Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಾರ್ಚ್ 20 ಅಂತರರಾಷ್ಟ್ರೀಯ ಖುಷಿ ದಿನ: ಈ ಅಭ್ಯಾಸಗಳಿರುವವರು ತುಂಬಾನೇ ಖುಷಿಯಾಗಿರುತ್ತಾರೆ
ನಮ್ಮ ಜೀವನದ ಪ್ರಮುಖ ಉದ್ದೇಶವೇನು? ಸಂತೋಷವಾಗಿರುವುದು ಅಲ್ವಾ? ಮಾರ್ಚ್ 20ರಂದು ವಿಶ್ವ ಖುಷಿಯ ದಿನವನ್ನು ಆಚರಿಸಲಾಗುವುದು. ಖುಷಿಯೆಂಬುವುದು ಎಷ್ಟು ಅವಶ್ಯಕ ಎಂಬುವುದ ಮಹತ್ವದ ಕುರಿತು ಅರಿವು ಮೂಡಿಸಲು ಈ ದಿನ ಆಚರಿಸಲಾಗುವುದು.
ನಾವು ಏನೇ ಮಾಡಲಿ ಖುಷಿಯಾಗಿಲ್ಲವೆಂದರೆ ಏನು ಮಾಡಿ ಏನು ಪ್ರಯೋಜವಲ್ಲ. ನಾವು ಮಾಡುವ ಕೆಲಸವನ್ನೇ ತೆಗೆದುಕೊಳ್ಳಿ ನಾವು ಇಷ್ಟಪಟ್ಟು ಮಾಡುವ ಕೆಲಸಕ್ಕೂ, ಅತಿಯಾದ ಕೆಲಸದ ಒತ್ತಡ ತೆಗೆದುಕೊಂಡು ಮಾಡುವ ಕೆಲಸಕ್ಕೂ ತುಂಬಾನೇ ವ್ಯತ್ಯಾಸವಿರುತ್ತದೆ. ನಾವು ಇಷ್ಟಪಟ್ಟು ಮಾಡುವ ಕೆಲಸದಲ್ಲಿ ತುಂಬಾನೇ ಖುಷಿ ಇರುತ್ತದೆ.
ಇನ್ನು ಕೆಲವರು ಇರುತ್ತಾರೆ ಸದಾ ಒಂದೆಲ್ಲಾ ಒಂದು ಕೊರತೆ ಕಂಡು ಹಿಡಿದು ಕೊರಗುತ್ತಾ ಇರುತ್ತಾರೆ. ಇರುವುದೊಂದು ಲೈಫ್, ಬಿ ಹ್ಯಾಪಿ.

ನೀವು ಖುಷಿಯಾಗಿರಲು ಕೆಲವೊಂದು ಸರಳ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸಾಕು, ನೀವು ಖುಷಿಯಿಂದ ಇರುವಿರಿ, ಇದರಿಂದ ನಿಮ್ಮ ಸುತ್ತಲು ಇರುವವರು ಖುಷಿಯಾಗಿರುತ್ತಾರೆ. ನಿಮ್ಮ ಆರೋಗ್ಯ ಹೆಚ್ಚಾಗುವುದು, ನಿಮ್ಮ ಕೆಲಸ ಕಾರ್ಯಗಳಲ್ಲಿ ಗಮನ ಕೊಡಲು ಸಾಧ್ಯವಾಗುವುದು.
ಖುಷಿಯಾಗಿರಬೇಕೆಂದರೆ ಏನು ಮಾಡಬೇಕು ಎಂದು ನೋಡೋಣ ಬನ್ನಿ:
ಮುಖದಲ್ಲಿ ಮಂದಹಾಸವಿರಲಿ
ನಗುವುದಕ್ಕೆ ದುಡ್ಡು ಕೊಡಬೇಕೆ? ನಿಮ್ಮ ತುಟಿಯಲ್ಲಿ ಸದಾ ನಗುವಿರಲಿ. ಈ ರೀತಿಯಿದ್ದರೆ ನೀವು ಎಲ್ಲವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಲಾರಂಭಿಸುತ್ತೀರಿ. ನಿಮ್ಮ ಸುತ್ತಲು ಇರುವವರು ನಿಮ್ಮಿಂದ ಆಕರ್ಷಿತರಾಗುತ್ತಾರೆ.
ಮುಖವನ್ನು ಗಂಟಾಕಿ ಕೂತರೆ ನಿಮ್ಮನ್ನು ಮಾತನಾಡಿಸಬೇಕೆಂದು ಯಾರಿಗೂ ಅನಿಸಲ್ಲ, ಮುಖದಲ್ಲಿ ನಗುವಿರುವ ವ್ಯಕ್ತಿ ಇತರರನ್ನು ಆಕರ್ಷಿಸುತ್ತಾರೆ..ಸೋ ಮುಖದಲ್ಲಿ ಸದಾ ನಗುವಿರಲಿ.
ನಿಮ್ಮ ದಿನವನ್ನು ಸಂಗೀತ ಕೇಳುವುದರೊಂದಿಗೆ ಆರಂಭಿಸಿ
ನೀವು ನಿಮ್ಮ ದಿನವನ್ನು ಬೆಳಗ್ಗೆ ಎದ್ದಾಗ ಒಂದು ಒಳ್ಳೆಯ ಸಂಗೀತ ಕೇಳುವುದರೊಂದಿಗೆ ಪ್ರಾರಂಭಿಸಿ ನೋಡಿ, ದಿನವಿಡೀ ಜೋಶ್‌ನಿಂದ ಓಡಾಡುವಿರಿ.
ಪ್ರಾಣಯಾಮ ಮಾಡಿ
ಬೆಳಗ್ಗೆ ಎದ್ದ ಬಳಿಕ ಕನಿಷ್ಠ 15 ನಿಮಿಷ ಪ್ರಾಣಯಾಮ ಮಾಡಿ. ಪ್ರಾಣಯಾಮ ಮಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು, ನಮ್ಮಲ್ಲಿ ನಕಾರಾತ್ಮಕ ಯೋಚನೆ ಕಡಿಮೆಯಾಗಿ ಉತ್ತಮ ಆಲೋಚನೆಗಳು ಮನಸ್ಸಿನಲ್ಲಿ ಮೂಡುವುದು. ಬೇಗನೆ ಕೋಪಗೊಳ್ಳುವುದು, ಖಿನ್ನತೆಗೆ ಒಳಗಾಗುವುದು ಈ ಬಗೆಯ ಸಮಸ್ಯೆ ಕಡಿಮೆಯಾಗುವುದು.
ಬೆಳಗ್ಗೆ ಎದ್ದ ತಕ್ಷಣ ಮಲಗುವ ಅರ್ಧ ಗಂಟೆಗೆ ಮುನ್ನ ಫೋನ್‌ನಿಂದ ದೂರವಿರಿ
ಹೌದು ಇದು ತುಂಬಾನೇ ಮುಖ್ಯ. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಲು ಹೋಗಬೇಡಿ, ಮಲಗುವ ಅರ್ಧ ಗಂಟೆ ಮೊದಲು ಮೊಬೈಲ್ ದೂರವಿಟ್ಟು ಒಂದು ಒಳ್ಳೆಯ ಪುಸ್ತಕ ಓದಿ. ಈ ರೀತಿ ಮಾಡುವುದು ನಿಮ್ಮ ಮನಸ್ಸು ತುಂಬಾ ರಿಲ್ಯಾಕ್ಸ್ ಅನಿಸುವುದು ಮನಸ್ಸಿಗೆ ಖುಷಿಯಾಗುವುದು.
ನೆಗೆಟಿವ್ ವ್ಯಕ್ತಿಗಳಿಂದ ದೂರವಿರಿ
ಇನ್ನು ನಾವು ಖುಷಿಯಾಗಿರಲು ಮಾಡಬೇಕಾದ ಮತ್ತೊಂದು ಕೆಲಸವೆಂದರೆ ಸದಾ ನೆಗೆಟಿವ್ ಮಾತನಾಡುವ ವ್ಯಕ್ತಿಗಳಿಂದ ದೂರವಿರುವುದು. ಇಂಥವರು ಕೆಟ್ಟದ್ದು ಯೋಚಿಸಿ ಅವರ ಸಂತೋಷ ಕಳೆದುಕೊಂಡಿರುತ್ತಾರೆ, ನಂತರ ನಮ್ಮನ್ನು ಪ್ರಭಾವಿಸಿ ನಮ್ಮ ನೆಮ್ಮದಿ ಕೂಡ ಹಾಳು ಮಾಡಲು ಪ್ರಯತ್ನಿಸುತ್ತಾರೆ. ಆದ್ದರಿಂದ ಇಂಥ ನೆಗೆಟಿವ್ ವ್ಯಕ್ತಿಗಳಿಂದ ದೂರವಿರಿ.
ಯಾರೊಂದಿಗೂ ಹೋಲಿಕೆ ಬೇಡ
ನಿಮ್ಮನ್ನು, ನಿಮ್ಮ ಬದುಕನ್ನು ಯಾರೊಂದಿಗೂ ಹೋಲಿಕೆ ಮಾಡಲು ಹೋಗಬೇಡಿ, ಏಕೆಂದರೆ ಹೋಲಿಕೆ ಮಾಡುತ್ತಾ ಕೂತರೆ ಇರುವ ಸಂತೋಷ ದೂರಾಗುವುದು, ಆದ್ದರಿಂದ ಯಾರೊಂದಿಗೂ ಹೋಲಿಕೆ ಮಾಡಲು ಹೋಗಬೇಡಿ, ನಿಮ್ಮ ಬದುಕನ್ನು ನೀವು ಆನಂದಿಸಲು ಪ್ರಯತ್ನಿಸಿ.
ಇತರ ಸಲಹೆ
* ನಿಮ್ಮ ಇಷ್ಟದ ಆಹಾರ ಸೇವಿಸಿ
* ದಿನದಲ್ಲಿ 8 ಗಂಟೆ ಸುಖ ನಿದ್ದೆ ಮಾಡಿ
* ಪರಿಸರಕ್ಕೆ ಸಮೀಪವಾಗಿ (ಟ್ರಕ್ಕಿಂಗ್, ಟ್ರಿಪ್ ಅಂತ ಹೋಗಿ)
* ಸ್ನೇಹಿತರನ್ನು ಭೇಟಿ ಮಾಡಿ
* ಒಳ್ಳೆಯ ಪುಸ್ತಕಗಳನ್ನು ಓದಿ
* ನಿಮ್ಮ ಮೆಚ್ಚಿನ ಸಿನಿಮಾಗಳನ್ನು ನೋಡಿ
* ಮನೆಯವರ ಜೊತೆ ಪ್ರತಿದಿನ ಮಾತನಾಡಿ
* ಅನಗ್ಯತ ಚಿಂತೆಗಳನ್ನು ದೂರವಿಡಿ
ಇಷ್ಟು ಮಾಡಿದರೆ ನೀವು ಖುಷಿ-ಖುಷಿಯಾಗಿರುವಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

