Latest Updates
-
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ
ಪುರುಷರೇ ಈ ಲಕ್ಷಣಗಳು ಕಂಡು ಬಂದರೆ ಚಿಕ್ಕ ಸಮಸ್ಯೆ ಅಂತ ನಿರ್ಲಕ್ಷ್ಯ ಬೇಡ, ಕ್ಯಾನ್ಸರ್ ಇರಬಹುದು
ಬೆನ್ನು ನೋವು, ಅಜೀರ್ಣ, ಆಗಾಗ ಮೂತ್ರ ವಿಸರ್ಜನೆ ಈ ಬಗೆಯ ಸಮಸ್ಯೆಯನ್ನು ಸಾಮಾನ್ಯ ಸಮಸ್ಯೆವೆಂದು ನಿರ್ಲಕ್ಷ್ಯ ಮಾಡುವವರೇ ಹೆಚ್ಚು, ಆದರೆ ಇಂಥ ಸಮಸ್ಯೆ ನಿರ್ಲಕ್ಷ್ಯ ಮಾಡಲೇಬಾರದು. ಕೆಲವೊಂದು ಲಕ್ಷಣಗಳನ್ನು ಆರಂಭದಲ್ಲಿ ನಿರ್ಲಕ್ಷ್ಯ ಮಾಡುವುದರಿಂದಲೇ ಸಮಸ್ಯೆ ಹೆಚ್ಚಾಗುವುದು, ಹಾಗಾಗಿ ಪುರುಷರೇ ಈ ಬಗೆಯ ಸಮಸ್ಯೆಗಳು ಕಂಡು ಬಂದಾಗ ಸಾಮಾನ್ಯ ಸಮಸ್ಯೆವೆಂದು ನಿರ್ಲಕ್ಷ್ಯ ಮಾಡಲೇಬೇಡಿ:

ಅಸಹಜ ಗಂಟು: ನಿಮ್ಮ ತ್ವಚೆಯ್ಲಿಇತ್ತೀಚೆಗೆ ಅಸಹಜ ಗಂಟು ಬಂದಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ, ಇದು ಕ್ಯಾನ್ಸರ್‌ನ ಪ್ರಾರಂಭದ ಲಕ್ಷಣವಾಗಿರಬಹುದು, ಹಾಗಾಗಿ ದೇಹದ ಯಾವುದೇ ಭಾಗದಲ್ಲಿ ಈ ಬಗೆಯ ಗಂಟು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ.
ವೃಷಣಗಳು ಬದಲಾದರೆ
ವೃಷಣದಲ್ಲಿ ಇತ್ತೀಚೆಗೆ ಏಕೋ ಬದಲಾವಣೆಯಾಗಿದೆ ಎಂದನಿಸಿದಾಗ ನಿರ್ಲಕ್ಷ್ಯ ಮಾಡಬೇಡಿ ಅಥವಾ ಇಂಥ ವಿಷಯಗಳನ್ನು ಹೇಗಪ್ಪಾ ಹೇಳುವುದು ಎಂಬ ಮುಜುಗರದಿಂದ ಕೂರಬೇಡಿ. ಪ್ರಾಸ್ಟೇಟ್ ಕ್ಯಾನ್ಸರ್ ಇದ್ದಾಗ ವೃಷಣಗಳಲ್ಲಿ ಬದಲಾವಣೆ ಕಂಡು ಬರುವುದು.
ವಿಪರೀತ ಕೆಮ್ಮು, ಶಬ್ದ ಗೊರ ಗೊರ ಅಂತ ಬರುವುದು
ವಿಪರೀತ ಕೆಮ್ಮು, ಎಷ್ಟು ಔಷಧಿ ತೆಗೆದರೂ ಕಡಮೆಯಾಗುತ್ತಿಲ್ಲ, ಶಬ್ದದಲ್ಲಿ ಕೂಡ ಬದಲಾವಣೆಯಾಗಿದೆ, ಉಸಿರಾಟದಲ್ಲಿ ತೊಂದರೆಯಾಗುತ್ತಿದೆ ಎಂದಾದರೆ ಅದು ಶ್ವಾಸಕೋಶ ಕ್ಯಾನ್ಸರ್ ಲಕ್ಷಣವಿರಬಹುದು. ಕೆಮ್ಮಿದಾದ ಕಫದಲ್ಲಿ ರಕ್ತದ ಕಲೆಗಳು ಈ ಬಗೆಯ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡಲೇಬೇಡಿ.
ಇದ್ದಕ್ಕಿದ್ದಂತೆ ಮೈ ತೂಕ ಕಡಿಮೆಯಾದರೆ
ಇತ್ತೀಚೆಗೆ ತುಂಬಾನೇ ಮೈ ತೂಕ ಕಡಿಮೆಯಾಗಿದೆ, ತುಂಬಾನೇ ಸುಸ್ತು ಅನಿಸುವುದು, ಕೆಲಸ ಕಾರ್ಯಗಳ ಕಡೆಗೆ ಗಮನಹರಿಸಲುಸಾಧ್ಯವಾಗುತ್ತಿಲ್ಲ ಎಂದಾದರೆ ನೀವು ನಿರ್ಲಕ್ಷ್ಯ ಮಾಡಿ, ವೈದ್ಯರನ್ನು ಭೇಟಿಯಾಗಿ ಕ್ಯಾನ್ಸರ್ ಸಂಬಂಧಿ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಕ್ಯಾನ್ಸರ್ ರೋಗಿಗಳಲ್ಲಿ ಪದೇ ಪದೇ ತಲೆ ಸುತ್ತು ಬರುವುದು ಬಗೆಯ ಸಮಸ್ಯೆ ಕೂಡ ಕಂಡು ಬರುವುದು.
ವಿಪರೀತ ನೋವು
ಕುತ್ತಿಗೆ ನೋವು, ಸೊಂಟ ನೋವು, ತಲೆನೋವು, ಕಿಬ್ಬೊಟ್ಟೆಯಲ್ಲಿ ನೋವುಈ ಬಗೆಯ ಸಮಸ್ಯೆಗಳು ಪದೇ ಪದೇ ಬರ್ತಾ ಇದೆ ಎಂದಾದರೆ ಏನೋ ಸಮಸ್ಯೆಯಾಗಿದೆ ಎಂದರ್ಥ. ಈ ಬಗೆಯ ಸಮ್ಸಯೆ ಕಂಡು ಬಂದಾಗಲೇ ಪರೀಕ್ಷೆ ಮಾಡಿಸಿದರೆ ಗುಣಮುಖರಾಗುವುದು ಸುಲಭವಾಗುವುದು.
ಅಜೀರ್ಣ ಸಮಸ್ಯೆ
ಅಜೀರ್ಣ ಸಮಸ್ಯೆ ಕೂಡ ನಿರ್ಲಕ್ಷ್ಯ ಮಾಡಬಾರದು. ಆಗಾಗ ಅಜೀರ್ಣ ಸಮಸ್ಯೆ ಉಂಟಾಗುತ್ತಿದೆ, ಆಹಾರ ನುಂಗಲು ಕಷ್ಟ, ಗಂಟಲು ನೋವು ಈ ಬಗೆಯ ಸಮಸ್ಯೆಗಳು ಕಂಡುಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ತ್ವಚೆ ಕ್ಯಾನ್ಸರ್‌ನ ಈ ಲಕ್ಷಣ ನಿರ್ಲಕ್ಷ್ಯ ಮಾಡಬೇಡಿ
ತ್ವಚೆಯ ಬಣ್ಣ ಬದಲಾಗುವುದು
ಊತ ಕಡಿಮೆಯಾಗದಿರುವುದು
ಮಚ್ಚೆ: ಅದರ ಬಣ್ಣ ಮತ್ತು ಗಾತ್ರದಲ್ಲಿ ಬದಲಾವಣೆ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ.
ಈ ಸಮಸ್ಯೆಗಳು ಸಾಮಾನ್ಯ ಅನಿಸಬಹುದು, ಆದರೆ ಕ್ಯಾನ್ಸರ್ ಲಕ್ಷಣಗಳಿರಬಹುದು. ಕ್ಯಾನ್ಸರ್ ಪ್ರಾರಂಭದಲ್ಲಿಯೇ ಗುರುತಿಸಿದರೆ ಚಿಕಿತ್ಸೆಯಿಂದ ಗುಣಪಡಿಸಬಹದು, ಅದೇ ನಾಲ್ಕನೇ ಹಂತ ತಲುಪಿದರೆ ಕಷ್ಟ, ಈ ಬಗ್ಗೆ ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











