Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
2026ರಲ್ಲಿ ತೂಕ ಇಳಿಸುವ ಗುರಿ ಇಟ್ಟುಕೊಳ್ಳಿ: ಡಯೆಟ್, ಜಮ್ ಏನು ಬೇಡ, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಹೊಸ ವರ್ಷ ಆರಂಭವಾಗುವ ಮುನ್ನ ನೀವು ತೂಕ ಇಳಿಸಿಕೊಳ್ಳುವ ಷಪಥ ಮಾಡುತ್ತಿರಬಹುದು. ಪ್ರತಿ ವರ್ಷ ಒಂದಲ್ಲಾ ಒಂದು ರೀತಿಯ ಗುರಿ ಹೊಂದುವುದು ನೋಡಬಹುದು. ಹಾಗೆ ಈ ವರ್ಷ ಸುಲಭವಾಗಿ ತೂಕವನ್ನು ನಿಯಂತ್ರಿಸುವ ಕುರಿತಾಗಿ ನಾವು ತಿಳಿದುಕೊಳ್ಳೋಣ. ತೂಕ ಇಳಿಸಿಕೊಳ್ಳೋದು ವರ್ಷವಿಡೀ ಮಾಡಬೇಕಾದ ಕೆಲಸ. ನೀವು ವರ್ಷದ ಆರಂಭದಲ್ಲಿ ಮಾತ್ರ ತೂಕ ಇಳಿಸುವ ಕುರಿತು ಹೆಚ್ಚು ಗಮನವಿಟ್ಟು ಅನಂತರ ಆಸಕ್ತಿ ಕಳೆದುಕೊಳ್ಳಬಹುದು.
ಆದ್ರೆ ನಾವಿಂದು ನೀವು ಡಯೆಟ್ ಇಲ್ಲದೆಯೇ ಸುಲಭವಾಗಿ ಮನೆಯಲ್ಲಿ ಕೆಲವು ಟಿಪ್ಸ್‌ಗಳ ಫಾಲೋ ಮಾಡಿದ್ರೆ ಸಾಕು ತೂಕ ನಿಯಂತ್ರಣದಲ್ಲಿಡಬಹುದು. ಅದ್ರಲ್ಲು ಕೇವಲ ಆಹಾರವೊಂದೇ ನಮ್ಮ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗಿರುವುದಿಲ್ಲ. ಅದು ನಿದ್ರೆ, ನಮ್ಮ ಜೀವನ ಶೈಲಿ, ರಕ್ತದೊತ್ತಡ, ಜಂಕ್ ಫುಡ್, ಕೆಲಸದ ಶೈಲಿ ಸೇರಿ ಹಲವು ಬಾಹ್ಯ ಮತ್ತು ಆಂತರಿಕೆ ಅಂಶಗಳು ತೂಕ ಹೆಚ್ಚಳದ ಕಾರಣವಾಗುತ್ತವೆ.

ಹಾಗಾದ್ರೆ ಈ ಹೊಸ ವರ್ಷದಲ್ಲಿ ತೂಕ ಇಳಿಸಲು ಯಾವೆಲ್ಲಾ ಟಿಪ್ಸ್ ಫಾಲೋ ಮಾಡೋಣ. ಇದರಿಂದ ಇಡೀ ವರ್ಷ ನೀವು ಆರೋಗ್ಯಯುತ ರೀತಿಯಲ್ಲಿ ತೂಕ ಇಳಿಸಿಕೊಳ್ಳಬಹುದು. ಹಾಗೆ ಇದು ಆರೋಗ್ಯಕರ ವಿಧಾನವೂ ಹೌದು. ನೀವು ಜಿಮ್ ಹೋಗದೆ, ಚಿಕಿತ್ಸೆ-ಔಷಧಿ ಇಲ್ಲದೆ ಹಾಗೆ ಡಯೆಟ್ ಏನು ಮಾಡದೆಯೂ ತೂಕ ಇಳಿಸಬಹುದು.
ಸೇವಿಸುವ ಆಹಾರದ ಮೇಲಿರಲಿ ಗಮನ
ತೂಕ ಹೆಚ್ಚಳದ ಪ್ರಮುಖ ಕಾರಣಗಳಲ್ಲಿ ಆಹಾರ ಸೇವನೆ ಸಹ ಒಂದು. ನಮ್ಮ ದೇಹಕ್ಕೆ ನಿತ್ಯ ಎಷ್ಟು ಕ್ಯಾಲೋರಿ ಅಗತ್ಯವಿದೆ ಎಂಬುದು ನಮ್ಮ ವಯಸ್ಸು ಹಾಗೂ ತೂಕದ ಆಧಾರದ ಮೇಲೆ ನಿರ್ಧರಿತವಾಗಿರಲಿದೆ. ನೀವು ಹೆಚ್ಚು ಹೆಚ್ಚು ಕ್ಯಾಲೋರಿಯನ್ನು ಸೇವಿಸುವುದು ತೂಕ ಹೆಚ್ಚಳಕ್ಕೆದಾರಿಯಾಗುತ್ತದೆ. ಹೀಗಾಗಿ ನೀವು ಯಾವುದೇ ಆಹಾರ ಸೇವಿಸುವಾಗ ಅದು ಎಷ್ಟು ಕ್ಯಾಲೋರಿ ಹೊಂದಿದೆ, ಕ್ಯಾಲೋರಿ ಕರಗಿಸಲು ಏನು ಮಾಡಬೇಕು ಎಂಬ ಸಣ್ಣ ನಿಯಮದ ಮೇಲೆ ಗಮನವಿಡಿ. ಈ ರೀತಿ ಶಿಸ್ತು ಬದ್ದವಾದ ಆಹಾರ ಸೇವನೆ ನಿಮ್ಮ ತೂಕ ನಿಯಂತ್ರಣಕ್ಕೆ ಬಹಳ ಅನುಕೂಲವಾಗುತ್ತದೆ. ನೀವು ಕೈಯಲ್ಲಿ ಯಾವುದೇ ಆಹಾರ ಇರಲಿ ಅದರ ಕ್ಯಾಲೋರಿ ಎಷ್ಟು, ನೀವು ಎಷ್ಟು ಸೇವಿಸಬಹುದು ಎಂಬುದು ಇಂಟರ್‌ನೆಟ್ ಸಹಾಯದ ಮೂಲಕ ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ.
ದೈಹಿಕ ಚಟುವಟಿಕೆಗೆ ಒತ್ತು ನೀಡಿ
ನೀವು ನಿತ್ಯವೂ ಕುಳಿತು ಮಾಡುವ ಕೆಲಸದಲ್ಲೇ ಭಾಗಿಯಾಗುವ ಮಂದಿಯಾಗಿದ್ದರೆ ಅಥವಾ ಗೃಹಿಣಿಯಾಗಿದ್ದರೆ ಆದಷ್ಟು ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಿ. ಅದ್ರಲ್ಲು ಮನೆಯ ಹಲವು ಕೆಲಸಗಳು ನಿಮಗೆ ಸಹಾಯಕ್ಕೆ ಬರುತ್ತವೆ. ಬಟ್ಟೆ ತೊಳೆಯುವುದು, ಒರೆಸುವುದುಮ ಗುಡಿಸುವುದು, ಕ್ಲೀನಿಂಗ್, ಗಾರ್ಡನಿಂಗ್ ವಾಕಿಂಗ್, ಹೀಗೆ ಒಂದಿಷ್ಟು ದೈಹಿಕ ಚಟುವಟಿಕೆಯ ಕೆಲಸಗಳಲ್ಲಿ ನಿರಂತರವಾಗಿ ಭಾಗಿಯಾಗುವುದು ಉತ್ತಮ. ಇದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.
ನಿದ್ರೆಯ ಮೇಲೆ ಗಮನವಿಡಿ
ನೀವು ಅನಿಯಂತ್ರಿತ ನಿದ್ರೆ ಅದ್ರಲ್ಲೂ ಕಡಿಮೆ ನಿದ್ರೆ ಹಾಗ ಹೆಚ್ಚು ನಿದ್ರೆ ಮಾಡುವುದು ಕೂಡ ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾಗಿ ನಿತ್ಯ ಸಮಯದಕ್ಕೆ ಸರಿಯಾಗಿ ಮಲಗುವುದು ಹಾಗೆ ಏಳುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿಡುವುದು ಸುಲಭವಾಗಲಿದೆ.
ಹೆಚ್ಚು ನೀರು ಸೇವಿಸುವುದು
ನಿತ್ಯದ ಕೆಲಸದ ನಡುವೆ ಹೆಚ್ಚು ಹೆಚ್ಚು ನೀರು ಕುಡಿಯುವುದು ಹಾಗೆ ಹೆಚ್ಚು ದ್ರವ್ಯಯುಕ್ತ ಆಹಾರ ಸೇವಿಸುವುದು ನಿಮ್ಮ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡಲಿದೆ. ಈ ಟಿಪ್ಸ್‌ಗಳನ್ನು ಎಲ್ಲರು ಬಹಳ ಸುಲಭವಾಗಿ ಫಾಲೋ ಮಾಡಬಹುದು.



Click it and Unblock the Notifications
