Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಸೂಜಿ ಇಲ್ಲದ ಕೋವಿಡ್ ಲಸಿಕೆ ಆವಿಷ್ಕಾರ..! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕೋವಿಡ್-19 ವೈರಸ್ ಹೆಸರು ಕೇಳಿದರೇನೆ ಒಮ್ಮೆ ನಡುಕ ಹುಟ್ಟಿಸುತ್ತೆ. ಯಾಕಂದ್ರೆ ಕಳೆದ ಕೆಲ ವರ್ಷದ ಹಿಂದೆ ಇಡೀ ಮಾನವ ಕುಲವನ್ನು ಕಾಡಿ ದುರಂತಗಳ ಸೃಷ್ಟಿಸಿತ್ತು, ಬೀದಿ ಬೀದಿಯಲ್ಲಿ ಕೊರೊನಾ ರೋಗಿಗಳು ನರಳಾಡಿದ್ದರು. ಲಕ್ಷ ಲಕ್ಷ ಮಂದಿ ಪ್ರಾಣ ಬಿಟ್ಟಿದ್ದರು. ಆದ್ರೆ ಈ ಜಾಗತಿಕ ಮಾರಕವನ್ನು ಇಡೀ ವಿಶ್ವವೇ ಒಂದಾಗಿ ರೋಗದ ವಿರುದ್ಧ ಹೋರಾಡಿತ್ತು.
ಇನ್ನು ಕೋವಿಡ್ ಹರಡುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ತಜ್ಞರು ತರಾತುರಿಯಲ್ಲಿ ಲಸಿಕೆಯನ್ನು ಸಹ ಕಂಡುಕೊಂಡರು. ಹೀಗಾಗಿ ವರ್ಷದ ಒಳಗೆ ಕೋವಿಡ್ ಲಸಿಕೆಗಳು ಮಾರುಕಟ್ಟೆಗೆ ಬಂದು ಕೋಟಿ ಕೋಟಿ ಜನರ ಜೀವ ಉಳಿಸಿದವು. ಜನರು ಮೂರು ಮೂರು ಡೋಸ್ ಪಡೆದಿದ್ದರು. ದೇಹದಲ್ಲಿ ಇಮ್ಯೂನಿಟಿ ಹೆಚ್ಚಿಸಲು ಜನ ಮುಂದಾದರು.

ಈ ಲಸಿಕೆಗಳ ಪಡೆದ ಬಳಿಕವಷ್ಟೇ ಕೋವಿಡ್‌ನ ದಾಳಿಯಿಂದ ಜನರು ಪಾರಾಗಿದ್ದರು, ಇಂದಿಗೂ ಈ ಕೋವಿಡ್ ಚಿಕಿತ್ಸೆ ಕುರಿತ ಸಂಶೋದನೆಗಳು ನಡೆಯುತ್ತಲೇ ಇದೆ. ಸದ್ಯ ಈಗ ಸೂಜಿ ಇಲ್ಲದ ಕೋವಿಡ್ ಲಸಿಕೆಯನ್ನ ಕಂಡುಹಿಡಿಯಲಾಗಿದೆ. ಕೋವಿಡ್ ಸಂಬಂಧ ವೈರಸ್ ದೃಢಪಟ್ಟಿರುವ ಮಂದಿಗೆ ಸೂಜಿ ಇಲ್ಲದಿರುವ ಲಸಿಕೆಯನ್ನು ನೀಡಲಾಗುತ್ತದೆ.
CDO-7N-1 ಎಂದು ಹೆಸರಿಸಲಾದ ಲಸಿಕೆ, ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ತಯಾರಿಸಲ್ಪಟ್ಟಿದೆ, ಇದು ಕೋವಿಡ್ ಲಸಿಕೆಯಲ್ಲಿ ಅತ್ಯದ್ಭುತ ಆವಿಷ್ಕಾರವಾಗಲಿದೆ. ಭಾರತೀಯ ವಿಜ್ಞಾನಿಗಳು ಮೊದಲ-ರೀತಿಯ COVID-19 ಮ್ಯೂಕೋಸಲ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ಲಸಿಕೆ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಅಥವಾ ಹೊಸ ಯುಗದ ಆರಂಭಕ್ಕೆ ಕಾರಣವಾಗಲಿದೆ ಎಂದು ಸಂಶೋದಕರು ಹೇಳಿಕೊಂಡಿದ್ದಾರೆ.
ಇಂಜಕ್ಷನ್‌ನ ಸೂಜಿಗೆ ಭಯಪಡುವವರು ಈ ಲಸಿಕೆಯನ್ನು ಸುಲಭವಾಗಿ ಯಾವುದೇ ಭಯವಿಲ್ಲದೆ ತೆಗೆದುಕೊಳ್ಳಬಹುದು. ಹೈದರಾಬಾದ್ ಮೂಲದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ಅಥವಾ IIL ಕೋಡಾನ್ ಡಿಯೋಪ್ಟಿಮೈಸೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು ಕೋವಿಡ್ ವಿರುದ್ಧ ಅಭಿವೃದ್ಧಿಪಡಿಸಿದ ಲೈವ್-ಅಟೆನ್ಯೂಯೇಟೆಡ್ ಸೂಜಿ-ಮುಕ್ತ ಇಂಟ್ರಾ-ನಾಸಲ್ ಬೂಸ್ಟರ್ ಲಸಿಕೆಯನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ.
CDO-7N-1 ಎಂಬ ಹೆಸರಿನ ಈ ಇಂಟ್ರಾನಾಸಲ್ ಲಸಿಕೆಯು ಮೂಗಿನ ಮೂಲಕ ನೀಡಲು ವಿನ್ಯಾಸಗೊಳಿಸಲಾದ ಲೈವ್ ಅಟೆನ್ಯೂಯೇಟೆಡ್ ಲಸಿಕೆಯಾಗಿದೆ. ಇಸನ್ನು ಮೂಗಿನ ಮೂಲಕ ತೆಗೆದುಕೊಳ್ಳಬೇಕು. ಇದಕ್ಕೆ ಸೂಚಿ ಇರದ ಕಾರಣ ದೇಹದೊಳಗೆ ನೇರವಾಗಿ ಲಸಿಕೆಯ ಅಂಶ ಹೋಗಬೇಕಾಗುತ್ತದೆ. ಹೀಗಾಗಿ ಮೂಗಿನ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ.
ಈ ಲಸಿಕೆ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?
IIL ವಿಜ್ಞಾನಿಗಳ ಪ್ರಕಾರ, ಕೋಡಾನ್ ಡಿಯೋಪ್ಟಿಮೈಸೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು ಲಸಿಕೆಯ ಅಭಿವೃದ್ಧಿಪಡಿಸಲಾಗಿದೆ. ಇದು ಕೇವಲ ಒಂದು ಡೋಸ್‌ನ ಲಸಿಕೆಯಾಗಿದೆ. ಈ ಲಸಿಕೆ ಪಡೆದರೆ ಕೋವಿಡ್‌ನ ಬೇರೆ ಯಾವುದೇ ಡೋಸ್ ಲಸಿಕೆ ಪಡೆಯುವ ಅವಶ್ಯಕತೆ ಇರುವುದಿಲ್ಲ. ಸೂಜಿಗಳಿಗೆ ಪರ್ಯಾಯವಾಗಿ, ಅಲ್ಪಾವಧಿಯ ಅಥವಾ ದೀರ್ಘಾವಧಿಯ ಅಡ್ಡಪರಿಣಾಮಗಳಿಲ್ಲದೆ. ಹಾಗೆ ಕೋವಿಡ್‌ನ ಯಾವುದೇ ರೂಪಾಂತರವಾಗಿದ್ದರೂ ಈ ಲಸಿಕೆ ಪರಿಣಾಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಈ ಲಸಿಕೆ ಬಳಕೆ ಸೂಕ್ತ ಎಂದು ವೈದ್ಯರು ಸಹ ಹೇಳಿದ್ದಾರೆ. 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇದನ್ನು ಶೇಖರಿಸಿಟ್ಟರೆ 7 ತಿಂಗಳ ಕಾಲ ಇಡಬಹುದು. ಇದು ಬಡ ರಾಷ್ಟ್ರಗಳಿಗೆ ಹಾಗೂ ಸ್ಟೋರೇಜ್ ಘಟಕಗಳು ಕಡಿಮೆ ಇರುವಂತಹ ದೇಶಗಳಿಗೆ ನೆರವಾಗಲಿದೆ.
ಇನ್ನು ಭಾರತ್ ಬಯೋಟೆಕ್ 2023ರಲ್ಲಿಯೂ ಒಂದು ಲಸಿಕೆಯನ್ನು ಬಿಡುಗಡೆ ಮಾಡಿತ್ತು. ದೇಶದಲ್ಲಿ ಪ್ರಥಮ ಬಾರಿಗೆ ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್‌ಕೋವಾಕ್ (ಮೂಗಿನ ಮೂಲಕ ಲಸಿಕೆ) ಜನವರಿ 26ರ ಗಣರಾಜ್ಯೋತ್ಸವದಂದು ಬಿಡುಗಡೆ ಮಾಡಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ರೂ. 325 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ800 ರೂಪಾಯಿಗೆ ಈ ಲಸಿಕೆ ಲಭ್ಯವಿತ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications