Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಫಾ ವೈರಸ್ ಕುರಿತು ಹರಡುತ್ತಿದೆ ವದಂತಿಗಳು, ಸತ್ಯಾಂಶವೇನು?
ಕೇರಳದಲ್ಲಿ ನಿಫಾ ವೈರಸ್ ಆತಂಕವಿರುವುದರಿಂದ ಕೇರಳದ ಗಡಿಯ ಸಮೀಪದ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ,ಕೊಡಗು ಈ ಭಾಗದಲ್ಲಿ ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ. ಜ್ವರ, ಶೀತ ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆಯಿರಿ. ಇನ್ನು ನಿಫಾ ವೈರಸ್ ಕುರಿತು ಕೆಲವೊಂದು ಪ್ರಶ್ನೆಗಳು ಜನರನ್ನು ಕಾಡುತ್ತಿದೆ, ಕೆಲವೊಂದು ತಪ್ಪು ಕಲ್ಪನೆಗಳು ಕೂಡ ಹರಡುತ್ತಿದೆ, ಅವುಗಳ ಬಗ್ಗೆ ನೋಡುವುದಾದರೆ...

ತಪ್ಪು ಕಲ್ಪನೆ: ನಿಫಾ ವೈರಸ್ ವೈರಸ್ ಕೋವಿಡ್ -19 ರೀತಿಯಲ್ಲಿ ಗಾಳಿಯಲ್ಲಿ ಹರಡುತ್ತದೆ
ಸತ್ಯ: ನಿಫಾ ವೈರಸ್ ಪ್ರಾಥಮಿಕ ಸಂಪರ್ಕದಿಂದ ಹರಡುವುದು. ಅಂದರೆ ನಿಫಾ ವೈರಸ್ ಇರುವ ಮನುಷ್ಯ ಅಥವಾ ಪ್ರಾಣಿಗಳನ್ನು ಮುಟ್ಟುವುದರಿಂದ ಅಥವಾ ನಿಫಾ ವೈರಸ್ ಇರುವ ಬಾವಲಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನುವುದರಿಂದ , ವೈರಸ್ ತಗುಲಿರುವ ಪ್ರಾಣಿಗಳ ಮಾಂಸಾಹಾರ ಸೇವನೆಯಿಂದ ( ಹಂದಿ) ಹರಡುವುದು. ನಿಫಾ ವೈರಸ್ ಕೋವಿಡ್ 19 ರೀತಿಯಲ್ಲಿ ಗಾಳಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ.
ತಪ್ಪು ಕಲ್ಪನೆ: ಎಲ್ಲಾ ಬಾವಲಿಗಳಲ್ಲಿ ನಿಫಾ ವೈರಸ್ ಇದೆ
ನಿಫಾ ವೈರಸ್ ಹರಡುವಲ್ಲಿ ನಿಫಾ ವೈರಸ್ ಪ್ರಮುಖ ಪಾತ್ರವಹಿಸುತ್ತದೆ, ಆದರೆ ಎಲ್ಲಾ ಬಾವಲಿಗಳಲ್ಲಿ ನಿಫಾ ವೈರಸ್ ಇರುವುದಿಲ್ಲ.
ನಿಫಾ ವೈರಸ್ ಕೋವಿಡ್ 19 ರೀತಿ ಮನುಷ್ಯರಿಂದ ಮನುಷ್ಯರಿಗೆ ಹರಡುವುದು
ಇದು ನಿಜ, ಆದರೆ ಕೋವಿಡ್ 19 ರೀತಿಯಲ್ಲಿ ಹರಡುವುದಿಲ್ಲ. ವೈರಸ್ ತಗುಲಿದ ರೋಗಿಯ ನೇರ ಸಂಪರ್ಕಕ್ಕೆ ಬಂದವರಿಗೆ ಮಾತ್ರ ಇದು ಹರಡುವ ಸಾಧ್ಯತೆ ಇದೆ, ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಆರೈಕೆ ಮಾಡಬೇಕು.
ನಿಫಾ ವೈರಸ್‌ಗೆ ಚಿಕಿತ್ಸೆ ಇದೆಯೇ?
ನಿಫಾ ವೈರಸ್‌ಗೆ ಅಂತಲೇ ಪ್ರತ್ಯೇಕ ಚಿಕಿತ್ಸೆಯಿಲ್ಲ, ರೋಗದ ಲಕ್ಷಣಗಳನ್ನು ನೀಡಿ ಚಿಕಿತ್ಸೆ ನೀಡಲಾಗುವುದು.
ನಿಫಾ ವೈರಸ್ ಮಾರಾಣಾಂತಿಕವೇ?
ನಿಫಾ ವೈರಸ್ ಮಾರಾಣಾಂತಿಕ ಹೌದು. ಈ ವೈರಸ್ ತಗುಲಿದವರಲ್ಲಿ ಮರಣವೊಂದಿದವರ ಸಂಖ್ಯೆ ಅಧಿಕವಿದೆ. ಹಾಗಂತ ಇದು ಬಂದರೆ ಸತ್ತು ಹೋಗುತ್ತಾರೆ ಎಂದು ಭಯ ಪಡಬೇಕಾಗಿಲ್ಲ. ಬೇಗನೆ ಚಿಕಿತ್ಸೆ ಪಡೆದರೆ ಚೇತರಿಸಿಕೊಳ್ಳುವ ಸಾಧ್ಯತೆ ತುಂಬಾನೇ ಇದೆ.
ಹಣ್ಣುಗಳನ್ನು ತಿಂದರೆ ನಿಫಾ ವೈರಸ್ ಬರುವುದೇ?
ಬಾವಲಿ ಕಚ್ಚಿರುವ ಹಣ್ಣುಗಳನ್ನು ತಿನ್ನದಿರುವುದು ಒಳ್ಳೆಯದು. ಬಾವಲಿ ಅಂತಲ್ಲ ಯಾವುದೇ ಪಕ್ಷಿ ಸೇವಿಸಿರುವ ಹಣ್ಣುಗಳನ್ನು ಸೇವಿಸಬೇಡಿ. ಇಷ್ಟು ಮಾತ್ರ ಎಚ್ಚರಿಕೆವಹಿಸಿದರೆ ಸಾಕು, ನೀವು ಯಾವ ಹಣ್ಣು ಬೇಕಾದರೂ ತಿನ್ನಬಹುದು.
ನಿಫಾ ವೈರಸ್ ಹರಡುವುದನ್ನು ತಡೆಗಟ್ಟುವುದು ಹೇಗೆ?
ಬಾವಲಿ, ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬೇಡಿ, ಕಾಯಿಲೆ ಬಂದಿರುವ ಹಂದಿಯನ್ನು ಸೇವಿಸಬಾರದು. ಅಲ್ಲದೆ ಸೋಂಕು ತಗುಲಿರುವ ವ್ಯಕ್ತಿಯ ದೇಹದ ದ್ರವ (ಮಲ, ಮೂತ್ರ, ಬೆವರು) ಮತ್ತೊಬ್ಬರಿಗೆ ತಗುಲಿದರೆ ವೈರಸ್ ಹರಡುವುದು, ಆದ್ದರಿಂದ ಗ್ಲೌಸ್, ಫೇಸ್‌ಮಾಸ್ಕ್, ಗೌನ್ ಇವುಗಳನ್ನು ಸರಿಯಾಗಿ ಧರಿಸಿ ರೋಗಿಯ ಆರೈಕೆ ಮಾಡಬೇಕು.
ನಿಫಾ ವೈರಸ್‌ಗೆ ಲಸಿಕೆ ಇದೆಯೇ?
ನಿಫಾ ವೈರಸ್ ತಡೆಗಟ್ಟಲು ಸದ್ಯಕ್ಕೆ ಯಾವುದೇ ಲಸಿಕೆ ಕಂಡು ಹಿಡಿದಿಲ್ಲ....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
