Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಎಂಆರ್‌ಐ ಸ್ಕ್ಯಾನಿಂಗ್ ವೇಳೆ ಜೀವಕ್ಕೆ ಕುತ್ತು ಬರಬಹುದು? ಏಕೆ ಗೊತ್ತಾ?
ವೈದ್ಯಕೀಯ ಕ್ಷೇತ್ರದಲ್ಲಿ ನಿತ್ಯವು ಹೊಸ ಹೊಸ ಅನ್ವೇಷಣೆಗಳು ಹೊರಬರುತ್ತವೆ. ಆದರೆ ಎಂಆರ್‌ಐ ಸ್ಕ್ಯಾನಿಂಗ್ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಎಂಬ ಚಿಕಿತ್ಸಾ ವಿಧಾನ ಬಂದ ದಶಕಗಳೇ ಕಳೆದಿದೆ. ಆದರೂ ಜನರಿಗೆ ಎಂಆರ್‌ಐ ಸ್ಕ್ಯಾನಿಂಗ್ ಕುರಿತು ಮಾಹಿತಿ ಇಲ್ಲದೆ ಹಲವು ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಾರೆ.
ಕೆಲವರಿಗೆ ವೈದ್ಯರು ಮೊದಲೆ ಸೂಚನೆ ನೀಡುರುತ್ತಾರೆ. ಎಂಆರ್‌ಐ ಸ್ಕ್ಯಾನಿಂಗ್‌ಗೆ ಯಾವ ರೀತಿ ತಯಾರಿಯಾಗಿ ಬರಬೇಕು ಎಂದು. ಹೀಗೆ ತಯಾರಿ ಮಾಡಿಕೊಂಡರೆ ಉತ್ತಮವಾಗಿರುತ್ತದೆ. ಆದರೆ ಎಂಆರ್‌ಐ ಸ್ಕ್ಯಾನಿಂಗ್ ವೇಳೆ ರೋಗಿಗಳ ಯಡವಟ್ಟಿನಿಂದ ಹಲವು ಬಾರಿ ಪ್ರಾಣಕ್ಕೆ ಸಂಚಕಾರ ಬಂದಿರುವ ಉದಾಹರಣೆಯು ಇದೆ. ಹಾಗಾದ್ರೆ ಯಾವೆಲ್ಲಾ ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನು ನಾವಿಲ್ಲಿ ನೋಡೋಣ.

ಯಾವುದೇ ಲೋಹದ ವಸ್ತು ಧರಿಸಬಾರದು
ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಮಾಡುವ ವೇಳೆ ಯಾವುದೇ ಲೋಹದ ವಸ್ತುವನ್ನು ನಾವು ಧರಿಸಬಾರದು, ಉಂಗುರ, ಕಾಲುಂಗುರ ಸೇರಿ ಯಾವುದೇ ಲೋಹದ ವಸ್ತುಗಳನ್ನು ನಾವು ಧರಿಸಿರಬಾರದು. ಎಂಆರ್‌ಐ ಯಂತ್ರವು ಮ್ಯಾಗ್ನೆಟಿಕ್ ಫಿಲ್ಡ್ ಮೂಲಕ ಕೆಲಸ ಮಾಡುವುದರಿಂದ ಅದರಲ್ಲಿ ಅತ್ಯಂತ ಶಕ್ತಿಶಾಲಿ ವಿಕಿರಣಗಳು ಹೊರಹೊಮ್ಮುತ್ತವೆ ಈ ವೇಳೆ ಮೈ ಮೇಲೆ ಲೋಹವಿದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ.
ಎಂಆರ್‌ಐನೊಳಗೆ ಹಾರಿದ ಗುಂಡು
2023ರ ಫೆಬ್ರವರಿಯಲ್ಲಿ ರೋಗಿಯೊಬ್ಬರು ಯಡವಟ್ಟಿನಿಂದ ಪ್ರಾಣವೇ ಹೋಗಿತ್ತು. ಬ್ರೆಜಿಲ್‌ನ ವಕೀಲರೊಬ್ಬರು ಸೊಂಟದಲ್ಲಿ ಗನ್ ಇಟ್ಟುಕೊಂಡು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರದೊಳಗೆ ತೆರಳಿದ್ದಾಗ ಪಿಸ್ತೂಲಿನಿಂದ ಗುಂಡು ಸಿಡಿದಿತ್ತು. ಅವರ ಬೆನ್ನಿನಿಂದ ಹೊರಟ್ಟಿದ್ದ ಗುಂಡು ಹೊಟ್ಟೆ ಸೀಳಿಕೊಂಡು ಹೊರಬಂದಿತ್ತು. ಈ ವೇಳೆ ರೋಗಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರತಿ ವರ್ಷ ಸುಮಾರು 95 ಮಿಲಿಯನ್ MRI ಸ್ಕ್ಯಾನ್‌ಗಳನ್ನು ನಡೆಸಲಾಗುತ್ತದೆ ಎಂದು ವರದಿ ತಿಳಿಸುತ್ತದೆ. ಇದು ಸುರಕ್ಷಿತವಾಗಿದ್ದರೂ, ಯಂತ್ರಗಳು ಮಾಡುವ ಶಬ್ದದ ಬಗ್ಗೆ ರೋಗಿಗಳಿಂದ ಕೆಲವು ಕಾಳಜಿಗಳಿವೆ (ಇಯರ್‌ಪ್ಲಗ್‌ಗಳನ್ನು ನೀಡಲಾಗುತ್ತದೆ), ಇದು 100 ಡೆಸಿಬಲ್‌ಗಳನ್ನು ತಲುಪಬಹುದು. ಮತ್ತು ಕ್ಲಾಸ್ಟ್ರೋಫೋಬಿಯಾ ಹೊಂದಿರುವ ಕೆಲವರು ಯಂತ್ರದಲ್ಲಿ ದೀರ್ಘಾವಧಿಯನ್ನು ಸಹಿಸಿಕೊಳ್ಳಲು ಹೆಣಗಾಡುತ್ತಾರೆ. ಈ ಯಂತ್ರವು ಭೂಮಿಗಿಂತಲೂ 30,00ಒ ಪ್ರಬಲ ಕಾಂತೀಯ ಕ್ಷೇತ್ರವನ್ನು ಹೊಂದಿರುತ್ತದೆ.
ದೇಹದಲ್ಲಿ ಹೊಸ ಗಾಯಗಳಿದ್ದರೆ
ಎಂಆರ್‌ಐ ಸ್ಕಾನ್ ಮಾಡುವಾಗ ದೇಹದ ಮೇಲೆ ಹೊಸದಾಗಿ ಉಂಟಾಗಿರುವ ಗಾಯವಿದೆಯೇ ಎಂದು ವೈದ್ಯರು ಕೇಳುತ್ತಾರೆ. ಒಂದು ವೇಳೆ ನಿಮಗೆ ಗಾಯವಾಗಿದ್ದರೆ ವೈದ್ಯರ ಸಲಹೆಯಂತೆ ಎಂಆರ್‌ಐ ಸ್ಕ್ಯಾನಿಂಗ್ ನೆರವೇರಿಸಲಾಗುತ್ತದೆ. ಎಂಆರ್‌ಐ ಸ್ಕ್ಯಾನಿಂಗ್‌ನಲ್ಲಿ ಇಡೀ ದೇಹ ಯಂತ್ರದೊಳಗೆ ಹೋಗುತ್ತದೆ.
ಪಿನ್ ಸೇವಿಸಿದ್ದ ವ್ಯಕ್ತಿಯ ಹೊಟ್ಟೆ ಹರಿದಿತ್ತು
ಲೋಹದ ಸಾಕೆಟ್‌ಗಳು ಮತ್ತು ಹಿಂಜ್ ಪಿನ್ ಸೇವಿಸುವ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಎಂಆರ್‌ಐ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯ ಭಾಗ ಸೀಳಿತ್ತು. ಅಯಸ್ಕಾಂತೀಯ ಬಲವು ಆತನ ಹೊಟ್ಟೆಯೊಳಗಿದ್ದ ಕಬ್ಬಿಣದ ಚೂರುಗಳನ್ನು ಸೆಳೆದ ಕಾರಣ ಆತನ ಕರುಳು ಗಾಯಗೊಂಡಿತ್ತು.
ಇದಲ್ಲದೆ 11 ಬೇರಿಂಗ್ ಗೋಲಿಗಳ ನುಂಗಿದ್ದ ಮಗುವಿನ ಎಂಆರ್‌ಐ ಸ್ಕ್ಯಾನಿಂಗ್ ಮಾಡಿದಾಗ ಮಗುವಿನ ಕರುಳಿಗೆ ಗಾಯವಾಗಿತ್ತು. ಅಲ್ಲದೆ ಕರುಳಿನಲ್ಲಿ ರಂಧ್ರಗಳಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸುವ ಪ್ರಸಂಗ ಬಂದೊದಗಿತ್ತು. ಅಲ್ಲದೆ ಎಂಆರ್‌ಐ ಕೋಣೆಯಲ್ಲಿಟ್ಟಿದ್ದ ಆಮ್ಲಜನಕದ ಸಿಲಿಂಡರ್‌ವೊಂದು ಯಂತ್ರ ಚಾಲನೆಗೊಂಡಾಗ ಅಯಸ್ಕಾಂತೀಯ ಕ್ಷೇತ್ರಕ್ಕೆ ಸಿಲುಕಿ ಛೀದ್ರಗೊಂಡು ವ್ಯಕ್ತಿಯೊಬ್ಬ ಮೃತಪಟ್ಟಿದ್ದ ಘಟನೆ ಭಾರತದಲ್ಲೇ ಸಂಭವಿಸಿತ್ತು.
2021 ರಲ್ಲಿ, ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು MRI ಕೋಣೆಯಲ್ಲಿನ ಆಮ್ಲಜನಕ ಸಿಲಿಂಡರ್ ಸ್ಕ್ಯಾನಿಂಗ್ ಯಂತ್ರದತ್ತ ಎಳೆದಾಗ ವ್ಯಕ್ತಿಯ ತಲೆ ಚೂರು ಚೂರಾಗಿತ್ತು. ಈ ವೇಳೆ ಆತ ಸ್ಥಳದಲ್ಲೇ ಮೃತಪಟ್ಟಿದ್ದ.
ಹಳೆಯ ಘಟನೆ ವಿವರಣೆ ನೀಡಬೇಕು
ಎಂಆರ್‌ಐ ಸ್ಕ್ಯಾನಿಂಗ್‌ಗೆ ತೆರಳುವಾಗ ತಮಗಾಗಿರುವ ಹಿಂದಿನ ಘಟನೆಗಳ ವಿವರಣೆ ನೀಡಬೇಕು. ಅದರರ್ಥ ನಿಮಗೆ ಶಸ್ತ್ರ ಚಿಕಿತ್ಸೆ ಮಾಡಲ್ಪಟ್ಟಿದ್ದರೆ ಅಥವಾ ಹಿಂದೆ ದೇಹದ ಯಾವುದಾದರೂ ಭಾಗಕ್ಕೆ ಕಬ್ಬಿಣ ಲೋಹದ ವಸ್ತು ಸೇರಿಸಿದ್ದರೆ, ಇಲ್ಲದೆ ಶಸ್ತ್ರ ಚಿಕಿತ್ಸೆ ವೇಳೆ ಲೋಹದ ತುಂಡುಗಳು ದೇಹದಲ್ಲಿ ಉಳಿದಿದ್ದರೆ, ಹಲ್ಲಿನ ಪಿನ್‌ಗಳು, ಸ್ಪೈನಲ್ ಕಾರ್ಡ್ ಇಂಜುರಿಯಂತಹ ವಿಷಯವನ್ನು ವಿವರಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications








