Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಬೆಳಗ್ಗೆ ತಿಂಡಿಗೆ ಏನು ಸವಿಯುತ್ತೀರಿ..? ಈ 4 ಆಹಾರ ಎಂದಿಗೂ ಬೇಡ..!
ಬೆಳಗ್ಗಿನ ತಿಂಡಿ ರುಚಿಕರವಾಗಿದ್ದರೆ ಇಡೀ ದಿನ ಅದ್ಭುತವಾಗಿರುತ್ತೆ. ಹೀಗಾಗಿ ಬೆಳಗ್ಗೆ ತಿಂಡಿಗೆ ವಿಶೇಷವಾದ ಖಾದ್ಯಗಳ ಮಾಡಿ ಸವಿಯುವುದು ಕಾಮನ್. ಹಾಗೆ ಬೆಳಗ್ಗೆಯ ತಿಂಡಿಗೆ ನೀವು ಬಗೆ ಬಗೆಯ ಖಾದ್ಯ ಮಾಡಿ ಸವಿದಿರುತ್ತೀರಿ. ಒಂದೊಂದು ದಿನ ಒಂದೊಂದು ಉಪಹಾರ ಮಾಡಿರುತ್ತೀರಿ. ಆದ್ರೆ ನೀವು ಸವಿಯುವ ಬೆಳಗ್ಗಿನ ತಿಂಡಿಯೇ ನಿಮ್ಮ ಪಾಲಿಗೆ ಸಮಸ್ಯೆ ತರಬಹುದು ಎಂಬುದು ನಿಮಗೆ ಗೊತ್ತಾ?
ಹೌದು ಕೆಲವೊಂದು ಉಪಹಾರವು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ? ಕೆಲವು ಆಹಾರವನ್ನು ನೀವು ಬೆಳಗ್ಗೆ ಸೇವಿಸುವುದರಿಂದ ಜೀರ್ಣಕ್ರಿಯೆಯಿಂದ ಹಿಡಿದು ದೇಹದ ಹಲವು ಬದಲಾವಣೆಗೆ ಕಾರಣವಾಗುತ್ತದೆ. ಇಂತಹ ಯಾವ ಆಹಾರವನ್ನು ಬೆಳಗ್ಗೆ ನಾವು ಸವಿಯಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬೆಳಗಿನ ತಿಂಡಿಯು ದೀರ್ಘವಾದ ಉಪವಾಸದ ಬಳಿಕ ಸವಿಯುವುದರಿಂದ ನಮ್ಮ ದೇಹಕ್ಕೆ ಬಹಳ ಮುಖ್ಯ. ನಾವು ಬೆಳಗ್ಗೆ ಸವಿಯುವ ಆಹಾರ ಪೋಷಕಾಂಶಗಳಿಂದ, ವಿಟಮಿನ್‌ನಿಂದ ಕೂಡಿದ್ದರೆ ಇಡೀ ದಿನದ ಕೆಲಸಕ್ಕೆ ಇದು ದೇಹಕ್ಕೆ ಸಹಕಾರಿಯಾಗಲಿದೆ. ಆದ್ರೆ ಕೆಲವು ಆಹಾರವನ್ನು ನಾವು ಬೆಳಗ್ಗೆ ಸೇವಿಸಿದರೆ ಇಡೀ ದಿನ ಮಾತ್ರವಲ್ಲ ನಮ್ಮ ಆರೋಗ್ಯ ಕೆಡುವುದು ಖಚಿತ. ಹಾಗಾದ್ರೆ ಯಾವ ಆಹಾರವನ್ನು ನಾವು ಸವಿಯದೆ ಇರುವುದು ಉತ್ತಮ ಎಂಬ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಜಾಮ್ ಜೊತೆಗೆ ಕ್ರೋಸೆಂಟ್ಸ್
ಬೆಳಗ್ಗೆ ತಿಂಡಿಗೆ ಕ್ರೋಸೆಂಟ್ಸ್ ಜೊತೆಗೆ ಸಾಸ್ ಹಾಕಿಕೊಂಡು ಸವಿಯುವುದು ಉತ್ತಮವಲ್ಲ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯೊಂದಿಗೆ ಪ್ಯಾಕ್ ಮಾಡಲಾದ ಈ ಕ್ರೋಸೆಂಟ್ಸ್ ಬೆಳಗ್ಗೆ ಸವಿಯಲು ಉತ್ತಮವಲ್ಲ. ಇದರಿಂದ ಯಾವುದೇ ಪ್ರೋಟಿನ್ ಹಾಗೂ ಫೈಬರ್ ಅನ್ನು ಹೊಂದಿರದ ಕಾರಣ ಇದನ್ನು ಸವಿಯುವುದು ಉತ್ತಮವಲ್ಲ. ಹಾಗೆ ಇದು ಮೈದಾ ಮೂಲಕ ಮಾಡಲಾಗುವುದರಿಂದ ಬೆಳಗ್ಗೆ ನಿಮ್ಮಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.
ಕಾಫಿ
ಬೆಳಗ್ಗೆ ಖಾಲಿ ಹೊಟ್ಟೆಗೆ ಕಾಫಿ ಕುಡಿಯುವುದು ಕೂಡ ಉತ್ತಮ ಅಭ್ಯಾಸವಲ್ಲ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಬ್ಲಾಕ್ ಕಾಫಿ ಹಲವು ಸಮಸ್ಯೆ ತರಬಹುದು. ಕಪ್ಪು ಕಾಫಿಯು ಕಡಿಮೆ ಕ್ಯಾಲೋರಿ ಮತ್ತು ನಿಮಗೆ ಹೆಚ್ಚು ಅಗತ್ಯವಿರುವ ಶಕ್ತಿಯ ವರ್ಧಕವನ್ನು ನೀಡುತ್ತದೆಯಾದರೂ, ಇದು ಯಾವುದೇ ಅಗತ್ಯ ಪೋಷಕಾಂಶಗಳನ್ನು ಒದಗಿಸುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಜೀರ್ಣಕ್ರಿಯೆಯ ಸಮಸ್ಯೆ ಉದ್ಭವಿಸಬಹುದು. ಕಾಫಿ ಕುಡಿದ ಬಳಿಕ ಯಾವುದೇ ಆಹಾರ ಸೇವಿಸದಿದ್ದರೆ ಇದರಿಂದ ಮತ್ತಷ್ಟು ದೈಹಿಕ ಸಮಸ್ಯೆಗೆ ಕಾರಣವಾಗಬಹುದು.
ಶುಗರ್ ಕ್ಯಾಂಡಿ
ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಹಲವರು ಶುಗರ್ ಕ್ಯಾಂಡಿ ಸವಿಯುವುದು ನೋಡಬಹುದು. ಅದರಲ್ಲೂ ಸಮಯವಿಲ್ಲ ಎಂಬ ಕಾರಣಕ್ಕೆ ಖಾಲಿ ಹೊಟ್ಟೆಯಲ್ಲಿ ಇರಬಾರದು ಎಂಬ ಕಾರಣ ನೀಡಿ ಹಲವರು ಶುಗರ್ ಕ್ಯಾಂಡಿಯನ್ನು ಸವಿಯುತ್ತಾರೆ. ಬೆಳಗ್ಗೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಲು ಇದೊಂದು ಸಾಕು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಏಕಾಏಕಿ ಏರಿಕೆಯಾಗಲು ಶುಗರ್ ಕ್ಯಾಂಡಿ ಕಾರಣವಾಗುತ್ತದೆ. ಸಂಸ್ಕರಿಸಿದ ಪಿಷ್ಟಗಳು ಮತ್ತು ಕೃತಕ ಬಣ್ಣಗಳಿಂದ ತುಂಬಿದ ಈ ಶುಗರ್ ಕ್ಯಾಂಡಿ ದೇಹಕ್ಕೆ ತಕ್ಷಣ ಶಕ್ತಿ ನೀಡಬಹುದು, ಆದ್ರೆ ದೀರ್ಘಕಾಲದ ವರೆಗೆ ನಮ್ಮ ದೇಹಕ್ಕೆ ಉತ್ತಮವಲ್ಲ.
ಹಣ್ಣಿನ ರಸ ಮತ್ತು ಸ್ಮೂಥಿಗಳು
ನಿಮ್ಮ ಬೆಳಗ್ಗೆಯನ್ನು ನೀವು ಯಾವುದಾದರು ಪ್ಯಾಕ್ ಮಾಡಲಾದ ಚಾಕೊಲೆಟ್ ಸ್ಮೂಥಿ ಅಥವಾ ಹಣ್ಣಿನ ರಸ ಸವಿಯಲು ಮುಂದಾಗಬಹುದು. ಇದು ನಿಮಗೆ ಒಳ್ಳಯದು ಎಂದು ನೀವು ಭಾವಿಸಿರಬಹುದು. ಆದ್ರೆ ಪ್ಯಾಕ್ ಮಾಡಲಾದ ಆಹಾರದಲ್ಲಿ ಸಂಸ್ಕರಿಸಿದ ಕೃತಕ ಬಣ್ಣ, ಸಕ್ಕರೆ ಅಂಶ ಇರುತ್ತದೆ. ಬ್ರೇಕ್ ಫಾಸ್ಟ್ ಬದಲಿಗೆ ಇದನ್ನು ಸವಿದರೆ ಆರೋಗ್ಯದಲ್ಲಿ ಏರುಪೇರಾಗುವುದು ಖಚಿತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
