ಭಾರತದಲ್ಲಿ ಬಹುತೇಕ ಶ್ವಾಸಕೋಶ ಕ್ಯಾನ್ಸರ್ ರೋಗಿಗಳು ಧೂಮಪಾನ ಮಾಡಿರೋದೆ ಇಲ್ಲ..!

ಶ್ವಾಸಕೋಶದ ಕ್ಯಾನ್ಸರ್ ಕುರಿತು ನೀವೆಲ್ಲಾ ತಿಳಿದಿರುತ್ತೀರಿ. ಈಗ ನಟಿ, ನಿರೂಪಕಿ ಅಪರ್ಣಾ ಸಹ ಇದೇ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಆರೋಗ್ಯವಂತರಲ್ಲೂ ಈ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗಬಹುದು. ಅಂದರೆ ಕೇವಲ ಧೂಮಪಾನ ಮಾಡುವವರಿಗೆ ಮಾತ್ರವೇ ಶ್ವಾಸಕೋಶದ ಕ್ಯಾನ್ಸರ್ ಬರಬೇಕು ಎಂಬ ನಿಯಮವೇ ಇಲ್ಲ.

ಅದ್ರಲ್ಲೂ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಒಳಗಾಗುತ್ತಿರುವ ಬಹುತೇಕ ಮಂದಿ ಎಂದಿಗೂ ಧೂಮಪಾನ ಮಾಡಿರುವುದೇ ಇಲ್ಲವಂತೆ. ಆಗ್ನೇಯ ಏಷ್ಯಾದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಆತಂಕ ಹುಟ್ಟಿಸುವಷ್ಟು ಹೆಚ್ಚಾಗಿದೆ. ಜೊತೆಗೆ ಪಶ್ಚಿಮ ಏಷ್ಯಾ ಭಾಗದಲ್ಲಿ ಈ ಪ್ರಮಾಣ ಏರುಗತಿಯಲ್ಲಿದೆ.

Most Lung Cancer Patients In India Do Not Smoke

ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ಆನುವಂಶಿಕ ರಚನೆಯು "ಅದರ ಜನರ ಸಂಕೀರ್ಣ ವೈವಿಧ್ಯತೆಯಿಂದ ರೂಪುಗೊಂಡಿದೆ" ಎಂದು ತಜ್ಞರು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಹೆಚ್ಚಿನ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಎಂದಿಗೂ ಧೂಮಪಾನ ಮಾಡಿಲ್ಲ ಮತ್ತು ವಾಯುಮಾಲಿನ್ಯವು ಧೂಮಪಾನಿಗಳಲ್ಲದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಅನ್ನು ಉಂಟುಮಾಡಬಹುದು ಎಂದು ತಿಳಿದುಬಂದಿದೆ.

ವಾಯು ಮಾಲಿನ್ಯ ಮತ್ತು ಆನುವಂಶಿಕ ರೂಪಾಂತರಗಳಂತಹ ವಿಶಿಷ್ಟವಾದ ಪ್ರಾದೇಶಿಕ ಅಪಾಯಕಾರಿ ಅಂಶಗಳು ಸಹ ಒಂದು ಪಾತ್ರವನ್ನು ವಹಿಸುತ್ತವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಶ್ವಾಸಕೋಶದ ಕ್ಯಾನ್ಸರ್‌ನ ಪ್ರಮಾಣವು 1990 ರಲ್ಲಿ 1,00,000 ಕ್ಕೆ 6.62 ರಿಂದ 2019 ರಲ್ಲಿ 1,00,000 ಕ್ಕೆ 7.7 ಕ್ಕೆ ಏರಿದೆ, 2025 ರ ವೇಳೆಗೆ ನಗರ ಪ್ರದೇಶಗಳಲ್ಲಿ ಈ ಶ್ವಾಸಕೋಶ ಕ್ಯಾನ್ಸರ್‌ನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆ ಇದೆ.

ಇನ್ನು ಶ್ವಾಸಕೋಶ ಕ್ಯಾನ್ಸರ್ ಪುರುಷರಲ್ಲೇ ಅಧಿಕ ಎಂಬುದು ಸಹ ತಿಳಿದುಬಂದಿದೆ. ಪುರುಷರಲ್ಲಿ ಸುಮಾರು ಶೇ. 42.4ರಷ್ಟು ಹಾಗೂ ಮಹಿಳೆಯರಲ್ಲಿ ಶೇ. 14.2ರಷ್ಟು ಕಂಡುಬರಲಿದೆ. ಇನ್ನು ಅತೀ ಹೆಚ್ಚು ಮಾಲಿನ ಹೊಂದಿರುವ ನಗರಗಳಲ್ಲಿಯೇ ಈ ಶ್ವಾಸಕೋಶ ಕ್ಯಾನ್ಸರ್ ಪ್ರಮಾಣವೂ ಹೆಚ್ಚು ಎಂಬುದು ಅಧ್ಯಯನದಲ್ಲಿ ತಿಳಿದುಬರುತ್ತದೆ.

2022ರಲ್ಲಿ ವಿಶ್ವ ವಾಯು ಗುಣಮಟ್ಟ ವರದಿಯನ್ನು ಉಲ್ಲೇಖಿಸಿದ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಸೇರಿದಂತೆ ಸಂಶೋಧಕರು, ವಿಶ್ವದ 40 ಕಲುಷಿತ ನಗರಗಳಲ್ಲಿ 37 ನಗರಗಳಿಗೆ ದಕ್ಷಿಣ ಏಷ್ಯಾ ನೆಲೆಯಾಗಿದೆ ಮತ್ತು ನಾಲ್ಕು ಅತ್ಯಂತ ಕಲುಷಿತ ದೇಶಗಳಲ್ಲಿ ಭಾರತವೂ ಸೇರಿದೆ ಎಂದು ತಿಳಿಸಿದರು.

ಚೀನಾ, ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್ ಏಷ್ಯಾದಲ್ಲಿ ರಾಷ್ಟ್ರೀಯ ವಿಪತ್ತುಗಳಿಂದ ಹೆಚ್ಚು ಹಾನಿಗೊಳಗಾಗಿವೆ ಮತ್ತು ಈ ದೇಶಗಳು 2020 ರಲ್ಲಿ 9.65 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳೊಂದಿಗೆ ಅತಿ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳನ್ನು ಹೊಂದಿವೆ.

ಶ್ವಾಸ ಕೋಶದ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ ಯಾವಾಗ ಹೆಚ್ಚಾಗುತ್ತದೆ?

ಈ ಶ್ವಾಸಕೋಶದ ಕ್ಯಾನ್ಸರ್‌ನಲ್ಲಿ 2 ರೀತಿಯ ವಿಧಗಳಿವೆ. ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ ಹಾಗೂ ನಾನ್ ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ ಎನ್ನಲಾಗುತ್ತದೆ. ಧೂಮಪಾನ, ಬೇರೆಯವರು ಸೇವಿಸಿದ ಧೂಮಪಾನ ಹೊಗೆ ನಾವು ಸೇವಿಸಿದಾಗ, ಕುಟುಂಬದಲ್ಲಿ ಯಾರಿಗಾದರೂ ಬಂದಿದ್ದರೆ, ರೇಡಿಯೇಷನ್ ಥೆರಪಿ ಪಡೆದಿದ್ದರೆ, ಸಿಟಿ ಸ್ಕ್ಯಾನ್‌ ಮುಂತಾದ ಪರೀಕ್ಷೆಗೆ ಒಳಪಟ್ಟಿದ್ದರೆ, ಹೆಚ್‌ಈವಿ ಸೋಂಕು, ವಾಯು ಮಾಲಿನ್ಯ ಹೀಗೆ ಅನೇಕ ಕಾರಣಗಳಿಂದಾಗಿ ಈ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತದೆ.

ಶ್ವಾಸಕೋಶದ ಲಕ್ಷಣಗಳೇನು?

ಶ್ವಾಸಕೋಶದ ಕ್ಯಾನ್ಸರ್‌ನ ಆರಂಭದಲ್ಲಿ ನಿಮಗೆ ಯಾವುದೇ ರೋಗ ಲಕ್ಷಣ ಗೋಚರವಾಗುವುದಿಲ್ಲ. ಆದರೆ ಈ ಕ್ಯಾನ್ಸರ್‌ಗೆ ಹಲವು ಲಕ್ಷಣಗಳಿವೆ. ಎದೆನೋವು, ಕೆಮ್ಮು ಕಡಿಮೆಯಾಗದೇ ಇರುವುದು, ಉಸಿರಾಟದಲ್ಲಿ ತೊಂದರೆ, ಕಫದಲ್ಲಿ ರಕ್ತ ಬರುವುದು, ತೂಕ ಇಳಿಯುವುದು, ಆಹಾರ ಸೇವಿಸಲು ಸಮಸ್ಯೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Most Lung Cancer Patients In India Do Not Smoke..!

Experts claim that the genetic makeup of lung cancer in India is "shaped by the complex diversity of its people". Most lung cancer patients in India have never smoked and air pollution is known to cause lung cancer even in non-smokers.
Story first published: Friday, July 12, 2024, 12:29 [IST]
X
Desktop Bottom Promotion