Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಭಾರತದಲ್ಲಿ ಹೊಸ ವೈರಸ್ ಪ್ರಕರಣಗಳು ಪತ್ತೆ..! ನೊರೊ ವೈರಸ್ ಬಗ್ಗೆ ನಿಮಗೆ ಗೊತ್ತಾ?
ಇತ್ತೀಚಿಗೆ ಹಲವು ರೀತಿಯ ವೈರಸ್ ಪ್ರಕರಣಗಳು ವರದಿಯಾಗುತ್ತಿವೆ. ಎಲ್ಲಿ ನೋಡಿದ್ರೂ ಜ್ವರ, ಶೀತ, ಡೆಂಗ್ಯೂ, ಕೊರೊನಾ ಹೀಗೆ ವೈರಸ್ ಪೀಡಿತ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೆಲ್ಲದರ ನಡುವೆ ಹೊಸ ವೈರಸ್‌ಗಳು ಹುಟ್ಟಿಕೊಳ್ಳುತ್ತಿವೆ. ಇತ್ತೀಚಿಗೆ ಕಾಣಿಸಿಕೊಂಡ ಚಂಡೀಪುರ ವೈರಸ್‌ನಿಂದ ಹತ್ತಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದನ್ನು ನಾವು ನೋಡಬಹುದು.
ಆದ್ರೆ ಈಗ ಮತ್ತೊಂದು ಹೊಸ ವೈರಸ್ ಹರಡಲು ಆರಂಭಿಸಿದೆ. ನೊರೊ ವೈರಸ್ ಎಂಬ ಹೊಸದೊಂದು ವೈರಸ್ ಅತ್ಯಂತ ವೇಗವಾಗಿ ಹರಡಲು ಆರಂಭಿಸಿದ್ದು, ಆತಂಕ ಹುಟ್ಟಿಸಿದೆ. ಪ್ರತಿದಿನ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಈ ವೈರಸ್‌ನ ಹರಡುವಿಕೆಯ ವೇಗ ಎಷ್ಟರ ಪ್ರಮಾಣದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ನೊರೊ ವೈರಸ್ ಸದ್ಯ ಹೈದರಾಬಾದ್‌ನಲ್ಲಿ ಆತಂಕ ಹುಟ್ಟಿಸಿದೆ. ಓಲ್ಡ್ ಸಿಟಿ, ದಬೀರ್‌ಪುರ್, ಯಾಕುತ್‌ಪುರ್, ಮೊಘಲ್ ಪುರ್ ಸೇರಿ ಕೆಲವೊಂದು ಪ್ರದೇಶದಲ್ಲಿ ವೈರಸ್ ಪ್ರಕರಣ ಹೆಚ್ಚುತ್ತಲೇ ಇದೆ. ಅಚ್ಚರಿ ಎಂದರೆ ಈ ವೈರಸ್ ಮೂಲ ನೀರು ಎಂದು ತಿಳಿದುಬಂದಿದೆ. ಹೀಗಾಗಿ ವೇಗವಾಗಿ ಹರಡಲು ಕಾರಣವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ನೊರೊವೈರಸ್ ಹೆಚ್ಚು ಸಾಂಕ್ರಾಮಿಕ ವೈರಸ್ ಆಗಿದ್ದು ಅದು ಹೊಟ್ಟೆ ಮತ್ತು ಕರುಳಿನ ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಇದು ವಿಶ್ವದಾದ್ಯಂತ ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್‌ಗೆ ಪ್ರಮುಖ ಕಾರಣವಾಗಿದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೇಳಲಾಗಿದೆ. ಹಠಾತ್ ಅತಿಸಾರ ಮತ್ತು ತೀವ್ರವಾದ ವಾಂತಿಗೆ ಈ ವೈರಸ್ ಕಾರಣವಾಗುತ್ತಿದೆ. ಅದ್ರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಹಾಗೂ ವೃದ್ಧರಲ್ಲಿ ಇದು ವೇಗವಾಗಿ ಹರಡುತ್ತಿದೆ. ಹಾಗೆ ಕಡಿಮೆ ಸಮಯದಲ್ಲಿ ಗಂಭೀರ ಸ್ವರೂಪ ತಳೆಯುತ್ತಿದೆ ಎಂದು ವರದಿಯಾಗಿದೆ.
ನೊರೊ ವೈರಸ್‌ನ ಲಕ್ಷಣಗಳೇನು?
ನಾವು ಮೊದಲೇ ಹೇಳಿದಂತೆ ಇದು ನೀರಿನಿಂದ ಹರಡುತ್ತಿದೆ. ಈ ವೈರಸ್ ತಗುಲಿದ 48 ಗಂಟೆಯ ನಂತರ ರೋಗ ಲಕ್ಷಣಗಳು ಕಾಣಿಸಲು ಆರಂಭವಾಗುತ್ತದೆ. ಅಷ್ಟರಾಗಲೇ ಈ ವೈರಸ್ ದೇಹದಲ್ಲಿ ತನ್ನ ಪ್ರಭಾವ ಉಂಟು ಮಾಡಿರುತ್ತದೆ. ಹಾಗೆ ಈ ವೈರಸ್ ಮಾನವರ ದೇಹದಲ್ಲಿ ಸುಮಾರು 1 ವಾರದ ವರೆಗೂ ಇರಬಹುದು. ಇದು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಅವಲಂಭಿತವಾಗಿದೆ.
ವೈರಸ್ ತಗುಲಿದ ವ್ಯಕ್ತಿಯಲ್ಲಿ ತೀವ್ರವಾದ ಅತಿಸಾರ, ವಾಕರಿಕೆ, ತೀವ್ರವಾದ ಮತ್ತು ಆಗಾಗ್ಗೆ ವಾಂತಿ, ನಿರ್ಜಲೀಕರಣ, ಕಿಬ್ಬೊಟ್ಟೆಯ ಸೆಳೆತ, ಶೀತ ಮತ್ತು ಆಯಾಸ ಮತ್ತು ದೇಹದ ನೋವುಗಳ ಜೊತೆಗೆ ತೀವ್ರ ಜ್ವರ ಕಾಣಿಸಿಕೊಳ್ಳಲಿದೆ.
ಈ ವೈರಸ್ ಹರಡುವುದು ಹೇಗೆ?
ನೊರೊ ವೈರಸ್ ಕಳಪೆ ನೈರ್ಮಲ್ಯ ಹೊಂದಿರುವ ಪ್ರದೇಶದಲ್ಲಿ ಹರಡುತ್ತದೆ, ಪ್ರಮುಖವಾಗಿ ಕಲುಷಿತ ನೀರು ಹಾಗೂ ಆಹಾರದಿಂದ ಹರಡುತ್ತದೆ. ಕಾಲರಾದಂತೆಯೇ ಇದರ ಹರಡುವಿಕೆಯನ್ನು ಕಾಣಬಹುದು. ಇದಾಗಿ ಈ ವೈರಸ್ ಹರಡಿರುವ ವ್ಯಕ್ತಿಯ ಸಂಪರ್ಕಕ್ಕೆ ಬರುವುದು, ಸೋಂಕಿತ ವ್ಯಕ್ತಿಗಳಿಂದ ವಸ್ತುಗಳ ಹಂಚಿಕೊಳ್ಳುವುದರಿಂದ ಈ ವೈರಸ್ ಕಾಣಿಸಿಕೊಳ್ಳಲಿದೆ.
ವೈರಸ್ ಹರಡದಂತೆ ಮಾಡುವುದು ಹೇಗೆ?
ಈ ವೈರಸ್ ಹರಡುವ ಮುಖ್ಯ ಕಾರಣಗಳಲ್ಲಿ ಒಂದಾಗಿರುವ ನೈರ್ಮಲ್ಯ ವಿಲ್ಲದ ಜಾಗವನ್ನು ಸುಚಿಯಾಗಿಡುವುದು, ಫಿಲ್ಟರ್ ನೀರು, ಬೇಯಿಸಿದ ಮನೆ ಆಹಾರ ಸೇವನೆ ಮಾಡುವುದು ಉತ್ತಮ. ಸೋಂಕಿತ ವ್ಯಕ್ತಿಯಿಂದ ದೂರ ಕಾಯ್ದುಕೊಳ್ಳುವುದು. ಕುದಿಸಿದ ನೀರು ಕುಡಿಯುವ ಮೂಲಕ ಈ ವೈರಸ್‌ನಿಂದ ಪಾರಾಗಬಹುದು. ತರಕಾರಿ, ಹಣ್ಣುಗಳನ್ನು ಮಾರುಕಟ್ಟೆಯಿಂದ ತಂದ ಬಳಿಕ ಚೆನ್ನಾಗಿ ತೊಳೆದು ಸವಿಯಬೇಕು. ಇನ್ನು ಈ ವೈರಸ್‌ಗೆ ಸಾಮಾನ್ಯವಾಗಿ ಜ್ವರದಂತಹ ಕಾಯಿಲೆಗೆ ನೀಡುವ ಚಿಕಿತ್ಸೆಯನ್ನೇ ಬಳಸಲಾಗುತ್ತಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
