Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಂಸವನ್ನು ಪ್ರಿಡ್ಜ್‌ನಲ್ಲಿ ಹೇಗೆ ಸಂರಕ್ಷಿಸಿದರೆ ಮಾತ್ರ ತಿನ್ನಲು ಸುರಕ್ಷಿತ?
ಭಾನುವಾರ ಮಾಂಸ ತಂದಿರುತ್ತೇವೆ, ಆದರೆ ಆ ದಿನ ಮಾಂಸದ ಅಡುಗೆ ಮಾಡಲು ಸಾಧ್ಯವಾಗಿರುವುದಿಲ್ಲ, ಇನ್ನು ಸೋಮವಾರ ಮಾಂಸಾಹಾರ ಸೇವಿಸುವಂತಿಲ್ಲ ಮಂಗಳವಾರ ಮಾಡಿದರೆ ಆಯ್ತು ಫ್ರಿಡ್ಜ್‌ನಲ್ಲಿಡುತ್ತಾರೆ. ಇನ್ನು ಕೆಲವರು ಮಂಗಳವಾರ ತಿನ್ನಲ್ಲ ಬುಧವಾರ ಮಾಡಿದರಾಯ್ತು, ಫ್ರಿಡ್ಜ್‌ನಲ್ಲಿಟ್ಟ ಆಹಾರ ಹಾಳಾಗಲ್ಲ ಎಂದು ವಾರದವರೆಗೆ ಫ್ರಿಡ್ಜ್‌ನಲ್ಲಿಯೇ ಇಟ್ಟು ಬಳಸುತ್ತಾರೆ. ಆದರೆ ಮಾಂಸಾಹಾರ ಫ್ರಿಡ್ಜ್‌ನಲ್ಲಿಟ್ಟು ಬಳಸುವುದಾದರೆ ಅದರ ಸುರಕ್ಷತೆ ಬಗ್ಗೆ ನಿಮಗೆ ತಿಳಿದಿಲ್ಲ ಎಂದಾದರೆ ಇದರಿಂದ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ.
ಫ್ರಿಡ್ಜ್‌ನಲ್ಲಿಟ್ಟರೂ ಬ್ಯಾಕ್ಟಿರಿಯಾ ಬೆಳೆಯುತ್ತೆ ಹುಷಾರ್!
ಮಾಂಸಾಹಾರವನ್ನು ತುಂಬಾ ಸಮಯ ಪ್ರಿಡ್ಜ್‌ನಲ್ಲಿಟ್ಟು ಸೇವಿಸುವುದರಿಂದ ಅದರಲ್ಲಿ ಬ್ಯಾಕ್ಟಿರಿಯಾ ಉಂಟಾಗು, ಅವುಗಳನ್ನು ತಿಂದು ಅನಾರೋಗ್ಯ ಬೀಳುವಂತಾಗುವುದು. ಆದ್ದರಿಂದ ಮಾಂಸಾಹಾರ ಇಡುವ ಸುರಕ್ಷಿತ ವಿಧಾನ ಯಾವುದೆಂದು ನೋಡೋಣ:
ಮಾಂಸಾಹಾರವನ್ನು ಸುರಕ್ಷಿತವಾಗಿ ಇಡುವ ವಿಧಾನ
ಕೆಲವರು ಮಾಂಸಾಹಾರವನ್ನು ಪ್ರಿಡ್ಜ್‌ನಲ್ಲಿ ಇಟ್ಟರೆ ಸಾಕು ಆಹಾರ ಸುರಕ್ಷಿತವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಆ ರೀತಿ ಇಟ್ಟರೆ ನಿಮ್ಮ ಆಹಾರ ಖಂಡಿತ ಸುರಕ್ಷಿತವಲ್ಲ. ಏಕೆಂದರೆ ಇದರಿಂದ ಆಹಾರದಲ್ಲಿ ಹಾನಿಕಾರಕ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ನೀವು ಹಸಿ ಮಾಂಸವನ್ನು ಪ್ರಿಡ್ಜ್‌ನಲ್ಲಿ ಇತರ ಆಹಾರಗಳ ಜೊತೆ ಇಡಲೇಬಾರದು. ಏಕೆಂದರೆ ಮಾಂಸಾಹಾರದಲ್ಲಿರುವ ಬ್ಯಾಕ್ಟಿರಿಯಾ ಇತರ ಆಹಾರಗಳಿಗೆ ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಕುರಿತು ಜಾಗ್ರತೆವಹಿಸಿ.

ಮಾಂಸಾಹಾರವನ್ನು ಫ್ರೀಜರ್‌ನಲ್ಲಿಡುವುದು ಸುರಕ್ಷಿತ
ಮಾಂಸವನ್ನು ನೀವು 0°F (-18°C) ಕಡಿಮೆ ಶೀತಾಂಶದಲ್ಲಿ ಇಡಬೇಕು, ಇಲ್ಲದಿದ್ದರೆ ಬ್ಯಾಕ್ಟಿರಿಯಾ ಉತ್ಪತ್ತಿಯಾಗುವ ಸಾಧ್ಯತೆ ಇದೆ.
ಫ್ರೀಝರ್ ಸ್ಟೋರೇಜ್ ಗೈಡ್‌ಲೈನ್
* ನೀವು ಸ್ಟೀಕ್ ಫ್ರೋಝನ್ 6-12 ತಿಂಗಳು ಇಡಬಹುದು
* ಚಿಕನ್ ಭಾಗಗಳಾದ ಅದರ ತೊಡೆ, ಬ್ರೆಸ್ಟ್ ಅಥವಾ ವಿಂಗ್ಸ್ ನೀವು 9 ತಿಂಗಳವರೆಗೆ ಇಡಬಹುದು
* ಪೋರ್ಕ್ ಚಾಪ್ಸ್ ಅನ್ನು 4-6 ತಿಂಗಳವರೆಗೆ ಇಡಬಹುದು
* ಮೀನನ್ನು 2-3 ತಿಂಗಳವರೆಗೆ ಇಡಬಹುದು.
ಫ್ರಿಡ್ಜ್ ಸ್ಟೋರೇಜ್ ಗೈಡ್‌ಲೈನ್
* ಬೇಯಿಸದೆ ಇರುವ ಮಟನ್, ಪೋರ್ಕ್, ಮತ್ತಿತರ ಕೆಂಪು ಮಾಂಸವನ್ನು ಮಾಂಸಾಹಾರವನ್ನು ನೀವು 3-5 ದಿನಗಳವರೆಗೆ ಇಡಬಹುದು
* ಪೌಲ್ಟ್ರಿ ಮಾಂಸವನ್ನು ನೀವು 1-2 ದಿನಗಳವರೆಗೆ ಮಾತ್ರ ಇಡಬಹುದು.
* ಮೀನನ್ನು 1-2 ದಿನಗಳವರೆಗೆ ಇಡಬಹುದು.
ಕೇನ್ಡ್ ಫುಡ್ ಸ್ಟೋರೇಜ್ ಗೈಡ್‌ಲೈನ್
* ಕೇನ್ಡ್ ಫುಡ್ ಅನ್ನು 2-5 ವರ್ಷದವರೆಗೆ ಇಡಬಹದು
* ಕೇನ್ಡ್ ಫುಡ್ ಅನ್ನು ತಂಪಾದ, ಒಣಗಿದ, ಕತ್ತಲು ಪ್ರದೇಶದಲ್ಲಿ ಇಡಬೇಕು.
* ಕೇನ್ಡ್ ಫುಡ್ ಓಪನ್ ಮಾಡಿದರೆ ಉಳಿದ ಪದಾರ್ಥವನ್ನು ತಕ್ಷಣವೇ ಫ್ರಿಡ್ಜ್‌ನಲ್ಲಿಡಬೇಕು.
ಯಾವುದೇ ಆಹಾರವನ್ನು ತುಂಬಾ ಸಮಯ ಪ್ರಿಡ್ಜ್‌ನಲ್ಲಿಡಬೇಡಿ
ಯಾವ ಆಹಾರವಾಗಲಿ ಪ್ರಿಡ್ಜ್‌ನಲ್ಲಿಟ್ಟು ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದಷ್ಟೂ ಫ್ರಿಡ್ಜ್‌ನಲ್ಲಿಟ್ಟು ಬಳಸುವುದು ಕಡಿಮೆ ಮಾಡಿ. ಇದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನು ಸಂಸ್ಕರಿಸಿದ ಮಾಂಸಾಹಾರ ಅತಿಯಾಗಿ ಸೇವಿಸುವುದರಿಂದ ಹಾರ್ಮೋನ್‌ಗಳಲ್ಲಿ ಬದಲಾವಣೆಯಾಗುತ್ತೆ, ಈ ಬಗ್ಗೆ ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications