ರಾತ್ರಿ ಸಮಯದಲ್ಲಿ ಮಕ್ಕಳ ಮೂಗು ಕಟ್ಟುವಿಕೆ ಸಮಸ್ಯೆ ಇದ್ಯಾ? ಮಕ್ಕಳ ವೈದ್ಯರು ಹೇಳೋದೇನು?

ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಬಹುಬೇಗ ಹದಗೆಡುತ್ತದೆ. ಇದರಿಂದಾಗಿ ಮಕ್ಕಳು ಆಗಾಗ ಕಾಯಿಲೆ ಬೀಳುವುದು ನಡೆಯುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ಕೆಮ್ಮು, ಶೀತದಂತಹ ಸಣ್ಣ ಪುಟ್ಟ ಸಮಸ್ಯೆಗೆ ಪದೇ ಪದೇ ಅವರು ಒಳಗಾಗುತ್ತಾರೆ. ನೀವು ಅವರ ಮೇಲೆ ಎಷ್ಟೇ ಗಮನವಿಟ್ಟರೂ ಕೂಡ ಈ ರೀತಿ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯಲು ಸಾಧ್ಯವಿಲ್ಲ.

ಮಕ್ಕಳು ಶೀತ ಗಾಳಿಯ ಕಾರಣದಿಂದಾಗಿ ರಾತ್ರಿ ವೇಳೆ ಶೀತ, ಕೆಮ್ಮಿನಂತಹ ಸಮಸ್ಯೆಗೆ ಒಳಗಾಗುವುದು ನೋಡಬಹುದು. ಹಾಗೆ ಮಲಗಿದಾಗ ಅವರ ಮೂಗು ಕಟ್ಟುವ ಸಮಸ್ಯೆ ಕೂಡ ನಾವು ನೋಡಬಹುದು. ಮಕ್ಕಳು ಮಲಗಿದ ನಂತರ ಅವರಲ್ಲಿ ಮೂಗು ಕಟ್ಟುವಿಕೆ ಸಮಸ್ಯೆ ಕೂಡ ನಾವು ನೋಡಬಹುದು. ಈ ಸಮಸ್ಯೆ ಮಕ್ಕಳಲ್ಲಿ ಮಾತ್ರವಲ್ಲ ವಯಸ್ಕರಲ್ಲೂ ಕೂಡ ನೋಡಬಹುದು.

Nighttime Nasal Congestion in Kids What Pediatricians Want You to Know

ಹಗಲಿನಲ್ಲಿ ಈ ರೀತಿ ಸಮಸ್ಯೆ ಇರದಿದ್ದರೂ ರಾತ್ರಿ ಸಮಯದಲ್ಲಿ ಅವರಲ್ಲಿ ಮೂಗು ಕಟ್ಟುವಿಕೆಯ ಸಮಸ್ಯೆ ಹೆಚ್ಚಾಗುವುದು ಕಂಡುಬರುತ್ತದೆ. ಪ್ರತಿ ದಿನ ಮಲಗುವ ಮುನ್ನ ಔಷಧಿ ನೀಡಿದರೂ ಕೂಡ ಇಡೀ ರಾತ್ರಿ ಈ ಸಮಯದಲ್ಲಿ ಈ ಸಮಸ್ಯೆಗೆ ಒಳಗಾಗುವುದು ನೋಡಬಹುದು. ಹಾಗೆ ಇದರಿಂದ ಅವರು ನಿದ್ರೆ ಗೆಡುವುದು ಸೇರಿ ಹಲವು ರೀತಿಯ ಸಮಸ್ಯೆಗೆ ಒಳಗಾಗುತ್ತಾರೆ. ಇದು ಅವರ ಬೆಳವಣಿಗೆಯ ಮೇಲೆಯೂ ಕೂಡ ಪರಿಣಾಮ ಬೀರುವುದು ನಾವು ನೋಡಬಹುದು.

ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು? ವೈದ್ಯರ ಬಳಿಕ ಹೋಗುವ ಮುನ್ನ ನಾವು ಮಾಡಬೇಕಾದ ಪರಿಹಾರ ಕಾರ್ಯವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಮೊದಲು ನಿಮ್ಮ ಮಗು ಈ ಸಮಸ್ಯೆಗೆ ಒಳಗಾಗಲು ಕಾರಣವೇನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳಬೇಕಿದೆ. ಮಗುವಿಗೆ ರಾತ್ರಿ ಸಮಯದಲ್ಲಿ ಮೂಗು ಕಟ್ಟಿಕೊಳ್ಳಲು ಹಲವು ಕಾರಣಗಳಿವೆ. ಇದಕ್ಕೆ ಬ್ಯಾಕ್ಟೀರಿಯಲ್ ಇನ್ಸ್ಫೆಕ್ಷನ್, ಅಲರ್ಜಿಗಳು ಕೂಡ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ಹಾಗಾದ್ರೆ ಮಕ್ಕಳಲ್ಲಿ ರಾತ್ರಿ ವೇಳೆ ಮೂಗು ಕಟ್ಟುವುದರಿಂದ ಪಾರಾಗಲು ಏನು ಮಾಡಬೇಕು ಎಂಬುದನ್ನು ಮಕ್ಕಳ ವೈದ್ಯರಾದ ಡಾ.ಕಿರಣ್ ಕುಮಾರ್ ಈ ರೀತಿ ವಿವರಿಸಿದ್ದಾರೆ.

1 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೆಮ್ಮು ಅಥವಾ ರಾತ್ರಿ ಸಮಯದಲ್ಲಿ ಮೂಗು ಕಟ್ಟುವಿಕೆ ಸಮಸ್ಯೆಗೆ ಜೇನು ತುಪ್ಪ ಪರಿಹಾರವಾಗಿ ನೀಡಬಹುದು. ಇದು ಹೆಚ್ಚಾಗಿ ನೀಡಬಾರದು. ಹಾಗೆ ಸಲ್ಯೆನ್ ಸ್ಪೇಗಳು ಮಕ್ಕಳಿಗಾಗಿಯೇ ಮಾಡಲಾಗಿರುತ್ತದೆ ಇದನ್ನು ಕೂಡ ಬಳಸಬಹುದು. ಇವುಗಳಲ್ಲಿ ಹಲವು ಮಕ್ಕಳ ಸ್ನೇಹಿ ಉತ್ಪನ್ನವಾಗಿರಲಿದೆ.

4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರೆ ಅವರಿಗೆ ಯಾವುದೇ ಶೀತ ವಿರೋಧಿ ಔಷಧಿಗಳನ್ನು ನೀಡಬಾರದು. ಏಕೆಂದರೆ ಅವು ಚಿಕ್ಕ ಮಕ್ಕಳ ಅರೋಗ್ಯಕ್ಕೆ ಉತ್ತಮವಲ್ಲ. ಆದಾಗ್ಯೂ ಶಿಶುಗಳು ಮತ್ತು ಮಕ್ಕಳಿಗಾಗಿ ಅಸೆಟಾಮಿನೋಫೆನ್ ಎಂಬ ಔಷಧಿ ನೀಡಬಹುದು ಎಂದು ಅವರು ಹೇಳಿದ್ದಾರೆ. ಹಾಗೆ 4ರಿಂದ 6 ವರ್ಷದ ಮಕ್ಕಳಿಗೆ ಈ ಔಷಧಿಯನ್ನು ಬಳಸಬಹುದು.

ಆದ್ರೆ 18 ವರ್ಷದೊಳಗಿನವರಿಗೆ ಆಸ್ಟಿರಿನ್ ನೀಡಬಾರದು. ಇದು ರೇಯೆ ಸಿಂಡ್ರೋಮ್ ಎಂಬ ಸಮಸ್ಯೆಗೆ ಕಾರಣವಾಗಬಹುದು. ಹಾಗೆ ಮಕ್ಕಳು ಪದೇ ಪದೇ ಇಂತಹ ಶೀತ, ಮೂಗು ಸೋರುವುದು, ಕೆಮ್ಮಿನಂತ ಸಮ್ಯೆಗೆ ಒಳಗಾದರೆ ಅವರಲ್ಲಿ ಬ್ಯಾಕ್ಟೀರಿಯನ್ ಸೋಂಕು ಉಂಟಾಗಿರಬಹುದು, ಇದನ್ನು ಸೂಕ್ತ ವೈದ್ಯರ ಬಳಿ ತೋರಿಸುವುದು ಅದರಲ್ಲೂ ತಡಮಾಡದೆ ತೋರಿಸುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ಕೆಲವರು ಈ ಶೀತ, ಕೆಮ್ಮು, ಮೂಗು ಕಟ್ಟುವ ಸಮಸ್ಯೆಗಳಿಗೆ ಮನೆಮದ್ದು ಮಾಡುತ್ತಾರೆ, ಈ ರೀತಿಯ ಮನೆಮದ್ದುಗಳು ಕೆಲವೊಮ್ಮೆ ಕೆಲಸ ಮಾಡಬಹುದು. ಆದ್ರೆ ಚಿಕ್ಕ ಮಕ್ಕಳಿಗೆ ಮನೆಮದ್ದು ಮಾಡುವುದಕ್ಕಿಂತಲೂ ವೈದ್ಯರ ಬಳಿ ತೆರಳುವುದು ಸೂಕ್ತ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Nighttime Nasal Congestion in Kids: What Pediatricians Want You to Know

Even if they are given medicine before going to bed every day, they can still experience this problem throughout the night. This causes them to suffer from many problems including sleep deprivation. We can see that this also affects their development.
Story first published: Sunday, January 26, 2025, 10:02 [IST]
X
Desktop Bottom Promotion