Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರಾಷ್ಟ್ರೀಯ ಡೆಂಗ್ಯೂ ದಿನ 2023: ಡೆಂಗ್ಯೂ ಲಕ್ಷಣ ಗಂಭೀರವಾಗಿಲ್ಲ ಅಂತ ನಿರ್ಲಕ್ಷ್ಯ ಮಾಡಬಾರದು ಏಕೆ?
ಮೇ 16ನ್ನು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುವುದು. ಡೆಂಗ್ಯೂ ಕಾಯಿಲೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಸಂಪೂರ್ಣ ಡೆಂಗ್ಯೂ ನಿರ್ಮೂಲನೆಗಾಗಿ ಈ ದಿನವನ್ನು ಆಚರಿಸಲಾಗುವುದು. ಅಧ್ಯಯನ ವರದಿ ಪ್ರಕಾರ 2019ರಿಂದ ಭಾರತದಲ್ಲಿ ಡೆಂಗ್ಯೂ ಪ್ರಮಾಣ ಕಡಿಮೆಯಾಗುತ್ತಿದೆ. 2023ರ ಸೆಪ್ಟೆಂಬರ್‌ನಲ್ಲಿ 63,280 ಡೆಂಗ್ಯೂ ಕೇಸ್ ಪ್ರಕರಣಗಳು ದಾಖಲಾಗಿದ್ದೆವು. ಡೆಂಗ್ಯೂ ನಿರ್ಲಕ್ಷ್ಯ ಮಾಡುವಂಥ ಸಮಸ್ಯೆ ಅಲ್ವೇ ಅಲ್ಲ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣಕ್ಕೆ ಅಪಾಯ ಉಂಟಾಗುವುದು.
ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾದರೆ ತುಂಬಾನೇ ಕಷ್ಟವಾಗುವುದು. ಅಲ್ಲದೆ ಈ ಡೆಂಗ್ಯೂ ಕಾಯಿಲೆ ಮಕ್ಕಳಿಗೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬಂದರೆ ತುಂಬಾನೇ ಕಷ್ಟ. ಇನ್ನೇನು ಒಂದು ತಿಂಗಳಿನಲ್ಲಿ ಮಳೆಗಾಲ ಶುರುವಾಗುವುದು, ಮಳೆಗಾಲ ಶುರುವಾದರೆ ಈ ಡೆಂಗ್ಯೂ ಸಮಸ್ಯೆ ಹೆಚ್ಚಾಗುವುದು, ಡೆಂಗ್ಯೂ ಸಮಸ್ಯೆ ಸೊಳ್ಳೆ ಕಚ್ಚುವುದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಆದಷ್ಟು ಸೊಳ್ಳೆ ಕಚ್ಚದಂತೆ ಎಚ್ಚರಿಕೆವಹಿಸುವುದು, ಸೊಳ್ಳೆಗಳ ನಿಮೂರ್ಲನೆ ಮುಂದಾಗುವುದು ಡೆಂಗ್ಯೂ ತಡೆಗಟ್ಟಲು ಇರುವ ಪ್ರಮುಖ ಮಾರ್ಗವಾಗಿದೆ.

ಡೆಂಗ್ಯೂ ಜ್ವರ ಬಂದಾಗ ನಿರ್ಲಕ್ಷ್ಯ ಮಾಡಬಾರದು
ಕೆಲವರಿಗೆ ಡೆಂಗ್ಯೂ ಜ್ವರ ಬಂದಾಗ ಲಕ್ಷಣಗಳೇನು ಅಷ್ಟೇನು ಗಂಭೀರವಾಗಿರುವುದಿಲ್ಲ. ಆ ಕಾರಣಕ್ಕೆ ಕೆಲವರು ಮನೆಯಲ್ಲಿಯೇ ಇದ್ದು ಚಿಕಿತ್ಸೆ ತೆಗೆದುಕೊಳ್ಳಬಹುದು ಎಂದು ಯೋಚಿಸುತ್ತಾರೆ, ಈ ರೀತಿಯ ಚಿಕ್ಕ ನಿರ್ಲಕ್ಷ್ಯವೇ ಪ್ರಾಣಕ್ಕೆ ಅಪಾಯ ತರಬಹುದು. ಡೆಂಗ್ಯೂ ಕೇಸ್‌ನಲ್ಲಿ ಈಗಿರುವ ಪ್ಲೇಟ್‌ಲೆಟ್ ಸಂಖ್ಯೆ ಇದ್ದಕ್ಕಿದ್ದಂತೆ ಕಡಿಮೆಯಾಗಬಹುದು. ಇದರಿಂದ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಡೆಂಗ್ಯೂ ಲಕ್ಷಣಗಳು ಅಷ್ಟೇನು ಗಂಭೀರವಾಗಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಸುರಕ್ಷಿತ.
ಲಕ್ಷಣಗಳು
ಸೋಂಕಿರುವ ಸೊಳ್ಳೆ ಕಚ್ಚಿದ 2-7 ದಿನಗಳಲ್ಲಿ ಡೆಂಗ್ಯೂ ಲಕ್ಷಣಗಳು ಕಂಡು ಬಡುವುದು. ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳೆಂದರೆ
* ಜ್ವರ
* ತಲೆನೋವು
* ಕಣ್ಣುಗಳಲ್ಲಿ ನೋವು
* ಮೈಕೈ ನೋವು
* ವಾಂತಿ-ಬೇಧಿ
* ಗ್ರಂಥಿಗಳು ಊದಿಕೊಳ್ಳುವುದು
* ಮೈ ಮೇಲೆ ಗುಳ್ಳೆಗಳು ಕಂಡು ಬರುವುದು.
ಡೆಂಗ್ಯೂವಿನ ಗಂಭೀರ ಲಕ್ಷಣಗಳು
* ತುಂಬಾ ಕಿಬ್ಬೊಟ್ಟೆ ನೋವು
* ತುಂಬಾ ವಾಂತಿ
* ಜೋರಾದ ಉಸಿರಾಟ, ಎದೆಬಡಿತ ಹೆಚ್ಚಾಗುವುದು
* ವಸಡುಗಳಲ್ಲಿ ರಕ್ತಸ್ರಾವ
* ವಾಂತಿಯಲ್ಲಿ ರಕ್ತದ ಕಲೆ
* ಮಲವಿಸರ್ಜನೆ ಮಾಡುವಾಗ ರಕ್ತದ ಕಲೆ
* ತುಂಬಾ ಬಾಯಾರಿಕೆ
* ತ್ವಚೆ ಬಿಳುಚಿಕೊಳ್ಳುವುದು
* ಸುಸ್ತು
ಡೆಂಗ್ಯೂ ಕಾಯಿಲೆಗೆ ಚಿಕಿತ್ಸೆಯೇನು?
ಡೆಂಗ್ಯೂ ಸಮಸ್ಯೆಗೆ ಇಂಥದ್ದೇ ಚಿಕಿತ್ಸೆ ಎಂಬುವುದು ಇಲ್ಲ. ವ್ಯಕ್ತಿಯಲ್ಲಿ ರೋಗದ ಗುಣ ಲಕ್ಷಣಗಳನ್ನು ನೋಡಿ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುವುದು, ಕೆಲವರ ಮೇಲೆ ಈ ಡೆಂಗ್ಯೂ ದೊಡ್ಡ ಪರಿಣಾಮ ಬೀರುವುದಿಲ್ಲ, ಬೇಗನೆ ಗುಣಮುಖರಾಗುತ್ತಾರೆ. ಇನ್ನು ಕೆಲವರ ಮೇಲೆ ತುಂಬಾನೇ ಗಂಭೀರ ಪ್ರಭಾವ ಬೀರುವುದು. ರೋಗ ಲಕ್ಷಣಗಳು ಕಂಡು ಬಂದಾಗ ರಕ್ತ ಪರೀಕ್ಷೆ ಮೂಲಕ ಡೆಂಗ್ಯೂವಿದೆಯೇ, ಇಲ್ಲವೇ ಎಂದು ಕಂಡು ಹಿಡಿಯಲಾಗುವುದು.
ಡೆಂಗ್ಯೂ ಸಮಸ್ಯೆ ತಡೆಗಟ್ಟುವುದು ಹೇಗೆ?
* ಸಂಪೂರ್ಣ ಮೈ ಮುಚ್ಚುವ ಬಟ್ಟೆಗಳನ್ನು ಧರಿಸಿ
* ಸೊಳ್ಳೆ ಕಚ್ಚದಂತೆ ಸ್ಪ್ರೇ ಅಥವಾ ಕ್ರೀಮ್ ಬಳಸಿ
* ಮನೆಯ ಕಿಟಕಿಗಳಿಗೆ ಸೊಳ್ಳೆ ಒಳಬರದಂತೆ ನೆಟ್ ಹಾಕಿಸಿ
* ಕಾಯಿಲ್ ಹಚ್ಚಿಡಿ
* ಮಕ್ಕಳನ್ನು ಸೊಳ್ಳೆ ಪರದೆ ಒಳಗಡೆ ಮಲಗಿಸಿ.
ಡೆಂಗ್ಯೂ ಬಂದಾಗ
* ಚಿಕಿತ್ಸೆ ಪಡೆಯುವುದರ ಜೊತೆಗೆ ಚೆನ್ನಾಗಿ ವಿಶ್ರಾಂತಿ ಪಡೆಯಬೇಕು
* ಸಾಕಷ್ಟು ನೀರು ಕುಡಿಯಬೇಕು
* ದೇಹದ ರೋಗ ಲಕ್ಷಣಗಳನ್ನು ಗಮನಿಸಿ
* ಪಪ್ಪಾಯಿ, ಕಿವಿಹಣ್ಣು, ಗಂಜಿ ಇವುಗಳನ್ನು ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
