Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕೇರಳದಲ್ಲಿ ಮಂಪ್ಸ್ ವೈರಸ್ ಅಬ್ಬರ..! ಪ್ರತಿದಿನ 50 ಕೇಸ್ ಪತ್ತೆ..!
ದಿನಗಳು ಕಳೆದಂತೆ ಹೊಸ ಹೊಸ ಕಾಯಿಲೆಗಳು, ವೈರಸ್‌ಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಅದರಲ್ಲೂ ಚಳಿಗಾಲದಲ್ಲಿ ವೈರಸ್ ಹರಡುವಿಕೆ ಹೆಚ್ಚಾಗಿಯೇ ಇರುತ್ತದೆ. ಈಗ ಕೇರಳದಲ್ಲಿ ಹೊಸದೊಂದು ವೈರಸ್ ವೇಘವಾಗಿ ಹರಡುತ್ತಿದ್ದು ಅಧಿಕಾರಿಗಳು ಆತಂಕ ಹೊರಹಾಕಿದ್ದಾರೆ.
ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ಪ್ರತಿದಿನ 50ಕ್ಕೂ ಹೆಚ್ಚು ಮಂಪ್ಸ್ ಪ್ರಕರಣಗಳು ವರದಿಯಾಗುತ್ತಿವೆ. ಮಂಪ್ಸ್ ರಾಜ್ಯದಲ್ಲಿ ಶಾಲಾ ಮಕ್ಕಳಲ್ಲಿ ಹರಡುತ್ತಿರುವ ಅತ್ಯಂತ ಆಘಾತಕಾರಿ ಸಾಂಕ್ರಾಮಿಕ ಕಾಯಿಲೆ ಎಂದು ತಿಳಿಸಲಾಗಿದೆ. ತಿರುವನಂತಪುರಂ ಜನರಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವೈರಸ್‌ಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ವೈದ್ಯರು ಈಗ ಚೇತರಿಸಿಕೊಳ್ಳಲು ಹತ್ತು ದಿನಗಳ ರಜೆಯಲ್ಲಿದ್ದಾರೆ.

ಇನ್ನು ಕೇರಳದ ಮಲ್ಲಾಪುರಂನಲ್ಲಿಯೂ ಮಂಪ್ಸ್ ಗೆ ತುತ್ತಾಗಿರುವ ಕುರಿತು ವರದಿಗಳಾಗಿವೆ. 2024 ರಲ್ಲಿ ಮಲಪ್ಪುರಂನಲ್ಲಿ 13,643 ಕ್ಕೂ ಹೆಚ್ಚು ಮಂಪ್ಸ್ ಪ್ರಕರಣಗಳು ವರದಿಯಾಗಿವೆ ಎಂದು ವರದಿಯಾಗಿದೆ. ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾರಣದಿಂದಾಗಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಮಂಪ್ಸ್ ವೈರಸ್ ಹೇಗೆ ಹರಡುತ್ತದೆ?
ಮಂಪ್ಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಇದು ಗಾಳಿಯ ಮೂಲಕ ಹರಡುತ್ತದೆ ಮತ್ತು ಕಿವಿಯ ಸಮೀಪವಿರುವ ಲಾಲಾರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಜ್ವರ, ಊದಿಕೊಂಡ ಮತ್ತು ನೋವಿನ ಲಾಲಾರಸ ಗ್ರಂಥಿಗಳು, ಗಂಟಲು ನೋವು, ತಲೆನೋವು, ಹಸಿವು ಮತ್ತು ಆಯಾಸದಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಕೆಲವು ಪ್ರಕರಣಗಳಲ್ಲಿ ಇದು ಜೀವಕ್ಕೂ ಹಾನಿ ಮಾಡಬಹುದು.
ಮಂಪ್ಸ್ ವೈರಸ್ ರೂಪಾಂತರವಾಗುತ್ತದೆಯೇ?
ಕೋವಿಡ್ ಸಮಯದಲ್ಲಿ ಅದರ ರೂಪಾಂತರವು ಎಷ್ಟೊಂದು ಅಪಾಯಗಳ ತಂದೊಡ್ಡಿತ್ತು ಎಂಬುದು ನಾವೆಲ್ಲಾ ನೋಡಿದ್ದೇವೆ. ಹಾಗೆ ಈ ಮಂಪ್ಸ್ ಪ್ರಕರಣ ಏಕಾಏಕಿ ಏರಿಕೆಯಾಗಲು ರೂಪಾಂತರ ಕಾರಣವಾಗಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಹೊಸ ರೂಪಾಂತರದ ಉದಯದ ಸಾಧ್ಯತೆಯು ಹವಾಮಾನ ಬದಲಾವಣೆಯ ಪರಾಕಾಷ್ಠೆಯಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಹೊಸ ಸ್ಟ್ರೈನ್ ಹೆಚ್ಚು ತೀವ್ರವಾಗಿರಬಹುದು ಮತ್ತು ಸಂದರ್ಭಗಳನ್ನು ಪರಿಗಣಿಸಿ, ಮಕ್ಕಳು ಮತ್ತು ವಯಸ್ಕರ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳುತ್ತಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ಮಂಪ್ಸ್ ವೈರಸ್‌ಗೆ ಒಳಗಾಗುತ್ತಾರೆ.
ಮಂಪ್ಸ್ ವೈರಸ್ ಲಕ್ಷಣವೇನು?
ನಾವು ಮೊದಲೇ ಹೇಳಿದ್ದಂತೆ ಇದು ಹರಡು ವೈರಸ್ ಆಗಿರುವುದರಿಂದ, ಜ್ವರ, ತಲೆನೋವು, ಗಂಟಲು ನೋವು, ಪ್ರಮುಖ ಲಕ್ಷಣವಾಗಿ ಕಾಣಿಸಲಿದೆ. ಇದನ್ನು ಹೊರತುಪಡಿಸಿ ಆಯಾಸ, ತಲೆಸುತ್ತು, ಲಾಲಾರಸ ಗ್ರಂಥಿಗಳು ಊದಿಕೊಳ್ಳುವುದು ಸೇರಿ ಹಲವು ಲಕ್ಷಣಗಳು ಗೋಚರಿಸಬಹುದು.
ಮಂಪ್ಸ್ ವೈರಸ್ ಕೇರಳ ಮಾತ್ರವಲ್ಲ ಹಲವು ರಾಜ್ಯದಲ್ಲೂ ಈ ಮೊದಲು ವರದಿಯಾಗಿತ್ತು. ಮಾರ್ಚ್‌ನಲ್ಲಿ ಕೇರಳದಲ್ಲಿ ಒಂದು ತಿಂಗಳಲ್ಲಿ 2500 ಕ್ಕೂ ಹೆಚ್ಚು ಮಂಪ್ಸ್ ಪ್ರಕರಣಗಳು ವರದಿಯಾಗಿದ್ದವು. ಹಾಗೆ ಇದೇ ಸಮಯದಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಮಂಪ್ಸ್ ಪ್ರಕರಣಗಳು ವರದಿಯಾಗಿವೆ. ಇದಲ್ಲದೆ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿಯೂ ಕೆಲವು ಮಂಪ್ಸ್ ಪ್ರಕರಣಗಳು ವರದಿಯಾಗಿತ್ತು.
ಮಂಪ್ಸ್ ಎಂಬುದು ಪ್ಯಾರಾಮಿಕ್ಸೊವೈರಸ್ ಹರಡುವಿಕೆಯಿಂದ ಉಂಟಾಗುವ ವೈರಲ್ ಸೋಂಕು. ಸೋಂಕಿತ ವ್ಯಕ್ತಿಯ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಿಂದ ನೇರ ಸಂಪರ್ಕ ಅಥವಾ ವಾಯುಗಾಮಿ ಹನಿಗಳ ಮೂಲಕ ವೈರಸ್ ಹರಡಬಹುದು. ಇದು ಸಾಮಾನ್ಯವಾಗಿ 5-9 ವರ್ಷ ವಯಸ್ಸಿನ ಮಕ್ಕಳಲ್ಲಿ ವರದಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications