Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ರಾತ್ರಿ 10 ಗಂಟೆಯ ನಂತರ ಈ ಸೂಚನೆ ಸಿಕ್ಕರೆ ಅದು ಸ್ಟ್ರೋಕ್ ಇರಬಹುದು..! ಹುಷಾರಾಗಿರಿ..!!
ಇತ್ತೀಚಿಗೆ ಒತ್ತಡದ ಜೀವನ, ಒಂದೊಂದು ದಿನವು ಒಂದೊಂದು ಹೊಸ ಸಮಸ್ಯೆಗಳು, ಅನಾರೋಗ್ಯ ಹೀಗೆ ಒಂದಲ್ಲಾ ಒಂದು ಸಮಸ್ಯೆ ಕಾಡುವುದು ನೋಡಬಹುದು. ನಮ್ಮ ಆಹಾರ ಕ್ರಮ ದೇಹದ ಮೇಲೆ ನಮಗೇ ನಿಯಂತ್ರಣ ಇಲ್ಲದಂತಾಗಿದೆ. ಅಂದ್ರೆ ನಮ್ಮ ದೇಹ ಯಾವಾಗ ನಮ್ಮ ಆದೇಶ ಮೀರುತ್ತದೆ ಎಂಬುದೇ ತಿಳಿಯುವುದಿಲ್ಲ. ಅದ್ರಲ್ಲೂ ಚಿಕ್ಕ ವಯಸ್ಸಿನಲ್ಲೇ ಗಂಭೀರ ಸ್ವರೂಪದ ಅನಾರೋಗ್ಯ ಕಾಡುವುದು ನೋಡಬಹುದು.
ಅದರಲ್ಲೂ ಇತ್ತೀಚಿಗೆ ಯುವ ಸಮುದಾಯದವರಲ್ಲಿ ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್‌ನಂತಹ ಸಮಸ್ಯೆಗಳು ಎದುರಾಗುತ್ತಿರುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಹತ್ತು ಹಲವು ರೀತಿಯ ಕಾರಣಗಳು ಸಹ ನಾವು ನೋಡಬಹುದು. ಆದ್ರೆ ಸ್ಟ್ರೋಕ್ ಸಮಸ್ಯೆ ಈಗ ಹೆಚ್ಚಾಗುತ್ತಿರುವುದು ಕೂಡ ಆತಂಕ ಹೆಚ್ಚಲು ಕಾರಣವಾಗಿದೆ.

ಪಾರ್ಶ್ವವಾಯು ಹಿಂದೆಲ್ಲಾ ಹಿರಿಯರಿಗೆ ಕಾಡುವ ಕಾಯಿಲೆ ಎಂಬ ನಂಬಿಕೆ ಇತ್ತು, ಆದರೆ ಈಗ ಚಿಕ್ಕ ವಯಸ್ಸಿನಲ್ಲೂ ಕಾಡುತ್ತಿರುವುದು ಹೊಸ ಆತಂಕ ಹೆಚ್ಚಲು ಕಾರಣವಾಗುತ್ತಿದೆ. ನಮ್ಮ ಮೆದುಳಿಗೆ ರಕ್ತ ಸಂಚಾರದಲ್ಲಿ ವ್ಯತ್ಯಯವಾದಾಗ ಸ್ಟ್ರೋಕ್ ಸಂಭವಿಸುತ್ತದೆ ಎಂಬುದನ್ನು ತಿಳಿದಿದ್ದೇವೆ. ಮೆದುಳಿಗೆ ರಕ್ತ ಸಂಚಾರ ಕಡಿತವಾಗಲು ಹಲವು ಕಾರಣಗಳಿವೆ ಎಂಬುದು ಕೂಡ ಸಾಬೀತಾಗಿದೆ.
ಮುಖ್ಯವಾಗಿ ಮೆದುಳಿಗೆ ರಕ್ತ ಸಂಚಾರಕ್ಕೆ ಕಾರಣವಾಗುವ ರಕ್ತನಾಳವು ವೀಕ್ ಆಗಿರುವುದು. ಕೊಲೆಸ್ಟ್ರಾಲ್ ಹೆಚ್ಚಾಗುವುದು ಪ್ರಮುಖ ಕಾರಣ ಎಂದು ತಿಳಿದಿದೆ. ಆದ್ರೆ ಸ್ಟ್ರೋಕ್ ಬರುವ ಮುನ್ನ ನಮ್ಮ ದೇಹ ಹಲವು ರೀತಿಯ ಸೂಚನೆಗಳನ್ನು ನೀಡುತ್ತದೆ. ಆದ್ರೆ ನಮಗೆ ಈ ಸೂಚನೆಗಳು ತಿಳಿಯದೆ ಇದ್ದರೆ ದೊಡ್ಡ ಅಪಾಯ ಕಾದಿರುವುದು ಖಚಿತ.
ಅದರಲ್ಲೂ ರಾತ್ರಿ ಮಲಗಿದ ಬಳಿಕ ಈ ರೀತಿಯ ಸೂಚನೆಗಳನ್ನು ನಿಮ್ಮ ದೇಹ ನೀಡುತ್ತಿದೆ ಎಂದಾದರೆ ಕಂಡಿತ ಅದನ್ನು ನಿರ್ಲಕ್ಷಿಸಬೇಡಿ. ಈ ಸ್ಟ್ರೋಕ್ ಪ್ರಕರಣಗಳಲ್ಲಿ ನೀವು ರಾತ್ರಿ ಮಲಗಿದ್ದಾಗಲೇ ಸ್ಟ್ರೋಕ್‌ಗೆ ಒಳಗಾಗುವುದನ್ನು ನೋಡಿದ್ದೇವೆ. ಹಾಗಾದ್ರೆ ರಾತ್ರಿ 10 ಗಂಟೆಯ ಬಳಿಕ ನಿಮ್ಮ ದೇಹದಲ್ಲಿ ಯಾವ ಬದಲಾವಣೆಗಳು ಪಾರ್ಶ್ವವಾಯುವಿನ ಸೂಚನೆ ನೀಡುತ್ತವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮರಗಟ್ಟುವಿಕೆ
ಪಾರ್ಶ್ವವಾಯುವಿನ ಮೊದಲ ಲಕ್ಷಣವೆಂದರೆ ದೇಹದ ಒಂದು ಭಾಗದಲ್ಲಿ ಹಠಾತ್ ಆಗಿ ಮರುಗಟ್ಟುವಿಕೆ ಅಥವಾ ದೌರ್ಬಲ್ಯ ಕಾಣಿಸಿಕೊಳ್ಳುವುದು ಉಂಟಾಗಬಹುದು. ಈ ರೀತಿಯ ಸೂಚನೆಯನ್ನ ನಿರ್ಲಕ್ಷ್ಯ ಮಾಡಬೇಡಿ.
ಮಾತನಾಡಲು ಸಮಸ್ಯೆ
ರಾತ್ರಿಯ ಸಮಯದಲ್ಲಿ ಮಲಗಿದ ನಂತರ ಎಚ್ಚರವಾದಾಗ ಮಾಡತನಾಡಲು ಕಷ್ಟಪಡುತ್ತಿದ್ದರೆ ಅಥವಾ ಮಾತನಾಡುವಾಗ ತೊದಲುತ್ತಿದ್ದರೆ ಇದು ಕೂಡ ಸ್ಟ್ರೋಕ್‌ನ ಸೂಚನೆಯಾಗಿರಬಹುದು. ಅಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಉತ್ತಮ.
ದೃಷ್ಟಿ ಸಮಸ್ಯೆ
ರಾತ್ರಿ ಸಮಯದಲ್ಲಿ ದೃಷ್ಟಿ ಸಮಸ್ಯೆ ಎದುರಾಗುವುದು ಕೂಡ ಪಾರ್ಶ್ವವಾಯುವಿನ ಸೂಚನೆಯಾಗಿರಬಹುದು. ದೃಷ್ಟಿ ಮಸುಕಾಗುವುದು, ಒಂದೇ ವಸ್ತು ಎರಡು ಮೂರು ರೀತಿ ಕಾಣಿಸುವುದು. ಇದು ರಾತ್ರಿ ಹೊತ್ತು ಹೆಚ್ಚಾದರೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.
ಅತೀಯಾದ ತಲೆನೋವು
ರಾತ್ರಿ ವೇಳೆ ಕಾರಣವೇ ಇಲ್ಲದೆ ಹಠಾತ್ ಆಗಿ ತಲೆನೋವು ಕಾಣಿಸಿಕೊಳ್ಳುವುದು. ಅಂದ್ರೆ ಸ್ಟ್ರೋಕ್‌ಗೆ ಕಾರಣವಾಗುವಂತ ತಲೆನೋವು ಸ್ವಲ್ಪ ಭಿನ್ನವಾಗಿರುತ್ತದೆ. ತಲೆ ಸಿಡಿಯುವಂತೆ ನೋವು ಕಾಣಿಸುವುದು, ಗಾಢ ನಿದ್ರೆಯಲ್ಲೂ ತಲೆ ನೋವು ವಿಪರೀತವಾಗುವುದು. ನರಳುವಂತೆ ಮಾಡುವ ತಲೆ ನೋವು ಅನುಭವಿಸಿದರೆ ತಕ್ಷಣ ವೈದ್ಯರ ಭೇಟಿಯಾಗುವುದು ಉತ್ತಮ.
ತಲೆತಿರುಗುವಿಕೆ
ಹಠಾತ್ ತಲೆತಿರುಗುವಿಕೆ ಪಾರ್ಶ್ವವಾಯುವಿನ ಮುನ್ಸೂಚನೆಯಾಗಿರಬಹುದು. ನೀವು ಸಹ ರಾತ್ರಿಯಲ್ಲಿ ಈ ರೋಗಲಕ್ಷಣಗಳನ್ನು ಅನುಭವಿಸಿದರೆ, ತಡಮಾಡದೆ ವೈದ್ಯಕೀಯ ಸಹಾಯವನ್ನು ಪಡೆದುಕೊಳ್ಳಿ. ಇದು ಹಲವರಲ್ಲಿ ಬೇರೆ ಬೇರೆ ಕಾರಣಕ್ಕೆ ಕಾಣಿಸಿಕೊಳ್ಳಬಹುದು. ಆದರೆ ಎಚ್ಚರಿಕೆ ವಹಿಸುವುದು ಉತ್ತಮ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಈ ಮಾಹಿತಿಯನ್ನು ಅನುಸರಿಸುವ ಮುನ್ನ ಅಥವಾ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
