Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಡಾಕ್ಟರ್ ಬೇಡ, ಮಾತ್ರೆಯೂ ಬೇಡ.. ಮನೆಯಲ್ಲಿರುವ ಈ 5 ವಸ್ತುಗಳು ಸಾಕು! ನಿಮಿಷದಲ್ಲೇ ಬಾಯಿ ಹುಣ್ಣಿಗೆ ಮುಕ್ತಿ
ಡಾಕ್ಟರ್ ಹತ್ತಿರ ಹೋಗ್ಬೇಡಿ.. ಬಾಯಿ ಹುಣ್ಣಿಗೆ ಮಾತ್ರೆ ಕೂಡ ಬೇಡ! ಮನೆಯಲ್ಲಿರುವ ಈ 5 ವಸ್ತುಗಳು ಸಾಕು.. ನೋವಿನಿಂದ ಮುಕ್ತಿ ಪಡೆಯಿರಿ. ಹೌದು, ಸಣ್ಣ ಸಮಸ್ಯೆಯೆಂದು ನಿರ್ಲಕ್ಷಿಸಲಾಗದಷ್ಟು ನೋವು ನೀಡುವ ಬಾಯಿ ಹುಣ್ಣು (Mouth Ulcers) ಅಥವಾ ಆಲ್ಸರ್, ಹಲವರನ್ನು ನಿತ್ಯ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಊಟ ತಿಂಡಿ ಸೇವಿಸಲೂ ಕಷ್ಟವಾಗುವ ಈ ನೋವಿಗೆ ಅಡುಗೆಮನೆಯಲ್ಲಿಯೇ ಸರಳ ಪರಿಹಾರಗಳಿವೆ.
ಯಾರನ್ನಾದರೂ ಕಾಡುವ ಬಾಯಿ ಹುಣ್ಣಿಗೆ ಅತಿಯಾದ ದೇಹದ ಉಷ್ಣತೆ, ವಿಟಮಿನ್ ಬಿ12 ಕೊರತೆ, ಮಲಬದ್ಧತೆ, ಖಾರ ಸೇವನೆ ಅಥವಾ ಸೋಂಕು ಮುಖ್ಯ ಕಾರಣಗಳು. ಬಾಯಿಯ ಒಳಭಾಗದಲ್ಲಿ ಬಿಳಿ, ಕೆಂಪು ಗುಳ್ಳೆಗಳು ಕಾಣಿಸಿಕೊಂಡು ತೀವ್ರ ಉರಿ, ನೋವು ಕಾಣಿಸುತ್ತದೆ. ಇವು ಸಾಮಾನ್ಯವಾಗಿ ಕೆಲವು ದಿನಗಳಲ್ಲಿ ಗುಣವಾಗುವವಾದರೂ, ತಕ್ಷಣದ ಉಪಶಮನಕ್ಕೆ ಈ ಮನೆಮದ್ದುಗಳು ಸಹಕಾರಿ. ನಿಮಿಷಗಳಲ್ಲಿ ನೋವು ಕಡಿಮೆ ಮಾಡುವ 5 ಪರಿಣಾಮಕಾರಿ ಮನೆಮದ್ದುಗಳ (Mouth Ulcers Home Remedies) ಮಾಹಿತಿ ಇಲ್ಲಿದೆ.

ಜೇನುತುಪ್ಪ ಮತ್ತು ಅರಿಶಿನದ ಮಿಶ್ರಣ
ಜೇನುತುಪ್ಪ ನೈಸರ್ಗಿಕ ಗುಣಪಡಿಸುವ ಶಕ್ತಿ ಹೊಂದಿದ್ದರೆ, ಅರಿಶಿನ ಉತ್ತಮ ಆಂಟಿ-ಸೆಪ್ಟಿಕ್. ಒಂದು ಚಮಚ ಜೇನುತುಪ್ಪಕ್ಕೆ ಚಿಟಿಕೆ ಅರಿಶಿನ ಪುಡಿ ಸೇರಿಸಿ ಪೇಸ್ಟ್ ತಯಾರಿಸಿ, ಹುಣ್ಣಿನ ಮೇಲೆ ಹಚ್ಚಿ. 10-15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸಿ. ದಿನಕ್ಕೆ 2-3 ಬಾರಿ ಹೀಗೆ ಮಾಡುವುದರಿಂದ ಹುಣ್ಣು ಬೇಗ ಒಣಗಲು ಸಹಕಾರಿ.
ತೆಂಗಿನ ಎಣ್ಣೆಯ ಬಳಕೆ
ತೆಂಗಿನ ಎಣ್ಣೆಯಲ್ಲಿ ಆಂಟಿ-ಮೈಕ್ರೋಬಿಯಲ್ ಮತ್ತು ಆಂಟಿ-ಇನ್ಫ್ಲಮೇಟರಿ ಗುಣಗಳಿವೆ. ಇದು ಹುಣ್ಣಿನ ಉರಿಯನ್ನು ಶಮನಗೊಳಿಸಿ ತಂಪು ನೀಡುತ್ತದೆ. ಶುದ್ಧ ತೆಂಗಿನ ಎಣ್ಣೆಯನ್ನು ಹುಣ್ಣಿನ ಮೇಲೆ ಹಚ್ಚಿ. ಇದು ಬಾಯಿಯ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆದು ನೋವು ಕಡಿಮೆ ಮಾಡುತ್ತದೆ. ಸುಮಾರು 10 ನಿಮಿಷಗಳ ನಂತರ ಬಾಯಿ ಮುಕ್ಕಳಿಸುವುದರಿಂದ ಉಪಶಮನ ದೊರೆಯುತ್ತದೆ.
ಲೋಳೆಸರ (ಅಲೋವೆರಾ) ಬಳಕೆ
ಲೋಳೆಸರವು ಬಾಯಿ ಹುಣ್ಣುಗಳಿಗೆ ತಕ್ಷಣ ತಂಪು ನೀಡುತ್ತದೆ. ಅಲೋವೆರಾ ಜೆಲ್ ತೆಗೆದುಕೊಂಡು ಹುಣ್ಣಿನ ಮೇಲೆ ಹಚ್ಚಿ. 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ನೀರಿನಿಂದ ತೊಳೆಯಿರಿ. ಇದು ಹುಣ್ಣಿನ ಸುತ್ತಲಿನ ಊತ ಮತ್ತು ನೋವು ನಿವಾರಿಸಲು ನೆರವಾಗುತ್ತದೆ.
ಕಾಚು ಮತ್ತು ಎಲೆ
ಭಾರತೀಯ ಪದ್ಧತಿಯಲ್ಲಿ ಕಾಚು (ಕತ್ಥಾ) ಬಾಯಿ ಹುಣ್ಣುಗಳಿಗೆ ಉತ್ತಮ ಔಷಧಿ. ಪೇರಳೆ ಅಥವಾ ವೀಳ್ಯದೆಲೆಯ ಎಳೆಯ ಚಿಗುರಿಗೆ ಸ್ವಲ್ಪ ಕಾಚು ಹಾಕಿ ಮೆಲ್ಲಗೆ ಅಗಿಯಿರಿ. ಇದು ಬಾಯಿಯ ಲಾಲಾರಸದೊಂದಿಗೆ ಸೇರಿ ಹುಣ್ಣುಗಳನ್ನು ಬೇಗನೆ ಗುಣಪಡಿಸುತ್ತದೆ. ನೋವು ಕಡಿತಕ್ಕೂ ಇದು ಸಹಕಾರಿ.
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು
ಇದು ಬಾಯಿ ಹುಣ್ಣುಗಳಿಗೆ ಅತ್ಯಂತ ಹಳೆಯ, ಪರಿಣಾಮಕಾರಿ ವಿಧಾನಗಳಲ್ಲಿ ಒಂದು. ಉಪ್ಪು ನೀರು ಬಾಯಿಯ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಒಂದು ಕಪ್ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ ಬೆರೆಸಿ. ಈ ನೀರಿನಿಂದ ಒಂದು ನಿಮಿಷ ಬಾಯಿ ಮುಕ್ಕಳಿಸಿ ಉಗುಳಿದರೆ, ಹುಣ್ಣಿನ ನೋವು, ಊತ ಗಣನೀಯವಾಗಿ ಕಡಿಮೆಯಾಗುತ್ತದೆ.
ಈ ಮುನ್ನೆಚ್ಚರಿಕೆ ನೆನಪಿರಲಿ!
- ಬಾಯಿ ಹುಣ್ಣು ಇದ್ದಾಗ ಹೆಚ್ಚು ಖಾರ, ಉಪ್ಪು ಅಥವಾ ಹುಳಿ ಆಹಾರ ಸೇವಿಸಬೇಡಿ.
- ದೇಹದ ಉಷ್ಣತೆ ನಿಯಂತ್ರಿಸಲು ದಿನಕ್ಕೆ ಕನಿಷ್ಠ 8-10 ಲೋಟ ನೀರು ಕುಡಿಯಿರಿ.
- ಮಲಬದ್ಧತೆ ಆಗದಂತೆ ಹಸಿರು ತರಕಾರಿ, ಹಣ್ಣು ಸೇವಿಸಿರಿ, ಇದು ಹುಣ್ಣು ಕಡಿಮೆಗೊಳಿಸಲು ನೆರವಾಗುತ್ತದೆ.
- ಎರಡು ವಾರಗಳಿಗಿಂತ ಹೆಚ್ಚು ಕಾಲ ಹುಣ್ಣು ಗುಣವಾಗದಿದ್ದರೆ ಅಥವಾ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಈ ಮೇಲಿನ ಸರಳ ಮನೆಮದ್ದುಗಳನ್ನು ಅನುಸರಿಸುವುದರಿಂದ ಬಾಯಿ ಹುಣ್ಣಿನ ನೋವಿನಿಂದ ತ್ವರಿತ ಪರಿಹಾರ (how to cure mouth ulcers) ಕಂಡುಕೊಳ್ಳಬಹುದು. ಆರೋಗ್ಯ ಕಾಪಾಡಿಕೊಳ್ಳಲು ಸಹ ನೆರವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications