Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಬಾಯಿಯ ಸೂಕ್ಷ್ಮಾಣುಗಳೇ ಕ್ಯಾನ್ಸರ್ ಕಾರಕಗಳು..! ಹಲ್ಲು ಉಜ್ಜುವುದು ಕೂಡ ಸಮಸ್ಯೆಗೆ ದಾರಿ..!?
ನಾವು ನಿತ್ಯ ಬೆಳಗ್ಗೆ ಹಲ್ಲುಜ್ಜುವ ಮೂಲಕವೇ ದಿನವನ್ನು ಆರಂಭಿಸುತ್ತೇವೆ. ಇನ್ನು ಕೆಲವರು ದಿನಕ್ಕೆ ಎರಡು ಅಥವಾ ಮೂರು ಬಾರಿ ಹಲ್ಲು ಉಜ್ಜುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಹಲ್ಲಗಳ ಆರೋಗ್ಯ ಮತ್ತು ಬಾಯಿಯ ಆರೋಗ್ಯದ ದೃಷ್ಟಿಯಿಂದ ಹಲ್ಲು ಉಜ್ಜುವುದು ಉತ್ತಮ ಎಂದು ಹೇಳಲಾಗುತ್ತದೆ. ಈ ಅಭ್ಯಾಸ ಹಿಂದಿನಿಂದಲೂ ರೂಢಿಯಾಗಿ ಬೆಳೆದು ಬಂದಿದೆ.
ಆದ್ರೆ ಹಲ್ಲು ಉಜ್ಜಲು ಬಳಸುವ ಪೇಸ್ಟ್‌ಗಳು ಹಲ್ಲುಗಳ ಆರೋಗ್ಯಕ್ಕಿಂತಲೂ ಅದರ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತವೆ ಎಂಬುದು ಈ ಹಿಂದೆಯೂ ಹಲವು ಬಾರಿ ದೃಢವಾಗಿದೆ.

ಆದರೆ ಈಗ ಇದು ಕರುಳಿನ ಕ್ಯಾನ್ಸರ್‌ಗೂ ಸಂಬಂಧ ಪಟ್ಟಿದೆ ಎಂದು ಅಮೆರಿಕದ ಸಂಶೋಧಕರು ಕಂಡುಕೊಂಡಿದ್ದಾರೆ. 200 ಹೆಚ್ಚು ಕೇಸ್‌ಗಳನ್ನು ಅವರು ಪರೀಕ್ಷಗೊಳಪಡಿಸಿದ್ದು, ಅದರಲ್ಲಿ ಈ ಬಾಯಿಯಲ್ಲಿ ಕಂಡು ಬಂದ ಸೂಕ್ಷ್ಮಾಣುಗಳು ಕ್ಯಾನ್ಸರ್ ಕಾರಕವಾಗಿದ್ದವು.
ಬಾಯಿಯ ಆರೋಗ್ಯವು ಕರುಳಿನ ಕ್ಯಾನ್ಸರ್ ಅಪಾಯಕ್ಕೆ ಹೇಗೆ ಸಂಬಂಧಿಸಿದೆ?
ಅಧ್ಯಯನದ ಪ್ರಕಾರ, ಸೂಕ್ಷ್ಮಜೀವಿಗಳು ಕ್ಯಾನ್ಸರ್ ಪ್ರಗತಿಯನ್ನು ಹೆಚ್ಚಿಸುತ್ತವೆ ಮತ್ತು ಇದು ಕಾಲಾನಂತರದಲ್ಲಿ ಮಾರಕ ಎಂದು ಸಾಬೀತುಪಡಿಸುತ್ತದೆ. ಹಲ್ಲು ಸ್ವಚ್ಚಗೊಳಿಸಲು ಬಳಸುವ ಕೆಮಿಕಲ್‌ಗಳು ಅವರಲ್ಲಿ ಕ್ಯಾನ್ಸರ್ ಕಾರಣಕಗಳ ಉತ್ಪಾದನೆಗೆ ಕಾರಣವಾಗಲಿವೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಅಲ್ಲದೆ ಈ ರಾಸಾಯನಿಕ ಮತ್ತು ಬಾಯಿಯಲ್ಲಿನ ಸೂಕ್ಷ್ಮಾಣುಗಳು ಕ್ಯಾನ್ಸರ್ ಅಪಾಯ ಹೆಚ್ಚಿಸುವ ಸಾಧ್ಯತೆ ಇದೆ ಎಂದು ವಿವರಿಸಲಾಗಿದೆ.
ತಜ್ಞರ ಪ್ರಕಾರ, ಬಾಯಿಯಲ್ಲಿ ಏನಾಗುತ್ತದೆ ಎಂಬುದು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಹಲ್ಲುಗಳ ಬಗ್ಗೆ ಕಾಳಜಿ ವಹಿಸದಿರುವುದು ಇತರ ಅಂಗಗಳನ್ನು ಅನಾರೋಗ್ಯಕ್ಕೆ ಒಳಪಡಿಸುವಂತಹ ಅನಿರೀಕ್ಷಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಫ್ಯೂಸೊಬ್ಯಾಕ್ಟೀರಿಯಂ ನ್ಯೂಕ್ಲಿಯೇಟಮ್ ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾವು ಕೊಲೊರೆಕ್ಟಲ್ ಕ್ಯಾನ್ಸರ್ ಹೊಂದಿರುವ ಜನರಿಗೆ ಮತ್ತಷ್ಟು ಮಾರಕವಾಗಬಹುದು. ಅವರಲ್ಲಿ ಮಾರಾಣಾಂತಿಕವಾಗಿ ಈ ಕ್ಯಾನ್ಸರ್ ವೃದ್ಧಿಯಾಗಲು ಕಾರಣವಾಗಬಹುದು ಎಂದು ತಿಳಿದುಬಂದಿದೆ.
ಟೂತ್ ಪೇಸ್ಟ್‌ಗಳು ಸಹ ಕ್ಯಾನ್ಸರ್ ಕಾರಕಗಳು..!
ಟೂಥ್ ಪೇಸ್ಟ್ ನಲ್ಲಿ ಹಲ್ಲು ಸ್ವಚ್ಛಗೊಳಿಸಲು ಇರುವ ರಾಸಾಯನಿಕಗಳು ಪ್ರಬಲ ಹಾಗೂ ಹಾನಿಕರವೂ ಆಗಿವೆ. ವಿಶೇಷವಾಗಿ ಇದರಲ್ಲಿರುವ ಫ್ಲೋರೈಡ್ ಹೊಟ್ಟೆಗೆ ಹೋದರೆ ವಿಷಕ್ಕೆ ಸಮಾನ! ಹೆಚ್ಚಿನವರು ತಾವು ಹಲ್ಲುಜ್ಜಿದ ಬಳಿಕ ಮುಕ್ಕಳಿಸಿ ಉಗಿದು ಬಿಡುವ ಕಾರಣ ಅಪಾಯವಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ವಾಸ್ತವವಾಗಿ ಟೂಥ್ ಪೇಸ್ಟ್ ಜೊಲ್ಲಿನೊಡನೆ ನೊರೆಯರೂಪ ತಾಳಿದ ಬಳಿಕ ಬಾಯಿಯಲ್ಲಿ ಕೊಂಚವಾದರೂ ಉಳಿದೇ ಉಳಿಯುತ್ತದೆ. ದಂತವೈದ್ಯರ ಪ್ರಕಾರ ಇದು ಪೂರ್ಣವಾಗಿ ಹೋಗಬೇಕೆಂದರೆ ಕನಿಷ್ಠ ಐದು ಬಾರಿ ಮುಕ್ಕಳಿಸಬೇಕು. ಸಮಯವೇ ಇಲ್ಲವೆಂದಾದರೆ ಮೂರು ಬಾರಿಯಾದರೂ ಚೆನ್ನಾಗಿ ಮುಕ್ಕಳಿಸಬೇಕು.
ಟೂಥ್ ಪೇಸ್ಟ್ ಬಾಯಿಯಲ್ಲಿ ನೊರೆಬರುವ ಜೊತೆಗೇ ಸುಲಭವಾಗಿ ಜಾರುವಂತಾಗಲು sodium lauryl sulphate ಎಂಬ ರಾಸಾಯನಿಕವನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕ ಬಾಯಿಯಲ್ಲು ಹುಣ್ಣು, ಚರ್ಮದಲ್ಲಿ ತುರಿಕೆ ಉಂಟುಮಾಡುವ ಜೊತೆಗೇ ಹೊಟ್ಟೆ ಸೇರಿದರೆ ಹಾರ್ಮೋನುಗಳನ್ನೇ ಏರುಪೇರು ಮಾಡುವ ಅಪಾಯವಿದೆ.
ಕೆಲವು ಟೂಥ್ ಪೇಸ್ಟ್ ಗಳಲ್ಲಿ Diethanolamine ಎಂಬ ರಾಸಾಯನಿಕವಿದೆ. ಇದು ಬುರುಗು ಹೆಚ್ಚಿಸಲು ನೆರವಗುತ್ತದೆ. ಬುರುಗಿನ ಜೊತೆಗೇ ಇದು ಯಕೃತ್, ಮೂತ್ರಪಿಂಡಗಳ ಕ್ಯಾನ್ಸರ್ ಮತ್ತು ಹಾರ್ಮೋನುಗಳಲ್ಲಿ ಏರುಪೇರಿಗೂ ಕಾರಣವಾಗುತ್ತದೆ.
DEA ಎಂಬ ರಾಸಾಯನಿಕವು ಟೂತ್‌ಪೇಸ್ಟ್‌ನಲ್ಲಿ ನೊರೆ ಬರಲು ಈ ರಾಸಾಯನಿಕ ಬಳಸಲಾಗುತ್ತದೆ. 1998ರ ಅಧ್ಯಯನದಲ್ಲಿ, ಆಂಟಿಫ್ರೀಜ್ ಮತ್ತು ಬ್ರೇಕ್ ದ್ರವದಲ್ಲಿ ಕಂಡುಬರುವ ಡೈಥನೋಲಮೈನ್ (DEA), ಸ್ಥಳೀಯವಾಗಿ ಅನ್ವಯಿಸಿದಾಗ ಪ್ರಾಣಿಗಳಲ್ಲಿನ ಕ್ಯಾನ್ಸರ್‌ಗೆ ಸಂಬಂಧಿಸಿದೆ. ಅದೇ ಅಧ್ಯಯನವು ಡಿಇಎ-ಪ್ರೇರಿತ ಯಕೃತ್ತಿನ ಕೋಲೀನ್ ಕೊರತೆಯನ್ನು ಕಂಡುಹಿಡಿದಿದೆ, ಇದು ಅನೇಕ ಹಾರ್ಮೋನುಗಳಲ್ಲಿ ಪ್ರಮುಖ ಸಂಯುಕ್ತವಾಗಿದೆ. ಪರಿಣಾಮವಾಗಿ, ಉಪಭೋಗ್ಯ ವಸ್ತುಗಳಲ್ಲಿ ಇದನ್ನು ತಪ್ಪಿಸುವುದು ಉತ್ತಮ.
ಎಲ್ಲಾ ಟೂತ್‌ಪೇಸ್ಟ್‌ಗಳ ಮೇಲೂ ಕೆಂಪು, ಹಸಿರು, ಕಪ್ಪು, ನೀಲಿ ಬಣ್ಣದ ಮಾಪನಗಳಿರುತ್ತವೆ. ಈ ಮಾಪನಗಳ ಹಿಂದಿರುವ ಅರ್ಥವನ್ನು ತಿಳಿದುಕೊಂಡರೆ ಸಾಕು. ಕೆಂಪು ಬಣ್ಣದ ಗುರುತು ಇದ್ದರೆ ಅದು ನೈಸರ್ಗಿಕ ಹಾಗೂ ಕೆಮಿಕಲ್ ಮಿಶ್ರಿತ ಎಂದರ್ಥ, ನೀಲಿ ಗುರುತು ಇದ್ದರೆ ಅದು ನೈಸರ್ಗಿಕ ಮತ್ತು ಔಷಧಿ ಗುಣ ಹೊಂದಿದೆ ಎಂದರ್ಥ, ಹಸಿರು ಬಣ್ಣದ ಗುರುತು ಇದ್ದರೆ ಅದು ಸಂಪೂರ್ಣ ನೈಸರ್ಗಿಕ ಎಂದರ್ಥ ಇನ್ನು ಟೂತ್‌ಪೇಸ್ಟ್ ಕಪ್ಪು ಬಣ್ಣದ ಗುರುತು ಹೊಂದಿದ್ದರೆ ಅದು ಸಂಪೂರ್ಣ ಕೆಮಿಕಲ್‌ನಿಂದ ಮಾಡಲಾಗಿದೆ ಎಂದರ್ಥ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
