Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
Myths Vs Facts : ಅಂಡಾಶಯದ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಮಹಿಳೆಯರಲ್ಲಿರುವ ತಪ್ಪು ಕಲ್ಪನೆಗಳು!
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ನ ಅಪಾಯ ಹೆಚ್ಚಾಗುತ್ತಿದೆ. ಸರಿಯಾದ ಚಿಕಿತ್ಸೆ ಸಿಗದೇ ಅದೆಷ್ಟೋ ಜನ ಸಾವನ್ನಪ್ಪುತ್ತಿದ್ದಾರೆ. ಅದ್ರಲ್ಲೂ ಮಹಿಳೆಯರಲ್ಲಿ ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ. ಇದು ಹೆಚ್ಚಾಗಿ ಮುಟ್ಟು ನಿಲ್ಲುವ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡೋದಕ್ಕೆ ಹೋಗಲೇಬೇಡಿ.
ಭಾರತ ಸೇರಿದಂತೆ ವಿಶ್ವದಾದ್ಯಂತ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಅಂಡಾಶಯದ ಕ್ಯಾನ್ಸರ್ ಕೂಡ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಇದು ಕೂಡ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಪ್ರತಿ 100,000 ಮಹಿಳೆಯರಿಗೆ 11.9ರಷ್ಟು ಅಂಡಾಶಯದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ವಿಶೇಷವಾಗಿ ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ಜನರಲ್ಲಿ ಹಲವಾರು ತಪ್ಪು ಕಲ್ಪನೆಗಳಿವೆ. ಹಾಗಾದ್ರೆ ಮಹಿಳೆಯರು ತಿಳಿದುಕೊಳ್ಳಬೇಕಾದ ಕೆಲವು ಸತ್ಯಗಳು ಯಾವುದು ಅನ್ನೋದನ್ನು ನೋಡೋಣ.

1. ಅಂಡಾಶಯದ ಕ್ಯಾನ್ಸರ್ ವಯಸ್ಸಾದ ಮಹಿಳೆಯರಿಗೆ ಮಾತ್ರ ತಗುಲುತ್ತಾ?
ವಯಸ್ಸಾದ ಮಹಿಳೆಯರಿಗೆ ಮಾತ್ರ ಅಂಡಾಶಯದ ಕ್ಯಾನ್ಸರ್ ತಗುಲುತ್ತೆ ಅನ್ನೋ ತಪ್ಪು ಕಲ್ಪನೆ ಅನೇಕ ಜನರಿಗಿದೆ. ಅಂಡಾಶಯದ ಕ್ಯಾನ್ಸರ್ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಅಧಿಕವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಯುವತಿಯರು ಮತ್ತು ಹದಿಹರೆಯದವರು ಸೇರಿದಂತೆ ಎಲ್ಲಾ ವಯಸ್ಸಿನ ಮಹಿಳೆಯರಲ್ಲೂ ಕಾಣಿಸಿಕೊಳ್ಳುತ್ತದೆ. ಇತರ ದೇಶಗಳಲ್ಲಿರುವಂತೆ ಭಾರತದಲ್ಲಿ ಅಂಡಾಶಯದ ಕ್ಯಾನ್ಸರ್ ನಿಂದ ಹೆಚ್ಚು ಬಳಲುವವರು 45 ರಿಂದ 65 ವರ್ಷ ವಯಸ್ಸಿನ ಒಳಗಿನ ಮಹಿಳೆಯರು.
2. ಇದನ್ನು ಪಾಪ್(Pap) ಟೆಸ್ಟ್ ಮೂಲಕ ಮಾತ್ರ ಪತ್ತೆಹಚ್ಚಬಹುದಾ?
ಅಂಡಾಶಯದ ಕ್ಯಾನ್ಸರ್ ಸ್ಕ್ರೀನಿಂಗ್ ಗಾಗಿ ಪಾಪ್ ಟೆಸ್ಟ್ ಗಳನ್ನು ಮಾಡಲಾಗುವುದಿಲ್ಲ. ಪಾಪ್ ಟೆಸ್ಟ್ ನ ಉದ್ದೇಶ ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆಹಚ್ಚುವುದು ಮಾತ್ರ. ಅಂಡಾಶಯದ ಕ್ಯಾನ್ಸರ್ ಗಾಗಿ ಯಾವುದೇ ನಿರ್ದಿಷ್ಟ ಟೆಸ್ಟ್ ಇಲ್ಲ. ಸ್ತ್ರೀಯರಲ್ಲಿ ಅಂಡಾಶಯದ ಕ್ಯಾನ್ಸರ್ ಅಂಡಾಶಯದ ಸುತ್ತಲೂ ಹರಡಿದ ನಂತರವೇ ಗೊತ್ತಾಗುತ್ತದೆ.
ಅಂಡಾಶಯದ ಕ್ಯಾನ್ಸರ್ ಒಂದು ಹಂತ ತಲುಪಿದ ನಂತರ ಅಲ್ಟ್ರಾಸೌಂಡ್ (TVUS) ಮತ್ತು CA-125 ರಕ್ತ ಪರೀಕ್ಷೆ ಮಾಡುವುದರ ಮೂಲಕ ಅಂಡಾಶಯದ ಕ್ಯಾನ್ಸರ್ ಅನ್ನು ಪತ್ತೆ ಮಾಡಬಹುದು. ಅಂಡಾಶಯದ ಕ್ಯಾನ್ಸರ್ ಪತ್ತೆ ಹಚ್ಚ ಬೇಕೆಂದರೆ ವಾರ್ಷಿಕವಾಗಿ ಪರೀಕ್ಷೇ ಮಾಡಿಸುತ್ತಿರೋದು ತುಂಬಾನೇ ಮುಖ್ಯವಾಗುತ್ತದೆ.
3.ಅಂಡಾಶಯದಲ್ಲಿ ಕಂಡು ಬರುವ ರೋಗಗಳೆಲ್ಲಾ ಕ್ಯಾನ್ಸರ್ ಅಲ್ಲ!
ಜನರಲ್ಲಿ ಸಾಮಾನ್ಯವಾಗಿ ಒಂದು ತಪ್ಪು ಕಲ್ಪನೆಯಿದೆ. ಅದೇನೆಂದರೆ ಅಂಡಾಶಯದಲ್ಲಿ ಕಂಡು ಬರುವ ರೋಗಗಳನ್ನೆಲ್ಲಾ ಕ್ಯಾನ್ಸರ್ ಅಂತ ಅಂದುಕೊಳ್ಳುವುದು. ಅಂಡಾಶಯದ ಕ್ಯಾನ್ಸರ್ ಮತ್ತು ಅಂಡಾಶಯದ ಚೀಲಗಳ ನಡುವೆ ತುಂಬಾನೇ ವ್ಯತ್ಯಾಸವಿದೆ. ಹೆಚ್ಚಿನ ಅಂಡಾಶಯದ ಚೀಲಗಳು ಹಾನಿಕರವಲ್ಲದ ಮತ್ತು ನಿರುಪದ್ರವವಾಗಿವೆ. ಈ ಚೀಲಗಳು ಋತುಚಕ್ರದ ಸಮಯದಲ್ಲಿ ರೂಪುಗೊಳ್ಳುತ್ತದೆ. ಹೀಗೆ ಕಾಣಿಸಿಕೊಂಡ ಚೀಲಗಳು ತನ್ನಷ್ಟಕ್ಕೆ ಗುಣವಾಗುತ್ತದೆ.
4. ಅಂಡಾಶಯದ ಕ್ಯಾನ್ಸರ್ ಅನುವಂಶಿಯವಾಗಿದ್ಯಾ?
ಅಂಡಾಶಯದ ಕ್ಯಾನ್ಸರ್ ನ ಎಲ್ಲಾ ಪ್ರಕರಣಗಳು ಅನುವಂಶೀಯವಾಗಿ ಇರೋದಿಲ್ಲ. ಕೇವಲ 10-15% ಅಂಡಾಶಯದ ಕ್ಯಾನ್ಸರ್‌ಗಳು BRCA1 ಮತ್ತು BRCA2 ನಂತಹ ಆನುವಂಶಿಕ ಜೀನ್ ರೂಪಾಂತರಗಳೊಂದಿಗೆ ಸಂಬಂಧವನ್ನು ಹೊಂದಿವೆ. ಉಳಿದಂತೆ ಯಾರಿಗೂ ಕೂಡ ಅಂಡಾಶಯದ ಕ್ಯಾನ್ಸರ್ ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಅನುವಂಶೀಯವಾಗಿ ಅಲ್ಲದೇ ಮುಟ್ಟಿನ ಸಮಸ್ಯೆ, ತಡವಾಗಿ ಋತುಚಕ್ರವಾಗುವುದು, ಬಂಜೆತನ, ಹಾರ್ಮೋನು ಸಮಸ್ಯೆ ಮತ್ತು ಧೂಮಪಾನದಂತಹ ಇತರ ಜೀವನ ಶೈಲಿಗಳಿಂದಲೂ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ತುಂಬಾನೇ ಜಾಗರೂಕರಾಗಿರಿ.
5. ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು ಗೊತ್ತಾಗೋದಿಲ್ವಾ?
ಅಂಡಾಶಯದ ಕ್ಯಾನ್ಸರ್ ಹೊಂದಿರುವ ಮಹಿಳೆಯರಲ್ಲಿ ಆರಂಭದಲ್ಲಿ ಯಾವುದೇ ಲಕ್ಷಣಗಳು ಗೋಚರ ಆಗೋದಿಲ್ಲ ಎನ್ನುವ ತಪ್ಪು ಕಲ್ಪನೆಯಿದೆ. ಲಕ್ಷಣಗಳು ಗೊಚರಿಸುತ್ತದೆ. ಆದರೆ ನೀವು ಈ ಬಗ್ಗೆ ಗಮನ ಕೊಟ್ಟಿರೋದಿಲ್ಲ ಅಷ್ಟೇ. ಹೊಟ್ಟೆಯಲ್ಲಿ ನಿರಂತರ ಉಬ್ಬುವುದು ಅಥವಾ ಊತ, ಮಲಬದ್ಧತೆ ಅಥವಾ ಅತಿಸಾರ, ಕರುಳಿನಲ್ಲಿ ಹಠಾತ್ ಬದಲಾವಣೆ, ಮೂತ್ರ ವಿಸರ್ಜನೆ ಮಾಡುವಾಗ ನೋವು ಉಂಟಾಗುವುದು, ಕಿಬ್ಬೊಟ್ಟೆಯ ನೋವು ಮತ್ತು ಲೈಂಗಿಕ ಸಂಭೋಗದ ಸಮಯದಲ್ಲಿ ನೋವು ಉಂಟಾಗುವುದು. ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ.
ಕ್ಯಾನ್ಸರ್ ಮಹಾ ಮಾರಿಯಾಗಿ ಎಲ್ಲರನ್ನೂ ಕಾಡ್ತಿದ್ದು, ನಮ್ಮ ಜಾಗರೂಕತೆಯಲ್ಲಿ ನಾವಿದ್ದರೆ ಒಳ್ಳೆಯದು. ಆರು ತಿಂಗಳಿಗೊಮ್ಮೆ ವೈದ್ಯಕೀಯ ಪರೀಕ್ಷೇ ಮಾಡುತ್ತಿದ್ದರೆ ಈ ರೋಗಗಳಿಂದ ಪಾರಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












