Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Mothers Day: ನಿಮ್ಮ ತಾಯಿಯ ವಯಸ್ಸು 40-55? ಅವರ ವರ್ತನೆಯಲ್ಲಿ ಬದಲಾವಣೆ ಕಂಡು ಬಂದರೆ ಈ ಸಂಗತಿ ನಿಮಗೆ ತಿಳಿದಿರಲೇಬೇಕು
ನಿಮ್ಮ ಅಮ್ಮನಿಗೆ ವಯಸ್ಸು 4-50ರ ಒಳಗಿದೆಯೇ? ಇತ್ತೀಚೆಗೆ ಅವರ ವರ್ತನೆಯಲ್ಲಿ ಬದಲಾವಣೆ ಕಾಣುತ್ತಿದೆಯೇ? ಹಾಗಾದರೆ ಈ ಸಮಯದಲ್ಲಿ ಮಕ್ಕಳಾದ ನಿಮ್ಮ ಭಾವನಾತ್ಮಕ ಬೆಂಬಲ, ಪ್ರೀತಿ ಅವರಿಗೆ ತುಂಬಾನೇ ಅವಶ್ಯಕವಾಗಿರುತ್ತದೆ. ಇಲ್ಲದಿದ್ದರೆ ಅವರ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪ್ರಭಾವ ಬೀರಬಹುದು.
ತಾಯಿಯ ಮೆನೋಪಾಸ್ ಹಂತದ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕಾಗಿರುವ ಅವಶ್ಯಕ
ತಾಯಿ ತನ್ನ ಮುಟ್ಟಿನ ಚಕ್ರದ ಬಗ್ಗೆ ಮಕ್ಕಳ ಬಳಿ ಹಂಚಿಕೊಳ್ಳುವುದು ತುಂಬಾನೇ ಕಡಿಮೆ. ಹೆಣ್ಮಕ್ಕಳ ಬಳಿಯೇ ಹಂಚಿಕೊಳ್ಳುವುದಿಲ್ಲ, ಅದರಲ್ಲೂ ಗಂಡ್ಮಕ್ಕಳ ಬಳಿ ತಾಯಿ ಈ ಕುರಿತು ಹೇಳುವುದೂ ಇಲ್ಲ. ಆದರೆ ತಾಯಿಯ ಆರೋಗ್ಯದ ಬಗ್ಗೆ ತಿಳಿದುಕೊಂಡರೆ 40ರ ನಂತರ ತಾಯಿಯ ವರ್ತನೆಯಲ್ಲಿ ಬದಲಾವಣೆ ಕಂಡು ಬಂದರೆ ಅದಕ್ಕೆ ನಿಮಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದು.

ತಾಯಿಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವಷ್ಟು ಪಕ್ವತೆ ಮಕ್ಕಳಿಗೆ ಬಂದಿರುತ್ತದೆ
ಸಾಮಾನ್ಯವಾಗಿ ಬಹುತೇಕ ಹೆಣ್ಮಕ್ಕಳಿಗೆ 25 ವರ್ಷದೊಳಗೆ ಮದುವೆಯಾಗಿ ಮಕ್ಕಳಾಗಿರುತ್ತದೆ. 30 ವರ್ಷದೊಳಗೆ ಬಹುತೇಕ ಹೆಣ್ಮಕ್ಕಳಿಗೆ ಮಕ್ಕಳಿರುತ್ತದೆ. ಅವಳಿಗೆ 45-50 ವರ್ಷ ತಲುಪಿದಾಗ ಮಕ್ಕಳು ಹದಿಹರೆಯದ ಅಥವಾ ಯೌವನ ಪ್ರಾಯದಲ್ಲಿರುತ್ತಾರೆ. ಕೆಲವೇ ಕೆಲವರಿಗಷ್ಟೇ ತಡವಾಗಿ ಮಕ್ಕಳಾಗಿರುವುದರಿಂದ ಮಕ್ಕಳು 10 ವರ್ಷದೊಳಗಿನರಾಗಿರುತ್ತಾರೆ. ಮಕ್ಕಳು 10 ವರ್ಷದೊಳಗಿನವರಾದರೆ ಅವರಿಗೆ ತಾಯಿಯ ಆರೋಗ್ಯ ಸ್ಥಿತಿ ಅಂದರೆ ಮೆನೋಪಾಸ್ ಸ್ಥಿತಿ ಬಗ್ಗೆ ಅಷ್ಟೇನು ಅ ರ್ಥವಾಗಲ್ಲ, ಇಲ್ಲದಿದ್ದರೆ ಎಲ್ಲಾ ಮಕ್ಕಳು ತಮ್ಮ ತಾಯಿಯ ಆರೋಗ್ಯದ ದೃಷ್ಟಿಯಿಂದ ಮಹಿಳೆಯರನ್ನು ಕಾಡುವ ಮೆನೋಪಾಸ್ ಹಂತದ ಬಗ್ಗೆ ತಿಳಿದುಕೊಳ್ಳಲೇಬೇಕು.
ಮೆನೋಪಾಸ್ ಅಂದರೆ ಮುಟ್ಟು ನಿಲ್ಲುವ ಹಂತ
ಸಾಮಾನ್ಯವಾಗಿ ಮಹಿಳೆಯರಿಗೆ 40-55 ವರ್ಷದೊಳಗೆ ಮೆನೋಪಾಸ್ ಉಂಟಾಗುವುದು. ಕೆಲವರಿಗೆ 40ರ ಪ್ರಾಯದಲ್ಲಿ ಮೆನೋಪಾಸ್ ಉಂಟಾದರೆ ಇನ್ನು ಕೆಲವರಿಗೆ 45-55 ವರ್ಷದೊಳಗೆ ಮೆನೋಪಾಸ್ ಉಂಟಾಗುವುದು. ಈ ಸಮಯದಲ್ಲಿ ಅವಳ ದೇಹದಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು. ಇದರಿಂದ ಅವಳ ಮಾಸಮಿಕ ಆರೋಗ್ಯದ ಮೇಲೆ ಕೂಡ ತುಂಬಾನೇ ಪ್ರಭಾವ ಬೀರಬಹುದು. ಈ ಹಂತದಲ್ಲಿ ಮಕ್ಕಳು ನನ್ನನ್ನು ಪ್ರೀತಿಸುತ್ತಿಲ್ಲ, ಗಂಡನಿಗೆ ನನ್ನ ಮೇಲೆ ಪ್ರೀತಿಯಿಲ್ಲ, ನಾನು ಒಂಟಿಯಾಗುತ್ತಿದ್ದೇನೆ ಎಂದೆಲ್ಲಾ ಅನಿಸಲಾರಂಭಿಸುತ್ತದೆ. ಕೆಲವರಿಗೆ ಈ ಹಂತದಲ್ಲಿ ಖಿನ್ನತೆ ಉಂಟಾಗಿ ಆತ್ಮಹತ್ಯೆ ಆಲೋಚನೆ ಕೂಡ ಬರುವುದು. ಆದ್ದರಿಂದ ಈ ಸಮಯದಲ್ಲಿ ತುಂಬಾ ಜಾಗ್ರತೆವಹಿಸಿ ಅವಳನ್ನು ನೋಡಿಕೊಳ್ಳಬೇಕು. ಅವಳನ್ನು ನೋಡಿಕೊಳ್ಳಬೇಕು ಎಂದರೆ ಅವಳೇನು ಕಾಯಿಲೆ ಬಿದ್ದಿರಲ್ಲ, ಆದರೆ ಅವಳ ಸ್ವಭಾವದಲ್ಲಿ ಬದಲಾವಣೆ ಕಂಡು ಬರುವುದು. ಚಿಕ್ಕ-ಪುಟ್ಟ ವಿಷಯಕ್ಕೆ ಕೋಪಗೊಳ್ಳುವುದು ಅಥವಾ ಬೇಸರ ಪಡುವುದು, ಮೂಡ್ ಸ್ವಿಂಗ್ ಇವೆಲ್ಲಾ ಕಂಡು ಬರುವುದು.
ಮೆನೋಪಾಸ್ ಹಂತದಲ್ಲಿ ಅವಳಲ್ಲಿ ಕಂಡು ಬರುವ ಬದಲಾವಣೆಗಳೆಂದರೆ
* ಸುಸ್ತು
* ಯಾವುದೇ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
* ನಾನು ಪ್ರಯೋಜನಕ್ಕೆ ಬಾರದವಳು, ನನ್ನಿಂದ ಯಾರಿಗೂ ಎಂದೆಲ್ಲಾ ಹೇಳುವುದು
* ಮೂಡ್ ಸ್ವಿಂಗ್
* ಬೇಗನೆ ಕೋಪಗೊಳ್ಳುವುದು
* ನಿದ್ದೆ ಸರಿಯಾಗಿ ಮಾಡದೇ ಇರುವುದು
* ಯಾವುದೇ ಕಾರಣವಿಲ್ಲದೆ ಸುಮ್ಮನೆ ಅಳುವುದು
* ರಾತ್ರಿಯಲ್ಲಿ ತುಂಬಾ ಸೆಕೆ ಅನಿಸುವುದು
* ಆತ್ಮವಿಶ್ವಾಸ ಕಡಿಮೆಯಾಗುವುದು
* ಸಾಮಾಜಿಕವಾಗಿ ಬೆರೆಯಲು ಇಷ್ಟ ಪಡದೇ ಇರುವುದು
ಈ ಬಗೆಯ ಲಕ್ಷಣಗಳು ಕಂಡು ಬಂದರೆ ಸ್ವಲ್ಪ ಸಮಯ ಅವರನ್ನು ಜೋಪಾನವಾಗಿ ನೋಡಿಕೊಳ್ಳಬೇಕು.
ಈ ಸಮಯದಲ್ಲಿ ಅವಳಿಗೆ ನಿಮ್ಮ ಭಾವನಾತ್ಮಕ ಬೆಂಬಲದ ಅಗ್ಯತವಿರುತ್ತದೆ
ಇದ್ದಕ್ಕಿದ್ದಂತೆ ಅಮ್ಮನಲ್ಲಿ ಬದಲಾವಣೆ ಕಂಡು ಬಂದಾಗ ನಮಗೂ ಬೇಸರವಾಗಬಹುದು, ಆದರೆ ಅವಳಲ್ಲಿ ಆದ ಹಾರ್ಮೋನ್‌ಗಳ ಬದಲಾವಣೆಯಿಂದ ಈ ರೀತಿಯಾಗುತ್ತಿರುತ್ತದೆ. ಈ ಸಮಯದಲ್ಲಿ ಗಂಡ ಹಾಗೂ ಮಕ್ಕಳು ಅವಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕಾಗುತ್ತದೆ, ಅವಳನ್ನು ಸಂತೋಷವಾಗಿಡಲು ಪ್ರಯತ್ನಿಸಬೇಕು. ಅವಳಿಗೆ ಒಂಟಿತನ ಕಾಡುತ್ತಿದೆ ಎಂದು ಅರಿವಾದರೆ ಅವಳನ್ನು ಒಂಟಿಯಾಗಿರಲು ಬಿಡಬೇಡಿ, ಅವಳನ್ನು ಖುಷಿಯಾಗಿಡಲು ನಿಮ್ಮಿಂದಾಗುವ ಎಲ್ಲಾ ಪ್ರಯತ್ನ ಮಾಡಿ. ಅಗ್ಯತ ಬಿದ್ದರೆ ವೈದ್ಯರಿಗೆ ತೋರಿಸಿ ಸಲಹೆ ಸೂಚನೆ ಪಡೆಯಿರಿ. ಈ ರೀತಿ ಮಾಡುವುದರಿಂದ ಅವಳಲ್ಲಿನ ಖಿನ್ನತೆ ಕಡಿಮೆ ಮಾಡಬಹುದು.
ಮೆನೋಪಾಸ್ ಲಕ್ಷಣಗಳು ಎಷ್ಟು ಸಮಯ ಕಂಡು ಬರುವುದು?
ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ, ಕೆಲವರಿಗೆ ಕೆಲವು ತಿಂಗಳುಗಳಷ್ಟೇ ಇರುತ್ತದೆ, ಇನ್ನು ಕೆಲವರಿಗೆ 4-5 ವರ್ಷ ಕಾಡುವುದು. ಪ್ರತಿದಿನ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಪದ್ಧತಿ ಜೊತೆ ಮಾನಸಿಕ ನೆಮ್ಮದಿ ಇವುಗಳು ಖಿನ್ನತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮಮ್ಮನ ಆರೋಗ್ಯಕ್ಕಾಗಿ ಈ ಸಮಯದಲ್ಲಿ ಭಾವನಾತ್ಮಕ ಬೆಂಬಲ ನೀಡಿ. ಅವಳ ಜೊತೆ ವಾಕಿಂಗ್ ಹೋಗುವುದು, ನೀವು ನಿಮ್ಮ ಕಾರ್ಯದಲ್ಲಿ ಬ್ಯುಸಿಯಾಗದೆ ಅವಳ ಜೊತೆ ಸ್ವಲ್ಪ ಸಮಯ ಕಳೆಯುವುದು ಮಾಡಿದರೆ ಅವಳ ಮನಸ್ಸಿಗೂ ಖುಷಿಯಾಗುವುದು. ನಿಮ್ಮಅಕ್ಕರೆಯ ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯ ತಿಳಿಸಿ...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications