Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇನ್ನು ಮುಂದೆ 40ರ ನಂತರ ಕಾಡುವ ದೃಷ್ಟಿದೋಷಕ್ಕೆ ಕನ್ನಡಕ ಬೇಕಾಗಿಲ್ಲ, ಈ ಐ ಡ್ರಾಪ್ ಸಾಕು, ಅಕ್ಟೋಬರ್‌ನಿಂದಲೇ ಲಭ್ಯ
ವಯಸ್ಸಾಗುತ್ತಿದ್ದಂತೆ ಅಕ್ಷರಗಳು ಸರಿಯಾಗಿ ಕಾಣಿಸಲ್ಲ, ದೂರದ ವಸ್ತುಗಳು ಮಂಜು ಮಂಜಾಗಿ ಕಾಣುವುದು, ಅವಾಗ ಕನ್ನಡಕದ ಸಹಾಯ ಬೇಕಾಗುತ್ತದೆ. ಇನ್ನು ಕೆಲವರಿಗೆ ತುಂಬಾ ಚಿಕ್ಕ ಪ್ರಾಯದಲ್ಲಿಯೇ ದೃಷ್ಟಿ ದೋಷ ಕಂಡು ಬರುವುದು, ಆವಾಗ ಕೂಡ ಕನ್ನಡದ ಅಗ್ಯತವಿರುತ್ತದೆ, ಕನ್ನಡ ಧರಿಸುವುದು ಇಷ್ಟ ಇಲ್ಲದವರಿಗೆ ಲೆನ್ಸ್ ಬಂತು, ಅದರೆ ಲೆನ್ಸ್ ಹಾಕಿದಾಗಲೂ ಅದರದ್ದೇ ಆದ ಕಿರಿಕಿರಿ ಇರುತ್ತದೆ, ಹಾಕಿ ನಿದ್ದೆ ಮಾಡಲು ಸಾಧ್ಯವಿಲ್ಲ, ಇನ್ನು ಕೆಲವರಿಗೆ ಲೆನ್ಸ್ ಹಾಕಿದಾಗ ಅಲರ್ಜಿ ಉಂಟಾಗುವುದು,

ಇದೀಗ ವಯಸ್ಸಾದವರಿಗೆ ಕಣ್ಣಿಗೆ ಹಾಕುವ ಡ್ರಾಪ್ ಬಂದಿದೆ, ಅದನ್ನು ಹಾಕಿದರೆ ಸಾಕು ಕನ್ನಡ ಹಾಗದೆ ಅಕ್ಷರಗಳನ್ನು ಓದಲು ಸಾಧ್ಯವಾಗುವುದು.
ವಯಸ್ಸಾದಂತೆ ಕಾಡುವ ಪ್ರೆಸ್ಬಿಯೋಪಿಯಾ
ಕೆಲವರಲ್ಲಿ ವಯಸ್ಸು ನಲ್ವತ್ತು ಕಳೆಯುತ್ತಿದ್ದಂತೆ ಕಣ್ಣು ದೃಷ್ಟಿ ಮಂಜಾಗುವುದು, ಇನ್ನು ಕೆಲವರಿಗೆ 60ರ ನಂತರ ಈ ದೃಷ್ಟಿದೋಷ ಮಂಜಾಗುವುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ Presbyopia ಎಂದು ಕರೆಯಲಾಗುವುದು. ಇದೀಗ ಈ ಸಮಸ್ಯೆಗೆ ಕಣ್ಣಿನ ಡ್ರಾಪ್ ಔಷಧ ಬಂದಿದ್ದು ಡಿಸಿಜಿಐ(The Drug Controller General of India) ಅನುಮತಿ ನೀಡಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಬಂದ ಐ ಡ್ರಾಪ್
ಈ ಐ ಡ್ರಾಪ್ ಅನ್ನು PresVu ಕಂಡು ಹಿಡಿದಿದ್ದು ಭಾರತದಲ್ಲಿ ದೃಷ್ಟಿ ದೋಷ ನಿವಾರಣೆಗೆ ಕಂಡು ಹಿಡಿಯಲಾದ ಮೊದಲ ಐ ಡ್ರಾಪ್ ಅಗಿದೆ. ಇದನ್ನು ಬಳಸುವುದರಿಂದ ಕನ್ನಡಕ ಅಥವಾ ಲೆನ್ಸ್‌ನ ಅವಶ್ಯಕತೆಯಿರಲ್ಲ. ಅಲ್ಲದೆ ಇದು ಕಣ್ಣಿನಲ್ಲಿನ ತೇವಾಂಶ ಕಾಪಾಡಲು ಸಹಕಾರಿಯಾಗಿದೆ. ಅಲ್ಲದೆ ಕಣ್ಣಿಗೆ ತುಂಬಾನೇ ಕಂಫರ್ಟ್ ಆಗಿದೆ.
ಬಹಳಷ್ಟು ಜನರಿಗೆ ವರದಾನವಾಗಿದೆ ಈ ಡ್ರಾಪ್
ಈ ಐ ಡ್ರಾಪ್ ಕಣ್ಣಿನ ಸಮಸ್ಯೆ ಇರುವವರೆಗೆ ಅನುದಾನವಾಗಲಿದೆ. ಮಿಲಿಯನ್ಸ್ ಜನರು ಈ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಇ ಐ ಡ್ರಾಪ್‌ನಿಂದಾಗಿ ವಯಸ್ಸಾದಾಗ ಕಾಡುವ ದೃಷ್ಟಿದೋಷದ ಸಮಸ್ಯೆಗೆ ಪರಿಹಾರ ಸಿಗಲಿದೆ.
ಇದರಿಂದ ಜೀವನ ವೃದ್ಧಿಯಾಗಲಿದೆ
ಈ ಐ ಡ್ರಾಪ್‌ನಿಂದಾಗಿ ಲಕ್ಷಗಟ್ಟಲೆ ಜನರಿಗೆ ಪ್ರಯೋಜನಕಾರಿಯಾಗಿದೆ, ಕನ್ನಡಕ, ಲೆನ್ಸ್ ಸಹಾಯವಿಲ್ಲದೆ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ಮೊಬೈಲ್, ಪೇಪರ್, ಬುಕ್‌ಗಳಲ್ಲಿನ ಅಕ್ಷರಗಳನ್ನು ಓದಲು ಸಹಾಯವಾಗಲಿದೆ. ಈ ಡ್ರಾಪ್ ಬಳಸಿ ನಿಮಿಷಕ್ಕೆ ಕಣ್ಣುಗಳ ಸ್ಪಷ್ಟವಾಗಿ ಕಾಣಿಸುವುದು.
40 ವರ್ಷ ಮೇಲ್ಪಟ್ಟವರ ಮೇಲೆ ಈ ಐ ಡ್ರಾಪ್ ಪ್ರಯೋಗ ಮಾಡಲಾಗುವುದು, ಪ್ರೆಸ್ಬಿಯೋಪಿಯಾ ಸಮಸ್ಯೆ ಇರುವವರಿಗೆ ಇದೊಂದು ದೊಡ್ಡ ವರದಾನವಾಗಲಿದೆ.
ಅಕ್ಟೋಬರ್‌ನಿಂದಲೇ ಈ ಔಷಧಿ ದೊರೆಯಲಿದೆ
DCGI ನಿಂದ ಅನುಮತಿ ಸಿಕ್ಕಿರುವ ಈ ಔಷಧಿ ಅಕ್ಟೋಬರ್‌ನಿಂದಲೇ ದೊರೆಯಲಿದೆ
ಕನ್ನಡಕಗಳ ಅವಲಂಬನೆ ಬೇಕಾಗಿಲ್ಲ
ಈ ಐ ಡ್ರಾಪ್ ಬಳಸಲು ಪ್ರಾರಂಭಿಸಿದರೆ ಕಣ್ಣುಗಳು ಚೆನ್ನಾಗಿ ಕಾಣುವುದರಿಂದ ಕನ್ನಡಕದ ಅವಶ್ಯಕತೆ ಇರಲ್ಲ. ವಯಸ್ಸಾಗುವಾಗ ಕಣ್ಣುಗಳು ಮಂಜಾಗುವುದನ್ನು ತಡೆಗಟ್ಟಲು ಸಹಕಾರಿ. ಅಲ್ಲದೆ ಇದನ್ನು ದೀರ್ಘ ಆಲ ಬಳಸುವುದರಿಂದ ಯಾವುದೇ ಅಡ್ಡಪರಿಣಾಮವಿರಲ್ಲ, ಅಲ್ಲದೆ ಕಣ್ಣಿನಲ್ಲಿ 7.14 ರಿಂದ 7.82.pH ಕಾಪಾಡಲು ಸಹಕಾರಿ.
ಇದರ ಬೆಲೆ ಕೂಡ ಕೈಗೆಡುಕುವ ದರದಲ್ಲಿದೆ
ಈ ಐ ಡ್ರಾಪ್ ಬೆಲೆ ದುಬಾರಿಯಲ್ಲ, ಹಾಗಾಗಿ ಎಲ್ಲರೂ ಇದನ್ನು ಹೆಚ್ಚಿನವರು ಬಳಸಲು ಸಾಧ್ಯವಾಗುವುದು. ವರ್ಷಗಳಿಂದ ಕಾಡುತ್ತಿರುವ ಕಣ್ಣಿನ ಸಮಸ್ಯೆ ಹೋಗಲಾಡಿಸಲು ಸಹಕಲಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications