Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿರೀಯಡ್ಸ್‌ನಲ್ಲಿ ತುಂಬಾ ಕಂಫರ್ಟ್ ನೀಡುತ್ತೆ ಪಿರೀಯಡ್ಸ್ ಪ್ಯಾಂಟೀಸ್, ಶುಚಿಗೊಳಸಲು ಈ ಟಿಪ್ಸ್ ಅನುಸರಿಸಿ
ವಿಶ್ವ ಮುಟ್ಟಿನ ಶುಚಿತ್ವ ದಿನ: ಪಿರಿಯಡ್ ಪ್ಯಾಂಟೀಸ್ ಮಹಿಳೆಯರಿಗೆ ಆ ದಿನಗಳಲ್ಲಿ ತುಂಬಾನೇ ಕಂಪರ್ಟ್ ನೀಡುತ್ತಿದೆ ಎನ್ನುವುದರಲ್ಲಿ ನೋ ಡೌಟ್. ಏಕೆಂದರೆ ಈ ಪ್ಯಾಂಟೀಸ್ ಧರಿಸಿದರೆ ಲೈಟ್ ಸ್ಪಾಟ್ ಕಾಣುತ್ತೆ ಎಂಬ ಭಯವಿರಲ್ಲ, ಅಲ್ಲದೆ ಮುಟ್ಟಾಗುತ್ತೆ ಎಂದು ಅನಿಸಿದ ದಿನ ಹಾಗೂ ಮುಟ್ಟಾಗಿ 5-6 ದಿನಗಳಲ್ಲಿ ರಕ್ತಸ್ರಾವವಿರಲ್ಲ, ಆದರೆ ಒಂದೆರಡು ಡ್ರಾಪ್ ಬರುವ ಕಾರಣದಿಂದ ಪ್ಯಾಡ್ ಧರಿಸಬೇಕು, ಪ್ಯಾಡ್ ಡ್ರೈಯಾಗಿದ್ದಾಗ ಕಿರಿಕಿರಿ, ತುರಿಕೆ ಸಮಸ್ಯೆ ಉಂಟಾಗುವುದು.
ಅದನ್ನು ತಡೆಗಟ್ಟಲು ಈ ಪ್ಯಾಂಟೀಸ್ ತುಂಬಾನೇ ಸಹಕಾರಿ. ಆದರೆ ಈ ಪ್ಯಾಂಟೀಸ್ ಬಳಸುವವರು ಅದರ ಶುಚಿತ್ವ ಕಡೆಗೆ ಕೂಡ ಗಮನ ಹರಿಸಬೇಕು. ಏಕೆಂದರೆ ಇದನ್ನು ಮುಟ್ಟಿನ ಸಮಯದಲ್ಲಿ ಅಷ್ಟೇ ಬಳಸುವುದು. ಆದ್ದರಿಂದ ಇವುಗಳನ್ನು ಶುಚಿಯಾಗಿಡಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಪಿರೀಯಡ್ ಪ್ಯಾಂಟೀಸ್ ಪ್ಯಾಡ್‌ಗೆ ಪರ್ಯಾಯವಾಗಿರುವುದರಿಂದ ತುಂಬಾ ಮಹಿಳೆಯರು ಇದನ್ನು ಬಳಸಲು ಇಷ್ಟಪಡುತ್ತಿದ್ದಾರೆ. ಅದರಲ್ಲೂ ಶಾಲೆಗೆ ಹೋಗುವಂಥ ಮಕ್ಕಳಿಗೆ ಇದು ತುಂಬಾನೇ ಸಹಕಾರಿಯಾಗಿದೆ. ಪಿರೀಯಡ್ಸ್ ಪ್ಯಾಂಟೀಸ್ ಶುಚಿಗೊಳಿಸಲು ನೀವು ಈ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.
ಸ್ಟೆಪ್ 1:
ಶುಚಿಗೊಳಿಸುವ ಮುನ್ನ ಅದರಲ್ಲಿರುವ ರಕ್ತವನ್ನು ತೊಳೆದು ತೆಗೆಯಿರಿ. ನಲ್ಲಿನೀರಿನಲ್ಲಿ ಅಥವಾ ಬಕೆಟ್ ನೀರಿನಲ್ಲಿ ಹಾಕಿ ತೊಳೆಯಬಹುದು. ರಕ್ತ ಕಲೆ ಇರುವ ಭಾಗವನ್ನು ತಣ್ಣೀರಿನಲ್ಲಿ ತೊಳೆಯಬೇಕು. ಬೇಕಿದ್ದರೆ ಮೈಲ್ಡ್ ಸೋಪ್ ಅಥವಾ ಸ್ಟೈನ್ ರಿಮೂವರ್ ಬಳಸಬಹುದು. ಇದನ್ನು ತೊಳೆಯಲು ಮೈಲ್ಡ್ ಸೋಪು ಮಾತ್ರ ಬಳಸಬೇಕು.
ಸ್ಟೆಪ್ 2
ರಕ್ತ ಕಲೆ ತೊಳೆದ ಮೇಲೆ ಬಕೆಟ್‌ನಲ್ಲಿ ಸ್ವಲ್ಪ ಡಿಟರ್ಜೆಂಟ್ ಹಾಕಿ ನೆನೆಹಾಕಿ. ಹೀಗೆ ಮಾಡುವುದರಿಂದ ಮತ್ತಷ್ಟು ರಕ್ತಕಲೆ ತೆಗೆಯಲು ಸುಲಭವಾಗುವುದು. ನೀವು ಈ ರೀತಿ ಸುಮಾರು ಅರ್ಧ ಗಂಟೆ ಕಾಲ ನೆನೆಹಾಕಬೇಕು. ಇದರಿಂದ ರಕ್ತಕಲೆಗಳಿದ್ದರೆ ಬಿಡುವುದು.
ಮೆಷಿನ್ ವಾಶ್ 3
ಈಗ ಪ್ರೀವಾಶ್ ಆದ ಮೇಲೆ ಅಂದರೆ ರಕ್ತಕಲೆಗಳನ್ನು ಸಂಪೂರ್ಣವಾಗಿ ತೆಗೆದ ಮೇಲೆ ಅದರ ಮೇಲಿರುವ ಸೂಚನೆಗಳನ್ನು ಓದಿ, ಅದರಲ್ಲಿ ಮೆಷಿನ್ ವಾಶ್ ಮಾಡಬಹುದು ಅಮತಿದ್ದರೆ ಮಾತ್ರ ಮಾಡಿ. ಆದರೆ ಮೃದು ಡಿಟರ್ಜೆಂಟ್ ಬಳಸಿ, ಕಂಪರ್ಟ್ ಅಥವಾ ಇತರ ಸುವಾಸನೆಭರಿತ ಸಾಧನಗಳನ್ನು ಬಳಸಬೇಡಿ. ಇತರ ಬಟ್ಟೆಗಳ ಜೊತೆ ಹಾಕಿ ಒಗೆಯಬೇಡಿ. ಇವುಗಳನ್ನು ಪ್ರತ್ಯೇಕವಾಗಿ ಒಗೆಯುವುದು ಶುದ್ಧತೆಯ ದೃಷ್ಟಿಯಿಂದ ಒಳ್ಳೆಯದು. ಇತರ ಬಟ್ಟೆಗಳ ಜೊತೆ ಹಾಕಿ ಒಗೆಯುವುದಾದರೆ ಇದರಲ್ಲಿ ರಕ್ತಕೆಲಗಳು ಇಲ್ಲ ಅಥವಾ ನೀವು ಈಗಾಗಲೇ ಚೆನ್ನಾಗಿ ಕಲ್ಲಿನಲ್ಲಿ ಉಜ್ಜಿ ತೊಳೆದಿದ್ದು ಇನ್ನೊಂದು ರೌಂಡ್ ವಾಶ್ ಮಾಡಲು ಬೇಕಾದರೆ ಬಳಸಬಹುದು.
ಒಣಗಿಸಲು 4
ಮೆಷಿನ್ ವಾಶ್, ಹೇರ್ ಡ್ರೈಯಿಂಗ್ ತುಂಬಾನೇ ಒಳ್ಳೆಯದು. ಇದರಿಂದ ನಿಮ್ಮ ಪ್ಯಾಂಟೀಸ್ ದುರ್ವಾಸನೆ ಬೀರುವುದನ್ನು ತಡೆಗಟ್ಟಬಹುದು. ಆದರೆ ಡ್ರೈಯರ್ ಬಳಸಬೇಡಿ, ಅಧಿಕ ಹೀಟ್ ಅದರ ಇಲಾಸ್ಟಿಕ್‌ಗೆ ಹಾನಿಯುಂಟು ಮಾಡುವುದು. ಅವುಗಳು ಸಂಪೂರ್ಣವಾಗಿ ಒಣಗುವವರೆಗೆ ನೇತು ಹಾಕಿ ಒಣಗಿಸಿ.
ಸ್ಟೆಪ್ 5:
ನಿಮ್ಮ ಪಿರೀಯಡ್ಸ್ ಪ್ಯಾಂಟೀಸ್ ಒಣಗಿದ ಮೇಲೆ ಅವುಗಳನ್ನು ಸರಿಯಾದ ರೀತಿಯಲ್ಲಿ ಮಡಚಿಡುವುದು ಕೂಡ ಮುಖ್ಯವಾಗಿರುತ್ತದೆ. ಅವುಗಳನ್ನು ಒಣಗಿದ ಸ್ಥಳದಲ್ಲಿ ಇಡಿ. ಇವುಗಳನ್ನು ಪ್ರತ್ಯೇಕವಾಗಿಡಿ.
ಪಿರೀಯಡ್ಸ್ ಪ್ಯಾಂಟೀಸ್‌ಗೆ ಇಸ್ತ್ರಿ ಹಾಕಬೇಡಿ
* ಅಧಿಕ ಶಾಖ ಈ ಬಗೆಯ ಪ್ಯಾಂಟೀಸ್ ಅನ್ನು ಹಾಳು ಮಾಡುವುದು
* ಕಲೆ ಹೋಗಲು ನಿಂಬೆಹಣ್ಣು, ಹೈಡ್ರೋಜಿನ್ ಪೆರಾಕ್ಸೈಡ್ ಬಳಸಿ.
* ನೀವು ಈ ಪ್ಯಾಂಟೀಸ್ ಶುಚಿಗೊಳಿಸುವಾಗ ಅದರ ಕ್ಲೀನಿಂಗ್ ಸಲಹೆಯನ್ನು ಓದಿ ಅದರಂತೆ ಶುಚಿಗೊಳಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications