Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಾಯಿಯ ಒತ್ತಡ ನಿವಾರಣೆಗೆ ಏನು ಮಾಡಬೇಕು..? ತಾಯಂದಿರ ದಿನ ಇದುವೇ ಆಕೆಗೆ ದೊಡ್ಡ ಗಿಫ್ಟ್..!
ತಾಯಿ ಅಂದರೆ ಕುಟುಂಬದ ಮುಖ್ಯ ವ್ಯಕ್ತಿ. ತನ್ನ ಅಗತ್ಯಕ್ಕಿಂತ ಕುಟುಂಬದ ಅಗತ್ಯತೆಗಳ ಅರಿತವಳು. ಮನೆ, ಗಂಡ, ಮಕ್ಕಳು, ಹಿರಿಯರ ಆರೈಕೆಯಲ್ಲಿ ಮೈ ಮರೆತ ಆಕೆ ತನ್ನ ಆರೋಗ್ಯ, ಆರೈಕೆ ಎಂದಿಗೂ ಬಯಸಿದ್ದೇ ಇಲ್ಲ. ಮನೆಯಲ್ಲಿ ತಾಯಿಯೊಬ್ಬಳೇ ಎಲ್ಲವನ್ನು ನಿಭಾಯಿಸುವ ಶಕ್ತಿ ಇರುವ ವ್ಯಕ್ತಿ.
ಆಕೆಯೊಬ್ಬಳು ಜೊತೆಗಿದ್ದರೆ ಎಂತಹ ಸವಾಲನ್ನು ಬೇಕಾದರು ನೀವು ತೆಗೆದುಕೊಳ್ಳುತ್ತೀರಿ. ಆ ಶಕ್ತಿ ನೀಡಲು ಸಾಧ್ಯವಿರೋದು ತಾಯಿಗೆ ಮಾತ್ರ ಆದ್ರೆ ನೀವು ಎಂದಾದ್ರು ಆಕೆಯ ಆರೋಗ್ಯದ ಬಗ್ಗೆ, ಆಕೆಯ ದೈಹಿಕ ಆರೈಕೆ ಬಯಕೆ ಬಗ್ಗೆ ಯೋಚಿಸಿದ್ದೀರಾ? ನಮ್ಮಲ್ಲಿ ಬಹುಪಾಲು ಮಂದಿ ಈ ಕುರಿತು ಯೋಚಿಸಿರುವುದೇ ಇಲ್ಲ. ಏಕೆಂದರೆ ತಾಯಿಯಾದವಳು ಎಂದಿಗೂ ತನ್ನ ಬಯಕೆ ಏನು? ತನ್ನ ಅನಾರೋಗ್ಯವೇನು ಎಂಬುದನ್ನು ಹೇಳಿಕೊಂಡಿರುವುದೇ ಇಲ್ಲ.

ಆದ್ರೆ ಈ ತಾಯಂದಿರ ದಿನದ ಸಮಯದಲ್ಲಿ ನಾವು ನಿಮ್ಮ ತಾಯಿತ ಆರೋಗ್ಯ ಕಾಪಾಡಲು ಆಕೆಯ ಕುರಿತು ಒಂದಿಷ್ಟು ಕಾಳಜಿ ತೋರಿಸಲು ಏನು ಮಾಡಬೇಕು? ಆಕೆಯ ಮನದಾಳದ ಮಾತು ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.
ನಾವು ತಾಯಿಯ ಆರೋಗ್ಯದ ಬಗ್ಗೆ ಮಾತನಾಡುವಾಗ, ಅವರ ಆಹಾರ ಪದ್ಧತಿ ಮತ್ತು ಆಹಾರಕ್ರಮವು ಅತ್ಯಂತ ಮುಖ್ಯವಾದ ವಿಷಯವಾಗಿದೆ. ತಾಯಂದಿರು ದಿನವಿಡೀ ಅನೇಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಇದು ಅನಿಯಮಿತ ಊಟದ ಸಮಯಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಊಟವನ್ನು ಮುಂಚಿತವಾಗಿ ಯೋಜಿಸುವುದು ಮತ್ತು ಅವರು ಸಮಯಕ್ಕೆ ತಿನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.
ಅಂದರೆ ನಿಮ್ಮ ತಾಯಿ ಯಾವಾಗ ಊಟ ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾ? ಒಂದು ಮನೆ ಅಥವಾ ಕುಟುಂಬದಲ್ಲಿ ಎಲ್ಲರೂ ಊಟ ಮಾಡಿದ ಬಳಿಕ ಆಕೆ ಊಟ ಮಾಡುತ್ತಾಳೆ. ಆದ್ರೆ ಅವಳು ಏನು ಸೇವಿಸುತ್ತಾಳೆ. ಎಷ್ಟು ಸೇವಿಸುತ್ತಾಳೆ ಎಂಬುದನ್ನು ಯಾರು ಸಹ ನೋಡಿರುವುದಿಲ್ಲ.
ಹಾಗಾದ್ರೆ ಆಕೆಯ ಆರೋಗ್ಯದ ಕಡೆ ನೀವು ಗಮನ ಹರಿಸುವುದಾದರೆ ಆಕೆ ಸೇವಿಸು ಆಹಾರದಲ್ಲಿ ಏನೆಲ್ಲಾ ಇರಬೇಕು ಎಂಬುದನ್ನು ನಾವಿಂದು ನೋಡೋಣ.
ಮಾಂಸ, ಮೊಟ್ಟೆ, ಡೈರಿ ಪದಾರ್ಥ ಮತ್ತು ಬೇಳೆಕಾಳುಗಳಂತಹ ಪ್ರೋಟೀನ್-ಭರಿತ ಆಹಾರಗಳು, ಬಾದಾಮಿ, ವಾಲ್‌ನಟ್ಸ್, ಹ್ಯಾಝಲ್‌ನಟ್ ಮತ್ತು ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು ಮತ್ತು ಎಳ್ಳು, ಆರೋಗ್ಯಕರ ಕೊಬ್ಬುಗಳು.
ಗೋಧಿ, ಬಜ್ರಾ, ರಾಗಿ, ಬಾರ್ಲಿ, ಸೋರ್ಗಮ್, ಬಕ್ವೀಟ್ ಮತ್ತು ಓಟ್ಸ್ ಮುಂತಾದ ಧಾನ್ಯಗಳು, ಹಸಿರು ಸೊಪ್ಪಿನ ತರಕಾರಿಗಳು,ಸೋರೆಕಾಯಿ, ಕುಂಬಳಕಾಯಿ, ಎಲೆಕೋಸು, ಹೂಕೋಸು, ಬಟಾಣಿ, ಕಾರ್ನ್, ಕಲ್ಲಂಗಡಿಗಳು, ಹಣ್ಣುಗಳು ಮತ್ತು ದ್ರಾಕ್ಷಿಗಳಂತಹ ಹಣ್ಣುಗಳು ಮತ್ತು ತರಕಾರಿಗಳು ಆಕೆಯ ಆಹಾರದ ಜೊತೆ ಇದ್ದರೆ ಒಳ್ಳೆಯದು.
ಇದರಲ್ಲಿ ಎಲ್ಲವನ್ನೂ ಆಕೆಗೆ ನೀವು ನೀಡಲು ಸಾಧ್ಯವಾಗದೇ ಇರಬಹುದು. ಆದರೆ ಕೆಲವೊಂದನಂತು ನೀವು ನೀಡಬಹುದು. ಆಕೆಯ ಆಹಾರದಲ್ಲಿ ಈ ಅಂಶಗಳಿದ್ದರೆ ಆರೋಗ್ಯ ಉತ್ತಮವಾಗಿರುವುದರಲ್ಲಿ ಅನುಮಾನವೇ ಇಲ್ಲ.
ತಾಯಿಯ ಒತ್ತಡ ನಿವಾರಿಸಬೇಕಾದರೆ ಏನು ಮಾಡಬೇಕು?
ಇತ್ತೀಚಿನ ದಿನಗಳಲ್ಲಿ ನಾವು ತಾಯಂದಿರು ಅತ್ಯಧಿಕ ಒತ್ತಡದ ಜೀವನ ಎದುರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಅವರು ಮಕ್ಕಳಿ, ಮನೆ, ಗಂಡ ಹೀಗೆ ಹಲವು ಜವಾಬ್ದಾರಿಗಳ ನಿಭಾಯಿಸುವುದರಿಂದ ಒತ್ತಡಕ್ಕೆ ಒಳಗಾಗಿರುತ್ತಾರೆ. ಹಾಗಾದ್ರೆ ಅವರ ಒತ್ತಡ ನಿವಾರಿಸಬೇಕಾದರೆ ಏನು ಮಾಡಬೇಕು ಎಂಬುದನ್ನು ನೋಡಿ.
ನಿಮ್ಮ ತಾಯಿಯನ್ನು ಮತ್ತೊಬ್ಬ ತಾಯೊಯೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸಿ. ಜೊತೆಗೆ ನಿಮ್ಮ ತಾಯಿ ಸೂಪರ್ ಮಾಮ್ ಎಂಬ ಕಲ್ಪನೆಯನ್ನು ಆಕೆಯಿಂದ ದೂರ ಮಾಡಬೇಡಿ.
ನೀವು ತಾಯಿಯ ಮಾತು ಮೀರುವವರಲ್ಲ ಎಂಬ ಭಾವನೆ ಮೂಡಿಸಿ. ಆದರೆ ಇದಕ್ಕಾಗಿ ನಾಟಕ ಮಾಡಿ ಇಲ್ಲವೆ ಸುಳ್ಳು ಹೇಳಿ ಆಕೆಯ ನಂಬಿಸುವ ಕಾರ್ಯ ಮಾಡಬೇಡಿ.
ತಾಯಿಯ ಕೆಲಸದಲ್ಲಿ ನೀವು ಭಾಗಿಯಾಗಿ. ತಾನೊಬ್ಬಳೆ ಮನೆಯಲ್ಲಿ ಕಷ್ಟ ಪಡಬೇಕು ಎಂಬ ಭಾವನೆ ಆಕೆಗೆ ಬರುವಂತೆ ಮಾಡಬೇಡಿ. ಒಂದು ಬೇಳೆ ಆಕೆ ಒಬ್ಬಳೇ ಎಲ್ಲಾ ಕೆಲಸ ಮಾಡಿದರೂ ಆ ಕೆಲಸದ ಬಗ್ಗೆ ದೂರು ಹೇಳಬೇಡಿ. ಅಥವಾ ಅದನ್ನೇ ಗುರಿಯಾಗಿಸಿಕೊಂಡು ವಾದ ಮಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
