Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ಯಾನ್ಸರ್ ಕಾಣಿಸಿಕೊಳ್ಳಲು ಬಹುಮುಖ್ಯ ಕಾರಣಗಳಿವು..! ಯಾವುದು ಗೊತ್ತಾ..?
ಕ್ಯಾನ್ಸರ್ ರೋಗದ ಹೆಸರು ಕೇಳಿದರೇ ಎದೆ ಬಡಿತ ಹೆಚ್ಚಾಗುತ್ತೆ. ಯುವಪೀಳಿಗೆಯಿಂದ ಹಿಡಿದು ಹಿರಿಯರವರೆಗೂ ಇಂದು ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಭಾರತದಲ್ಲಿ ಕ್ಯಾನ್ಸರ್‌ಗೆ ಒಳಗಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
ಇಂತಹ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಲು ಬಳಸುವ ಸಾಧನಗಳೂ ಕೂಡ ಅಷ್ಟೇ ಭಯಾನಕ ಮತ್ತು ಆರೋಗ್ಯದ ವಿನಾಶಕಾರಿಯಾಗಿವೆ. ಕ್ಯಾನ್ಸರ್ ಅಂದರೇನು? ದೇಹವು ತನ್ನದೇ ಆದ ಕಾರ್ಯವಿಧಾನಗಳನ್ನು ಬಳಸಿಕೊಳ್ಳುವುದಕ್ಕೆ ಕ್ಯಾನ್ಸರ್ ಅನ್ನಬಹುದು.
ಒಂದು ಮಾತಿನಲ್ಲಿ ಹೇಳಬೇಕೆಂದರೆ ನಮ್ಮ ದೇಹದಲ್ಲಿರುವ ಕೋಶಗಳು ನಮ್ಮ ಶರೀರಬೆಳವಣಿಗೆ ಮತ್ತು ಹಾಗೆಯೇ ದುರಸ್ತಿಪಡಿಸುವುದನ್ನು ಖಚಿತಪಡಿಸುತ್ತವೆ. ಆದರೂ ಕ್ಯಾನ್ಸರ್ ರೋಗ ಸಂದರ್ಭದಲ್ಲಿ ನಮ್ಮ ಶರೀರದಲ್ಲಿರುವ ಕೋಶಗಳು ಮೊದಲು ಒಂದು ಅಪಾಯಕಾರಿ ರೀತಿಯಲ್ಲಿ ಪರಿವರ್ತನೆಗೊಂಡು, ತದನಂತರ ಅದು ಸತ್ತುಹೋಗುವ ಬದಲು, ಶರೀರದ ಭಾಗಗಳಿಗೆ ಪ್ರಚಂಡ ವೇಗದಲ್ಲಿ ಹರಡುತ್ತದೆ.

ಅಂಕಿಅಂಶಗಳ ಪ್ರಕಾರ ಕ್ಯಾನ್ಸರ್ ರೋಗವು ತಗಲುತ್ತಿರುವವರು ಹೆಚ್ಚಾಗುತ್ತಲೇ ಇದ್ದಾರೆಂಬುದು ಬಹಳ ದುಖಃಕರ ಮಾಹಿತಿ. ಒಬ್ಬರಲ್ಲದೆ ಇನ್ನೊಬ್ಬರು ಕ್ಯಾನ್ಸರ್ ರೋಗದಿಂದ ನರಳುತ್ತಿದ್ದರೆಂದು ನಮ್ಮಲ್ಲಿ ವೈಯುಕ್ತಿಕವಾಗಿ ಬಹಳ ಜನರಿಗೆ ಇಂದು ಗೊತ್ತಾಗಿದೆ. ಒಂದು ಕಡೆ ಈ ರೋಗದ ಪ್ರವೃತ್ತಿ ಮತ್ತು ಮೂಲಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಆದರೆ ಈ ಕ್ಯಾನ್ಸರ್ ಹೇಗರ ಹರಡುತ್ತಿದೆ. ಯಾವೆಲ್ಲಾ ಅಭ್ಯಾಸಗಳು ಕ್ಯಾನ್ಸರ್ ಕಾರಕವಾಗಿ ಬದಲಾಗಲಿದೆ ಎಂಬುದನ್ನು ತಿಳಿದುಕೊಳ್ಳುವು ಅತ್ಯವಶ್ಯವಾಗಿದೆ.
ಹಾಗಾದರೆ ಕ್ಯಾನ್ಸರ್ ರೋಗಕ್ಕೆ ಕೆಲವು ಸಾಮಾನ್ಯ ಕಾರಣಗಳು ಯಾವುದು? ಕ್ಯಾನ್ಸರ್ ಹೇಗೆ ಹೆಚ್ಚಾಗುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳೋಣ.
ವಯಸ್ಸು
ವಯಸ್ಸಾದಂತೆ ಕ್ಯಾನ್ಸರ್ ರೋಗಕ್ಕೆ ಒಂದು ಸಾಮಾನ್ಯ ಕಾರಣವಾಗಿದೆ. ವಯಸ್ಸಾದವರು ಕ್ಯಾನ್ಸರ್‌ಗೆ ತುತ್ತಾಗುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತಾರೆ ಮತ್ತು ವಾಸ್ತವವಾಗಿ 60 ವಯಸ್ಸು ದಾಟಿದ ಜನರಲ್ಲಿ ಶೇಖಡಾ 75ರಷ್ಟು ಜನರಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಒಂದು ಸಿದ್ಧಾಂತದ ಪ್ರಕಾರ ನಮ್ಮ ವಯಸ್ಸು ಬೆಳೆದಂತೆ ಕೋಶಗಳ ಮಟ್ಟದಲ್ಲಿ ಕ್ಯಾನ್ಸರ್ ರೋಗವನ್ನು ಎದುರಿಸಲು ಅಶಕ್ತರಾಗುತ್ತೇವೆ. ಹೀಗಾಗಿ ಕ್ಯಾನ್ಸರ್ ಸೆಲ್‌ಗಳು ವೇಗವಾಗಿ ಹರಡುತ್ತವೆ.
ಅನುವಂಶಿಕತೆ
ಕೆಲವು ರೀತಿಯ ಸ್ತನ ಕ್ಯಾನ್ಸರ್ ರೋಗವು ಅನುವಂಶಿಕ. ಸಿನೆಮಾ ತಾರೆ ಅಂಜಲಿನಾ ಜೋಲೀ ತನ್ನಸ್ತನಗಳಲ್ಲಿ ಬಿ.ಆರ್.ಸಿ.ಎ 1 (BRCA1) ಅನುವಂಶಿಕೆ ಕ್ಯಾನ್ಸರ್ ಕಾಣಿಸಿಕೊಂಡದ್ದರಿಂದ ತನ್ನ ಎರಡೂ ಸ್ತನಗಳನ್ನು ಶಸ್ತ್ರಕ್ರಿಯೆಯಮೂಲಕ ಛೇದನಮಾಡಿಸಿಕೊಂಡಳು. ನಿಮ್ಮ ಹತ್ತಿರ ಸ್ತ್ರೀ ಸಂಬಂಧಿಗಳಾದ ತಾಯಿ, ಚಿಕ್ಕಮ್ಮ, ಅಕ್ಕ/ತಂಗಿಯರು ಅಥವ ಅಜ್ಜಿ ಇವರುಗಳು ಕ್ಯಾನ್ಸರ್ ರೋಗವನ್ನು ಅನುಭವಿಸಿದ್ದರೆ ನೀವೂ ಕೂಡ ನಿಮ್ಮ ಸ್ತನಗಳನ್ನು ಪರಿಕ್ಷಿಸಿಕೊಳ್ಳುವುದು ಒಂದು ಒಳ್ಳೆಯ ಸಲಹೆ. ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು.
ತಂಬಾಕು
ದೀರ್ಘಕಾಲದಿಂದ ಚಟವಿರುವ ಧೂಮಪಾನಿಗಳು ತಮ್ಮ ಅಭ್ಯಾಸವನ್ನು ವಹಿಸಿಕೊಂಡು ವಾದಿಸುವುದೇನೆಂದರೆ ಹಲವಾರು ಧೂಮಪಾನ ಮಾಡದಿದ್ದವರಿಗೂ ಕೂಡ ಶ್ವಾಸಕೋಶ ಕ್ಯಾನ್ಸರ್ ರೋಗವು ತಗಲಿದೆ. ಆದಾಗ್ಯೂ, ಮಾಹಿತಿಗಳು ನಿಚ್ಚಳವಾಗಿವೆ. ನಾಲ್ಕು ಕ್ಯಾನ್ಸರ್ ರೋಗದಿಂದ ಸತ್ತವರಲ್ಲಿ ಒಬ್ಬ ರೋಗಿಯು ಧೂಮಪಾನಿ. ಧೂಮಪಾನದಿಂದ ಶ್ವಾಸಕೋಶ, ಗಂಟಲು, ಬಾಯಿ ಮತ್ತು ಅನ್ನನಾಳಗಳಿಗೆ ಕ್ಯಾನ್ಸರ್ ರೋಗಬರುತ್ತದೆ. ಮತ್ತು ಬಹಳ ಜನರು ನಿಷ್ಕ್ರಿಯ ಧೂಮಪಾನ, ಅಂದರೆ ಧೂಮಪಾನ ಮಾಡುವವರು ಬಿಡುವ ಹೊಗೆಯು ಉಸಿರಾಟದಲ್ಲಿ ಸೇರುವುದರಿಂದ ಕ್ಯಾನ್ಸರ್ ರೋಗದಿಂದ ಸತ್ತಿದ್ದಾರೆ.
ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳು (ಕಾರ್ಸಿನೋಜೆನ್ಸ್)
ಕ್ಯಾನ್ಸರ್ ಬರಸುವ ಪದಾರ್ಥಗಳಲ್ಲಿ ತಂಬಾಕು ಪ್ರಮುಖವಾಗಿದೆಯಾದರೂ ಇತರ ಪದಾರ್ಥಗಳೂ ಇವೆ. ಈ ಪದಾರ್ಥಗಳು ಕೋಶ ಅಥವ ಜಿನೋಮ್ ರಚನೆಯನ್ನು ಪರಿವರ್ತಿಸಿದಾಗ ಕ್ಯಾನ್ಸರ್ ರೋಗ ಬರುತ್ತದೆ. ಡೈಯೋಕ್ಸಿನ್, ಬೆಂಜೀನ್, ಫಾರ್ಮಾಲ್ಡೀಹೈಡ್, ಆಸ್‌ಬೆಸ್ಟಾಸ್ ಇವುಗಳೆಲ್ಲವೂ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕ ಜೀವಾಣುಗಳು. ಈ ಪದಾರ್ಥಗಳನ್ನು ನಾವು ದೈನಂದಿನ ಜೀವನದಲ್ಲಿ ಯಾವುದಾದ ರೀತಿಯಲ್ಲಿ ಉಪಯೋಗಿಸುತ್ತೇವೆ. ಕೆಲವು ವೈರಸ್‌ಗಳು, ಅಂದರೆ ಹ್ಯೂಮನ್ ಪ್ಯಾಪಿಲೋಮವೈರಸ್ (ಮಾನವ ವೈರಸ್) ಗರ್ಭಕಂಠದ (ಸರ್ವಿಕಲ್) ಕ್ಯಾನ್ಸರ್ ಉಂಟುಮಾಡುತ್ತದೆ ಮತ್ತು ಇವು ನೈಸರ್ಗಿಕವಾಗಿ ಬರುತ್ತದೆ.
ಸೂರ್ಯನ ಮಾನ್ಯತೆ (ಸೂರ್ಯನ ಕಿರಣಗಳಿಗೆ ಮೈಒಡ್ಡುವುದು)
ಸೂರ್ಯನ ಕಿರಣದಲ್ಲಿರುವ ಅಲ್ಟ್ರಾ ವೈಯೊಲೆಟ್ (ಯು.ವಿ.) ವಿಕಿರಣದಿಂದ ಸಾಮಾನ್ಯವಾಗಿ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಮೈಯನ್ನು ಸಮರ್ಪಕವಾಗಿ ಮುಚ್ಚದೇ ಅಥವ ತೆರೆದ ಭಾಗಗಳಿಗೆ ರಕ್ಷಣೆ ಕ್ರೀಮ್ ಲೇಪಿಸದೇ ಇರುವ ಬಹಳ ಜನರಿಗೆ ಚರ್ಮದ ಕ್ಯಾನ್ಸರ್ ಕಾಣಿಸಿಕೊಂಡಿದೆ. ಸಲೋನ್.ಕಾಮ್ ವೆಬ್ ಸೈಟಿನ ಪ್ರಸಿದ್ಧ ಲೇಖಕಿ ಮೇರಿ ಎಲಿಜಬೆತ್ ವಿಲ್ಲಿಯಮ್ಸ್ ಸೂರ್ಯನ ರಕ್ಷಣೆ ಕ್ರೀಮ್ ಬಳಸಿಯೂ ಚರ್ಮದ ಕ್ಯಾನ್ಸರ್ ರೋಗವು ಕಾಣಿಸಿಕೊಂಡಿತು. ಅವಳು ತನ್ನ ತಲೆಯನ್ನು ಮುಚ್ಚದೇ ಇದ್ದರಿಂದ ಪರಿಣಾಮವಾಗಿ ಮಾರಕ ಮೆಲಾನೋಮಾ ಚರ್ಮದ ಕ್ಯಾನ್ಸರ್ ರೋಗವು ನೆತ್ತಿಯಮೇಲೆ ಕಾಣಿಸಿಕೊಂಡಿತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications