುವ ಗಾಡಿಗಳು ನಿಲ್ಲಿಸಲು ಪರ್ಮಿಷನ್ ನೀಡುತ್ತಿಲ್ಲ, ಈ ರೂಟ್‌ನಲ್ಲಿ ಬಸ್‌ಗಳು ಕೂಡ ನಿಲ್ಲಿಸುತ್ತಿಲ್ಲ.
* ಸರ್ಕಾರಿ ಕಚೇರಿಗಳಿಗೆ, ಖಾಸಗಿ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಆಸ್ಪತ್ರೆ ಹಾಗೂ ನಿಫಾ ವೈರಸ್ ತಡೆಗಟ್ಟಲು ಪ್ರಯತ್ನಿಸುತ್ತಿರುವ ಸರ್ಕಾರಿ ಆಫೀಸ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
