Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೈಟ್ ಶಿಫ್ಟ್ ಕೆಲಸ ಬಂಜೆತನಕ್ಕೆ ದಾರಿ.! ಕಾಡಲಿವೆ ಅನೇಕ ಸಮಸ್ಯೆ
ಇತ್ತೀಚಿಗೆ ನೈಟ್ ಶಿಫ್ಟ್ ಕೆಲಸ ಅನ್ನೋದು ಕಾಮನ್ ಆಗಿದೆ. ಎಲ್ಲಾ ಕಂಪನಿಗಳಲ್ಲು ನೈಟ್ ಶಿಫ್ಟ್ ಅನ್ನೋದು ಇದ್ದೇ ಇರುತ್ತೆ. ಹಾಗೆ ಐಟಿ ಕಂಪನಿಗಳಲ್ಲು ಕೂಡ ನೈಟ್ ಶಿಫ್ಟ್ ಇರುತ್ತೆ. ಇದಕ್ಕೆ ಮಹಿಳಾ ಸಿಬ್ಬಂದಿ ಹಾಗೂ ಪುರುಷ ಸಿಬ್ಬಂದಿಯೂ ಈ ಶಿಫ್ಟ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಕೆಲವರಿಗೆ ವರ್ಷವೆಲ್ಲಾ ನೈಟ್ ಶಿಫ್ಟ್‌ನ ಕೆಲಸವಿರುತ್ತೆ. ಮತ್ತೆ ಕೆಲವರಿಗೆ ಆಗಾಗ ಮಾತ್ರ ನೈಟ್ ಶಿಫ್ಟ್ ಕೆಲಸ ಇರೋದು ನೋಡಬಹುದು.
ಆದ್ರೆ ನೈಟ್ ಶಿಫ್ಟ್ ಅನ್ನೋದು ಉದ್ಯೋಗಿಗಳ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಅನ್ನೋದು ಬಹಳ ಗಂಭೀರ ವಿಚಾರವಾಗಿದೆ. ಏಕೆಂದರೆ ನೈಟ್ ಶಿಫ್ಟ್ ಅನ್ನೋದು ಉದ್ಯೋಗಿಗಳ ಪಾಲಿನ ಕಹಿ ದಿನಗಳಾಗಿರುತ್ತವೆ. ನಿದ್ರೆ ಬಿಡುವುದು ಒಂದು ಕಡೆಯಾದರೆ ಕಣ್ಣ ಮುಂದಿರುವ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಸ್ಕ್ರೀನಿಂಗ್ ಟೈಮ್ ಅನಾರೋಗ್ಯ ದುಪ್ಪಟ್ಟು ಮಾಡುವ ಸಾಧನಗಳಾಗಿ ಬದಲಾಗಿರುತ್ತವೆ.

ರಾತ್ರಿ ಪಾಳಿ ಕೇಲಸ ಮಾಡುವವರಲ್ಲಿ ಹೆಚ್ಚಾಗಿ ತೂಕ ಹೆಚ್ಚಳವಾಗುವುದು, ನಿದ್ರಾಹೀನತೆ, ಒತ್ತಡ, ದೃಷ್ಟಿ ಸಮಸ್ಯೆ ಸೇರಿದಂತೆ ಬಂಜೆತನದಂತಹ ಸಮಸ್ಯೆಗಳಿಗೂ ಒಳಗಾಗುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ರಾತ್ರಿ ಪಾಳಿ ಕೆಲಸ ಮಾಡುವ ಪುರುಷರು ಹಾಗೂ ಮಹಿಳೆಯರಲ್ಲಿ ಬಂಜೆತನದ ಪ್ರಮಾಣ ಏರಿಕೆಯಾಗಿರುವುದು ಆತಂಕ ಹುಟ್ಟಿಸುವಂತಿದೆ.
ಮಹಿಳೆಯರಲ್ಲಿ ರಾತ್ರಿ ಪಾಳಿ ಕೆಲಸಗಳ ಮಾಡುವವರಲ್ಲಿ ಖುತು ಸ್ರಾವ, ಗರ್ಭಪಾತದ ಅಪಾಯ ಮತ್ತು ಗರ್ಭಧರಿಸುವುದರ ಅಪಾಯಗಳು ಹೆಚ್ಚುತ್ತಿವೆ ಎನ್ನುವುದು ವೈದ್ಯರ ಮಾತಾಗಿದೆ. ಸಿರ್ಕಾಡಿಯನ್ ಲಯಗಳ ಅಡಚಣೆಯು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ನಿರ್ಣಾಯಕ ಸಂತಾನೋತ್ಪತ್ತಿ ಹಾರ್ಮೋನುಗಳ ಬಿಡುಗಡೆಯ ಮೇಲೆ ಪರಿಣಾಮ ಬೀರುತ್ತದೆ ಇದು ಹಲವು ರೀತಿಯಲ್ಲಿ ಬಂಜೆತನಕ್ಕೆ ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ.
ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕೂರುವ ಭಂಗಿ ಸರಿಯಾಗಿ ಇಲ್ಲದಿರುವುದು ಅಲ್ಲದೆ ಈ ರೀತಿ ಕೂತು ಕೆಲಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ರಾತ್ರಿ ಪಾಳಿ ಕೆಲಸಗಾರರಲ್ಲಿ ಬೆನ್ನು ನೋವಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ. ಅಂದರೆ ರಾತ್ರಿ ಪಾಳಿಯಲ್ಲಿ ನಿದ್ರೆ ತಡೆದು ಕೆಲಸ ಮಾಡಬೇಕಾಗುವುದು ಅತ್ಯಧಿಕ ಒತ್ತಡ ಬೀಳಲು ಕಾರಣವಾಗುತ್ತದೆ. ಹಗಲಿಗಿಂತಲೂ ದೇಹಕ್ಕೆ ಹೆಚ್ಚು ಒತ್ತಡ ಬೀಳುತ್ತದೆ.
ಪುರುಷರಲ್ಲಿ ರಾತ್ರಿ ಪಾಳಿಯ ಕೆಲಸವು ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ, ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟಗಳು ಮತ್ತು ಇತರ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ಆರೋಗ್ಯಕರ ವೀರ್ಯವನ್ನು ಉತ್ಪಾದಿಸುವ ಮಟ್ಟವನ್ನು ಕಾಯ್ದುಕೊಳ್ಳುವ ದೇಹದ ಸಾಮರ್ಥ್ಯ ಕುಂಠಿತವಾಗುತ್ತದೆ. ಇದರಿಂದ ಪುರುಷರಲ್ಲಿ ಬಂಜೆತನದ ಪ್ರಕರಣಗಳು ರಾತ್ರಿ ಪಾಳಿ ಕೆಲಸಗಾರರಾಗಿರುತ್ತಾರೆ.
ಇನ್ನೊಂದು ಕಡೆ ರಾತ್ರಿ ಪಾಳಿಯಲ್ಲಿ ಹೆಚ್ಚಿನ ಹಾರ್ಮೋನ್‌ಗಳ ಬಿಡುಗಡೆಗೆ ಕಾರಣವಾಗುವುದು ದೇಹದ ಅಸಮತೋಲನಕ್ಕೆ ಕಾರಣವಾಗಲಿದೆ. ಇದು ಕೂಡ ಅವರ ಅನಾರೋಗ್ಯಕ್ಕೆ ದಾರಿಯಾಗುತ್ತಿದೆ.
ದೇಹದ ಸಮತೋಲನವೂ ಹಾಳು
ರಾತ್ರಿ ಪಾಳಿ ಕೆಲಸವು ದೇಹದ ಸಮತೋಲನದ ಮೇಲೆ ಹಾನಿ ಉಂಟು ಮಾಡುತ್ತದೆ. ರಾತ್ರಿ ಹೊತ್ತು ನಿದ್ರೆ ಬಿಟ್ಟು ಕೆಲಸ ಮಾಡುವುದು ಒಂದು ಕಡೆಯಾದರೆ ಹಗಲು ನಿದ್ರೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ವೇಳೆ ಹಗಲು ಊಟ-ತಿಂಡಿ ಸೇವನೆಯಲ್ಲಿ ಅಡೆತಡೆಯಾಗಬಹುದು. ಇಲ್ಲವೆ ಹಗಲು ಹೊತ್ತು ನಿದ್ರೆಗೆ ಭಂಗವಾಗುವಂತಹ ಸನ್ನಿವೇಶಗಳು ಹೆಚ್ಚಿರುವುದರಿಂದ ಇದು ದೇಹದಲ್ಲಿ ಅಸಮತೋಲನಕ್ಕೆ ಕಾರಣವಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications