Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ಬ್ರೈನ್ ಟ್ಯೂಮರ್ : ಭಯ ಬೇಡ, ಆದರೆ ಇಂಥಾ ಲಕ್ಷಣಗಳ ಬಗ್ಗೆ ಇರಲಿ ಜಾಗೃತೆ
ಆರೋಗ್ಯವೇ ಭಾಗ್ಯ ಎಂದು ಹೇಳುತ್ತಾರೆ. ಈ ಮಾತು ನಿಜ ಕೂಡ. ಅದರಲ್ಲೂ ಮೆದುಳಿನ ಆರೋಗ್ಯದ ಬಗ್ಗೆಯಂತೂ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಒಮ್ಮೆ ಮೆದುಳಿನ ಆರೋಗ್ಯ ಕೈಕೊಟ್ಟಿತು ಎಂದರೆ ಅದನ್ನು ಸರಿಪಡಿಸಿಕೊಳ್ಳುವುದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ.
ಇತ್ತೀಚಿನ ದಿನಗಳಲ್ಲಿ ಮೆದುಳಿಗೆ ಸಂಬಂಧಿಸಿದಂತೆ ಜನರನ್ನು ಸಾಮಾನ್ಯವಾಗಿ ಕಾಡುವ ಕಾಯಿಲೆ ಎಂದರೆ ಬ್ರೇನ್ ಟ್ಯೂಮರ್. ಇದೊಂದು ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದ್ದು ಅತ್ಯಂತ ವೇಗವಾಗಿ ಮನುಷ್ಯನ ಜೀವವನ್ನೇ ತೆಗೆಯುವಂತಹ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಪ್ರತಿವರ್ಷ ಈ ರೀತಿ ಬ್ರೇನ್ ಟ್ಯೂಮರ್ ಅಥವಾ ಮೆದುಳಿನಲ್ಲಿ ಗಡ್ಡೆ ಕಾಣಿಸಿಕೊಳ್ಳುವ ಕಾಯಿಲೆಯಿಂದ 2.5 ಲಕ್ಷಕ್ಕಿಂತಲೂ ಅಧಿಕ ಜನ ಸಾವನ್ನಪ್ಪುತ್ತಾರೆ ಎಂದು ವರದಿಯಾಗಿದೆ. ಮೆದುಳಿನಲ್ಲಿ ಜೀವಕೋಶಗಳು ಅನಿಯಂತ್ರಿತವಾಗಿ ಒಂದೇ ಕಡೆ ಬೆಳೆದ ಪರಿಣಾಮವಾಗಿ ಗಡ್ಡೆ ಕಾಣಿಸಿಕೊಳ್ಳುತ್ತದೆ.
ಮೆದುಳಿನಲ್ಲಿ ಗಡ್ಡೆ ಕಾಣಿಸಿಕೊಂಡಿದೆ ಎಂಬುದನ್ನು ಅರಿಯಲು ನಿಮಗೆ ಕಾಡುವ ಸಾಮಾನ್ಯ ಲಕ್ಷಣವೆಂದರೆ ತಲೆನೋವು. ಪದೇ ಪದೇ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವುದು ಉತ್ತಮ ಎಂದು ಸಲಹೆ ನೀಡಬಹುದು. ತಲೆನೋವನ್ನು ಬಿಟ್ಟು ಬ್ರೇನ್ ಟ್ಯೂಮರ್ ಇನ್ನೂ ಹಲವು ಲಕ್ಷಣಗಳನ್ನು ಒಳಗೊಂಡಿದೆ.
ಅನೇಕರಿಗೆ ಮೆದುಳಿನ ಗಡ್ಡೆಯುಂಟಾದಾಗ ತಲೆನೋವಿನ ಜೊತೆಯಲ್ಲಿ ದೇಹದಲ್ಲಿ ಆಯಾಸ ಹೆಚ್ಚಲು ಆರಂಭಿಸುತ್ತದೆ. ಕೈ - ಕಾಲುಗಳು ಇದ್ದಕ್ಕಿದ್ದಂತೆ ಮರುಗಟ್ಟಿ ಹೋಗಬಹುದು.ಇದೇ ಮುಂದುವರಿದು ಪಾರ್ಶ್ವವಾಯು ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ.
ಕೆಲವರಿಗೆ ನೆನಪಿನ ಶಕ್ತಿಯ ಕೊರತೆ ಕೂಡ ಕಾಣಿಸಿಕೊಳ್ಳುತ್ತದೆ.ಮಾತನಾಡಲು ಆಗದಂತಹ ಪರಿಸ್ಥಿತಿಗೆ ಬಂದು ತಲುಪುತ್ತಾರೆ.ಇದ್ದಕ್ಕಿದ್ದಂತೆ ತಲೆ ತಿರುಗುವುದು ಹಾಗೂ ದೃಷ್ಟಿದೋಷ ಕೂಡ ಉಂಟಾಗುತ್ತದೆ. ಇನ್ನೂ ಕೆಲವರಿಗೆ ಶ್ರವಣ ದೋಷ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.
ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸದಿರಿ :
ಮೆದುಳಿನ ಗಡ್ಡೆಯಿಂದ ಅನೇಕರು ಸಾವನ್ನಪ್ಪಲು ಕಾರಣ ಅದರ ಲಕ್ಷಣಗಳನ್ನು ನಿರ್ಲ್ಯಕ್ಷಿಸುವುದೇ ಆಗಿದೆ. ಅನೇಕರು ತಲೆನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ಮೆಡಿಕಲ್ಗಳಲ್ಲಿ ಸಿಗುವ ಯಾವುದೋ ಮಾತ್ರೆಯನ್ನು ನುಂಗುವ ಮೂಲಕ ಈ ಲಕ್ಷಣವನ್ನು ನಿರ್ಲಕ್ಷಿಸುತ್ತಾರೆ. ಮೆದುಳಿನ ಪರೀಕ್ಷೆ ಮಾಡುವ ಎಂಬ ಯೋಚನೆ ಕೂಡ ಅನೇಕರ ತಲೆಗೆ ಬರುವುದೇ ಇಲ್ಲ.
ನೀವು ನಂಬಿಂದ್ರೆ ನಂಬಿ..! ಈ ಕಾಯಿಲೆಯನ್ನು ಹೊಂದಿರುವವರು ಅವರಿಗೆ ತಿಳಿಯದಂತೆ ಮೌನಕ್ಕೆ ಶರಣಾಗಿ ಬಿಡುತ್ತಾರೆ. ಯಾರೊಂದಿಗೆ ಹೆಚ್ಚು ಸಂವಹನ ಇಷ್ಟಪಡುವುದಿಲ್ಲ. ಆದರೆ ಇಂಥಾ ಸಂದರ್ಭದಲ್ಲಿ ಅನೇಕರು ಮನಶಾಸ್ತ್ರಜ್ಞರನ್ನು ಭೇಟಿಯಾಗುವ ತಪ್ಪು ನಿರ್ಧಾರ ಮಾಡಿಬಿಡುತ್ತಾರೆ. ಮೆದುಳಿನಲ್ಲಿ ಗಡ್ಡೆ ಇರುವಾಗ ಕೂಡ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.
ಹಾರ್ಮೋನ್ಗಳಲ್ಲಿ ಏರಿಳಿತ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಆಗ ಕೂಡ ನಾವು ಹಾರ್ಮೋನ್ಗಳ ಅಸಮತೋಲನಕ್ಕೂ ಮೆದುಳಿನ ಆರೋಗ್ಯಕ್ಕೂ ಸಂಬಂಧ ಇರಬಹುದು ಎಂದು ಯೋಚಿಸುವುದೇ ಇಲ್ಲ. ಅನೇಕ ಬಾರಿ ವೈದ್ಯರಿಗೂ ಕೂಡ ಇದು ಬ್ರೇನ್ ಟ್ಯೂಮರ್ನ ಲಕ್ಷಣ ಇರಬಹುದು ಎಂಬ ಅಂದಾಜು ಸಿಗುವುದಿಲ್ಲ.
ಅನೇಕರು ದೃಷ್ಟಿ ಹಾಗೂ ಶ್ರವಣ ದೋಷದ ಸಮಸ್ಯೆಯಿಂದ ಬಳಲುತ್ತಾರೆ. ಹೀಗಾದಾಗ ನಾವು ಕಣ್ಣಿನ ವೈದ್ಯರು ಅಥವಾ ಇ ಎನ್ ಟಿ ವೈದ್ಯರನ್ನು ಭೇಟಿಯಾಗಿ ಏನೇನೋ ಔಷಧಿ ಕುಡಿಯಲು ಆರಂಭಿಸುತ್ತೇವೆ. ಆದರೆ ಮೆದುಳಿನಲ್ಲಿರುವ ಗಡ್ಡೆ ನಮ್ಮನ್ನು ಈ ರೀತಿ ತಪ್ಪು ದಾರಿಗೆ ಎಳೆದಿದೆ ಎಂಬುದರ ಅರಿವು ಇರುವುದೇ ಇಲ್ಲ.
ಮೆದುಳಿನಲ್ಲಿ ಗಡ್ಡೆ ಏಕೆ ಕಾಣಿಸಿಕೊಳ್ಳುತ್ತದೆ..?ಈ ಗಡ್ಡೆ ಬರದಂತೆ ತಡೆಗಟ್ಟುವುದು ಹೇಗೆ ಎಂದು ಕೇಳಿದರೆ ಇದಕ್ಕೆ ನಿರ್ದಿಷ್ಟವಾಗಿ ಉತ್ತರಿಸಲು ಸಾಧ್ಯವಿಲ್ಲ.
ಆದರೆ ಮೆದುಳಿನಲ್ಲಿ ಗಡ್ಡೆ ಕಾಣಿಸಿಕೊಂಡಾಗ ಅದರ ಲಕ್ಷಣಗಳನ್ನು ಪತ್ತೆ ಹಚ್ಚುವಲ್ಲಿ ನಾವು ಎಡವಬಾರದು. ದೇಹದಲ್ಲಿ ಆಗುವ ಯಾವುದೇ ಬದಲಾವಣೆಗಳನ್ನು ಸಣ್ಣ ಸಮಸ್ಯೆಯೆಂದು ತಿಳಿದುಕೊಂಡು ಮಾತ್ರೆ ನುಂಗುತ್ತಾ ಕುಳಿತರೆ ಮುಂದೊಂದು ದಿನ ಅದು ನಿಮ್ಮ ಜೀವವನ್ನೇ ನುಂಗಬಹುದು. ಹೀಗಾಗಿ ಇಂತಹ ಎಲ್ಲಾ ಲಕ್ಷಣಗಳ ಬಗ್ಗೆ ಮನುಷ್ಯ ಜಾಗ್ರತೆ ವಹಿಸುವುದು ತುಂಬಾ ಮುಖ್ಯವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










