Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಬೈಪಾಸ್ ಸರ್ಜರಿಗೆ ಒಳಗಾದರೂ ಮನೋಜ್ ಕೆ. ಭಾರತಿಗೆ ಹೃದಯ ಸ್ತಂಭನ: ಹೀಗೆ ಆಗೋದ್ಯಾಕೆ ಗೊತ್ತಾ?
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ ಮನೋಜ್ ಭಾರತಿರಾಜ ಮಂಗಳವಾರ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು. ಅವರಿಗೆ ಕೇವಲ 48 ವರ್ಷವಾಗಿತ್ತು. ತಮಿಳಿನ ಪ್ರಮುಖ ನಾಯಕ ನಟರಿಗೆ ಅವರು ಸಿನಿಮಾ ನಿರ್ದೇಶನ ಮಾಡಿದ್ದರು. ಇದು ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿತ್ತು. ಅವರ ತಂದೆ ಕೂಡ ಸಿನಿಮಾ ರಂಗದಲ್ಲಿಯೇ ಗುರುತಿಸಿಕೊಂಡಿದ್ದಾರೆ.
ಮನೋಜ್ ಭಾರತಿರಾಜ ಹೃದಯ ಸ್ತಂಭನದ ಸುದ್ದಿ ಹರಡುತ್ತಿದ್ದಂತೆ ಎಲ್ಲರಿಗೂ ಅಚ್ಚರಿಯಾಗಿದೆ. ಆರೋಗ್ಯವಾಗಿದ್ದ ಅವರು ಏಕಾಏಕಿ ಈ ರೀತಿಯಾಗಿ ಮೃತಪಟ್ಟಿದ್ದು ಶಾಕ್ ನೀಡಿದೆ. ಅಚ್ಚರಿ ಏನೆಂದರೆ ಅವರು ಹೃದಯ ಸಂಬಂಧಿ ಸಮಸ್ಯೆಯ ಬಳಿಕ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು, ಈ ಸರ್ಜರಿಗೆ ಒಳಗಾದ ಕೆಲವೇ ದಿನಗಳಲ್ಲಿ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದಾರೆ.

ಬೈ ಪಾಸ್ ಸರ್ಜರಿ ಬಳಿಕ ಮನೆಗೆ ಆಗಮಿಸಿದ್ದ ಅವರು ಆರೋಗ್ಯವಾಗಿದ್ದರು. ಆದ್ರೆ ಒಂದೇ ವಾರದಲ್ಲಿ ಅವರಿಗೆ ಹೃದಯಸ್ತಂಭನ ಉಂಟಾಗಿದೆ ಎಂದು ವರದಿಯಾಗಿದೆ. ಹಾಗಾದ್ರೆ ಈ ರೀತಿ ಹೃದಯಾಸ್ತಂಭಬನಕ್ಕೆ ಕಾರಣವಾಗುವುದು ಹೇಗೆ? ಬೈಪಾಸ್ ಸರ್ಜರಿಗೆ ಒಳಗಾದವರಿಗೂ ಹೃದಯಾಘಾತ ಆಗೋದೇಕೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮನೋಜ್ ಭಾರತಿರಾಜ ಅವರು ಹೃದಯ ಸ್ತಂಭನದ ಕಾರಣದಿಂದಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ತಜ್ಞರ ಪ್ರಕಾರ, ನಿಮ್ಮ ಹೃದಯ ಬಡಿತ ಏಕಾಏಕಿ ನಿಲ್ಲುತ್ತದೆ ಅಥವಾ ರಕ್ತ ಪಂಪ್ ಮಾಡುವುದನ್ನ ನಿಲ್ಲಿಸುವಷ್ಟು ವೇಗವಾಗಿ ಬಡಿಯುತ್ತದೆ. ಹೃದಯ ಸ್ತಂಭನದ ಸಮಯದಲ್ಲಿ ನೀವು ಇದ್ದಕ್ಕಿದ್ದಂತೆ ಕುಸಿದು ಬೀಳುವ ಕ್ರಿಯೆ ಇಲ್ಲದೆ ಇರಬಹುದು, ಅದರ ಲಕ್ಷಣಗಳು ಯಾವುದೇ ಎಚ್ಚರಿಕೆ ಇಲ್ಲದೆಯೇ ಆರಂಭವಾಗುತ್ತದೆ. ಹೀಗಾಗಿಯೇ ಇದನ್ನು ಹಠಾತ್ ಹೃದಯಸ್ತಂಭನ ಎಂದು ಕರೆಯಲಾಗಿದೆ.
ದಿಢೀರ್ ಎಂದು ಹೃದಯವು ರಕ್ತ ಪಂಪ್ ಮಾಡುವುದನ್ನು ನಿಲ್ಲಿಸುವುದು ದೇಹದ ಹಲವು ಅಂಗಗಳಿಗೆ ರಕ್ತ ಸರಬರಾಜು ಆಗುವುದನ್ನು ನಿಲ್ಲಿಸುತ್ತದೆ. ಇದು ದೇಹದ ಅಂಗಕ್ಕೆ ಬೇಕಾದ ಆಮ್ಲಜನಕ ಸರಬರಾಜು ಮಾಡುವುದನ್ನು ನಿಲ್ಲಿಸುವುದು ದೇಹ ಕುಸಿಯಲು ಕಾರಣವಾಗುತ್ತದೆ. ಇಲ್ಲಿ ದಿಢೀರ್ ಹೃದಯ ಸ್ತಂಭನವಾದಾಗ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆಯಾಗಿರುತ್ತದೆ.
ಬೈಪಾಸ್ ಸರ್ಜರಿ ಬಳಿಕ ಹೃದಯ ಸ್ತಂಭನ ಆಗುತ್ತದೆಯೇ?
ಹಲವರು ಪ್ರಕಾರ ಬೈಪಾಸ್ ಸರ್ಜರಿಯ ಬಳಿಕ ಹೃದಯಾಘಾತ ಉಂಟಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಪರಿಧಮನಿಯ ಅಪಧಮನಿ ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ಕೆಲವು ದಿನಗಳಲ್ಲಿ ಹೃದಯ ಸ್ತಂಭನ ಸಂಭವಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಸುಮಾರು 0.7-2.9 ಪ್ರತಿಶತದಷ್ಟು ಪ್ರಕರಣದಲ್ಲಿ ಮಾತ್ರ ಈ ರೀತಿ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಬೈಪಾಸ್ ಸರ್ಜರಿಯ ಬಳಿಕ ಹೃದಯ ಸ್ತಂಭನಕ್ಕೆ ಕಾರಣವೇನು?
ಹೃದಯಾಘಾತ
ರಕ್ತಸ್ರಾವ
ಕಸಿ ವೈಫಲ್ಯ
ಹೃದಯ ಟ್ಯಾಂಪೊನೇಡ್
ರಕ್ತನಾಳ ಬ್ಲಾಕೇಜ್
ರಕ್ತನಾಳ ಒಡೆಯುವುದು
ಹಾಗೆ ಕರೋನರಿ ಬೈಪಾಸ್ ಮಾಡಿಸಿದ ನಂತರದಲ್ಲಿ ಶಸ್ತ್ರಾಚಿಕಿತ್ಸಾ ಒಳಭಾಗದ ಗಾಯವು ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಬೈಪಾಸ್ ಕಸಿಯು ಶ್ವಾಸಕೋಶ ಅಥವಾ ಎದೆಯ ಒಳಭಾಗದಲ್ಲಿ ಸೋಂಕು ಉಂಟುಮಾಡಬಹುದು. ಬೈಪಾಸ್ ಶಸ್ತ್ರ ಚಿಕಿತ್ಸೆಯು ಅನೇಕರಲ್ಲಿ ಹಲವು ರೀತಿಯ ಕಂಪನಗಳಿಗೆ ಕಾರಣವಾಗುತ್ತದೆ. ಇದು ಅನಿಯಮಿತ ಮತ್ತು ಅಸಹಜ ಹೃದಯ ಬಡಿತಕ್ಕೆ ಕಾರಣವಾಗುತ್ತದೆ. ಆ ಈ ಲಕ್ಷಣಗಳು ಹೃದಯ ಸ್ತಂಭನದ ಲಕ್ಷಣ ಎಂದು ಪರಿಗಣಿಸಲಾಗುವುದಿಲ್ಲ. ಆದ್ರೆ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗಿರುವವರಲ್ಲಿ ಇದು ಮಾರಣಾಂತಿಕವಾಗಬಹುದು ಎಂಬ ಆತಂಕ ಕೂಡ ಇದೆ. ಈ ಸಮಸ್ಯೆ ವಯಸ್ಸಿನ ಆಧಾರದ ಮೇಲೆಯೂ ನಿರ್ಧರಿತವಾಗಲಿದೆ. ಹಾಗೆ ಬೈಪಾಸ್ ಸರ್ಜರಿ ಎಷ್ಟು ಸಂಕೀರ್ಣ ಆಗಲಿದ್ಯೋ ಅಷ್ಟು ಸಮಸ್ಯಾತ್ಮಕವಾಗುತ್ತಾ ಸಾಗಲಿದೆ ಎಂದು ತಜ್ಞರು ವಿವರಿಸುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











