Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆನ್ನುಮೂಳೆ ಸ್ವಲ್ಪ ಬಾಗಿಕೊಂಡಿದ್ದರೆ ಯಾವ ಬಗೆಯ ಮ್ಯಾಟ್ರಸ್‌ನಲ್ಲಿ ಮಲಗಿದರೆ ಒಳ್ಳೆಯದು?
ತುಂಬಾ ಜನರಿಗೆ ಬೆನ್ನು ಮೂಳ ನೇರವಾಗಿ ಇರದೆ, ಸ್ವಲ್ಪ ಬಾಗಿಕೊಂಡು ಇರುತ್ತದೆ. ದೊಡ್ಡವರಲ್ಲಿ ಮಾತ್ರವಲ್ಲ ಮಕ್ಕಳಲ್ಲಿಯೂ ಈ ಬಗೆಯ ಸಮಸ್ಯೆ ಕಂಡು ಬರುವುದು ಇದನ್ನು ವೈದ್ಯಕೀಯ ಭಾಷೆಯಲ್ಲಿ scoliosis ಎಂದು ಕರೆಯಲಾಗುವುದು. ಈ ಬಗೆಯ ಸಮಸ್ಯೆ ಇರುವವರು ಮಲಗುವ ಹಾಸಿಗೆ ಕಡೆಗೆ ಹೆಚ್ಚಿನ ಗಮನಹರಿಸಬೇಕು.ಸ್ಕೋಲಿಯೋಸಿಸ್ ಇರುವವರಲ್ಲಿ ಬೆನ್ನೆಲುಬು ಅಸಹಜವಾಗಿ ಆಗುತ್ತದೆ, ಇದು ಬೆನ್ನುಮೂಳೆ C ಅಥವಾ S ರೀತಿಯಲ್ಲಿ ಕಂಡು ಬರುವುದು.

ಬೆನ್ನು ಮೂಳೆ ಬಾಗುವಿಕೆ ಸಮಸ್ಯೆ ಇರುವವರು ಬೆನ್ನು ಮೂಳೆ ಹೆಚ್ಚಿನ ಒತ್ತಡ ಹಾಕದಿರುವ ಹಾಸಿಗೆಯ ಕಡೆಗೆ ಗಮನಹರಿಸಬೇಕು ಎಂದು ಡಾ. ಬೀರಾದರ್ ಸಲಹೆ ನೀಡುತ್ತಾರೆ. ಕೆಲವೊಂದು ಮ್ಯಾಟ್ರಸ್‌ಗಳು ಇಂಥ ಸಮಸ್ಯೆ ಇರುವವರಿಗೆ ಕಂಫರ್ಟ್ ನೀಡಲೆಂದೇ ವಿಶೇಷ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿರುತ್ತದೆ, ಉದಾಹರಣೆಗೆ ಮ್ಯಾಗ್ನಿಫ್ಲೆಕ್ಸ್ ಮ್ಯಾಟ್ರಸ್. ಇಂಥ ಹಾಸಿಗೆಯಲ್ಲಿ ಮಲಗಿದಾಗ ಕಂಫರ್ಟ್ ಸಿಗುತ್ತದೆ, ಇದು ಬೆನ್ನು ಮೂಳೆ ಹೆಚ್ಚು ಒತ್ತಡ ಬೀಳುವುದನ್ನು ತಡೆಗಟ್ಟುತ್ತದೆ, ಬೆನ್ನುಮೂಳೆ ನೇರವಾಗಿ ಇರುವಂತೆ ಮಾಡುತ್ತದೆ, ಈ scoliosis ಸಮಸ್ಯೆ ಇರುವವರಿಗೆ ಈ ಬಗೆಯ ಮ್ಯಾಟ್ರಸ್ ತುಂಬಾನೇ ಪ್ರಯೋಜನಕಾರಿಯಾಗಿದೆ.
ಸ್ಕೋಲಿಯೋಸಿಸ್ ಸಮಸ್ಯೆ ಇರುವವರು ಹಾಸಿಗೆ ಖರೀದಿ ಮಾಡುವಾಗ ಈ ಅಂಶಗಳನ್ನು ಗಮನಿಸಿದರೆ ಮೂಳೆ ಮೇಲೆ ಹೆಚ್ಚು ಒತ್ತಡ ಬೀಳುವುದನ್ನು ತಡೆಗಟ್ಟಬಹುದು:
ಮೀಡಿಯಂ ಫರ್ಮ್ ಮ್ಯಾಟ್ರಸ್: ಮೀಡಿಯಂ ಫರ್ಮ್ ಮ್ಯಾಟ್ರಸ್ ಒಳ್ಳೆಯ ಬ್ಯಾಲೆನ್ಸ್ ನೀಡುತ್ತದೆ, ಇದು ಬೆನ್ನು ಮೂಳೆ ಮಲಗಿದಾಗ ಹೆಚ್ಚಿನ ಒತ್ತಡ ಬೀಳುವುದನ್ನು ತಡೆಗಟ್ಟುತ್ತದೆ.
ಮೆಮೋರಿ ಫಾಮ್ ಮ್ಯಾಟ್ರಸ್: ಈ ಬಗೆಯ ಮ್ಯಾಟ್ರಸ್ ನಮ್ಮ ದೇಹದ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ, ಹೀಗೆ ತುಂಬಾನೇ ಹಾಯಾನಿಸುವುದು, ಇಂಥ ಮ್ಯಾಟ್ರಸ್ ತುಂಬಾನೇ ಸಾಫ್ಟ್ ಆಗಿರುತ್ತದೆ, ಮೈಯನ್ನು ಬೆಚ್ಚಗಿಡುತ್ತದೆ.
ಲ್ಯಾಟೆಕ್ಸ್ ಮ್ಯಾಟ್ರಸ್: ಈ ಬಗೆಯ ಮ್ಯಾಟ್ರಸ್ ಬೆನ್ನು ಮೂಳೆಗೆ ತುಂಬಾನೇ ಸಪೋರ್ಟ್ ನೀಡುತ್ತದೆ, ಯಾರಿಗೆ ಅಲರ್ಜಿ ಸಮಸ್ಯೆ ಇರುತ್ತದೋ ಅಂಥವರಿಗೆ ಇಂಥ ಮ್ಯಾಟ್ರಸ್ ತುಂಬಾ ಒಳ್ಳೆಯದು.
ಹೈಬ್ರಿಡ್ ಮ್ಯಾಟ್ರಸ್: ಈ ಬಗೆಯ ಮ್ಯಾಟ್ರಸ್ ಕೂಡ ತುಂಬಾನೇ ಸಪೋರ್ಟ್ ನೀಡುತ್ತದೆ, ಫರ್ಮ್‌ನೆಸ್‌ಬೇಕು ಕೆಲವೊಮ್ಮೆ ಸಾಫ್ಟ್‌ನೆಸ್ ಬೇಕು ಎಂದು ಬಯಸುವವರು ಈ ಬಗೆಯ ಮ್ಯಾಟ್ರಸ್ ಆಯ್ಕೆಮಾಡಬಹುದು, ಇದರ ಒಂದು ಬಬದಿ ಸಾಫ್ಟ್ ಇರುತ್ತದೆ ಮತ್ತೊಂದು ಬದಿ ಫರ್ಮ್ ಇರುತ್ತದೆ.
ಮ್ಯಾಟ್ರಸ್ ಬಗ್ಗೆ ಮಾಹಿತಿ ನೀಡಿದವರು (ಆನಂದ್, ಮ್ಯಾನೇಜಿಂಗ್ ಡೈರೆಕ್ಟರ್, ಮ್ಯಾಗ್ನಿಫ್ಲೆಕ್ಸ್)
ಇತರ ಮಾಹಿತಿ
ನಿದ್ದೆಯ ಭಂಗಿ: ನಿದ್ದೆಯ ಭಂಗಿ ಕಡೆಗೆ ಗಮನಹರಿಸಬೇಕು ಹಿಂಬದಿ ಹಾಗೂ ಭುಜಕ್ಕೆ ಎಕ್ಟ್ರಾ ಸಪೋರ್ಟ್ ನೀಡುವ ಮ್ಯಾಟ್ರಸ್ ಕಡೆಗೆ ಗಮನಹರಿಸಬೇಕು.
ವೈದ್ಯರ ಸಲಹೆ ಪಡೆಯಿರಿ: 7-10 ವರ್ಷ ಬಳಸಿದ ಬಳಿಕ ಮ್ಯಾಟ್ರಸ್ ಬದಲಾಯಿಸಿ.
ಲಕ್ಷಣಗಳು
ಭುಜ ಒಂದೇ ಸಮ ಇರುವುದಿಲ್ಲ
ಸೊಂಟದಾಕಾರ ಸರಿಯಾದ ರೀತಿಯಲ್ಲಿ ಇರುವುದಿಲ್ಲ
ಒಂದು ಹಿಂಬದಿ ಇನ್ನೊಂದು ಹಿಂಬದಿಗಿಂತ ಎತ್ತರವಿರುತ್ತದೆ
ಸ್ವಲ್ಪ ಮುಂದಕ್ಕೆ ಬಾಗಿರುತ್ತಾರೆ
ಇವರ ನಡುಗೆಯಲ್ಲಿಯೂ ವ್ಯತ್ಯಾಸವಿರುತ್ತದೆ.
ಈ ಸಮಸ್ಯೆಗೆ ಕಾರಣವೇನು?
ಕೆಲವೊಂದು ನರ ಸಮಸ್ಯೆಯಿಂದಾಗಿ ಈ ರೀತಿಯಾಗಬಹುದು
ಹುಟ್ಟುವಾಗಲೇ ಮೂಳೆಯಲ್ಲಿ ಸಮಸ್ಯೆಯಿದ್ದರೆ
ಮಗುವಿರುವಾಗ ಎದೆಭಾಗದಲ್ಲಿ ಸರ್ಜರಿಯಾಗಿದ್ದರೆ
ಮೂಳೆಗೆ ಗಾಯವಾಗಿದ್ದರೆ
ಈ ಸಮಸ್ಯೆಯಿದ್ದರೆ ತೊಂದರೆಯೇನು?
ವಯಸ್ಸಾಗುತ್ತಿದ್ದಂತೆ ಈ ಸಮಸ್ಯೆ ಹೆಚ್ಚು ಗೋಚರವಾಗುವುದು
ಇದರಿಂದ ಉಸಿರಾಟದ ಸಮಸ್ಯೆ ಉಂಟಾಗುವುದು
ನೋಡುವಾಗಲೇ ವ್ಯತ್ಯಾಸ ಕಂಡು ಬರುವುದರಿಂದ ಆತ್ಮವಿಶ್ವಾಸ ಕುಗ್ಗಿಸಬಹುದು
ಬೆನ್ನು ಮೂಳೆ ಮೇಲೆ ಹೆಚ್ಚಿನ ಒತ್ತಡ ಬೀರುವುದರಿಂದ ಬೆನ್ನುನೋವು ಕಂಡು ಬರುವುದು
ಈ ಬಗೆಯ ಸಮಸ್ಯೆ ಇರುವವರು ಮಲಗುವ ಭಂಗಿ ಕಡೆಗೂ ಹೆಚ್ಚಿನ ಗಮನಹರಿಸಬೇಕು, ಇಲ್ಲದಿದ್ದರೆ ಈ ಬಗೆಯ ಸಮಸ್ಯೆಯಿಂದಾಗಿ ಬೆನ್ನುನೋವು ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications